gharga movie review. ಘಾರ್ಗ ಚಿತ್ರ ವಿಮರ್ಶೆ – ಸಸ್ಪೆನ್ಸ್, ಥ್ರಿಲ್ಲರ್ ಘಾರ್ಗಾ ನಿರ್ಮಿಸಿದ ಜೋಗಿ ನಿರ್ಮಾಪಕ.
ಚಿತ್ರ – ಘಾರ್ಗ
ನಿರ್ಮಾಪಕರು – ಅಶ್ವಿನಿ ರಾಮಪ್ರಸಾದ್
ನಿರ್ದೇಶನ – ಎಂ. ಶಶಿಧರ್
ಛಾಯಾಗ್ರಹಣ – ಗುರು ಪ್ರಸಾದ್ ನರ್ನದ್
ಸಂಗೀತ – ಗುರು ಕಿರಣ್ , ಆರ್. ಪಿ. ಪಟ್ನಾಯಕ್
Rating -3/5
ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ಕಲಾವಿದರು :- ಅರುಣ್ ರಾಮಪ್ರಸಾದ್, ರಾಗವಿ ಗೌಡ, ಸಾಯಿ ಕುಮಾರ್, ಅರುಣ್ ಸಾಗರ್, ಮಿತ್ರ, ಸಂಪತ್ ರಾಜ್, ದೇವ್ ಗಿಲ್, ರಾಹುಲ್ ದೇವ್ ಮುಂತಾದವರು.
ದಶಕಗಳ ಹಿಂದೆ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ “ಜೋಗಿ” ನಿರ್ಮಿಸಿದ ನಿರ್ಮಾಪಕ ಅಶ್ವಿನಿ ರಾಮಪ್ರಸಾದ್ ಈಗ ತಮ್ಮ ಮಗನಿಗಾಗಿ ಘಾರ್ಗಾ ಚಿತ್ರ ನಿರ್ಮಿಸಿದ್ದಾರೆ

ಘಾರ್ಗ ಇದೊಂದು ಸಸ್ಪೆನ್ಸ್, ಥ್ರಿಲ್ಲರ್, ಹಾರರ್ ಟಚ್ ಇರುವಂತ ಚಿತ್ರ. ನಾಯಕ ನಟ ಅರುಣ್ ರಾಮಪ್ರಸಾದ್ ಆದರೆ, ಈ ಚಿತ್ರದ ನಿಜವಾದ ನಾಯಕ ಎಂದರೆ ಸಾಯಿಕುಮಾರ್ ಅನ್ನಬಹುದು ಏಕೆಂದರೆ ನಾಯಕ ನಟನಿಗಿಂತ ಸಾಯಿ ಕುಮಾರ್ ರವರ ಪಾತ್ರಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಸಾಯಿ ಕುಮಾರ್ ಯಾವುದೇ ಪಾತ್ರವಾದರು ಅದಕ್ಕೆ ಜೀವ ತುಂಬುತ್ತಾರೆ ಎನ್ನುವುದಕ್ಕೆ ಈ ಗಜಾನನ ಐತಾಳ್ ಪಾತ್ರ ಸಾಕ್ಷಿ.

ಅದು ಘಾರ್ಗಾ ಎಂಬ ಕಾಡಿನ ನಡುವೆ ಇರುವ ಆ ಊರಿನಲ್ಲಿ ನಡೆವ. ಒಂದಷ್ಟು ನಿಗೂಢತೆಯಿಂದ ಹಲವಾರು ಜನರಿಗೆ ಆ ನಿಗೂಡತೆಯನ್ನು ಬೇದಿಸುವ ತವಕ ಮತ್ತು ಕುತೂಹಲವಿರುತ್ತದೆ. ಈ ಕುತೂಹಲ ಮತ್ತು ಸಸ್ಪೆನ್ಸ್ ಪ್ರೇಕ್ಷಕರನ್ನು ಹಿಡಿದಿಡುತ್ತದೆ.
ನಿಟ್ಟಿನಲ್ಲಿ ಘಾರ್ಗಾ ಒಂದು ಒಳ್ಳೆಯ ಪ್ರಯತ್ನ.
ನಿರ್ದೇಶಕ ಶಶಿಧರ್ ತಮ್ಮ ಚೊಚ್ಚಲ ನಿರ್ದೇಶನದಲ್ಲಿ ತುಂಬಾ
ಗಂಭೀರವಾದ, ಕಥೆಯನ್ನು ಆಯ್ಕೆಮಾಡಿಕೊಂಡು
ಅದನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.
ಸಿನಿಮಾ ಸರಾಗವಾಗಿ
ನೋಡಿಸಿಕೊಂಡು ಹೋಗುತ್ತದೆ. ಚಿತ್ರದಲ್ಲಿ ಒಂದಷ್ಟು ಅಚ್ಚರಿಯಾದ ತಿರುವುಗಳು ಚಿತ್ರಕಥೆಗೆ ಸಾಥ್ ನೀಡಿವೆ.
ವಿಕ್ರಮ್ ಅಡಿಗ (ಅರುಣ್ ರಾಮಪ್ರಸಾದ್) ಮಹಾಬಲ ಐತಾಳರ ಪುಸ್ತಕ ಹುಡುಕುತ್ತಾ ಗಜಾನನ ಐತಾಳರ (ಸಾಯಿಕುಮಾರ್) ಮನೆಗೆ ಬರುತ್ತಾನೆ, ಅಲ್ಲಿ ಭಯ ಮತ್ತು ಕುತೂಹಲಕರ ತಿರುವುಗಳು ಶುರುವಾಗುತ್ತವೆ. ಅರುಣ್ ರಾಮಪ್ರಸಾದ್ ಮೊದಲ ಚಿತ್ರವಾದರೂ ಗಮನ ಸೆಳೆಯುತ್ತಾರೆ.
ನಿರ್ದೇಶಕ ಎಂ. ಶಶಿಧರ್ ಭಯ ಸನ್ನಿವೇಶಗಳನ್ನು ಯಶಸ್ವಿಯಾಗಿ ನಿರ್ಮಿಸಿದ್ದಾರೆ, ಸಾಯಿಕುಮಾರ್ ಗಜಾನನ ಐತಾಳರ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಅರುಣ್ ಸಾಗರ್, ಸಂಪತ್ ರಾಜ್, ರಿಹಾನಾ ಶೇಕ್ ಇತರರು ಪಾತ್ರಕ್ಕೆ ಜೀವ ತುಂಬಿದ್ದಾರೆ.
ಹಿನ್ನೆಲೆ ಸಂಗೀತ ಗುರುಕಿರಣ್ ಮತ್ತು ಆರ್.ಪಿ. ಪಾಟ್ನಾಯಕ್. ಸಹ ಯೋಗದಲ್ಲಿ ಚಿತ್ರದಲ್ಲಿ ಸಂಗೀತ ಬಹು ಮುಖ್ಯ ಪಾತ್ರ ವಹಿಸಿದೆ ಎನ್ನಬಹುದು. ಹಾಗೆ ಗುರುಪ್ರಸಾದ್ ರವರ ಕ್ಯಾಮರಾ ಕೆಲಸವೂ ಚನ್ನಾಗಿ ಮೂಡಿ ಬಂದಿದೆ.
ಒಟ್ಟಿನಲ್ಲಿ ಒಂದು ಥ್ರಿಲ್ಲರ್, ಹಾರರ್, ಸಸ್ಪೆನ್ಸ್ ಚಿತ್ರ ಪ್ರೇಮಿಗಳಿಗೆ ಚಿತ್ರ ಇಷ್ಟವಾಗುತ್ತದೆ.











