“S/O ಮುತ್ತಣ್ಣ” second of review ಅಪ್ಪನ ಹೆಗಲಿನ ಕಥೆ Rating -3.5/5
ಚಿತ್ರ ವಿಮರ್ಶೆ – ಮಂಜುರಾಜ್ ಸೂರ್ಯ
ಚಿತ್ರ – S/O ಮುತ್ತಣ್ಣ
ನಿರ್ಮಾಪಕರು – ಪುರಾತನ ಫಿಲಮ್ಸ್
ನಿರ್ದೇಶನ – ಶ್ರೀಕಾಂತ್ ಹುಣಸೂರು!
ಛಾಯಾಗ್ರಹಣ – ಸ್ಕೇಟಿಂಗ್ ಕೃಷ್ಣ
ಸಂಗೀತ – ಬಸ್ರೂರ್, ಬಿ.ಜೆ. ಭರತ್
Rating – 3.5/5
ಕಲಾವಿದರು – ರಂಗಾಯಣ ರಘು, ಸುಧಾ ಬೆಳವಾಡಿ, ಸುಚೀಂದ್ರ ಪ್ರಸಾದ್, ಗಿರಿ ಶಿವಣ್ಣ, ಪ್ರಣಮ್ ದೇವರಾಜ್, ಖುಷಿ ರವಿ ಮುಂತಾದವರು.
ಇಂಟರ್ ವೆಲ್ ನಂತರ ಸೆಕೆಂಡ್ ಆಫ್ ನಿಂದಲೇ ಅಸಲಿ ಕಥೆ ಶುರುವಾಗುತ್ತೆ. ರಂಗಾಯಣ ರಘು ಮೇಜರ್ ಮುತ್ತಣ್ಣನಾಗಿ ಚಿತ್ರದ ಕಥೆಯಲ್ಲಿ, ಅಭಿನಯದಲ್ಲಿ ಮೇಜರ್ ಆಗಿ ಆವರಿಸಿಕೊಂಡಿದ್ದಾರೆ. ರಂಗಾಯಣ ರಘುರವರ ಇತ್ತೀಚಿನ ಚಿತ್ರಗಳನ್ನು ನೋಡಿದರೆ ಅವರ ಅಭಿನಯದ ಹಲವು ಮುಖಗಳನ್ನು ನೋಡಬಹುದು. ಇಲ್ಲಿ ರಘುರವರು ಅದ್ಭುತವಾಗಿ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರನ್ನು ಭಾವನೆಗಳ ಮೂಲಕ ಕಟ್ಟಿ ಹಾಕುತ್ತಾರೆ.
ನಿರ್ದೇಶಕ ಶ್ರೀಕಾಂತ್ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಆದರೆ ಅವರು ಸೆಂಟಿಮೆಂಟ್ ಸೀನ್ ಗಳನ್ನು ಚನ್ನಾಗಿ ಬರೆದು ಕೊಂಡಿದ್ದಾರೆ. ತಾಯಿ, ತಂದೆ, ಮಕ್ಕಳ ಸಂಭಂದಗಳಿಗೆ ಅರ್ಥಪೂರ್ಣವಾಗಿ ಜೀವ ಕೊಟ್ಟಿದ್ದಾರೆ. ಕಥೆಯ ಜೊತೆಗೆ ಒಂದಷ್ಟು ಡೈಲಾಗ್ ಗಳು ಮನ ಮುಟ್ಟುವಂತೆ ಬರೆದಿದ್ದಾರೆ.
ಅಪ್ಪನ ಹೆಗಲು, ಅಮ್ಮನ ಮಡಿಲು, ಜನ್ಮ ಕೊಟ್ಟವಳು ಅಮ್ಮ, ಹೆಗಲು ಕೊಟ್ಟವನು ಅಪ್ಪ, ಅಪ್ಪ ಕಟ್ಟಿಸಿದ ಮನೆಯಲ್ಲಿ ಮಕ್ಕಳು ಇರಬಹುದು, ಮಕ್ಕಳು ಕಟ್ಟಿಸಿದ ಮನೆಯಲ್ಲಿ ಮಕ್ಕಳು ಇರಬಾರದು, ಮಕ್ಕಳು ಹುಟ್ಟಿದಾಗ ತಂದೆ ತಾಯಿ ಇರುತ್ತಾರೆ, ತಂದೆ ತಾಯಿ ಸಾಯುವಾಗ ಮಕ್ಕಳು ಇರಬೇಕು ಅಂತ ಬಯಸೋದು ತಪ್ಪಾ..?
ಇಂಥಹ ಹಲವಾರು ಡೈಲಾಗ್ ಗಳು ಮನ ಮುಟ್ಟುತ್ತವೆ.
ನಿರ್ದೇಶಕ ಶ್ರೀಕಾಂತ್ ಒಂದು ಒಳ್ಳೆಯ ಕಥೆಯನ್ನು ಅಚ್ಚು ಕಟ್ಟಾಗಿ ನಿರೂಪಿಸಿದ್ದಾರೆ.
ಚಿತ್ರದಲ್ಲಿ ಎರಡು ಹಾಡುಗಳು ಚನ್ನಾಗಿವೆ, ಸೆಂಟಿಮೆಂಟ್ ಹಾಡು ಮನ ಮುಟ್ಟುವಂತಿದೆ. ಇಲ್ಲಿ ಅಪ್ಪ ಮಗನ ಸಂಭಂದ ರಸ್ತೆ ಬದಿಯಲ್ಲಿ ಶುರುವಾಗುತ್ತದೆ. ಯಾವುದೇ ರಕ್ತ ಸಂಭಂದ ಇಲ್ಲದಿದ್ದರು ಅವರಿಬ್ಬರ ಅನುಭಂದ ಮನ ಮುಟ್ಟುತ್ತದೆ.
ಚಿತ್ರದ ಕಥಾನಾಯಕ ನಾಗಿ ಶಿವು (ಪ್ರಣಮ್ ದೇವರಾಜ್) ಪಾತ್ರದಲ್ಲಿ ಚನ್ನಾಗಿ ಅಭಿನಯಿಸುವ ಪ್ರಯತ್ನ ಮಾಡಿದ್ದಾರೆ. ಹಿಂದಿನ ಚಿತ್ರಕ್ಕಿಂತ ಈ ಚಿತ್ರದ ಅಭಿನಯದಲ್ಲಿ ಸ್ವಲ್ಪ ಮಾಗಿದಂತೆ ಕಾಣುತ್ತಾರೆ. ಪ್ರೀತಿ, ಪ್ರೇಮ, ಹಾಸ್ಯದ ದೃಶ್ಯಗಳಿಗಿಂತ ಸೆಂಟಿ ಮೆಂಟ್ ಪಾತ್ರಗಳಲ್ಲಿ. ಅವರ ಅಪ್ಪನನ್ನು ಮೀರಿಸುವಂತ ಅಭಿನಯ ಮಾಡಿದ್ದಾರೆ.
ಇನ್ನು ಖುಷಿ ರವಿ ಕಥೆಯಲ್ಲಿ ಪ್ರಣಮ್ ಗೆ ಜೋಡಿಯಾಗಿ ಡಾಕ್ಟರ್ ಪಾತ್ರವನ್ನು ಚನ್ನಾಗಿ ನಿಭಾಯಿಸಿದ್ದಾರೆ. ಖುಷಿ ಈಗಾಗಲೇ ಬೇರೆ ಬೇರೆ ಚಿತ್ರಗಳಲ್ಲಿ ನಟಿಸಿರುವ ಎಲ್ಲಾ ಪಾತ್ರಗಳಿಗಿಗೂ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಅಷ್ಟೇ ಅಲ್ಲದೇ ಒಬ್ಬ ಒಳ್ಳೆಯ ನಟಿ ಕೂಡ.
ಇನ್ನು ಸುಚೀಂದ್ರ ಪ್ರಸಾದ್ ನಾಯಕಿ ಅಪ್ಪನ ಪಾತ್ರದಲ್ಲಿ ಅದರಲ್ಲೂ ಒಬ್ಬ ಜವಾಬ್ಧಾರಿಯುತವಾದ, ಮಗಳನ್ನು ತುಂಬಾ ಪ್ರೀತಿಸುವಂತಹ ಪಾತ್ರದಲ್ಲಿ ಅಭಿನಯಿಸಿ, ತಮ್ಮ ಪಾತ್ರವನ್ನು ಚನ್ನಾಗಿ ತೂಗಿಸಿದ್ದಾರೆ.
ಚಿತ್ರದಲ್ಲಿ ಹಿನ್ನೆಲೆ ಸಂಗೀತ ಅಷ್ಟೇನು ಮನಸ್ಸಿಗೆ ಹಿತ ನೀಡುವುದಿಲ್ಲ ಇನ್ನೂ ಚನ್ನಾಗಿ ಮಾಡಬಹುದಿತ್ತು ಎನ್ನಿಸುತ್ತದೆ.
ಚಿತ್ರದ ಚಿತ್ರೀಕರಣ ಚನ್ನಾಗಿ ಮೂಡಿ ಬಂದಿದೆ. ಛಾಯಾಗ್ರಾಹಕ ಚಿತ್ರವನ್ನು ಅಚ್ಚುಕಟ್ಟಾಗಿ ಚಿತ್ರಿಸಿಕೊಟ್ಟಿದ್ದಾರೆ.
ಒಟ್ಟಿನಲ್ಲಿ ಇದು ತಂದೆ ಮಗನ ಬಾಂಧವ್ಯಗಳ, ಮನ ಕಲಕುವಂತಹ, ಹೆಚ್ಚು ಪಾತ್ರಗಳಿಲ್ಲದಂತಹ, ಒಳ್ಳೆಯ ಡೈಲಾಗ್ ಗಳನ್ನು ಹೊಂದಿರುವ ಚಿತ್ರ ಎನ್ನಬಹುದು.
ನಿರ್ಮಾಪಕರಾಗಿ ಹರಿಪ್ರಸಾದ್
ಪ್ರೇಕ್ಷಕರು ಇಂತಹ ಒಳ್ಳೆಯ ಚಿತ್ರಗಳನ್ನು ನೋಡಿ ಪ್ರೋತ್ಸಾಹಿಸಿದರೆ, ಈ ಸಂಸ್ಥೆಯಿಂದ ಇಂತಹ ಇನ್ನು ಒಳ್ಳೆಯ ಚಿತ್ರಗಳನ್ನು ನಿರೀಕ್ಷಿಸಬಹುದು.











