ಜೂನ್ 5ಕ್ಕೆ Zee5 ಕನ್ನಡದಲ್ಲಿ KD-ದಿ ಡೆವಿಲ್ ಸಿನಿಮಾ ಸ್ಟ್ರೀಮಿಂಗ್

KD-ದಿ ಡೆವಿಲ್ ಒಟಿಟಿ ಎಂಟ್ರಿಗೆ ರೆಡಿ..ಎಲ್ಲಿ..ಯಾವಾಗ ಸ್ಟ್ರೀಮಿಂಗ್ ಆಗಲಿದೆ ಧ್ರುವ ಸಿನಿಮಾ

ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಪ್ರೇಮ್‌ ನಿರ್ದೇಶನದ
KD-ದಿ ಡೆವಿಲ್ ಸಿನಿಮಾ ಒಟಿಟಿ ಎಂಟ್ರಿಗೆ ಸಜ್ಜಾಗಿದೆ. ಜೂನ್ 5ರಂದು zee5ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಕನ್ನಡದ ಜೊತೆಗೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಚಿತ್ರ ವೀಕ್ಷಣೆಗೆ ಲಭ್ಯವಿರಲಿದೆ.

ಕೆಡಿ ಸಿನಿಮಾದಲ್ಲಿ ದೊಡ್ಡ ತಾರಾಬಳಗವಿದೆ. ಬಾಲಿವುಡ್‌ ನಟ ಸಂಜಯ್ ದತ್, ಶಿಲ್ಪಾ ಶೆಟ್ಟಿ, ಡಾ.ವಿ. ರವಿಚಂದ್ರನ್, ರಮೇಶ್ ಅರವಿಂದ್, ರೀಷ್ಮಾ ನಾಣಯ್ಯ, ಜಿಶು ಸೇನ್‌ಗುಪ್ತಾ, ನೋರಾ ಫತೇಹಿ ಮತ್ತು ಅತಿಥಿ ಪಾತ್ರಕ್ಕೆ ಬಣ್ಣ ಹಚ್ಚಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೇರಿದಂತೆ ಅನೇಕರು ನಟಿಸಿದ್ದಾರೆ.

70ರ ದಶಕದ ಕಾಲಘಟ್ಟದ ಕಥೆಯನ್ನು ಕೆಡಿಯಲ್ಲಿ ಪ್ರೇಮ್ ಕಟ್ಟಿಕೊಟ್ಟಿದ್ದಾರೆ. ಅಣ್ಣ-ತಮ್ಮನ ಭಾವನಾತ್ಮಕ ಬಾಂಧವ್ಯ, ರಾಜಕೀಯ ಪೈಪೋಟಿ ಚಿತ್ರದಲ್ಲಿದೆ.ಅಣ್ಣನೇ ಸರ್ವಸ್ವ ಎಂದುಕೊಂಡು ಬದುಕುತ್ತಿರುವ ಕಾಳಿದಾಸ ಅಲಿಯಾಸ್ ಕೆಡಿ ಎಂಬಾತನ ಕಥೆ ಈ ಸಿನಿಮಾದಲ್ಲಿದೆ.

ಧ್ರುವ ಸರ್ಜಾ ಅವರ ಪಾತ್ರದ ಸುತ್ತ ಆ ಕಾಲ ಘಟ್ಟದ ಕಥೆಗಳು ತೆರೆದುಕೊಳ್ಳುತ್ತಾ ಸಾಗುತ್ತೆ. ಇದರ ಜೊತೆಗೆ ಆಕ್ಷನ್‌ ಮತ್ತು ಎಮೋಷನ್‌ ಎರಡನ್ನು ಬ್ಲೆಂಡ್‌ ಮಾಡಿ, ವೀಕ್ಷಕರಿಗೆ ಭರ್ಜರಿ ಮನರಂಜನೆಯ ಭೋಜನ ಪ್ರೇಮ್‌ ಬಡಿಸಿದ್ದಾರೆ.

ಸಂಗೀತ ಸಂಯೋಜಕ ಅರ್ಜುನ್ ಜನ್ಯ ಮ್ಯೂಸಿಕ್‌, ವಿಲಿಯಂ ಡೇವಿಡ್ ಛಾಯಾಗ್ರಹಣ ಚಿತ್ರಕ್ಕಿದೆ. ದಕ್ಷಿಣ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆವಿಎನ್ ಕೆಡಿ ಸಿನಿಮಾ ನಿರ್ಮಾಣ ಮಾಡಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor