PEDDI ಚಿತ್ರದ ಮೂಲಕ ವಿದೇಶಿ ವಿತರಣೆ ಕ್ಷೇತ್ರಕ್ಕೆ ಮೊದಲ ಹೆಜ್ಜೆ ಇಟ್ಟ ಹೊಂಬಾಳೆ ಫಿಲ್ಮ್ಸ್

ಭಾರತೀಯ ಸಿನೆಮಾದ ಹೆಮ್ಮೆಯ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ಇತ್ತೀಚೆಗೆ ವಿದೇಶಿ ವಿತರಣೆ ಕ್ಷೇತ್ರಕ್ಕೆ ಕಾಲಿಡುವುದಾಗಿ ಘೋಷಿಸಿತ್ತು. ಇದೀಗ ಆ ಮಹತ್ವದ ಪ್ರಯಾಣಕ್ಕೆ ಮೊದಲ ಚಿತ್ರವಾಗಿ PEDDI ಆಯ್ಕೆಯಾಗಿದೆ.

Rajakumara, KGF, Kantara, Salaar ಸಿನಿಮಾಗಳ ಮೂಲಕ ಭಾರತೀಯ ಸಿನೆಮಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಹೊಂಬಾಳೆ ಫಿಲ್ಮ್ಸ್, ಇದೀಗ ಮತ್ತೊಂದು ದೊಡ್ಡ ಹೆಜ್ಜೆಯಾಗಿ ಅಂತರರಾಷ್ಟ್ರೀಯ ವಿತರಣೆ ಕ್ಷೇತ್ರಕ್ಕೆ ಪ್ರವೇಶಿಸಿದೆ. 2026ರ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ಒಂದಾದ PEDDI ಚಿತ್ರದ ವಿದೇಶಿ ವಿತರಣೆಯ ಹಕ್ಕುಗಳನ್ನು ಸಂಸ್ಥೆ ತನ್ನದಾಗಿಸಿಕೊಂಡಿದೆ.

ಭಾರತೀಯ ಮಾರುಕಟ್ಟೆ ಮಾತ್ರವಲ್ಲದೆ ವಿಶ್ವದಾದ್ಯಂತ ಭಾರತೀಯ ಸಿನೆಮಾಗಳಿಗೆ ಹೊಸ ಪ್ರೇಕ್ಷಕರನ್ನು ಪರಿಚಯಿಸುವಲ್ಲಿ ಸಂಸ್ಥೆ ಪ್ರಮುಖ ಪಾತ್ರವಹಿಸಿದೆ.

ಈಗ PEDDI ಚಿತ್ರದ ಮೂಲಕ ಹೊಂಬಾಳೆ ಫಿಲ್ಮ್ಸ್ ತನ್ನ ಜಾಗತಿಕ ವಿಸ್ತರಣೆಗೆ ಮತ್ತೊಂದು ಬಲಿಷ್ಠ ಅಧ್ಯಾಯವನ್ನು ಸೇರಿಸಿದೆ.

ಖ್ಯಾತ ನಿರ್ದೇಶಕ ಬುಚ್ಚಿ ಬಾಬು ಸಾನಾ ನಿರ್ದೇಶನದ PEDDI, ತನ್ನ ರಾ ಆಕ್ಷನ್ ಹಿನ್ನೆಲೆ, ಭರ್ಜರಿ ದೃಶ್ಯ ವೈಭವ ಮತ್ತು ರಾಮ್ ಚರಣ್ ಅವರ ವಿಭಿನ್ನ ಅವತಾರದಿಂದ ಈಗಾಗಲೇ ಭಾರೀ ಕುತೂಹಲ ಸೃಷ್ಟಿಸಿದೆ. ಜೊತೆಗೆ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಸಂಗೀತ ನೀಡುತ್ತಿರುವುದು ಚಿತ್ರದ ಮೆರುಗು ಇನ್ನಷ್ಟು ಹೆಚ್ಚಿಸಿದೆ.

PEDDI ಜೊತೆ ಹೊಂಬಾಳೆ ಫಿಲ್ಮ್ಸ್ ಕೈಜೋಡಿಸಿರುವುದು ಚಿತ್ರದ ಜಾಗತಿಕ ಬಿಡುಗಡೆಯಿಗೆ ದೊಡ್ಡ ಬಲ ನೀಡಲಿದೆ ಎಂಬ ಮಾತು ಸಿನಿ ವಲಯದಲ್ಲಿ ಕೇಳಿಬರುತ್ತಿದೆ. ಪ್ರಮುಖ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಭರ್ಜರಿ ಬಿಡುಗಡೆಯಿಗೆ ಈಗಾಗಲೇ ಭಾರಿ ನಿರೀಕ್ಷೆ ನಿರ್ಮಾಣವಾಗಿದೆ.

PEDDI ಚಿತ್ರವು ಜೂನ್ 4ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor