ಶ್ರೀಕ್ಷೇತ್ರ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಎಂ.ಕೃಷ್ಣಪ್ಪ ಮತ್ತು ಮಕ್ಕಳಿಂದ 34 ಲಕ್ಷ ರೂಪಾಯಿಯ ರಥದ ನಿರ್ಮಾಣ
ಶ್ರೀಕ್ಷೇತ್ರ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಬೆಂಗಳೂರಿನ ವಿಜಯನಗರದ ಸನ್ಮಾನ್ಯ ಶಾಸಕರಾದ ಎಂ.ಕೃಷ್ಣಪ್ಪ, ಗೋವಿಂದರಾಜನಗರದ ಸನ್ಮಾನ್ಯ ಶಾಸಕರಾದ ಶ್ರೀ ಪ್ರಿಯಕೃಷ್ಣರವರು ಹಾಗೂ ಪ್ರದೀಪ್ ಕೃಷ್ಣಪ್ಪ ರವರು 34 ಲಕ್ಷ ರೂಪಾಯಿ ವೆಚ್ಚದ ನೂತನ ರಥದ ನಿರ್ಮಾಣಕ್ಕೆ ಸಂಪೂರ್ಣವಾಗಿ ವೈಯುಕ್ತಿಕ ಚೆಕ್ ನ್ನು ದೇವಸ್ಥಾನದ ಅರ್ಚಕರಾದ ಶ್ರೀ ಶರತ್ ಕುಮಾರ್, ರವೀಂದ್ರ ಕುಮಾರ್, ಅನಿಲ್ ಹಾಗೂ ದೇವಸ್ಥಾನದ ಮಾಜಿ ಅಧ್ಯಕ್ಷರು ವಿ. ಬಿ ಚಂದ್ರುರವರಿಗೆ ಈ ದಿನ ಚೆಕ್ ಮೂಲಕ ಹಸ್ತಾಂತರಿಸಿದರು.











