Vrusshabha movie review. ವೃಷಭ ಚಿತ್ರ ವಿಮರ್ಶೆ. ಪ್ರೇಕ್ಷಕರಿಂದ ಸೈ ಎನಿಸಿಕೊಂಡ ಸಮರ್ಜಿತ್ ಲಂಕೇಶ್.

ಚಿತ್ರ – ವೃಷಭ
ನಿರ್ಮಾಪಕರು – ವಿಶಾಲ್ ಗುರುನಾನಿ, ಏಕ್ತಾ ಕಪೂರ್, ಶೋಭ ಕಪೂರ್, ಕೆ. ಕುಮಾರ್ ಮುಂತಾದವರು.
ನಿರ್ದೇಶನ –  ನಂದಕಿಶೋರ್
ಛಾಯಾಗ್ರಹಣ –  ಆಂಥೋಣಿ ಸ್ಯಾಮ್ ಸಂಗ್
ಸಂಗೀತ – ಸ್ಯಾಮ್ CS,
ಹಿನ್ನೆಲೆ ಸಂಗೀತ – ಆರ್ಯನ್ ಮೆಹೆದಿ
ಸಂಕಲನ – K.M. ಪ್ರಕಾಶ್
Rating -3.5/5

ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ

ಕಲಾವಿದರು – ಮೋಹನ್ ಲಾಲ್, ಜಿತೇಂದ್ರ (ಹಿಂದಿ ಚಿತ್ರರಂಗದ ಹಿರಿಯ ನಟ) ರಾಗಿಣಿ ದ್ವಿವೇದಿ, ಸಮರ್ಜಿತ್ ಲಂಕೇಶ್, ನಯನ ಸಾರಿಕ, ಗರುಡ ರಾಮ್, ಕಿಶೋರ್, ನೇಹಸಕ್ಸೇನಾ, ಪಾವನಿ, ಮುಂತಾದವರು.

ಈ ಚಿತ್ರವು ತಂದೆ ಮತ್ತು ಮಗನ ನಡುವಿನ ಪುನರ್ಜನ್ಮದ
ಕಥೆಯನ್ನು ಹೊಂದಿರುವ ಫ್ಯಾಂಟಸಿ ಆಕ್ಷನ್
ಡ್ರಾಮಾ ಹೊಂದಿರುವ ಚಿತ್ರ ವೃಷಭ.

ಈ ಚಿತ್ರದ ದೊಡ್ಡ ಶಕ್ತಿ
ಎಂದರೆ ಮೋಹನ್ ಲಾಲ್. ಮೋಹನ್ ಲಾಲ್ ಒಬ್ಬ ಪ್ರತಿಷ್ಠಿತ
ಉದ್ಯಮಿಯಾಗಿ ಮತ್ತು ಗತಕಾಲದ ವಿಜಯೇಂದ್ರ ವೃಷಭ ಎಂಬ ರಾಜನಾಗಿ ಎರಡು ವಿಭಿನ್ನ
ಕಾಲಘಟ್ಟದ ಎರಡು ವಿಭಿನ್ನ ಪಾತ್ರಗಳಲ್ಲಿ ಅವರು ಅದ್ಭುತವಾಗಿ ನಟಿಸಿದ್ದಾರೆ.

“ವೃಷಭ” ಚಿತ್ರವು ಮೋಹನ್‌ಲಾಲ್, ಸಮರ್ಜಿತ್ ಲಂಕೇಶ್ ಮತ್ತು ರಾಗಿಣಿ ದ್ವಿವೇದಿ ಅಭಿನಯದ ಮಲಯಾಳಂ ಚಿತ್ರವಾಗಿದ್ದು, ಕನ್ನಡ ನಿರ್ದೇಶಕ ನಂದಕಿಶೋರ್‌ ಮೊದಲ ಬಾರಿಗೆ ಮಲಯಾಳಂ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಚಿತ್ರವು ರಾಜವಂಶದ ಕಾಲಘಟ್ಟದಿಂದ ಆಧುನಿಕ ಕಾಲಕ್ಕೆ ಸಂಪರ್ಕಿಸುವ ಪುನರ್ಜನ್ಮದ ಕಥೆಯಾಗಿದ್ದು, ತಂದೆ-ಮಗ ಬಾಂಧವ್ಯ, ಶಾಪ, ಪ್ರೀತಿ ಮತ್ತು ತ್ಯಾಗಗಳನ್ನು ಬಿಂಬಿಸಿದೆ. ಮೋಹನ್‌ಲಾಲ್ ಡಬಲ್ ರೋಲ್‌ನಲ್ಲಿ ರಾಜ ವಿಜಯೇಂದ್ರ ವೃಷಭ ಮತ್ತು ಆಧುನಿಕ ಉದ್ಯಮಿಯಾಗಿ ಮಿಂಚಿದ್ದಾರೆ.
ಸಮರ್ಜಿತ್ ಲಂಕೇಶ್ ಮಗನ ಪಾತ್ರದಲ್ಲಿ ಮುದ್ದಾಗಿ ನಟಿಸಿದ್ದಾರೆ, ರಾಗಿಣಿ ದ್ವಿವೇದಿ ಮಹಾರಾಣಿ ಯಾಗಿ ಮತ್ತು ಪ್ರಸ್ತುತ ಕಾಲಘಟ್ಟದ ಉದ್ಯಮಿಯ ಹೆಂಡತಿಯಾಗಿ ಅಭಿನಯಿಸಿದ್ದಾರೆ.


ರಾಗಿಣಿ ಮೊದಲ ಬಾರಿಗೆ ಮಹಾರಾಣಿಯ ಪಾತ್ರದಲ್ಲಿ ವಿಜ್ರಂಭಿಸುವುದರ ಜೊತೆಗೆ ಕತ್ತಿ ವರಸೆಯ ಫೈಟ್ ಗಳನ್ನು ಚನ್ನಾಗಿ ನಿಭಾಯಿಸಿದ್ದಾರೆ. ಈಗಾಗಲೇ ಎರಡನೇ ಬಾರಿ ಮಲಯಾಳಂನಲ್ಲಿ ಮೋಹನ್ ಲಾಲ್ ಜೊತೆ ಅಭಿನಯಿಸಿದ್ದಾರೆ.

ಇನ್ನೂ ಚಿತ್ರದ ಫೈಯರ್ ಅಂಡ್ ಸ್ಪಿರಿಟ್, ಆ್ಯಂಗ್ರಿ ಎಂಗ್ ಮ್ಯಾನ್ ಸಮರ್ಜಿತ್ ಲಂಕೇಶ್. ತುಂಬಾ ಚನ್ನಾಗಿ ಪಾತ್ರ ನಿರ್ವಹಣೆ ಮಾಡಿದ್ದಾರೆ.
ಎರಡು ಕಾಲಘಟ್ಟಗಳ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅಷ್ಟೇ ಅಲ್ಲದೇ ಆಕ್ಷನ್ ಸೀನ್ ಗಳು ಕೂಡ ರಾಜರ ಕಾಲದ ಕತ್ತಿ ವರಸೆಯಂತಹ ಆಕ್ಷನ್ ಹಾಗೂ ಇಂದಿನ ಟೆಕ್ನಾಲಜಿಗೆ ಹೊಂದಿಕೊಂಡಂತೆ ಫೈಟ್ ಮಾಡಿದ್ದಾರೆ. ಡ್ಯಾನ್ಸ್ ನಲ್ಲೂ ಕೂಡ ತುಂಬಾ ಚನ್ನಾಗಿ ಸ್ಟೆಪ್ ಹಾಕಿದ್ದಾರೆ. ಅಭಿನಯದಲ್ಲೂ ಸಮರ್ಜಿತ್ ಪಕ್ವತೆಯನ್ನು ಹೊಂದಿರುವುದು ಕಾಣುತ್ತದೆ. ಮೋಹನ್ವಲಾಲ್ ರಂತಹ ಹಿರಿಯ ಸ್ಟಾರ್ ನಟರ ಮುಂದೆ ಲೀಲಾ ಜಾಲವಾಗಿ ಅಭಿನಯಿಸಿದ್ದಾರೆ.

ಇಲ್ಲೂ ಕೂಡ ಅಪ್ಪ ಮಗನ ಪ್ರೀತಿಯ ದೃಶ್ಯಗಳು ಹಾಗೂ ಅಪ್ಪನ ವಿರುದ್ಧ ತಿರುಗಿ ಬಿದ್ದು ಅವರನ್ನೇ ಕೊಲ್ಲುವಂತ ದೃಶ್ಯಗಳಲ್ಲಿ ಸಮರ್ಜಿತ್ ಲಂಕೇಶ್ ಆ್ಯಂಟಿ ಹೀರೋ ಆಗಿಯೂ ಸೈ, ಹೀರೋ ಆಗಿಯೂ ಸೈ  ಎನ್ನುವಂತೆ ಪಾತ್ರಗಳಲ್ಲಿ ಜೀವಿಸಿದ್ದಾನೆ‌.
ಚಿತ್ರ ನೋಡಿದವರಿಗೆ ಸಮರ್ಜಿತ್ ಲಂಕೇಶ್ ಒಬ್ಬ ಪರಿಪೂರ್ಣ ನಟ ಎಂಬುದನ್ನು ಒಪ್ಪಿಕೊಳ್ಳುತ್ತಾರೆ.

ಇದೊಂದು ರಾಜರ ಕಾಲದ ಫ್ಯಾಂಟಸಿ ಚಿತ್ರವಾದರೂ ಇಂದಿನ ಕಾಲಘಟ್ಟಗಳ ಜೊತೆಯಲ್ಲಿ ಸಾಗುತ್ತದೆ.
ನಿರ್ದೇಶಕ ನಂದ ಕಿಶೋರ್ ಒಂದು ಅಚ್ಚುಕಟ್ಟಾದ ಕಥೆಯ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ‌.

ಕಲಾ ನಿರ್ದೇಶನ, ಸಂಗೀತ, ಛಾಯಾಗ್ರಹಣ ಮತ್ತು ಸಂಕಲನ ಉತ್ತಮವಾಗಿವೆ.

ಆಂಥೋಣಿ ಸ್ಯಾಮ್ ಸಂಗ್ ರವರ ಕ್ಯಾಮೆರಾ ಕೈ ಚಳಕ ತುಂಬಾ ಚನ್ನಾಗಿ ಮೂಡಿ ಬಂದಿದೆ.
ಮ್ಯೂಸಿಕ್ ಕೂಡ ಸ್ಯಾಮ್ ಸಿ.ಎಸ್. ಮತ್ತು ರಸೂಲ್ ಪೂಕುಟ್ಟಿ ಯವರು ಎರಡು ಕಾಲ ಘಟ್ಟವನ್ನು ಚನ್ನಾಗಿ ಕಟ್ಡಿಕೊಟ್ಟಿದ್ದಾರೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor