“The” movie review “ದಿ” ಚಿತ್ರ ವಿಮರ್ಶೆ- ಇದು ಕಾಡಿನಲ್ಲಿ ಕಳೆದುಹೋದ, ನಾಡಿನವರ ಕಥೆ
ಚಿತ್ರ ವಿಮರ್ಶೆ – “ದಿ”
Rating – 3/5.
ಚಿತ್ರ: “ದಿ”
ನಿರ್ಮಾಣ: ವಿ.ಡಿ.ಕೆ. ಸಿನಿಮಾಸ್
ನಿರ್ದೇಶನ: ವಿನಯ್ ವಾಸುದೇವ್
ಸಂಗೀತ : ಯು.ಎಂ.ಸ್ಟೀವನ್ ಸತೀಶ್
ಛಾಯಾಗ್ರಹಣ : ಅಲೇನ್ ಭರತ್
ಸಂಕಲನ : ಸಿದ್ದಾರ್ಥ್ ಆರ್ ನಾಯಕ್
ಕಲಾವಿದರು :- ವಿನಯ್ ವಾಸುದೇವ್, ದಿಶಾ ರಮೇಶ್, ನಟಿ ಹರಿಣಿ ಶ್ರೀಕಾಂತ್, ನಾಗೇಂದ್ರ ಅರಸ್, ಡಾಲಾ ಶರಣ್, ಕಲಾರತಿ ಮಹಾದೇವ್ ಮುಂತಾದವರು.

ವಿ.ಡಿ.ಕೆ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ವಿನಯ್ ವಾಸುದೇವ್ ನಿರ್ದೇಶನದ ಜೊತೆಗೆ ನಾಯಕನಾಗೂ ನಟಿಸಿರುವ “ದಿ” ಚಿತ್ರ ಈ ವಾರ ತೆರೆ ಕಂಡಿದೆ.
ಚಿತ್ರದಲ್ಲಿ ನಾಯಕನ ಹೆಸರು ದೀಪು. ಚಿತ್ರದ ನಾಯಕಿ ಹೆಸರು ದಿಶಾ. ಈ ಕಾರಣದಿಂದಾಗಿ ಈ ಚಿತ್ರಕ್ಕೆ “ದಿ” ಎಂದು ಶೀರ್ಷಿಕೆ ಇಡಲಾಗಿದೆ. ಹಾಗಾಗಿ ಇದು ಇಂಗ್ಲೀಷ್ “ದಿ” ಅಲ್ಲ. ಕನ್ನಡದ “ದಿ” ಎನ್ನಬಹುದು.
ಕಥಾ ಸಾರಂಶ :- ಅವನು ಮಗುವಾಗಿದ್ದಾಗ ಕಾಡಲ್ಲಿ ಅನಾಥನಾಗಿ ಸಿಗುತ್ತಾನೆ.
ಅವಳು ದೊಡ್ಡವಳಾಗಿದ್ದಾಗ ಅನಾಥೆಯಾಗಿ ನಾಡಲ್ಲಿ ಸಿಗುತ್ತಾಳೆ. ಮೊದಲ ನೋಟಕ್ಕೆ ಇಬ್ಬರಿಗೂ ಪ್ರೀತಿಯಾಗುತ್ತದೆ, ಪ್ರೀತಿಯಿಂದ ಮದುವೆ, ಎಲ್ಲಾ ತರಾ ತುರಿಯಲ್ಲಿ ನಡೆದು ಹೋಗುತ್ತೆ.

ಕಾಡಲ್ಲಿ ಸಿಕ್ಕಿದವನಿಗೆ ಕಾಡಿನ ನಂಟು ಬಿಡೋದಿಲ್ಲ ಆಗಾಗ ವೈಲ್ಡ್ ಫೋಟೋಗ್ರಫಿ ಅಂತ ಕಾಡು ಅಲೆಯುವವನಿಗೆ ಸಾಥ್ ನೀಡುತ್ತಾಳೆ ಪ್ರೇಯಸಿ.
ಹೊಸದಾಗಿ ಮದುವೆಯಾದವರು ಶಿರಸಿ ಕಾಡಿಗೆ ಹೋದವರು ಫೋಟೋ ತೆಗೆಯುವ ಬರದಲ್ಲಿ ದಿಶಾ ಪ್ರಪಾತಕ್ಕೆ ಬೀಳುತ್ತಾಳೆ ಅವಳನ್ನು ಕಾಪಾಡಲು ದೀಪು ಕೂಡ ಪ್ರಪಾತಕ್ಕೆ ಜಿಗಿಯುತ್ತಾನೆ, ನಾಯಕ ದೀಪು, ನಾಯಕಿ ದಿವ್ಯ ಇಬ್ಬರು ಬೇರೆ ಬೇರೆಯಾಗುತ್ತಾರೆ. ಅಲ್ಲಿಗೆ ಇಂಟರ್ವೆಲ್
ನಂತರ ಬರೀ ಹುಡುಕಾಟ, ಹುಡುಕಾಟ, ಹುಡುಕಾಟ.
ಅದೇ ಕಾಡಿನಲ್ಲಿ ಫಾರೆಷ್ಟ್ ಆಫೀಸರ್ ಆಗಿ ನಾಗೇಂದ್ರ ಅರಸ್ ಅಭಿನಯಿಸಿದ್ದಾರೆ. ಈ ವ್ಯಕ್ತಿಯ ಹಾವ ಭಾವ ವಿಚಿತ್ರ ಪ್ರೇಕ್ಷಕರು ಇವನನ್ನು ಅನುಮಾನಿಸುವುದು ಖಚಿತ.
ಕಾಡಿನೊಳಗೆ ಒಂದಷ್ಟು ಕಾಡುಗಳ್ಳರ, ಕಾಟದೊಂದಿಗೆ ಅಧಿಕಾರಿ ನಿರಂತರ ಹೋರಾಡುತ್ತಿರುತ್ತಾನೆ,

ನಾಯಕನ ತಂದೆ ಮಾಜಿ ಫಾರೆಷ್ಟ್ ಅಧಿಕಾರಿ, ಹಾಲಿ ಅಧಿಕಾರಿಯ ಸ್ನೇಹಿತ ಹಾಗಾಗಿ ಮೊದಲೇ ಮಗ, ಸೊಸೆಯ ಸರಕ್ಕೆ GPS ಅಳವಡಿಸಿರುತ್ತಾರೆ.
ಕುಟುಂಭ ಸಮೇತ ಫಾರೆಷ್ಟ್ ಸಿಬ್ಬಂಯೊಂದಿಗೆ ಜಂಟಿ ಕಾರ್ಯಾಚರಣೆಯೊಂದಿಗೆ ಹುಡುಕಾಡುತ್ತಾರೆ.
ಅದು ದಟ್ಟ ಅರಣ್ಯ ಕ್ರೂರ ಮೃಗಗಳಿಂದ ಹಾಗೂ ಆನೆಗಳಿಂದ ಕೂಡಿದ ಕಾಡು, ಅಲ್ಲಿ ಜೋರಾಗಿ ಕೂಗಿದರು ಸಾಕು ಆನೆಗಳು ಬಂದು ಬಿಡುತ್ತವೆ. ಆದರೆ ನಾಯಕನ ಸ್ನೇಹಿತರು ಎಷ್ಟು ಕಿರುಚಾಡಿ ಕೂಗಿಕೊಂಡರು ಯಾವ ಆನೆಗಳು ಬರುವುದಿಲ್ಲ. ಬೇರೆಯವರು ಕೂಗಾಟಕ್ಕೆ ಆನೆಗಳು ಬಂದುಬಿಡುತ್ತವೆ.
ಇದು ಹಾಸ್ಯಾಸ್ಪದ ಎನಿಸುತ್ತದೆ.
ಕಾಡಿನಲ್ಲಿ ಕಳೆದುಹೋದವರು ಏನಾದರು,
ಅಷ್ಟು ಪ್ರಪಾತದಿಂದ ಬಿದ್ದವರಲ್ಲಿ ಯಾರು ಸಾಯುತ್ತಾರೆ, ಯಾರು ಬದುಕುತ್ತಾರೆ, ಪ್ರಾಣಿಗಳಿಂದ, ಕಾಡು ಕಳ್ಳರಿಂದ ಅವರಿಗೆ ಏನಾಯಿತು, ಈ ಎಲ್ಲಾ ಗೊಂದಲ, ಕುತೂಹಲಕ್ಕೆ ಸಿನಿಮಾ ನೋಡಬೇಕಾಗುತ್ತದೆ.
ಚಿತ್ರದಲ್ಲಿ ಬರುವ ಆನೆಗಳು, ಇತರೆ ಪ್ರಾಣಿಗಳು ಗ್ರಾಫಿಕ್ ನಿಂದ ಕೂಡಿದ್ದಾಗಿದೆ ಆ ದೃಶ್ಯಗಳಿಗೆ ಹಣವನ್ನು ಸುಖಾಸುಮ್ಮನೆ ಸುರಿದಿದ್ದಾರೆ. ಈ ದೃಶ್ಯಗಳು ಸರಿಯಾಗಿ ಮೂಡಿಬಂದಿಲ್ಲ ಜೊತೆಗೆ ಅವು ಬೇಕಿರಲಿಲ್ಲ ಎನಿಸುತ್ತದೆ. ಕಾರ್ಟೂನ್ ಗಳಲ್ಲಿ ಎಷ್ಟೋ ಚನ್ನಾಗಿ ಮಾಡಿರುತ್ತಾರೆ.
ಕಥೆಯ ಬಗ್ಗೆ, ಸಂಭಾಷಣೆ, ನಿರೂಪಣೆಯ ಬಗ್ಗೆ ನಿರ್ದೇಶಕರು ಇನ್ನು ಸ್ವಲ್ಪ ಚನ್ನಾಗಿ ಹೋಂ ವರ್ಕ್ ಮಾಡಬೇಕಿತ್ತು. ಅನ್ನಿಸುವುದು ಸುಳ್ಳಲ್ಲ.
ಇನ್ನೂ ಈ ಚಿತ್ರದ ಚಿತ್ರೀಕರಣ ಬಹುತೇಕ ಕಾಡಿನಲ್ಲೇ ನಡೆದಿದೆ. ದೇವರಾಯನ ದುರ್ಗ, ದೇವರಮನೆ ಮುಂತಾದ ಕಡೆ ಚಿತ್ರೀಕರಣ ನಡೆದಿದ್ದು, ಸುಂದರವಾದ ಪ್ರಕೃತಿಯ ಸೊಬಗನ್ನು ಛಾಯಾಗ್ರಾಹಕ ಅಲೇನ್ ಭರತ್ ಸೆರೆ ಹಿಡಿದಿದ್ದಾರೆ.
ಹಾಗೆಯೇ ಸಂಗೀತ ಕೂಡ ಚನ್ನಾಗಿದೆ.
ಈ ಚಿತ್ರಕ್ಕೆ ವಿನಯ್ ವಾಸುದೇವ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುವುದರ ಜೊತೆಗೆ ನಾಯಕ ನಟನಾಗಿ ನಟಿಸಿದ್ದಾರೆ.
ಒಂದಷ್ಟು ವಿಭಿನ್ನವಾದ ಶೇಡ್ ಗಳಲ್ಲಿ ಅಭಿನಯಿಸುವ ಪ್ರಯತ್ನದಲ್ಲಿ ವಿನಯ್ ಬಹಳ ಸಾಹಸ ಮಾಡಿದ್ದಾರೆ.
ನಾಯಕಿ ದಿಶಾ ರಮೇಶ್ ಕೂಡ ನಾಯಕಿಯಾಗಿ ತೆರೆಯ ಮೇಲೆ ಬಹಳ ಕಷ್ಟಪಟ್ಟು ಅಭಿನಯಿಸಿರುವುದು ಕಾಣುತ್ತದೆ.
ನಟಿ ಹರಿಣಿ ಶ್ರೀಕಾಂತ್, ನಟರಾದ ನಾಗೇಂದ್ರ ಅರಸ್, ಡಾಲಾ ಶರಣ್, ಕಲಾರತಿ ಮಹಾದೇವ್ ಮುಂತಾದವರು ಅಭಿನಯಿಸಿದ್ದಾರೆ.
ಛಾಯಾಗ್ರಾಹಕ ಅಲೆನ್ ಭರತ್ , ಸಂಕಲನಕಾರ ಸಿದ್ದಾರ್ಥ್ ಆರ್ ನಾಯಕ್ ಮತ್ತು ಸಂಗೀತ ನಿರ್ದೇಶಕ ಯು.ಎಂ.ಸ್ಟೀವನ್ ಸತೀಶ್ ಮುಂತಾದವರು ಚಿತ್ರದ ಭಾಗವಾಗಿದ್ದಾರೆ.
ಒಟ್ಟಿನಲ್ಲಿ ಪ್ರಕೃತಿಯ ಸೊಬಗಿನ ಜೊತೆಗೆ ಒಂದು ಆಕ್ಷನ್, ಥ್ರಿಲ್ಲರ್, ಸಸ್ಪೆನ್ಸ್ ಚಿತ್ರ ನೋಡಲು ಯಾವುದೇ ಅಡ್ಡಿ ಇಲ್ಲ ಎನ್ನಬಹುದು.