Sukhibava movie review. ಸುಖೀಭವ ಚಿತ್ರ ವಿಮರ್ಶೆ- ತ್ರಿಕೋನ ಪ್ರೇಮದೊಳಗಿನ ಪ್ರೇಮ ಪಾಠ

ಚಿತ್ರ –  ಸುಖೀಭವ
ನಿರ್ಮಾಪಕರು – ಸಂತೋಷ್ ಕುಮಾರ್, ಭಾರ್ಗವಿ ಸಂತೋಷ್ ಕುಮಾರ್
ನಿರ್ದೇಶನ –  ಎನ್. ಕೆ. ರಾಜೇಶ್ ನಾಯ್ಡು
ಛಾಯಾಗ್ರಹಣ – ,SB.ಮಂಜುನಾಥ ನಾಯಕ್
ಸಂಗೀತ –  ಬಿಜೆ. ಭರತ್, ಸುಭಾಮು.

Rating -3/5

ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ

ಕಲಾವಿದರು – ಮಹೇಂದ್ರ ಕುಮಾರ್, ಸುಶ್ಮಿತಾ ನಾಯಕ್,  ವಿಯಾನ್ಶಿ ಹೆಗ್ಡೆ ,ಮೈತ್ರಿ ಜಗ್ಗಿ, ರವಿಶಂಕರ್ ಗೌಡ, ಶೋಭರಾಜ್ ಮುಂತಾದವರು.

ಸುಖೀಭವ ಚಿತ್ರವು ಹೊಸ ತಂಡದ ಪ್ರತಿಭೆಗಳಿಂದ
ನಿರ್ಮಾಣಗೊಂಡಿರುವ  ಫ್ಯಾಮಿಲಿ-ಡ್ರಾಮಾ/ರೊಮ್ಯಾಂಟಿಕ ಲವ್ ಸ್ಟೋರಿಯಾಗಿದೆ.  ಮೊದಲ ಪ್ರೇಮದ ಅನುಭವಗಳ ಸುತ್ತ ಕತೆ ಮುಂದುವರೆಯುತ್ತದೆ.

ಇಬ್ಬರು ಅನಾಥ ವ್ಯಕ್ತಿಗಳ ನಡುವೆ ಪ್ರೇಮ-ಮದುವೆ, ನಂತರ ಅವರ ಬದುಕಿನಲ್ಲಿ ಬರುವ ಹ್ಯಾಪಿ-ಮೂವ್ಸ್-ಲೈಫ್ ಮತ್ತು ಆಗುವ ನಷ್ಟಗಳ ಸುತ್ತ ಸಾಗುತ್ತದೆ.
ಅಮ್ಮನ ದುರಂತ ಸಾವಿನ ನಂತರ ತಂದೆಯ ತೀರ್ಮಾನ, ಮಗನ ಒಳಗಿನ ಕಾಳಗ ಮತ್ತು ಪ್ರೇಮ-ವಿಚಾರಗಳ  ವಿಷಯಗಳೊಂದಿಗೆ ಕಥೆ ಎಣೆಯಲಾಗಿದೆ. ನಿರ್ದೇಶಕ ಎನ್.ಕೆ. ರಾಜೇಶ್ ನಾಯ್ಡು
ಪ್ರೀತಿ -ಪ್ರೇಮ, ಅನುರಾಗ, ಜಗಳ, ಅವಮಾನ, ಛಲ ಹಾಗೂ ಒಂದಷ್ಟು ಭಾವನಾತ್ಮಕ ತುಮುಲಗಳೊಂದಿಗೆ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ. ಜೊತೆಗೆ ಛಾಯಾಗ್ರಹಣದ ಜವಾಬ್ಧಸರಿಯನ್ನು ನಿಭಾಯಿಸಿದ್ದಾರೆ.

ನಾಯಕ ನಟನಾದ ಮಹೇಂದ್ರ ಹಾಗೂ ನಾಯಕಿಯರಾದ ಸುಶ್ಮಿತಾ ನಾಯಕ್ ಮತ್ತು ವಿಯಾನ್ಷಿ ಹೆಗ್ಡೆ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ಪಾತ್ರಗಳಿಗೆ ಅನುಗುಣವಾಗಿ ತೆರೆಯ ಮೇಲೆ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಹಿನ್ನೆಲೆ ಸಂಗೀತ,  ಹಾಡುಗಳು ಮತ್ತು ದೃಶ್ಯಗಳು ಸೊಗಸಾಗಿ ಮೂಡಿಬಂದಿದ್ದು ಮನರಂಜನೆ ನೀಡುವಂತಿವೆ, ಕೆಲ ರಂಗಿನ ಕ್ಷಣಗಳು ಒಳ್ಳೆಯ ಅನುಭವವನ್ನೂ ನೀಡುತ್ತವೆ.

ಚಿತ್ರದ ಮೊದಲು ಭಾಗವನ್ನು ಸರಾಗವಾಗಿ ಮೂಡಿ ಬಂದಿದ್ದು , ಇಂಟರ್ವೆಲ್ ನಂತರದ ಭಾಗ  ಸಂವೇದನಾತ್ಮಕತೆಯಿಂದ ಕೂಡಿರುವುದು ಗಮನಾರ್ಹ ವಾಗಿದೆ.
ಸುಖೀಭವ ಚಿತ್ರವು ಮನೆಯವರಿಗೆ, ಯುವ ಪ್ರೇಮ ಕಥೆ ಇಷ್ಟವಿರುವವರಿಗೆ ಮಧ್ಯಮ ಮಟ್ಟದ ಮನರಂಜನೆ ಮತ್ತು ಭಾವನಾತ್ಮಕ ತೊಳಲಾಟವನ್ನು ನೀಡುವಂತೆ ಇದೆ. ಕಥೆ ಹೊಸವಾಗಿದೆ ಅಂದರೆಲ್ಲಾ ವಿಶಿಷ್ಟತೆ ಇಲ್ಲದಿದ್ದರೂ ಹೃದಯಸ್ಪರ್ಶಿ ಭಾಗಗಳು ಪ್ರೇಕ್ಷಕನ ಮನದ ಮೇಲೆ ಪ್ರಭಾವವನ್ನು ಬೀರುವಂತಿದೆ.

ಕಥಾನಾಯಕ  ಕಥೆಯೊಳಗೆ ಅವನು ಬಾಲ್ಯದಲ್ಲಿ ತಾಯಿಯನ್ನು ಕಳೆದುಕೊಂಡು ತಂದೆಯಿಂದ ದೂರವಿರುವ ಹಾಸ್ಟೆಲ್ ಜೀವನದಲ್ಲಿ ತುಂಟಾಟಕ್ಕೆ ಒಳಗಾಗುತ್ತಾನೆ. ಶಾಲೆಯಲ್ಲಿ ಒಬ್ಬ ಹುಡುಗಿಯ ಪ್ರೀತಿಯಿಂದ ಪ್ರೇರಣೆ ಪಡೆದು ಓದಿನಲ್ಲಿ ಟಾಪರ್ ಆಗಿ ಬೆಳೆಯುತ್ತಾನೆ, ಆದರೆ ನಂತರ ಗೆಳತಿ ಊರ್ವಿ ಮತ್ತು ಬಾಲ್ಯದ ಪ್ರೀತಿ ತಾರಾ ನಡುವೆ ಸಂಘರ್ಷಕ್ಕೆ ಒಳಗಾಗುತ್ತಾನೆ. ಕ್ಲೈಮ್ಯಾಕ್ಸ್‌ನಲ್ಲಿ ಸಂಬಂಧಗಳ ಪಾಠವನ್ನು ಕಲಿಯುತ್ತಾನೆ.
ನಿರ್ದೇಶಕ ಎನ್.ಕೆ. ರಾಜೇಶ್ ನಾಯ್ಡು ಸರಳವಾಗಿ ಕುಟುಂಬ ಸಮೇತ ನೋಡುವಂತಹ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ.

ಸಂಗೀತ (ಭರತ್ ಬಿಜೆ, ಸುಬಾಮ್) ಮತ್ತು ಛಾಯಾಗ್ರಹಣ (ಮಂಜುನಾಥ್ ನಾಯಕ್) ಗಮನ ಸೆಳೆಯುತ್ತವೆ.
ನಟನೆಯಲ್ಲಿ ನಾಯಕ ಮಹೇಂದ್ರ ಕುಮಾರ್ ಶ್ರಮಪಟ್ಟಿ ನಟಿಸಿದ್ದಾರೆ; ನಾಯಕಿಯರು ಸುಶ್ಮಿತಾ ನಾಯಕ್ ಮತ್ತು ವಿಯಾನ್ಶಿ ಹೆಗ್ಡೆ ಚೆನ್ನಾಗಿ ನಿರ್ವಹಿಸಿದ್ದಾರೆ. ಮೈತ್ರಿ ಜಗ್ಗಿ, ರವಿಶಂಕರ್ ಗೌಡ, ಶೋಭರಾಜ್ ಇತರರು ಉತ್ತಮ ಪ್ರದರ್ಶನ ನೀಡಿದ್ದಾರೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor