“Timmana mattegalu” movie review. “ತಿಮ್ಮನ ಮೊಟ್ಟೆಗಳು” ಚಿತ್ರ ವಿಮರ್ಶೆ. Rating – 3/5. ವಿಜ್ಞಾನ, ಮತ್ತು ಧಾರ್ಮಿಕ ನಂಬಿಕೆಗಳ ತಾಕಲಾಟದಲ್ಲಿ ತಿಮ್ಮನ ಮೊಟ್ಟೆಗಳು.

ವಿಮರ್ಶೆ – ಮಂಜುರಾಜ್ ಸೂರ್ಯ

ಚಿತ್ರ ವಿಮರ್ಶೆ :- ತಿಮ್ಮನ ಮೊಟ್ಟೆಗಳು
Rating – 3/5.

ನಿರ್ಮಾಣ: ಆದರ್ಶ ಅಯ್ಯಂಗಾರ್
ನಿರ್ದೇಶನ: ರಕ್ಷಿತ್ ತೀರ್ಥಹಳ್ಳಿ
ಸಂಗೀತ :  ಹೇಮಂತ್ ಜೋಯಿಸ್
ಛಾಯಾಗ್ರಹಣ : ಪ್ರವೀಣ್

ಕಲಾವಿದರು : ಸುಚೇಂದ್ರ ಪ್ರಸಾದ್, ಶೃಂಗೇರಿ ರಾಮಣ್ಣ, ಕೇಶವ ಗುತ್ತಳಿಕೆ, ಆಶಿಕಾ ಸೋಮಶೇಖರ್, ಪ್ರಗತಿ ಪ್ರಭು, ರಾಘು ರಾಮನಕೊಪ್ಪ ಮುಂತಾದವರು

ತಮ್ಮ ಹಿಂದಿನ ಎರಡು ಚಿತ್ರಗಳಲ್ಲೂ ಒಂದೊಂದು ವಿಭಿನ್ನ ಯೋಚನೆಯೊಂದಿಗೆ ಕಥೆ ಕಟ್ಟಿದ್ದ ನಿರ್ದೇಶಕ ರಕ್ಷಿತ್‍ ತೀರ್ಥಹಳ್ಳಿ, ಇದೀಗ ‘ತಿಮ್ಮನ ಮೊಟ್ಟೆಗಳು’ ಚಿತ್ರದ ಮೂಲಕ ಮನುಷ್ಯ ಮತ್ತು ಪ್ರಕೃತಿಯೊಂದಿಗಿನ  ಸೂಕ್ಷ್ಮ ಸಂವೇದನೆಯ ಜೊತೆಗೆ ವಿಜ್ಞಾನ ಮತ್ತು ಧಾರ್ಮಿಕ ನಂಬಿಕೆಗಳ ಹೂರಣವನ್ನು ಅನಾವರಣ ಮಾಡಿದ್ದಾರೆ.
ತಿಮ್ಮ ಎಂಬ ಸಾಮಾನ್ಯ ಮನುಷ್ಯ ಸಮಾಜದ ಕಣ್ಣು ತೆರೆಸುವಂತ ಕಾರ್ಯಕ್ಕೆ ತನ್ನ ಅಮಾಯಕಥೆಯ ಮೂಲಕ ತನ್ನ ಜ್ಞಾನ ವನ್ನು ಪಸರಿಸಿದ್ದಾನೆ.


ಸಿನಿಮಾ ಕೇವಲ ಮನರಂಜನೆಗೆ ಮಾತ್ರವಲ್ಲ ಮನೋವಿಕಾಸಕ್ಕೂ ಕಾರಣವಾಗಬಲ್ಲದು ಎನ್ನುವುದಕ್ಕೆ ಸಾಕ್ಷಿ “ತಿಮ್ಮನ ಮೊಟ್ಟೆಗಳು.” ಚಿತ್ರ
ನಿಜಕ್ಕೂ ನಿರ್ದೇಶಕನ ಬುದ್ದಿವಂತಿಕೆಯನ್ನು ಕೂಡ ಇಲ್ಲಿ ಸ್ಮರಿಸಬೇಕು.
ರಕ್ಷಿತ್ ತೀರ್ಥಹಳ್ಳಿ, ಮಲೆನಾಡಿನ ಪ್ರಕೃತಿಯ ಪರಿಸರದಲ್ಲಿ ಬೆಳೆದ ಕಾರಣವೋ, ಅಥವಾ ಪ್ರಕೃತಿಯಲ್ಲಿನ ಜೀವಿಗಳ ಅಧ್ಯಯನದ ಪ್ರಭಾವವೋ ಗೊತ್ತಿಲ್ಲ. ಮನುಷ್ಯ ತನ್ನ ಸುತ್ತಲಿರುವ ಅನೇಕ ಜೀವಿಗಳನ್ನು ತಿಂದು ಮುಗಿಸಿದ್ದಾನೆ, ಅದೇ ರೀತಿಯಲ್ಲಿ ತನ್ನ ಬದುಕಿನ ಅವಿಭಾಜ್ಯ ಅಂಗವಾದ ಧಾರ್ಮಿಕ ನಂಬಿಕೆ, ಮೂಡ ನಂಬಿಕೆ, ಮತ್ತು ಭಯಗಳ ಸಲುವಾಗಿ ಕೆಲವು ಜೀವಿಗಳಿಗೆ ಬದುಕಲು ಬಿಟ್ಟಿದ್ದಾನೆ ಹಾಗೆ ಅವುಗಳಿಗೆ ಪೂಜ್ಯ ಭಾವನೆಗಳನ್ನು ಕೊಟ್ಟಿದ್ದಾನೆ ಎನ್ನುವುದಕ್ಕೆ ಚಿತ್ರದಲ್ಲಿ ನಿರ್ದೇಶಕ ಹಲವು ನಿದರ್ಶನಗಳನ್ನು ಕೊಟ್ಟಿದ್ದಾರೆ. 

ಕಾಳಿಂಗ ಸರ್ಪ ಸಂತತಿಯ ಬಗ್ಗೆ ಅಧ್ಯನ ಮಾಡಲು ಬಂದ ಹುಡುಗಿಯೊಬ್ಬಳಿಂದ ಅವಿಧ್ಯಾವಂತ ತಿಮ್ಮನಿಗೆ ಕೇಳುತ್ತಾಳೆ. ನಿಮ್ಮ ಕಾಡಲ್ಲಿ ಸರ್ಪಗಳ ಸಂತತಿ ಕಡಿಮೆಯಾಗಿದೆ, ನವಿಲುಗಳ ಸಂತತಿ ಜಾಸ್ತಿಯಾಗಿದೆ ಏಕೆಂದರೆ ನವಿಲುಗಳು ಹಾವುಗಳನ್ನ ತಿನ್ನುತ್ತವೆ ಅದಕ್ಕಾಗಿ ಹಾವುಗಳು ಕಾಣೆಯಾಗಿವೆ, ಹಾಗೇ ನವಿಲುಗಳನ್ನು ಮೊದಲು ಸಾಯಿಸಿ ಮಾಂಸವನ್ನು ತಿನ್ನುತ್ತಿದ್ದರು. ಒಮ್ಮೆ ಒಬ್ಬ ನವಿಲನ್ನು ಬೇಟೆಯಾಡಿ ಅದನ್ನು ಕುಯ್ಯುವಾಗ ಅದರ ಹೊಟ್ಟೆಯಲ್ಲಿ ಸರ್ಪ ಇತ್ತು ಅದರಿಂದ ನನಗೆ ಸರ್ಪದೋಷ ಬಂತು ಅಂತ ಹೆದರಿ ಅಲ್ಲಿಂದ ನವಿಲುಗಳನ್ನು ಬೇಟೆಯಾಡುವುದು ನಿಲ್ಲಿಸಿದರು. ಹಾಗೆ ಗದ್ದೆಯಲ್ಲಿನ ಏಡಿಕಾಯಿ ಗಳನ್ನು ವಿಷ ಹಾಕಿ ಕೊಂದಿರಿ ಅವುಗಳನ್ನು ತಿಂದ ನರಿಗಳು ಸಾವನ್ನಪ್ಪಿದವು ಅದರಿಂದ ನರಿಗಳ ಸಂಖ್ಯೆ ಕಡಿಮೆಯಾಗಿದೆ ಎಂಬ ವಿಷಯವನ್ನು ಕಥೆಯ ಜೊತೆ ಜೊತೆಯಲ್ಲಿ ಸಿಂಗರಿಸಿ ಮನರಂಜನೆಯ ಜೊತೆಗೆ ಸಮಾಜದ ಮನೋವಿಕಾಸಕ್ಕೂ ಕಾರಣವಾಗುವಂತ ವಿಷಯಗಳನ್ನು ನಿರೂಪಿಸಿದ್ದಾರೆ.

ಇದು ಪಶ್ಚಿಮ ಘಟ್ಟಗಳಲ್ಲಿ ಸಿಗುವ ಕಾಳಿಂಗ ಸರ್ಪದ ಸುತ್ತ  ಸುತ್ತುವ ಕಥೆ.

ಕಾಳಿಂಗ ಸರ್ಪಗಳ ಬಗ್ಗೆ ಅಧ್ಯನ ಮಾಡಲು ಪಟ್ಟಣದಿಂದ ಬರುವ ಒಂದು ತಂಡ.
ಸುಚೀಂದ್ರ ಪ್ರಸಾದ್ ತಂಡಕ್ಕೆ ಕಾಳಿಂಗ ಸರ್ಪ, ಅದರ ಗೂಡು ಮತ್ತು ಅದರ ಮೊಟ್ಟಗಳು ಬೇಕು.

ಕಾಡಿನಂಚಿನಲ್ಲಿರುವ ತಿಮ್ಮನಿಗೆ (ಕೇಶವ ಗುತ್ತಳಿಕೆ) ತನ್ನ ಗುಡಿಸಲಿನದ್ದೇ ಚಿಂತೆ. ಶಿಥಿಲವಾಗಿರುವ, ಮುಂಬರುವ ಮಳೆಗೆ ಕುಸಿಯಬಹುದಾದ ಗುಡಿಸಿಲನ್ನು ರಿಪೇರಿ ಮಾಡಿಸುವುದೇ ಅವನ ಚಿಂತೆ.

ತಾನು ಕೆಲಸ ಮಾಡುವ ಯಜಮಾನರು ಅವನಿಗೆ ಸಹಾಯ ಮಾಡುವುದಿಲ್ಲ.
ಅದರಿಂದ ಬೇಸರ ಮತ್ತು ಆತಂಕದಿಂದಿದ್ದ ತಿಮ್ಮನಿಗೆ ಪರಿಚಯವಾಗುವುದು,
ಕಾಳಿಂಗ ಸರ್ಪದ ಕುರಿತು ಸಂಶೋಧನೆ ಮಾಡುವ ತಂಡ.

ಕಾಳಿಂಗ ಸರ್ಪ ಮತ್ತು ಅದು ಮೊಟ್ಟೆ ಇಡುವ ಸ್ಥಳವನ್ನು ತೋರಿಸಿದರೆ, 50,000 ಹಣ ನೀಡುವುದಾಗಿ  ತಿಮ್ಮನಿಗೆ ಆಮಿಷ ತೋರಿಸಲಾಗುತ್ತಾರೆ.

ಗುಡಿಸಲು ರಿಪೇರಿಗೆ ದೇವರೇ ದಾರಿ ತೋರಿಸಿದ ಎಂದು ತಿಮ್ಮನ ಖುಷಿಯಾದರೆ , ಕಾಳಿಂಗ ಸರ್ಪದ ಜಾಗ ತೋರಿಸಿದರೆ, ಊರಿಗೆ ಗಂಡಾಂತರ ಬರತ್ತದೆ ಎಂದು ಊರಿನ ಹಿರಿಯ ವೆಂಕಣ್ಣಯ್ಯನ (ಶೃಂಗೇರಿ ರಾಮಣ್ಣ) ಆಕ್ರೋಶ.

ಸಂಶೋಧಕರ ತಂಡದ ಮುಖ್ಯಸ್ಥ ವಿಜಯ್‍ ಕುಮಾರ್‍ (ಸುಚೇಂದ್ರ ಪ್ರಸಾದ್‍) ತಿಮ್ಮನಿಗೆ ನೀನು ಮೊಟ್ಟೆ ಸರ್ಪ ಗೂಡು ತೋರಿಸಿದರೆ ಹಣ ಕೊಡುತ್ತೇನೆ ಬೇಗ ಹುಡುಕು ತೋರಿಸುತ್ತೇನೆ ಎಂದು ಒತ್ತಡ ಹೇರುತ್ತಾರೆ.

ತಿಮ್ಮ ಭಯ ಮತ್ತು ಗೊಂದಲಕ್ಕೆ ಬೀಳುತ್ತಾನೆ.
ನಿತ್ಯ ಕೂಲಿ ಕೊಡುವ ಯಜಮಾನ ಒಂದು ಕಡೆಯಾದರೆ, ತನ್ನ ಹೆಂಡತಿ ಮಗ ಜೊತೆಗೆ ಸೂರನ್ನು ಸರಿ ಪಡಿಸಬೇಕು, ನಿತ್ಯ ಸರ್ಪಗಳ ತಾಣ ಸಿಗದಿದ್ದಾಕ್ಕಾಗಿ ಬೈಗುಳ ನಿಂದನೆ ಇವುಗಳ ನಡುವೆ ತಿಮ್ಮ ಹೇಗೆ ಎಲ್ಲವನ್ನೂ ನಿಭಾಯಿಸುತ್ತಾನೆ, ಚಿತ್ರದ ಕೊನೆಗೆ ಕಟುಕ ಸಮಾಜಕ್ಕೆ ಹೇಗೆ ಮಾದರಿ ಯಾಗುತ್ತಾನೆ ಎನ್ನುವುದಕ್ಕೆ ತಿಮ್ಮನ ಮೊಟ್ಟೆಗಳು ಚಿತ್ರವನ್ನು ಚಿತ್ರಮಂದಿರಗಳಲ್ಲಿ ನೋಡಬೇಕು.

ರಕ್ಷಿತ್‍ ಈ ಬಾರಿ ಪಶ್ಚಿಮ ಘಟ್ಟಗಳ ಸುಂದರ ಪರಿಸರದೊಳಗಿನ, ಧಾರ್ಮಿಕ ನಂಬಿಕೆ ಮತ್ತು ವಿಜ್ಞಾನದ ಪರಿಯೊಳಗೆ ಅರ್ಥಪೂರ್ಣ ಕಥೆಯೊಂದನ್ನು ಕಟ್ಟಿಕೊಟ್ಟಿದ್ದಾರೆ.

ಈ ಚಿತ್ರ ಸಾಕ್ಷ್ಯಚಿತ್ರವಾಗದಂತೆ ಮನರಂಜನಾತ್ಕಕವಾಗಿ ಕೆಲವು ಜವಾಬ್ದಾರಿಯುತವಾದ ವಿಷಯಗಳನ್ನು ಪ್ರೇಕ್ಷಕರ ಎದೆಯೊಳಗಿಳಿಸುವ ಪ್ರಯತ್ನ ಮಾಡಿದ್ದಾರೆ.
ಒಂದು ಗಟ್ಟಿ ಸಂದೇಶದ ಕಥೆಯನ್ನು ಸರಳವಾಗಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಹೌದು ಈ ಚಿತ್ರಕ್ಕೆ ಈಗಾಗಲೇ ಪ್ರಶಂಸೆಗಳು, ಪ್ರಶಸ್ತಿಗಳು ಬಂದಿವೆ, ಇನ್ನೂ ಬರಲಿವೆ ಆದರೆ ಪ್ರೇಕ್ಷಕರು ಇಂತಹ ಅರ್ಥಪೂರ್ಣ ಚಿತ್ರವನ್ನು ನೋಡಿ ಬೆಂಬಲಿಸಿದರೆ ಇಂತಹ ಪ್ರಯತ್ನಗಳು ಸಾಯುವುದಿಲ್ಲ, ಸಾಯಬಾರದೂ ಕೂಡ.

ಚಿತ್ರದ ಕಥಾನಾಯಕ ತಿಮ್ಮನ ಪಾತ್ರದಾರಿ ಕೇಶವ ಗುತ್ತಳಿಕೆ ಚಿತ್ರದ ಪ್ರಮುಖ ಆಧಾರ ಸ್ಥಂಭ ಎನ್ನಬಹುದು.

ತಿಮ್ಮನ ಪಾತ್ರವನ್ನು ಕೇಶವ ಗುತ್ತಳಿಕೆ ಬಹಳ ಸಹಜವಾಗಿ ಅದ್ಭುತವಾಗಿ ನಿರ್ವಹಿಸಿದ್ದಾರೆ.


ಅಸಹಾಯಕತೆ ಮತ್ತು ಹತಾಶೆ, ಆತಂಕ ಮತ್ತು ಅಮಾಯಕಥೆಯನ್ನು ಬಹಳ ಚೆನ್ನಾಗಿ ತಮ್ಮ ಅಭಿನಯದ ಮೂಲಕ ಪರಕಾಯ ಪ್ರವೇಶ ಮಾಡಿದ್ದಾರೆ.
ಇನ್ನು ಕೇಶವನ ಪತ್ನಿ ಪಾತ್ರ ಮಾಡಿರುವ ಪ್ರಗತಿ ಪ್ರಭು ಕೂಡ ಚನ್ನಾಗಿ ಪಾತ್ರ ನಿರ್ವಹಣೆ ಮಾಡಿದ್ದಾರೆ.
ಮತ್ತು ಊರಿನ ಯಜಮಾನನಾಗಿ, ಹಿರಿಯನಾಗಿ ಅಭಿನಯಿಸಿರುವ ಶೃಂಗೇರಿ ರಾಮಣ್ಣ ಬಹಳ ವರ್ಷಗಳ ನಂತರ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ.

ಸುಚೇಂದ್ರ ಪ್ರಸಾದ್, ಶೃಂಗೇರಿ ರಾಮಣ್ಣ, ಕೇಶವ ಗುತ್ತಳಿಕೆ, ಆಶಿಕಾ ಸೋಮಶೇಖರ್, ಪ್ರಗತಿ ಪ್ರಭು, ರಾಘು ರಾಮನಕೊಪ್ಪ ಮುಂತಾದವರು ಚಿತ್ರದ ತಾರಾಗಣದಲ್ಲಿ‌ ಮಿಂಚಿದ್ದಾರೆ.

ಪ್ರವೀಣ್‍ ಅವರ ಛಾಯಾಗ್ರಹಣದ ಮೂಲಕ ಮಲೆನಾಡ ಸೊಬಗನ್ನು ಸವಿಯಬಹುದು, ಮತ್ತು ಕಥೆಯ ಪಯಣದಲ್ಲಿ ಹೇಮಂತ್‍ ಜೋಯಿಸ್‍ ಅವರ ಸಂಗೀತ-ಹಿನ್ನೆಲೆ ಸಂಗೀತ ಚಿತ್ರದ ಓಟಕ್ಕೆ ಹೆಜ್ಜೆಯಾಗಿವೆ.

ಒಟ್ಟಿನಲ್ಲಿ ಈ ಮಾನ್ ಸೂನ್ ಮೂಡಲ್ಲಿರುವ ಪ್ರೇಕ್ಷಕ ಖುಷಿಯಾಗಿ ಮಲೆನಾಡಿನ ಪರಿಸರದೊಳಗೆ ಈ ಚಿತ್ರದ ಮೂಲಕ ಅಡ್ಡಾಡಿ ಬರಲು ಅಡ್ಡಿಯಿಲ್ಲ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor