ಮೇಲುಕೋಟೆಯ ಯೋಗನರಸಿಂಹಸ್ವಾಮಿ ಬೆಟ್ಟಕ್ಕೆ ಪಾರ್ಕಿಂಗ್ ಸ್ಥಳದಿಂದ ಲಿಪ್ಟ್ ಅಥವ ಕೇಬಲ್ ಕಾರ್ ಅಳವಡಿಕೆಗೆ ವಿಜಯನಗರದ ಶಾಸಕರಾದ ಎಂ. ಕೃಷ್ಣಪ್ಪನವರಿಂದ ಯೋಜನೆ.
ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶ್ರೀಎಂ ಕೃಷ್ಣಪ್ಪರಿಂದ (ಲೇ ಔಟ್ ಕೃಷ್ಣಪ್ಪ) ಮೇಲುಕೋಟೆ ಯೋಗನರಸಿಂಹಸ್ವಾಮಿ ಬೆಟ್ಟಕ್ಕೆ ಪಾರ್ಕಿಂಗ್ ಸ್ಥಳದಿಂದ ಲಿಪ್ಟ್ ಅಥವ ಕೇಬಲ್ ಕಾರ್ ಅಳವಡಿಕೆ ಕೊಡುಗೆ ನೀಡುವ ಸಂಬಂಧ ಸ್ಥಾನಾಚಾರ್ಯ ಶ್ರೀನಿವಾಸ ನರಸಿಂಹನ್ ಗುರೂಜಿಯವರೊಡನೆ ಚರ್ಚೆ. ಮರುದಿನವೇ ಮೇಲುಕೋಟೆಗೆ ಇಂಜಿನಿಯರ್ ತಂಡ ಕಳುಹಿಸಿ ಪರಿಶೀಲನೆ ಮಾಡಿಸಿ ಸರ್ವೆ ಸಹ ಮುಕ್ತಾಯಮಾಡಿಸಿದ ಕೃಷ್ಣಪ್ಪನವರು. ನನ್ನಿಂದಲೂ ಅಗತ್ಯ ಸಹಕಾರ. ನಿರ್ಮಾಣ ಎಲ್ಲಿ ಹೇಗೆ ಮಾಡಬಹುದು ಎಂಬ ಬಗ್ಗೆ ವಿವರಣೆ. ಸಾಧ್ಯಾಸಾಧ್ಯತೆ ಪರಿಶೀಲಿಸಿ ಚರ್ಚಿಸಿದ ಇಂಜಿನಿಯರ್ ತಂಡ . ಯೋಗನರಸಿಂಹ ಹಾಗೂ ಚೆಲುವನಾರಾಯಣನ ಅನುಗ್ರಹದಿಂದ ಭಕ್ತರಿಗೆ ಶೀಘ್ರವಾಗಿ ಅನುಕೂಲ ಲಭಿಸಲಿ ಎಂಬ ಪ್ರಾರ್ಥನೆ.











