Love OTP Hero Anish Upset. ನೋವು ಹತಾಶೆಯಲ್ಲಿ ಕಣ್ಣೀರಿಟ್ಟ ನಟ, ನಿರ್ದೇಶಕ ಅನೀಶ್.
https://www.instagram.com/reel/DREVdn9CGPC/?igsh=MXRudnhjczZ2Mmw1dg==
ನೋವು ಹತಾಶೆಯಲ್ಲಿ ಕಣ್ಣೀರಿಟ್ಟ ನಟ, ನಿರ್ದೇಶಕ ಅನೀಶ್ ಬೇಸರ
ಲವ್ OTP ಚಿತ್ರಕ್ಕೆ ಅತ್ಯುತ್ತಮ ವಿಮರ್ಶೆಗಳು ಸಿಕ್ಕರು ಚಿತ್ರಮಂದಿರದತ್ತ ಸುಳಿಯುತ್ತಿಲ್ಲ ಪ್ರೇಕ್ಷಕ
ನವೆಂಬರ್ 14ರಂದು ರಾಜ್ಯದಾದ್ಯಂತ ಬಿಡುಗಡೆಯಾಗಿರೋ ಲವ್ OTP
ಬುಕ್ ಮೈ ಶೋನಲ್ಲೂ ಪ್ರಶಂಸೆಗಳ ಸುರಿಮಳೆ
ವಿಮರ್ಶಕರಿಂದ 3.5/5 ರೇಟಿಂಗ್ ಪಡೆದಿರೋ ಚಿತ್ರ

14ವರ್ಷಗಳ ಸತತ ಪ್ರಯತ್ನಕ್ಕೆ ಮತ್ತೆ ನಿರಾಸೆ..?
ಇದಕ್ಕಿಂತ ಇನ್ನೇನು ಮಾಡ್ಬೇಕೆಂದು ಕಣ್ಣೀರಿಟ್ಟಿರೋ ನಟ
ತಮ್ಮ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ವಿಡಿಯೋ ಬಿಟ್ಟು, ನೋವು ತೋಡುಕೊಂಡಿರುವ ಅನೀಶ್.
ಅನೀಶ್ ನೋವಿನ ಮನವಿ… insta Post
ನಮಸ್ಕಾರ… ತುಂಬಾ ನೋವಿನಿಂದ ಹತಾಶೆಯಿಂದ ಈ ಮಾತುಗಳನ್ನ ಹೇಳ್ತೀನಿದ್ದೀನಿ…
14ವರ್ಷದ ನಿರಂತರ ಶ್ರಮ.. ಸೋಲುಗಳಿಗೆ ಕಂಗೆಡದೇ.. ಸಿನಿಮಾದಿಂದ ಸಿನಿಮಾಗೆ ಆಶಾದಾಯಕವಾಗೇ ಇಲ್ಲಿವರೆಗೂ ಬಂದೆ…

ನನ್ನ ವೃತ್ತಿ ಬದುಕಿನಲ್ಲೇ The Best Reviews ಲವ್ OTPಗೆ ಸಿಕ್ಕಿದೆ… ಸಿಕ್ತಿದೆ..
ಆದ್ರೆ, ಥಿಯೇಟರಿಗೆ ಯಾಕ್ ಯಾರೂ ಬರ್ತಿಲ್ಲ…??? ನಾನೂ ಇನ್ನೇನ್ ಮಾಡ್ಬೇಕು..??? ಗೊತ್ತಾಗ್ತಿಲ್ಲ…!!!
ಮೊನ್ನೆ ಪ್ರಿಮಿಯರ್ ನೋಡಿ ಪತ್ರಕರ್ತರು ಅತ್ಯುತ್ತಮ ವಿಮರ್ಶೆಗಳನ್ನ ಕೊಟ್ಟಿದ್ದಾರೆ.. ನಿನ್ನೆ ಯಾರೆಲ್ಲಾ ನೋಡಿದ್ದಾರೋ ಬುಕ್ ಮೈಶೋನಲ್ಲಿ ನಿರೀಕ್ಷೆಗೂ ಮೀರಿ ನಮ್ಮ ಕೆಲಸವನ್ನ ಕೊಂಡಾಡ್ತಿದ್ದಾರೆ..
ಆದ್ರೂ ಯಾಕ್ ಈರೀತಿ..???? ಅರ್ಥ ಆಗ್ತಿಲ್ಲ..???
ಇವತ್ತು ನಾಳೆಯೊಳಗೆ ಪ್ರೇಕ್ಷಕರು ಬಂದ್ರೆ ಕೈ ಹಿಡಿದ್ರೆ ಮುಂದಿನ ದಾರಿ…. ಇಲ್ಲಾಂದ್ರೆ ಇಲ್ಲಿಗೆ ನನ್ನ ಸಿನಿಮಾ ಪ್ರಯತ್ನವನ್ನ ನಿಲ್ಲಿಸ್ತೀನಿ.
ತುಂಬಾ ದುಃಖದಿಂದ ಈ ವಿಚಾರ ಹೇಳ್ತಿದ್ದೀನಿ.. ಈ ಕಣ್ಣೀರು ಸಿಂಪತಿಗಲ್ಲ… ಗಿಮಿಕ್ಕು ಅಲ್ಲ.. ನನ್ನ ಅಂತರಾಳದ ನೋವಿದು🙏🙏🙏











