Sutradhari movie review ಸೂತ್ರಧಾರಿ ಚಿತ್ರ ವಿಮರ್ಶೆ. Rating – 3/5.
ಚಿತ್ರ ವಿಮರ್ಶೆ – ಸೂತ್ರಧಾರಿ
Rating – 3/5.
ಚಿತ್ರ: ಸೂತ್ರಧಾರಿ
ನಿರ್ಮಾಣ: ನವರಸನ್
ನಿರ್ದೇಶನ: ಆರ್. ಕಿರಣ್ ಕುಮಾರ್
ಸಂಗೀತ : ಚಂದನ್ ಶೆಟ್ಟಿ
ಛಾಯಾಗ್ರಹಣ : PKH ದಾಸ್
ಸಂಕಲನ : ಸತೀಶ್ ಚಂದ್ರಯ್ಯ
ಸಂಭಾಷಣೆ : ಕಿನ್ನಾಲ್ ರಾಜ್
ಕಲಾವಿದರು :- ಚಂದನ್ ಶೆಟ್ಟಿ, ಅಪೂರ್ವ, ನವರಸನ್, ತಬಲನಾಣಿ, ಸಂಜನಾ ಆನಂದ್, ಗಣೇಶ್ ನಾರಾಯಣ್, ಪ್ರಶಾಂತ್ ನಟನಾ, ಸಂಜಯ್ ಗೌಡ ಮುಂತಾದವರು.
ಚಂದನ್ ಶೆಟ್ಟಿ ಮೊಟ್ಟ ಮೊದಲಬಾರಿಗೆ ಪರಿಪೂರ್ಣ ನಾಯಕ ನಟನಾಗಿ ಸೂತ್ರಧಾರಿ ಚಿತ್ರದ ಮೂಲಕ ತೆರೆ ಮೇಲೆ ರಾರಾಜಿಸುವ ಪ್ರಯತ್ನ ಮಾಡಿದ್ದಾರೆ.
ಈಗಾಗಲೇ ಕನ್ನಡದ ರಾಪರ್ ಆಗಿ ಬಹಳಷ್ಷು ರಾಪ್ ಸಾಂಗ್ ಗಳ ಮೂಲಕ ಯುವಕರ ಮನ ಸೆಳೆದಿದ್ದ ಚಂದನ್ ಈಗ ಒಬ್ಬ ನಟನಾಗಿ ಬೆಳ್ಳಿತೆರೆಯ ಮೂಲಕ ಕನ್ನಡಿಗರ ಮನೆ ಮನದ ಬಾಗಿಲು ತಟ್ಟಿದ್ದಾರೆ.
ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಕಥೆ.
ಚಿತ್ರದ ಪ್ರಾರಂಭದಲ್ಲೇ ಒಬ್ಬ ಹುಡುಗಿ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಸಿನಿಮಾ ಕಥೆ ಆರಂಭವಾಗುತ್ತದೆ. ಚಿತ್ರದ ಕೊನೆಗೆ ಆ ಆತ್ಮಹತ್ಯೆಯ ಹಿಂದಿನ ವಿಷಯವನ್ನು ತೆರೆದಿಟ್ಟಿದ್ದಾರೆ, ಪೋಲಿಸ್ ಅಧಿಕಾರಿಯಾಗಿ ಚಂದನ್ ಪಾತ್ರ ನಿರ್ವಹಿಸಿದ್ದಾರೆ. ಸಾಲು ಸಾಲು ಅಪಹರಣ, ನಂತರ ಆತ್ಮಹತ್ಯೆಗಳು ಇದರ ಹಿಂದೆ ಯಾರ ಕೈವಾಡವಿದೆ, ಕಿಡ್ನ್ಯಾಪ್ ಮಾಡಿದ್ದು ಯಾರು, ಕಿಡ್ನ್ಯಾಪ್ ಮಾಡಿ ಬಿಡುಗಡೆ ಮಾಡಿದ್ಯಾಕೆ, ಬಿಡುಗಡೆಯಾದವರು ಯಾಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅನ್ನೋದೆ ಸಿನಿಮಾ ಕಥೆ.
ತುಂಬಾ ಕುತೂಹಲಕಾರಿಯಾಗಿ ಕಥೆ ಎಣೆದಿದ್ದಾರೆ ನಿರ್ದೇಶಕ ಕಿರಣ್ ಕುಮಾರ್
ಚಂದನ್ ಶೆಟ್ಟಿ ಆಲ್ ಬಮ್ ಹಾಡುಗಳಿಗೆ ಬಣ್ಣ ಹಚ್ಚಿದ್ದವರು, ಈಗ ದೊಡ್ಡ ಪರದೆಯ ಮೇಲೆ ಬಣ್ಣ ಹಚ್ಚಿ ಅಭಿನಯಿಸಿರುವ ಕಷ್ಟ ತೆರೆಯ ಮೇಲೆ ಕಾಣುತ್ತದೆ. ಇಡೀ ಸಿನಿಮಾ ಸೀರಿಯಸ್ಸಾಗಿ ನಟಿಸಿದ್ದಾರೆ.ಇನ್ನೂ ನಾಯಕಿಯಾಗಿ
ನಿರ್ದೇಶಕ ಕಿರಣ್ ಕುಮಾರ್
ರವರ ಮೊದಲ ಚಿತ್ರ ಇದಾಗಿದ್ದು ತನ್ನ ಚೊಚ್ಚಲ ಚಿತ್ರದಲ್ಲೇ ಒಂದು ಒಳ್ಳೆಯ ವೇದಿಕೆ ದೊರೆತಿರುವುದು ನಿರ್ದೇಶಕನ ಅದೃಷ್ಟ ಎನ್ನಬಹುದು.
ಒಂದು ವಿಭಿನ್ನ ಸಸ್ಪೆನ್ಸ್, ಮರ್ಡರ್ ಮಿಷ್ಟ್ರಿ ಕಥೆಯನ್ನು ಹೆಣೆದು ತೆರೆಯ ಮೇಲೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ರಾಕ್ಷಸಿ ಎಂಬ ಹಾರರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನವರಸನ್ ನಟನೆ, ನಿರ್ದೇಶನ, ನಿರ್ಮಾಣದ ಜೊತೆಗೆ ಡಿಸ್ಟ್ರಿಬ್ಯೂಷನ್ ಕೂಡ ಮಾಡುವುದರ ಮೂಲಕ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.
ಈಗ ಸೂತ್ರಧಾರಿ ಚಿತ್ರದ ನಿರ್ಮಾಣದಿಂದಾಗಿ ಸುದ್ದಿಯಲ್ಲಿದ್ದಾರೆ.
ಚಿತ್ರದಲ್ಲಿ ಮೇಜರ್ + ಪಾಯಿಂಟ್ ಎಂದರೆ ಹಾಡು ಮತ್ತು ಹಿನ್ನೆಲೆ ಸಂಗೀತ ಚಿತ್ರದ ಜೀವಾಳವಾಗಿದೆ. ಎರಡು ಹಾಡುಗಳು ಹಿಟ್ ಲಿಷ್ಟ್ ನಲ್ಲಿದೆ.
ಚಂದನ್ ಶೆಟ್ಟಿ ನಟನೆಯ ಜೊತೆಗೆ ಸಂಗೀತದ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಅವರ ಅಭಿಮಾನಿಗಳಿಗಾಗಿ ಅವರ ಶೈಲಿಯಲ್ಲಿ ಎರಡು ಹಾಡುಗಳನ್ನು ಕಟ್ಟಿಕೊಟ್ಟಿದ್ದಾರೆ.
ಹಾಗೇ ಚಿತ್ರದ ಮತ್ತೊಂದು + ಪಾಯಿಂಟ್ ಅಂದರೆ ಹಿರಿಯ ಛಾಯಾಗ್ರಾಹಕ PKH ದಾಸ್ ಚಿತ್ರವನ್ನು ಅಚ್ಚುಕಟ್ಟಾಗಿ ಸೆರೆ ಹಿಡಿದಿದ್ದಾರೆ.
ಇನ್ನು ನಾಯಕಿಯಾಗಿ ಅಪೂರ್ವ ಅಭಿನಯಿಸಿದ್ದಾರೆ.
9 ವರ್ಷಗಳ ಹಿಂದೆ ಕ್ರೇಜಿ ಸ್ಟಾರ್ ರವಿಚಂದ್ರನ್ ಜೊತೆ ಅಪೂರ್ವ ಎನ್ನುವ ರೊಮ್ಯಾಂಟಿಕ್ ಚಿತ್ರಕ್ಕೆ ನಾಯಕಿ ಅಭಿನಯಿಸಿದ್ದರು. ಈಗ ಮರಳಿ ಚಂದನ್ ಶೆಟ್ಟಿಗೆ ನಾಯಕಿಯಾಗಿ ಸೂತ್ರಧಾರಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
9 ವರ್ಷಗಳಾಗಿದ್ದರು ತಮ್ಮ ಚಾರ್ಮ್ ಉಳಿಸಿಕೊಂಡಿದ್ದಾರೆ.
ಹಲವಾರು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.
ಹಾಗೆಯೇ ಚಿತ್ರದ ನಿರ್ಮಾಪಕ ನವರಸನ್ ಹಣ ಹೂಡಿ ನಿರ್ಮಾಣ ಮಾಡುವುದರ ಜೊತೆಗೆ ಎರಡನೇ ನಾಯಕ ನಟನಾಗಿ ತೆರೆ ಹಂಚಿಕೊಂಡಿದ್ದಾರೆ.
ಒಟ್ಟಿನಲ್ಲಿ ಸೂತ್ರಧಾರಿ ಯನ್ನು ಯಾವುದೇ ಮುಜುಗರವಿಲ್ಲದೆ ಚಿತ್ರಮಂದಿರದಲ್ಲಿ ನೋಡಬಹುದು.