ಡಾ,, ರಾಜಕುಮಾರ್ ರಸ್ತೆ ಪಕ್ಕ ಬಂಗಾರದ ಮನುಷ್ಯ ಚಿತ್ರ ನಿರ್ದೇಶಕ ಡಾ, ಸಿದ್ಧಲಿಂಗಯ್ಯನವರ ರಸ್ತೆಗೆ ಚಾಲನೆ.

ರಾಜಾಜಿನಗರದ ಆರನೇ ಬ್ಲಾಕ್ ನಲ್ಲಿ ಚಿತ್ರರಂಗದ ಪರ್ವತಗಳೆರಡರ ಸಂಗಮ..

ಸಾಮಾಜಿಕ ಕಳಕಳಿ ಮತ್ತು ಉತ್ತಮ ಸಂದೇಶಗಳಿರುವ ಬಂಗಾರದ ಮನುಷ್ಯ, ಭೂತಯ್ಯನ ಮಗ ಅಯ್ಯು ಹೀಗೆ ಸುಮಾರು 24 ಚಲನಚಿತ್ರಗಳನ್ನು ನಿರ್ದೇಶಿಸಿರುವ ಹೆಸರಾಂತ, ಧೀಮಂತ ಚಲನಚಿತ್ರ ನಿರ್ದೇಶಕರಾದ
ಡಾ. ಸಿದ್ದಲಿಂಗಯ್ಯನವರ ಹೆಸರನ್ನು ರಾಜಾಜಿನಗರದ 6 ನೇ ಬ್ಲಾಕ್ ರಸ್ತೆಯಿಂದ ಹಳೆ ಪೋಲಿಸ್ ಠಾಣೆಯವರೆಗೆ ಡಾ. ಸಿದ್ದಲಿಂಗಯ್ಯರಸ್ತೆ ಎಂದು ಹೆಸರನ್ನಿಟ್ಟು ವಿಜಯನಗರ ವಿಧಾನ ಸಭಾ ಸದಸ್ಯರಾದ ಕೃಷ್ಣಪ್ಪನವರು ಇಂದು ಕಾರ್ಯಕ್ರಮವನ್ನು ಉದ್ಘಾಟಿಸುವುದರೊಂದಿಗೆ ಯಶಸ್ವಿಯಾಗಿಸಿದರು. ಇದಕ್ಕಾಗಿ ಶ್ರಮ ಪಟ್ಟವರಿಗು ಇದರ ಕಾರಣಕರ್ತರಿಗೂ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಪರವಾಗಿ ಹಾಗೂ ನನ್ನ ವೈಯುಕ್ತಿಕವಾಗಿ ಧನ್ಯವಾದಗಳು.
ತುಂಬಾ ಸಂತೋಷವೇನೆಂದರೆ ರಾಜಾಜಿನಗರದ ಆರನೇ ಬ್ಲಾಕ್ ನಲ್ಲಿ ಡಾ. ರಾಜ್ ಕುಮಾರ್ ರಸ್ತೆ ಹಾದುಹೋಗುವ ಸರ್ಕಲ್ ನಿಂದ ಡಾ. ಸಿದ್ಧಲಿಂಗಯ್ಯನವರ ರಸ್ತೆ ಪ್ರಾರಂಭವಾದ ಕಾರಣ ಚಿತ್ರರಂಗದ ಪರ್ವತಗಳೆರಡರ ಸಂಗಮವಾದಂತಾಗಿದೆ. ಇದಕ್ಕಿಂತ ಕುಷಿ ಇನ್ನೇನು ಬೇಕು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor