Gangs of UK movie reviews ಚಿತ್ರ ವಿಮರ್ಶೆ ಗ್ಯಾಂಗ್ಸ್ ಆಫ್ ಯುಕೆ
ಚಿತ್ರ – ಗ್ಯಾಂಗ್ಸ್ ಅಫ್ಸ್ UK
ನಿರ್ಮಾಪಕರು –
ನಿರ್ದೇಶನ – ರವಿ ಶ್ರೀವತ್ಸ
ಛಾಯಾಗ್ರಹಣ – ಗಿರಿ
ಸಂಗೀತ – ಸಾಧುಕೋಕಿಲ
Rating -3/5
ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ಕಲಾವಿದರು. ಒರಟ ಪ್ರಶಾಂತ್, ಮುನಿ, ರವಿ ಶ್ರೀವತ್ಸ, ಸೋನು ಉಪಾಧ್ಯ, ಪದ್ಮಾ ವಾಸಂತಿ, ಕೋಟೆ ಪ್ರಭಾಕರ್, ಉಗ್ರಂ ರೆಡ್ಡಿ, ಅಮೋಘ್, ನವೀನ್.
ಮುಂತಾದವರು.
ಅದೊಂದು ಹೋರಾಟ ನೆಲದಿಂದ ಶುರುವಾದ ದ್ವೇಷ ತಲೆಗಳು ಉರುಳುವವರೆಗೂ ನಡೆವ ರಕ್ತಚರಿತ್ರೆ ಗ್ಯಾಂಗ್ಸ್ ಆಫ್ UK ಚಿತ್ರ.
ಅದೊಂದು ನೆಲದ ಸರಿಹದ್ದಿನಲ್ಲಿ ಹಾಕಿದ್ದ ಸರ್ವೇ ಕಲ್ಲು ಹೊಲ ಹೂಳುವಾಗ ಕಿತ್ತು ಬರುತ್ತೆ ಅಲ್ಲಿಂದ ಶುರುವಾಗುತ್ತೆ ತಲೆಗಳ ಲೆಕ್ಕ.
ಅರ್ಥವಿಲ್ಲದ ದ್ವೇಷ, ಅಸೂಯೇ, ಅಹಂಕಾರ ಚಿತ್ರದ ಪ್ರಾರಂಭದಿಂದ ಕೊನೆಯವರೆಗೂ ಮೆರೆಯುತ್ತದೆ.
ಬ್ರಾಹ್ಮಣ ಸಮುದಾಯದ ಇಬ್ಬರು ಬರಗೆಟ್ಟ ಕಾಮ ಪೀಪಾಸುಗಳು ತಮ್ಮ ಮನೆ ಕೆಲಸದ ಒಬ್ಬ ದಲಿತ ಹೆಣ್ಣುಮಗಳ ದೇಹವನ್ನು ಹರಿದು ಮುಕ್ಕುತ್ತಾರೆ.
ಯಾರೋ ಪೊಲೀಸ್ ಅವಳ ಸ್ಥಿತಿಯನ್ನು ನೋಡಿ ತನ್ನ ಮೈಮೇಲಿದ್ದ ಪೊಲೀಸ್ ವಸ್ತ್ರವನ್ನೇ ಅವಳಿಗೆ ತೋಡಿಸುತ್ತಾನೆ. ಅವಳು ಚಿತ್ರದ ಕೊನೆಯವರೆಗೂ ಬಟ್ಟೆ ಬದಲಿಸುವುದಿಲ್ಲ ಅವರ ತಲೆ ಕಡಿಯುವವರೆಗೂ ಹೀಗೆ ಇರುತ್ತೇನೆ ಅಂತ ಶಪಥ ತೊಡುತ್ತಾಳೆ ಇಲ್ಲಿಂದ ಮತ್ತೊಂದು ಯುದ್ಧ ಶುರುವಾಗುತ್ತದೆ. ಎರಡು ದ್ವೇಷಗಳು ಒಂದೇ ಗುರಿಯಲ್ಲಿ ಸಾಗುತ್ತದೆ.
ಇಲ್ಲಿ ಎರಡು ಸಮುದಾಯದ ಎರಡು ಕುಟುಂಬ ಗಳ ನಡುವೆ ಹುಟ್ಟಿಕೊಳ್ಳುವ ಜಗಳ ಕೊನೆಗೆ ಬ್ರಾಹ್ಮಣ, ಲಿಂಗಾಯತ, ಗೌಡ, ದಲಿತ, ಮತ್ತು ಮುಸ್ಲಿಂ ಸಮುದಾಯಗಳ ಮಾರಣ ಹೋಮವನ್ನು ನಿರ್ದೇಶಕರು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಕಥೆಯಲ್ಲಿ ಅತ್ಯಾಚಾರ, ಅನಾಹುತ, ದಬ್ಬಾಳಿಕೆ ಎಲ್ಲವೂ ಇದೆ ಆದರೆ ಅಷ್ಟೊಂದು ಕ್ರೌರ್ಯ ಬೇಕಿತ್ತಾ ಅನ್ನೋ ಪ್ರಶ್ನೆ ಪ್ರೇಕ್ಷಕನ್ನ ಕಾಡುತ್ತೆ.
ಹಿರಿಯ ನಿರ್ದೇಶಕ. ಸಂಭಾಷಣೆಕಾರ ಎಂ.ಎಸ್. ರಮೇಶ್ ರವರ ಸಂಭಾಷಣೆ ಅಸಭ್ಯ ಮಾತುಗಳಿಂದ ಕೂಡಿದೆ ಜೊತೆಗೆ ಒಂದಷ್ಟು ಮಾನಸಿಗೆ ನಾಟುವಂತ ಕಠಿಣವಾದ ಶಬ್ದಗಳು ಕೂಡ ಇವೆ. ಚಿತ್ರದಲ್ಲಿ ಚಿತ್ರದ ಪ್ರಾರಂಭದಲ್ಲಿ ನಿರ್ದೇಶಕ ಶ್ರೀವತ್ಸ ಚಿತ್ರಕಥೆಯ ಬಗ್ಗೆ ಸಂಭಾಷಣೆ ಹೇಳುತ್ತಾ ಹೊರಡುತ್ತಾರೆ ಪ್ರಾರಂಭದಿಂದ ಕೊನೆವರೆಗೂ ಶ್ರೀ ವಸಾರವರ ಸಂಭಾಷಣೆಯೊಂದಿಗೆ ಚಿತ್ರಕಥೆ ನಡೆಯುತ್ತದೆ.
ಅತ್ಯಾಚಾರ ಅನಾಚಾರ ಮಾಡಿದವರಿಗೆ ಶಿಕ್ಷೆ ಕಂಡಿತ ಆಗಬೇಕು ಆದರೆ ರೋಷದಿಂದ ರೊಚ್ಚಿಗೆದ್ದ ಜನ ನಾನು ನನ್ನ ಕೈ ತಗೊಂಡ್ರೆ ಏನಾಗಬಹುದು ಅನ್ನೋದಕ್ಕೆ ಗ್ಯಾಂಗ್ಸ್ ಆಫ್ ಯುಕೆ ಚಿತ್ರ ಸಾಕ್ಷಿ.
ತುಂಬಾ ವರ್ಷಗಳ ನಂತರ ಹೊರಟ ಪ್ರಶಾಂತ್ ಈ ಚಿತ್ರದಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದಾರೆ ಒರಟ ಪ್ರಶಾಂತ ಈಗಾಗ್ಲೇ ಹೀರೋಯಿಸಂ ಪಾತ್ರಗಳನ್ನ ಮಾಡಿದಂತ ಪ್ರಶಾಂತ ಈ ಸಿನಿಮಾದಲ್ಲಿ ಪರಿಪೂರ್ಣವಾಗಿ ಕ್ರೈಂ ಬೇಸ್ಟ್ ಪಾತ್ರದಲ್ಲಿ ತುಂಬಾ ಚನ್ನಾಗಿ ಅಭಿನಯಿಸಿದ್ದಾರೆ.
ಸೋನು ಉಪಾಧ್ಯ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಒಂದು ಇವರು ಮನ ಮುಟ್ಟುವಂತೆ ಪತ್ರ ನಿರ್ವಹಿಸಿದ್ದಾರೆ.










