ನಿರ್ದೇಶಕರ ಸಂಘದಿಂದ ಪುಟ್ಟಣ್ಣ ಕಣಗಾಲ್ ರವರ ಹೆಸರನ್ನು ಗಾಂಧೀನಗರದ ಯಾವುದಾದರು ಪ್ರಮುಖ ರಸ್ತೆಗೆ ಇಡಲು ಸಚಿವರಿಗೆ ಮನವಿ ಪತ್ರ

ಇತ್ತೀಚೆಗೆ ಸಚಿವರಾದ ಸನ್ಮಾನ್ಯ ಶ್ರೀ ದಿನೇಶ್ ಗುಂಡೂರಾವ್ ಅವರ ಮನೆಗೆ ಹೋಗಿ ಸಚಿವರನ್ನು ಬೇಟಿ ಮಾಡಿ ಡಿಸೆಂಬರ್ ಒಂದರಂದು ನಡೆಯಲಿರುವ ಪುಟ್ಟಣ್ಣ ಕಣಗಾಲ್ ಅವರ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಸಲು ಸರಕಾರದ ವತಿಯಿಯಿಂದ ವ್ಯವಸ್ಥೆ ಮಾಡಿಸಲು ಮನವಿ ಮಾಡಲಾಯಿತು. ನಂತರ ಗಾಂಧಿನಗರದ ಸುತ್ತಮುತ್ತಲಿನ ರಸ್ತೆಯೊಂದಕ್ಕೆ ಎಸ್ ಆರ್ ಪುಟ್ಟಣ್ಣ ಕಣಗಾಲ್ ಅವರ ಹೆಸರನ್ನು ಇಡಲು ಸಚಿವರಲ್ಲಿ ವಿನಂತಿಸಲಾಯಿತು.

ಅದಕ್ಕೆ ಸ್ಪಂದಿಸಿದ ಸಚಿವರು ಅದರ ಬಗ್ಗೆ ಕಾರ್ಯಪ್ರವೃತ್ತರಾಗಲು ತಿಳಿಸಿ ಆದಷ್ಟು ಬೇಗ ಪರಿಶೀಲಿಸಿ ಮಾಡೋಣ ಎಂದು ತಿಳಿಸಿದರು. ಆರೋಗ್ಯ ತಪಾಸಣೆ ಸಂದರ್ಭ ಅರೋಗ್ಯ ಅಧಿಕಾರಿಗಳಿಗೆ ಎಲ್ಲಾ ರೀತಿಯ ನೆರವು ನೀಡುವಂತೆ ಸೂಚನೆ ನೀಡಿದರು. ನಮ್ಮ ಎರಡು ಮನವಿಗೂ ಸ್ಪಂದಿಸಿದ ಸಚಿವರಿಗೆ ನಮ್ಮ ಸಂಘದ ಪರವಾಗಿ ಅಭಿನಂದನೆಗಳು. ಈ ಸಂದರ್ಭದಲ್ಲಿ ನಮ್ಮ ಜೊತೆ ಕಲಾವಿದರಾದ ಟೆನ್ನಿಸ್ ಕೃಷ್ಣ ಇದ್ದರು.

ಅಧ್ಯಕ್ಷರು
ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ(ರಿ)
ಬೆಂಗಳೂರು

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor