Seetapayana movie review. ಸೀತಾಪಯಣ ಚಿತ್ರ ವಿಮರ್ಶೆ – “ಭಾವನೆಗಳ ಪಯಣ”

ಚಿತ್ರ –  ಸೀತಾ ಪಯಣ
ನಿರ್ಮಾಪಕರು – ಅರ್ಜುನ್ ಸರ್ಜಾ
ನಿರ್ದೇಶನ –  ಅರ್ಜುನ್ ಸರ್ಜಾ
ಛಾಯಾಗ್ರಹಣ – ಜಿ. ಬಾಲಮುರುಗನ್
ಸಂಗೀತ – ಅನೂಪ್ ರೂಬೆನ್ಸ್ 

Rating -3.5/5

ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ

ಕಲಾವಿದರು : ಅರ್ಜುನ್ ಸರ್ಜಾ, ಐಶ್ವರ್ಯಾ ಅರ್ಜುನ್, ನಿರಂಜನ್, ಧ್ರುವ ಸರ್ಜಾ, ಪ್ರಕಾಶ್ ರಾಜ್, ಸತ್ಯರಾಜ್, ಕೋವೈ ಸರಳಾ, ಮುಂತಾದವರು.

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ತಮ್ಮ ಮಗಳಾದ ಐಶ್ವರ್ಯಾ ಅರ್ಜುನ್‌ಗಾಗಿ ಮತ್ತೊಮ್ಮೆ ಆಕ್ಷನ್ ಕಟ್ ಹೇಳಿದ್ದಾರೆ. ಜೊತೆಗೆ ಅವರದ್ದೇ ಸಂಸ್ಥೆಯಲ್ಲಿ ‘ಸೀತಾ ಪಯಣ’ ಎಂಬ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. 

ಹಾಗೆ ಈ ಸಿನಿಮಾದ ಮತ್ತೊಂದು ವಿಶೇಷ ವೆಂದರೆ, ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಅರ್ಜುನ್ ನಾಯಕಿಯಾದರೆ, ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ನಾಯಕನಾಗಿ ನಟಿಸಿದ್ದಾರೆ.

ಇದೊಂದು ಫ್ಯಾಮಿಲಿ ಡ್ರಾಮಾ ಚಿತ್ರವಾಗಿದ್ದು ಸೀತಾ ಎಂಬ ಕಥಾ ನಾಯಕಿಯ ಪ್ರಯಾಣದಲ್ಲಿ ಭೇಟಿಯಾಗುವ ವ್ಯಕ್ತಿಗಳು, ಅವರ ಸಮಸ್ಯೆಗಳು ಮತ್ತು ಮಾನವೀಯ ಮೌಲ್ಯಗಳನ್ನು ಭಾವನಾತ್ಮಕವಾಗಿ ಕಟ್ಟಿ ಕೊಡಲಾಗಿದೆ.

ಐಶ್ವರ್ಯ ಅರ್ಜುನ್ ಸೀತಾ ಪಾತ್ರದಲ್ಲಿ ಸೊಗಸಾಗಿ ನಟಿಸಿದ್ದಾರೆ, ತುಂಬಾ ಸರಳವಾಗಿ ಯಾವುದೇ ಭಾವನೆಗಳನ್ನು ಮುಖದಲ್ಲಿ ಅಷ್ಟಾಗಿ ವ್ಯಕ್ತಪಡಿಸದೇ ಪಾತ್ರವನ್ನು ನಿಭಾಯಿಸಿದ್ದಾರೆ. ಇದು ಕನ್ನಡದಲ್ಲಿ ಎರಡನೇ ಚಿತ್ರ.

ಈ ಹಿಂದೆ ಅರ್ಜುನ್ ಸರ್ಜಾ ನಿರ್ದೇಶನದಲ್ಲಿ ಪ್ರೇಮಬರಹ ಚಿತ್ರದಲ್ಲಿ ಅಪ್ಪನ ನಿರ್ದೇಶನಕ್ಕೆ ಬಣ್ಣ ಹಚ್ಚಿದ್ದರು. ಇಲ್ಲಿ ಪೂರ್ತಿ ಸಿನಿಮಾದಲ್ಲಿ ಪ್ರಯಾಣದ ಜೊತೆಗೆ ಒಂದಷ್ಟು ಮಾನವೀಯತೆಯ ಮೌಲ್ಯಗಳಿಗೆ ಐಶ್ವರ್ಯ ತಮ್ಮ ಪಾತ್ರದ ಮೂಲಕ ಸಾಕ್ಷಿಯಾಗಿದ್ದಾರೆ.

ನಿರಂಜನ್ ಹೀರೋ ಆಗಿ ಒಳ್ಳೆಯ ಎಂಟ್ರಿ ನೀಡಿದ್ದಾರೆ.
ನಿರಂಜನ್ ಈಗಾಗಲೇ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರೂ ಈ ಚಿತ್ರ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಡುವುದರಲ್ಲಿ ಅನುಮಾನವಿಲ್ಲ. ಡ್ಯಾನ್ಸ್, ಫೈಟ್, ಎಮೋಷನ್, ಪ್ರೀತಿ – ಪ್ರಣಯ ಹಾಗೂ ಗಂಭೀರತೆಯನ್ನು ಕಾಯ್ದುಕೊಂಡು ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ.

ಅರ್ಜುನ್ ಸರ್ಜಾ ನಿರ್ದೇಶನದ ಜೊತೆಗೆ ಒಂದು ಪಾತ್ರದಲ್ಲಿ ತಮ್ಮನ್ನ ತಾವು ವಿಭಿನ್ನವಾಗಿ ಬಿಂಬಿಸಿಕೊಂಡಿದ್ದಾರೆ. ಕಥೆಯನ್ನು ಬಹಳ ಸರಳವಾಗಿ ಎಣೆದಿದ್ದಾರೆ. ಸೀತಾ ಪಯಣದ ಜೊತೆಗೆ ಬದುಕಿನ ಮೌಲ್ಯಗಳ ಬಗ್ಗೆ ಹೇಳಿದ್ದಾರೆ. ಪ್ರಾಣಿ ಹಿಂಸೆಯ ಬಗ್ಗೆ ಮನ ಮುಟ್ಟುವಂತೆ ನಿರೂಪಣೆ ಮಾಡಿದ್ದಾರೆ. ಹಾಗೂ ಗಂಡ ಹೆಂಡತಿಯ ಸಂಬಂಧಗಳ ಬಗ್ಗೆಯೂ ಚಿತ್ರದಲ್ಲಿ ತಿಳಿಸಿದ್ದಾರೆ. ನಿರ್ಮಾಣದ ಜೊತೆಗೆ ನಿರ್ದೇಶನ ಮತ್ತು ಅಭಿನಯದ ಜವಾಬ್ಧಾರಿಯನ್ನು ನಿಭಾಯಿಸಿದ್ದಾರೆ.

ಅನೂಪ್ ರೂಬೆನ್ಸ್ ರವರ ಸಂಗೀತ  ಮತ್ತು ಹಿನ್ನೆಲೆ ಸಂಗೀತ ಗಮನಾರ್ಹವಾಗಿದೆ.

ಚಿತ್ರದ ಎಲ್ಲಾ ಪಾತ್ರಗಳು ಬಹಳ ಚೊಕ್ಕವಾಗಿ ಮೂಡಿಬಂದಿದೆ. ಪ್ರಕಾಶ್ ರೈ ರವರ ತಾತನ ಪಾತ್ರ ಚನ್ನಾಗಿ ಮೂಡಿಬಂದಿದೆ. ಹಾಗೂ ಮತ್ತೊಬ್ಬ ಹಿರಿಯ ನಟರಾದ ಸತ್ಯ ಪ್ರಕಾಶ್ ನಾಯಕಿಯ ತಂದೆಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅಪ್ಪ ಮಗಳ ಬಾಂಧವ್ಯದ ಸನ್ನಿವೇಶಗಳು ನಿರ್ದೇಶಕರು ಚನ್ನಾಗಿ ಕಟ್ಟಿಕೊಟ್ಟಿದ್ದಾರೆ ಆದರೆ ಸತ್ಯ ಪ್ರಕಾಶ್ ರವರ ಪಾತ್ರಕ್ಕೆ ಮತ್ತಷ್ಟು ಜೀವ ಬೇಕಿತ್ತು ಅನ್ನಿಸುತ್ತದೆ. ಹಾಗೂ ಸಂಭಾಷಣೆ ಇನ್ನೂ ಚನ್ನಾಗಿ ಬರೆಯ ಬಹುದಿತ್ತು.

ಅರ್ಜುನ್ ಸರ್ಜಾ ನಿರ್ದೇಶನದ ಜೊತೆಗೆ ಒಬ್ಬ ರೌಡಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಜೊತೆಗೆ ಆ ಪಾತ್ರಕ್ಕೆ ಅರ್ಥಪೂರ್ಣ ಅಂತ್ಯ ನೀಡಿದ್ದಾರೆ. ಇನ್ನು ಧೃವಸರ್ಜ ಈ ಚಿತ್ರದಲ್ಲಿ ಗೋವುಗಳನ್ನು ರಕ್ಷಣೆ ಮಾಡುವಂತ ಸಾಹಸ ದೃಶ್ಯದಲ್ಲಿ ಒಂದು ಕಡಕ್ ಎಂಟ್ರಿಯೊಂದಿಗೆ, ಸಕತ್ ಆಕ್ಷನ್ ನಲ್ಲಿ ಪ್ರೇಕಗಷಕರಿಗೆ ಖುಷಿ ನೀಡಿದ್ದಾರೆ.

ಬಾಲ ಮುರುಗನ್ ರವರ ಕ್ಯಾಮೆರಾ ಕೆಲಸ ಕಣ್ಣಿಗೆ ಹಬ್ಬವನ್ನು ನೀಡುತ್ತದೆ. ಹಾಗೂ ತುಂಬಾ ವೈಭವವಾಗಿ ದೃಶ್ಯಗಳನ್ನು ಕಟ್ಟಿಕೊಟ್ಟಿದ್ದಾರೆ.

ಬರೀ ಹೊಡೆದಾಟ, ಬಡಿದಾಟ, ಅರ್ಥವಿಲ್ಲದ ವ್ಯರ್ಥ ಡೈಲಾಗ್ ಗಳನ್ನು ಕೇಳಿ ಬೇಸತ್ತಿದ್ದ ಪ್ರೇಕ್ಷಕರಿಗೆ ಮತ್ತು ಫ್ಯಾಮಿಲಿ ಆಡಿಯನ್ಸ್‌ಗೆ ತುಂಬಾ ಇಷ್ಟವಾಗುವಂತ ಕ್ಲಾಸ್ ಚಿತ್ರ ಎನ್ನಬಹುದು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor