Tapassi movie review ವಿಮರ್ಶೆ :- ನಶೆ, ಉಷೆ, ಕಿಸೆಯ ಸುತ್ತ ತಪಸ್ಸಿ
ಚಿತ್ರ ವಿಮರ್ಶೆ :- ತಪಸ್ಸಿ
Rating – 3/5.
ನಿರ್ಮಾಣ: ಸ್ಪೆನ್ಸರ್ ಮ್ಯಾಥ್ಯೂ
ನಿರ್ದೇಶನ: ಸ್ಪೆನ್ಸರ್ ಮ್ಯಾಥ್ಯೂ
ಸಂಗೀತ : ಆರವ್ ರಿಷಿ
ಛಾಯಾಗ್ರಹಣ : ವೀರೇಶ್
ಸಂಕಲನ : ಅರುಣ್ ಥಾಮಸ್
ಕಲಾವಿದರು : ರವಿಚಂದ್ರನ್, ಅಮೆಯ್ರಾ ಗೋಸ್ವಾಮಿ ಭಾಸ್ಕರ್, ರಥರ್ವ, ಅನುಶಾ ಕಿಣಿ, ಗುಬ್ಬಿ ನಟರಾಜ್, ಸಚ್ಚಿನ್, ಮುಂತಾದವರು.
ಭಾರತವಷ್ಟೇ ಅಲ್ಲ ಜಗತ್ತಿನಾದ್ಯಂತ ಡ್ರಗ್ಸ್ ದಂದೆ ಯುವ ಜನತೆಯನ್ನು ಆವರಿಸಿಕೊಳ್ಳುತ್ತಿದೆ. ಈ ವಿಷಯವನ್ನು ಕುರಿತು ಹಲವಾರು ಚಿತ್ರಗಳು ಬಂದಿವೆ. ಸುಮಾರು 25 ವರ್ಷಗಳ ಹಿಂದೆ ಡಾ, ರಾಜಕುಮಾರ್ ಅಭಿನಯದ ‘ಶಬ್ಧವೇದಿ’ ಚಿತ್ರವೂ ಕೂಡ ಡ್ರಗ್ಸ್ ವಿರುದ್ಧ ಹೋರಾಡುವ ಪೋಲಿಸ್ ಅಧಿಕಾರಿಯ ಕಥೆಯಾಗುತ್ತು.
ಇತ್ತೀಚೆಗೆ ಬಂದ ದುನಿಯಾ ವಿಜಯ್ ನಿರ್ದೇಶನದಲ್ಲಿ ಬಂದ ಭೀಮಾ ಚಿತ್ರವು ಇಂಥದೊಂದು ಕಥೆಯನ್ನು ಹೊತ್ತು ಬಂದಿತ್ತು.
ಈ ವಾರ ತೆರೆ ಕಂಡ ತಪಸ್ಸಿ ಚಿತ್ರ ಕೂಡ ಡ್ರಗ್ಸ್ ಜೊತೆಗೆ ಇಂದಿನ ಯುವ ಜನತೆಯ ಮೋಜು ಮಸ್ತಿಯ ಬದುಕಿನ ಚಿತ್ರಣವನ್ನು ಪ್ರೇಕ್ಷಕರ ಮುಂದೆ ತೆರೆದಿಟ್ಟಿದೆ.
ಚಿತ್ರದ ನಾಯಕಿ ತಪಸ್ಸಿ (ಅಮೆಯ್ರಾ ಗೋಸ್ವಾಮಿ)
ತಾನೊಬ್ಬ ದೊಡ್ಡ ಮಾಡಲ್ ಆಗಬೇಕು ಎಂಬ ಕನಸ್ಸಿನೊಂದಿಗೆ ಮಾಡಲ್ ಕ್ಷೇತ್ಕ್ಕೆ ಕಾಲಿಡುತ್ತಾಳೆ, ಆದರೆ ನಡೆಯುವುದೇ ಬೇರೆ, ತನಗೆ ಗೊತ್ತಿಲ್ಲದೇ ತನ್ನನ್ನು ತಾನು
ಡ್ರಗ್ಸ್ ಮತ್ತು ಕುಡಿತಕ್ಕೆ ಆವರಿಸಿಕೊಳ್ಳುತ್ತಾಳೆ. ದುಡ್ಡಿಗಾಗಿ ತನ್ನ ಮೈಮಾರಿಕೊಂಡು ಹಣ ಸಂಪಾದಿಸುತ್ತಾಳೆ.
ಹೊರಗೆ ಬರಲಾರದಷ್ಟು ಆಳಕ್ಕಿಳಿದು ತನ್ನ ಬದುಕನ್ನುಬನಾಶ ಮಾಡಿಕೊಳ್ಳುವ ಸ್ಥಿತಿ ತಲುಪುತ್ತಾಳೆ.
ಅಲ್ಕಿಗೆ ಡಲ್ಲವೂ ಮುಗಿಯಿತು ಎನ್ನುವಷ್ಟರಲ್ಲಿ
ಆಕೆಯ ಸ್ನೇಹಿತರು ಅವಳನ್ನು ರವೀಶ್ ವೈದ್ಯನಾಥ್ (ರವಿಚಂದ್ರನ್) ಎಂಬ ಪ್ರೊಫೆಸರ್ ಬಳಿ ಬಿಡುತ್ತಾರೆ.
ತದ ನಂತರ ತಪಸ್ಸಿಯ ಬದುಕು ಏನಾಗುತ್ತಾಳೆ ಆ ಜಾಲದಿಂದ ಹೊರಕ್ಕೆ ಬರುತ್ತಾಳಾ.?, ಪ್ರೊಫೆಸರ್ ಅವಳನ್ನು ಮೊದಲಿನಂತೆ ಮಾಡುತ್ತಾರಾ.? ಎನ್ನುವುದೇ ತಪಸ್ಸಿಯ ಬದುಕಿನ ರೋಚಕ ಕಥೆ ಇದಾಗಿದೆ.
ಈ ಚಿತ್ರ ಸಮಾಜಮುಖಿಯಾಗಿದ್ದು, ಸಮಾಜಕ್ಕೆ ಕನ್ನಡಿ ಹಿಡಿದಂತಾಗಿದೆ.
ಇಂದಿನ ನಶೆಯ ಜೀವನದಲ್ಲಿ ಮುಳಗಿ ಹೋಗಿರುವ ಯುವ ಜನತೆಯನ್ನು ಎಚ್ಚರಿಸುವಂತಕಥೆಯನ್ನು ನಿರ್ದೇಶಕ ಮ್ಯಾಥ್ಯೂ ಚನ್ನಾಗಿ ಕಟ್ಟಿಕೊಟ್ಟಿದ್ದಾರೆ.
ಮ್ಯಾಥ್ಯೂ ಈಗಾಗಲೆ ಕೆಲವು ಚಿತ್ರಗಳನ್ನು, ನಿರ್ಮಿಸಿ, ನಿರ್ದೇಶಿಸಿದ್ದಾರೆ. ಇದು ಒಂದು ಸಣ್ಣ ಕಥೆಯ ಎಳೆಯನ್ನು ತುಂಬಾ ಎಳೆದು ಸಿನಿಮಾ ಮಾಡಿದ್ದಾರೆ.
ಇಲ್ಲಿ ಮನರಂಜನೆಗೆ ಹೆಚ್ಚು ಒತ್ತು ನೀಡದೆ ಸಮಾಜದ ಮೇಲಾಗುವ ದುಷ್ಪರಿಣಾಮದ ಬಗ್ಗೆ ಉಪದೇಶ ಜಾಸ್ತಿಯಾಗಿದೆ ಅನ್ನಿಸುತ್ತದೆ.
ದೃಶ್ಯಗಳನ್ನು ಕಟ್ಟಿಕೊಡುವಲ್ಲಿ ನಿರ್ದೇಶಕರು ಇನ್ನೂ ಶ್ರಮ ವಹಿಸಬೇಕಿತ್ತು, ಅನ್ನಿಸುವುದಂತು ನಿಜ.
ಇದು ತುಂಬಾ ಮೈ ಚಳಿಬಿಟ್ಟು ನಟಿಸಬೇಕಾದ ಚಿತ್ರ. ಕನ್ನಡದ ಯಾವ ನಟಿಯರು ಒಪ್ಪಿಲ್ಲ ಅನಿಸುತ್ತದೆ ಅದಕ್ಕಾಗಿ
ಇಂತಹ ಬೋಲ್ಡ್ ಪಾತ್ರಕ್ಕೆ ಬೇರೆ ರಾಜ್ಯದಿಂದ ಅಮೇಯ್ರಾ ರನ್ನು ಕರೆತಂದಿದ್ದಾರೆ.
ಇನ್ನು, ರವಿಚಂದ್ರನ್ ಆಗಾಗ ಬೇರೆಯದ್ದೇ ಶೇಡ್ ಗಳ, ವಿಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚುತ್ತಿದ್ದಾರೆ ಅವುಗಳಲ್ಲಿ ತಪಸ್ಸಿ ಕೂಡ ಒಂದು.
ರವಿಮಾಮ ಗ್ಲಾಮರ್ ಬಿಟ್ಟು ಗ್ರಾಮರ್ ಹಾದಿ ಹಿಡಿದಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಿದ್ದಾರೆ, ಸುಮಾರು ನಲವತ್ತು ವರ್ಷಗಳ ಹಿಂದೆ ‘ಅಸಂಭವ’ ಚಿತ್ರದ ನಂತರ ತಪಸ್ಸಿಯ ಮೂಲಕ ಸಮಾಜದ ಪರ ಧ್ವನಿ ಎತ್ತಿದ್ದಾರೆ.
ಭಾಸ್ಕರ್, ರಥರ್ವ, ಅನುಶಾ ಕಿಣಿ, ಗುಬ್ಬಿ ನಟರಾಜ್, ಸಚ್ಚಿನ್ ಮುಂತಾದವರು ಚಿತ್ರಕಥೆಯ ಪಾತ್ರಧಾರಿ ಗಳಾಗಿದ್ದಾರೆ.











