2026-27 ಸಾಲಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆಯ ಸ್ಪರ್ಧೆಯಲ್ಲಿ ಮತ್ತೊಮ್ಮೆ ಬಾ.ಮಾ. ಹರೀಶ್.
2026-27 ಸಾಲಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆಯ ಸ್ಪರ್ಧೆಯಲ್ಲಿ ಮತ್ತೊಮ್ಮೆ ಬಾ.ಮಾ. ಹರೀಶ್.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಲಿ)
2026-27 ರ ಸಾಲಿನ ಚುನಾವಣೆ
ಅತ್ಮೀಯ ಬಂಧುಗಳಲ್ಲಿ ವಿನಂತಿ
ಆತ್ಮೀಯರೇ, 2026-27 ನೇ ಸಾಲಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ
ನಿಮ್ಮೆಲ್ಲರ ಸೇವಾಕಾಂಕ್ಷಿಯಾಗಿ ಮತ್ತೊಮ್ಮೆ ಸ್ಪರ್ಧಿಸಲು ಇಚ್ಛಿಸುತ್ತೇನೆ.
ತಮ್ಮೆಲ್ಲರಿಗೂ ತಿಳಿದಿರುವ ಹಾಗೆ 2022-23ನೇ ಸಾಲಿನಲ್ಲಿ ನಾನು ಮಂಡಳಿಯ ಅಧ್ಯಕ್ಷನಾಗಿ
ಕಾರ್ಯನಿರ್ವಹಿಸಿದ್ದು ಕೆಲವೊಂದು ಕಾನೂನು ತೊಡಕುಗಳಿಂದಾಗಿ ಚಿತ್ರರಂಗಕ್ಕೆ ಒಳಿತಾಗುವಂತಹ
ನಿರ್ಣಯಗಳನ್ನು ಅನುಷ್ಠಾನಗೊಳಸಲು ಸಾಧ್ಯವಾಗಿರುವುದಿಲ್ಲ, ಆದರೂ ಕೂಡ ಇದ್ದಂತಹ
ಇತಿಮಿತಿಗಳಲ್ಲಿ ಸಾಧ್ಯವಾದಷ್ಟು ಕೆಲಸಗಳನ್ನು ಮಾಡಿರುತ್ತೇನೆ.
ಈ ಹಿಂದೆ 2014-15 ಮತ್ತು 2018-19ನೇ ಸಾಲಿನಲ್ಲಿ ಮಂಡಳಿಗೆ ಕಾರ್ಯದರ್ಶಿಯಾಗಿ ಆಯ್ಕೆಯಾಗಿ
ಅಂದಿನ ಅಧ್ಯಕ್ಷರಾದ ಶ್ರೀ ಥಾಮಸ್ ಡಿಸೋಜಾ ಹಾಗೂ ಶ್ರೀ ಎಸ್.ಎ ಚಿನ್ನೆ ಗೌಡರ ಜೊತೆಯಲ್ಲಿ
ಉತ್ತಮವಾಗಿ ಕೆಲಸ ನಿರ್ವಹಿಸಿ ಮಂಡಳಿಯ ಹಲವಾರು ಸಮಸ್ಯೆಗಳು ಮತ್ತು ಅಭಿವೃದ್ಧಿಯಲ್ಲಿ
ಪ್ರಾಮಾಣಿಕವಾಗಿ ಶ್ರಮಿಸಿರುತ್ತೇನೆ ಚಲನಚಿತ್ರ ನಿರ್ಮಾಪಕರು ಹಂಚಿಕೆದಾರರು ಮತ್ತು
ಪ್ರದರ್ಶಕರೊಂದಿಗೆ ಅಂದಿನಿಂದ ಇಂದಿನವರೆಗೂ ನಿರಂತರ ಸೌಹಾರ್ದ ಸಂಪರ್ಕದಲ್ಲಿದ್ದು
ಹಲವಾರು ಸಮಸ್ಯೆಗಳಿಗೆ ಪರಿಹಾರ ದೊರಕಿಸಿ ಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಸಲ್ಲಿಸಿದ್ದೇನೆ.
ಈ ಬಾರಿಯ ಚಲನಚಿತ್ರ ವಾಣಿಜ್ಯ ಮಂಡಳಿ 2025-27ನೇ ಸಾಲಿನ ಚುನಾವಣೆಗೆ ಚಿತ್ರರಂಗಕ್ಕೆ
ಒಳತಾಗುವಂತ ಧೈಯೋದ್ದೇಶಗಳನ್ನ ಇಟ್ಟುಕೊಂಡು ಹಾಗೂ ಮಂಡಆಯ ಸರ್ವತೋಮುಖ
ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದಕ್ಕೆ ಮತ್ತೊಮ್ಮೆ ಅವಕಾಶ ನೀಡಿ ನಿಮ್ಮ
ಸಹಕಾರವನ್ನು ನೀಡಲು ಕೋರಿಕೊಳ್ಳುತ್ತೇನೆ.
ಚುನಾವಣಾ ದಿನಾಂಕ : 31-1-2026
ಸ್ಥಳ : ಗುರುರಾಜ ಕಲ್ಯಾಣ ಮಂಟಪ
ಮತದಾನ ಸಮಯ : ಮಧ್ಯಾಹ್ನ 2 ಗಂಟೆಯಿಂದ
ಸಂಜೆ 6ರವರೆಗೆ
ತಮ್ಮ ವಿಶ್ವಾಸಿ…
ಭಾ.ಮಾ ಹಶೀಶ್
ಅಧ್ಯಕ್ಷ ಸ್ಥಾನದ ಅಭ್ಯರ್ಥಿ











