Task movie ಬೆಚ್ಚಿ ಬೀಳಿಸುವ ಮೆಡಿಕಲ್ ಮಾಫಿಯಾ ದಂಧೆಯ ನೈಜ ಕಥಾ ಹಂದರ “ಟಾಸ್ಕ್”
ಚಿತ್ರ – ಟಾಸ್ಕ್
ನಿರ್ಮಾಪಕರು – ವಿಜಯ್ ಕುಮಾರ್ C., ರಾಮಣ್ಣ E.
ನಿರ್ದೇಶನ – ರಾಘು ಶಿವಮೊಗ್ಗ
ಛಾಯಾಗ್ರಹಣ – ಪ್ರದೀಪ್ ಪದ್ಮಕುಮಾರ್
ಸಂಗೀತ – ಜೂಡೋ ಸ್ಯಾಂಡಿ
Rating -3/5
ವಿಮರ್ಶೆ- ಮಂಜುರಾಜ್ ಸೂರ್ಯ
ಕಲಾವಿದರು – ರಾಘು ಶಿವಮೊಗ್ಗ, ಸಂಗಿತ ಭಟ್, ಸಾಗರ್ ರಾಮ್, ಜಯಸೂರ್ಯ, ಭರತ್ B.G.ಬಾಲಾಜಿ ಮನೋಹರ್. ಗೋಪಾಲ್ ಕೃಷ್ಣ ದೇಶಪಾಂಡೆ. ಶ್ರೀಲಕ್ಷಿ ಮುಂತಾದರು.
ಬೆಚ್ಚಿ ಬೀಳಿಸುವ ಮೆಡಿಕಲ್ ಮಾಫಿಯಾ ದಂಧೆಯ ನೈಜ ಕಥಾ ಹಂದರ
ಕೋವಿಡ್ ಅನ್ನೋ ಮಹಾಮಾರಿ ಅದೆಷ್ಟೋ ಜನರ ಜೀವ ತೆಗೆದುಕೊಂಡಿತು, ಹಾಗೆಯೇ ಬದುಕಿದ್ದಾಗಲೇ ನರಕ ತೋರಿಸಿತ್ತು.
ಆಗ ಸರ್ಕಾರ ಲಸಿಕೆ ಕಂಡು ಹಿಡಿದು ತರಾತುರಿಯಲ್ಲಿ ಜನರ ಮೇಲೆ ನೇರವಾಗಿ ಪ್ರಯೋಗ ಮಾಡಲಾಗಿತ್ತು. ಆದರೆ ಶಿಷ್ಟಾಚಾರದ ಪ್ರಕಾರ ಇಲಿ, ಮೊಲ, ಮಂಗ ಇಂಥಹ ಪ್ರಾಣಿಗಳ ಮೇಲೆ ಮೊದಲು ಪ್ರಯೋಗ ಮಾಡಿ ಅದು ಸಕ್ಸಸ್ ಆದಮೇಲೆ ಮನುಷ್ಯನಿಗೆ ನೀಡಬೇಕು ಈ ಎಲ್ಲಾ ಪಕ್ರಿಯೆಗೆ ಸುಮಾರು ಎರಡು ವರ್ಷ ಬೇಕಾಗುತ್ತದೆ
ಆದರೆ ಆಗಿನ ಪರಿಸ್ಥಿತಿಯಲ್ಲಿ ಅದಕ್ಕೆಲ್ಲಾ ಸಮಯವಿರಲಿಲ್ಲ.
ಅದೇ ರೀತಿ ಕೋವಿಡ್ ಮುಗಿದ ಮೇಲೆ ಲಸಿಕೆಯಿಂದ ಮನುಷ್ಯರಿಗೆ ಆಗುವ ದುಷ್ಪರಿಣಾಮಕ್ಕೆ ಮತ್ತೊಂದು ಲಸಿಕೆಯನ್ನು ಒಬ್ಬ ಮೆಡಿಕಲ್ ಮಾಫಿಯಾದ ಡಾನ್ ತನ್ನ ಸಂಸ್ಥೆಯ ಮೂಲಕ ಹೊಸದಾಗಿ ಕಾನೂನು ಬಾಹಿರವಾಗಿ ವ್ಯಾಕ್ಸಿನ್ ತಯಾರಿಸುತ್ತಾರೆ.
ನೇರವಾಗಿ ಮನುಷ್ಯರ ಮೇಲೆ ಪ್ರಯೋಗ ಮಾಡಿ ಅದರಿಂದಾಗುವ ಅನಾಹುತವನ್ನು ನೋಡಿದವನ ಕೊಲೆಯಾಗುತ್ತದೆ. ಅದಕ್ಕೆ ಸಾಕ್ಷಿ ಇಟ್ಟುಕೊಂಡವನ ಕೊಲೆ ಮಾಡಿ ಆತ್ಮಹತ್ಯೆ ಅಂತ ಬಿಂಬಿಸಲಾಗುತ್ತದೆ. ಆ ಕೊಲೆಯನ್ನು ಹತ್ತನೇ ತರಗತಿ ಓದುವ ಒಂದು ಹುಡುಗಿ ನೋಡಿರುತ್ತಾಳೆ.
ಆ ಹುಡುಗಿ ಅಪ್ಪ, ಅಮ್ಮನಿಗೆ ಹೇಳುತ್ತಾಳೆ ಎಲ್ಲರೂ ಆಕೆಯ ಬಾಯಿ ಮುಚ್ಚಿಸುತ್ತಾರೆ.
ಆದರೆ ಆ ಹುಡುಗಿ ಸೋಷಿಯಲ್ ಮೀಡಿಯಾ ಮೂಲಕ ಒಬ್ಬ ಪ್ರಾಮಾಣಿಕ ಲಾಯರನ್ನು (ಸಂಗೀತ ಭಟ್) ಫೋನ್ ಮೂಲಕ ಸಂಪರ್ಕಿಸಿ ವಿಷಯ ಮುಟ್ಟಿಸುತ್ತಾಳೆ. ಆಗ
ಆ ಹುಡುಗಿ ಬೆಂಗಳೂರಿಗೆ ಬಂದು ಸಾಕ್ಷಿ ಹೇಳಬೇಕಾಗುತ್ತದೆ.
ಇಲ್ಲಿಂದ ಕಥೆ ಶುರುವಾಗುತ್ತದೆ.
ಆ ಹುಡುಗಿಯನ್ನು ಅವಳ ಹೆತ್ತವರ ಕಣ್ತಪ್ಪಿಸಿ ಬೆಂಗಳೂರಿಗೆ ಕರೆತರುವುದೇ ಅಸಲಿ ಟಾಸ್ಕ್.
ಈ ಟಾಸ್ಕ್ ಕೊಡುವುದು ನಿವೃತ್ತ ಪೋಲಿಸ್ ಅಧಿಕಾರಿ (ಅಚ್ಯುತ್ ಕುಮಾರ್)
ಅವರಿಬ್ಬರು ಮೀಸೆ ಮೂಡದ ಹದಿ ಹರೆಯದ ಹುಡುಗರು. ಹಾಸ್ಟಲ್ ನಲ್ಲಿ ವಾರ್ಡನ್ ಕಿರುಕುಳಕ್ಕೆ ತಿರುಗಿ ಬಿದ್ದು ಕೊಲೆ ಮಾಡಿ ಜೈಲು ಸೇರಿದವರು.
ಅಲ್ಲಿಂದ ಅಚ್ಯುತ್ ಕುಮಾರ್ ಸಹಾಯದಿಂದ ಒಳ್ಳೆಯ ದಾರಿಯಲ್ಲಿ ನ್ಯಾಯಕ್ಕಾಗಿ ಹೋರಾಡುವ ಮನಸ್ಸಿನ ಹುಡುಗರಾಗಿ ಒಳ್ಳೆ ಜೀವನ ನಡೆಸುತ್ತಾರೆ.
ಇವರೇ ಟಾಸ್ಕ್ ಕಥೆಗೆ ನಾಯಕರು.
ಇಲ್ಲಿ ಆ ಹುಡುಗಿಯನ್ನು ಕಿಡ್ನ್ಯಾಪ್ ಮಾಡುವುದೇ ಒಂದು ರೋಚಕವಾಗಿದೆ.
ಹೊಸ ಹುಡುಗರು ತೆರೆಯ ಮೇಲೆ ಆಕ್ಷನ್ ಸೀನ್ ಗಳ ಮೂಲಕ ಅಬ್ಬರಿಸಿದ್ದಾರೆ.
ಜಯಸೂರ್ಯ ಮತ್ತು ಸಾಗರ್ ರಾಮ್ ಮೊದಲ ಬಾರಿಗೆ ಪೂರ್ಣ ಮಟ್ಟದ ನಾಯಕ ನಟರಾಗಿ ಬಣ್ಣ ಹಚ್ಚಿದ್ದಾರೆ.
ಮೊದಲ ಬಾರಿ ಪೂರ್ಣ ಮಟ್ಟದ ಟಾಸ್ಕ್ ಹೆಗಲ ಮೇಲೆ ಹೊತ್ತು ಪಾತ್ರ ನಿಭಾಯಿಸುವ ಪ್ರಯತ್ನ ಮಾಡಿದ್ದಾರೆ.
ಇಲ್ಲಿ ನಾಯಕ ನಟರುಗಳಿಗಿಂತ ಖಳ ನಟನಾಗಿ ಸುಂಟಿಕೊಬ್ಬದ ಲೋಕಲ್ ರೌಡಿಯಾಗಿ, ಚಿತ್ರದಲ್ಲಿ ಭಯ ಹುಟ್ಟಿಸುವಂತೆ ನಟಿಸಿರುವುದು ರಾಘು ಶಿವಮೊಗ್ಗ. ಚಿತ್ರದ ನಿರ್ದೇಶನದ ಜೊತೆಗೆ ಒಬ್ಬ ದುಷ್ಟ, ಅತ್ಯಾಚಾರಿ, ಕರಯಣೆಯಿಲ್ಲದ ಸುಫಾರಿ ಕೊಲೆಗಾರ ಭರಮಪ್ಪನ ಪಾತ್ರದಲ್ಲಿ ರಾಘು ಶಿವಮೊಗ್ಗ ಪಾತ್ರದೊಳಗೆ ಜೀವಿಜಿ ನಟಿಸಿದ್ದಾರೆ.
ಈಡೀ ಚಿತ್ರದ ಹೈಲೈಟ್ ಪಾತ್ರ ಇದು ಎನ್ನಬಹುದು.
ಅರ್ಜುನ್ ರಾಜ್ ಆಕ್ಷನ್ ಸೀನ್ ಗಳು ತಂಬಾ ಚನ್ನಾಗಿ ಬಂದಿದೆ.
ಪ್ರದೀಪ್ ಪದ್ಮಕುಮಾರ್ ಛಾಯಾಗ್ರಹಣ ಚನ್ನಾಗಿ ಮೂಡಿ ಬಂದಿದೆ. ಚೇಸಿಂಗ್ ದೃಶ್ಯಗಳನ್ನು ಹಾಗೂ ಪ್ರಕೃತಿಯ ಸೊಬಗನ್ನು ಬಹಳ ಅಚ್ಚುಕಟ್ಟಾಗಿ ಸೆರೆ ಹಿಡಿದಿದ್ದಾರೆ.
ಜ್ಯೂಡಾ ಸ್ಯಾಂಡಿ ಸಂಗೀತ ಸ್ವಲ್ಪ ಅಲ್ಲಲ್ಲಿ ಗುಣ ಮಟ್ಟ ಕಳೆದು ಕೊಂಡಿದೆ. ಚಿತ್ರದ ಗೀತೆಗಳನ್ನು ಇನ್ನೂ ಚನ್ನಾಗಿ ಮಾಡಬಹುದಿತ್ತು ಅನ್ನಿಸುತ್ತದೆ.
ಜೊತೆಗೆ ರೀ ರೆಕಾರ್ಡಿಂಗ್ ನಲ್ಲಿ ಯಾಕೋ ಎಡವಿದ್ದಾರೆ ಅನ್ನಿಸುತ್ತದೆ.
ಒಳ್ಳೆಯ ಹಿಟ್ ಸಿನಿಮಾಗಳನ್ನು ನೀಡಿದವರು ಯಾಕೆ ಹೀಗೆ ತಾಳ ತಪ್ಪಿದರೋ ಗೊತ್ತಿಲ್ಲ.
ಅಚ್ಯುತ್ ಕುಮಾರ್ ನಿವೃತ್ತ ಪೋಲೀಸ್ ಅಧಿಕಾರಿಯಾಗಿ ಸಮಾಜ ಸೇವೆಗೆ ತೊಡೆ ತಟ್ಟಿ ನಿಂತಿರುವಂತೆ ಅನ್ನಿಸುತ್ತಾರೆ.
ಇನ್ನು ಸಂಗೀತ ಭಟ್ ಕೂಡ ಒಬ್ಬ ನಿಷ್ಠಾವಂತ ಲಾಯರ್ ಆಗಿ ಚಿತ್ರವನ್ನು ಒಂದಿಷ್ಟು ಕಲರ್ ಫುಲ್ ಆಗಿಸಿದ್ದಾರೆ.
ಬಾಲ ನಟಿ ಹಾಗೂ ಈ ಚಿತ್ರದ ಕಥೆಯ ಕಿಂಗ್ ಪಿನ್ ಬಾಲನಟಿ ಶ್ರೀಲಕ್ಷ್ಮಿ ಸಿರಿ ಪಾತ್ರದಲ್ಲಿ ಬಹಳ ಲವ ಲವಿಕೆಯಿಂದ ಚಿತ್ರದುದ್ದಕ್ಕೂ ಲೀಲಾಜಾಲವಾಗಿ ಅಭಿನಯಿಸಿದ್ದಾರೆ.
ಬಾಲಾಜಿ ಮನೋಹರ್ ಒಂದು ದೊಡ್ಡ ಮೆಡಿಕಲ್ ಮಾಫಿಯಾದ ಸಮಾಜಘಾತುಕನ ಪಾತ್ರವನ್ನು ನಿಭಾಯಿಸಿದ್ದಾರೆ.
ಗೋಪಾಲ್ ಕೃಷ್ಣ ದೇಶಪಾಂಡೆ, ಸಿರಿಯ ತಂದೆಯಾಗಿ ಅಸಾಹಯಕಥೆ ಮತ್ತು ದುಗುಡದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ಟಾಸ್ಕ್ ಈ ವಾರ ಬಿಡುಗಡೆಯಾದ ಚಿತ್ರಗಳ ರೇಸ್ ನಲ್ಲಿ ಗೆಲ್ಲಬೇಕಿದೆ.
ಆಕ್ಷನ್ ಪ್ರೇಮಿಗಳು ಚಿತ್ರವನ್ನು ನೋಡಿ ಥ್ರಿಲ್ ಆಗಬಹುದು. ಜೊತೆಗೆ ಒಂದು ಸಾಮಾಜಿಕ ಕಳಕಳಿಯ ಚಿತ್ರ ಎನ್ನಬಹುದು.











