ಐತಿಹಾಸಿಕ ಸಾಧನೆ ಗೈದ “ಕೊರಗಜ್ಜ”ಚಿತ್ರ:ಮೈಸೂರು ದಸರಾ ಸವಾರಿ ಯಲ್ಲಿ ಸಾಗಿ “ಕೊರಗಜ್ಜ” ಚಿತ್ರದ ಟ್ರೈಲರ್ ಲಾಂಚ್
ಬಹುನಿರೀಕ್ಷಿತ 3D ಚಲನಚಿತ್ರ “ಕೊರಗಜ್ಜ” ದ ಸ್ತಬ್ದ ಚಿತ್ರ ಮೈಸೂರು ದಸರ ಜಂಬುಸವಾರಿಯಲ್ಲಿ ಸಾಗಿಬಂದು, ಬನ್ನಿ ಮಂಟಪದ ಬಳಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಟ್ರೈಲರ್ ಲಾಂಚ್ ಮಾಡುವ ಮುಖಾಂತರ ಐತಿಹಾಸಿಕ ಸಾಧನೆ ಗೈದಿದೆ.
ಕ್ರಿ ಶ 1610 ರಲ್ಲಿ ಆರಂಭ ಗೊಂಡ ಮೈಸೂರು ಜಂಬೂ ಸವಾರಿಯ 416ನೇ ವರ್ಷದ ಇತಿಹಾಸದಲ್ಲಿಯೇ ಮೊತ್ತಮೊದಲ ಬಾರಿ ಚಲನಚಿತ್ರ ಒಂದರ ಸ್ತಬ್ದ ಚಿತ್ರ ಪಾಲ್ಗೊಂಡು ಇತಿಹಾಸ ನಿರ್ಮಿಸಿದೆ.

ಮಾನ್ಯ ಮುಖ್ಯಮಂತ್ರಿ ಶ್ರೀ ಡಿ ಕೆ ಶಿವಕುಮಾರ್ ರವರ ಮಹತ್ವಾಕಾಂಕ್ಷೆಯ
ಖಾಸಗಿ ಸಹಭಾಗಿತ್ವದ ಈ ಬಾರಿಯ ದಸರ ಉತ್ಸವದ ಅತೀ ವಿಜ್ರಂಭಣೆಯ ಆಚರಣೆಯಲ್ಲಿ “ಕೊರಗಜ್ಜ” ಚಿತ್ರ ಭಾಗಿಯಾಗಿ ಟ್ರೈಲರ್ ಬಿಡುಗಡೆ ಮಾಡುವ ಮುಖಾಂತರ ಚಿತ್ರರಂಗದಲ್ಲೊಂದು ಅಪೂರ್ವ ದಾಖಲೆ ಬರೆಯಿತು.
ಮಾನ್ಯ ಮುಖ್ಯಮಂತ್ರಿಗಳು ತುಳು ಭಾಷೆಯನ್ನು ಅಧಿಕ್ರತ ಆಡಳಿತ ಭಾಷೆಯಾಗಿ ಘೋಷಣೆ ಮಾಡಿ, ತುಳುನಾಡಿಗೆ ಅಗ್ರ ಸ್ಥಾನಮಾನ ನೀಡಿದ ಹಿನ್ನೆಲೆಯಲ್ಲಿ; “ತುಳುನಾಡು ಕಂಗೊಳಿಸುತ್ತಿದೇ….ಕರುನಾಡ ಕಂಪಿನಲೀ…”ಸಂಗೀತಮಯ ಘೋಷ ವಾಕ್ಯ ಮೆರವಣಿಗೆಯ ತುಂಬಾ ಅವರಿಸಿಕೊಂಡು ಕೊರಗಜ್ಜ ಸ್ತಬ್ದ ಚಿತ್ರ ಕ್ಕೆ ಇನ್ನಿಲ್ಲದ ಮೆರುಗನ್ನು ನೀಡಿತು.

ಸುಮಾರು 52-53 ಟ್ಯಾಬ್ಲೋಗಳ ಭವ್ಯ ಮೆರವಣಿಗೆಯಲ್ಲಿ “ಕೊರಗಜ್ಜ” ಚಿತ್ರದ ಟ್ಯಾಬ್ಲೋ ವು ಅಂಬಾರಿಯ ಸಮೀಪವೇ ಸಾಗಿಬರುವ ಅಪರೂಪದ ಗೌರವಕ್ಕೆ ಸಾಕ್ಷಿಯಾಯಿತು. ಕೊನೆಗೆ ಬನ್ನಿ ಮಂಟಪದ ಬಳಿ ಚಿತ್ರದ ಟ್ರೈಲರ್ . ನಿರ್ದೇಶಕ ಸುಧೀರ್ ಅತ್ತಾವರ್ ರವರೊಂದಿಗೆ
ಖ್ಯಾತ ಹಾಲಿವುಡ್-ಬಾಲಿವುಡ್- ಸ್ಯಾಂಡಲ್ ವುಡ್ ಕಲಾವಿದರಾದ ಕಬೀರ್ ಬೇಡಿ, ಮಿನಾಕ್ಷಿ ಶೇಷಾದ್ರಿ, ಹಿರಿಯ ನಟಿ ಭವ್ಯ, ನಿರ್ಮಾಪಕ ತ್ರಿವಿಕ್ರಮ ಸಪಲ್ಯ, ಕಾರ್ಯಕಾರಿ ನಿರ್ಮಾಪಕ-ಎಡಿಟರ್ ವಿದ್ಯಾಧರ್ ಶೆಟ್ಟಿ, ಉದ್ಯಮಿ ಮತ್ತು ನ್ರತ್ಯ ಪಟು ಯು ಟಿ ಝುಲ್ಫಿಕರ್ ಮತ್ತಿತರರು ಈ ಐತಿಹಾಸಿಕ ಸಾಧನೆಗೈದು ಸಂಭ್ರಮಿಸಿದರು










