Radheya movie review. ಸೂಕ್ಷ್ಮ ಮನಸ್ಸಿನ ಮೇಲಾದ ಗಾಯದ, ಸೈಕೋ ಕಿಲ್ಲರ್ ಕಥೆ ರಾಧೇಯ

ಚಿತ್ರ – ರಾಧೇಯ
ನಿರ್ಮಾಪಕರು – ವೇದಗುರು
ನಿರ್ದೇಶನ – ವೇದಗುರು
ಛಾಯಾಗ್ರಹಣ –  ರಾಮಿ
ಸಂಗೀತ – ವಿಯಾನ್

Rating -3/5
ವಿಮರ್ಶೆ- ಮಂಜುರಾಜ್ ಸೂರ್ಯ

ಎಳೆಯ ಮಕ್ಕಳ ಸೂಕ್ಷ್ಮ ಮನಸ್ಸಿನ ಮೇಲಾದ ಗಾಯಗಳ ಹೆಗ್ಗುರುತಿಗೆ ರಾಧೆಯ ಚಿತ್ರ ಸಾಕ್ಷಿ

ಚಿತ್ರದ ಪ್ರಾರಂಭದಲ್ಲೇ ಒಬ್ಬ ಹೆಂಗಸು ತನ್ನ ಮಕ್ಕಳ ಎದುರೇ ಪರ ಪುರುಷನ ತೆಕ್ಕೆಯಲ್ಲಿ ಸುಖಿಸುತ್ತಾಳೆ
ಇದನ್ನು ನೋಡಿದ ಅವಳ ಮಗನ ಮನಸ್ಸಿನ ಮೇಲೆ ಗಾಡವಾದ ಪರಿಣಾಮ ಬೀಳುತ್ತದೆ. ಸಮಾಜಕ್ಕೆ ಮಾಧರಿಯಾಗಿ ಬೆಳೆಯ ಬೇಕಿದ್ದ ಎಳೆಯ ಮನಸ್ಸಿನ ಹುಡುಗ ಹೇಗೆ ಸಮಾಜಘಾತುಕನಾಗಿ ಬೆಳೆಯಬಹುದು ಎಂಬ ಸೂಕ್ಷ್ಮ ವಿಚಾರವನ್ನು ನಿರ್ದೇಶಕರ ವೇದಗುರು ಪ್ರೇಕ್ಷಕರ ಮನಸ್ಸಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ ಅನ್ನಬಹುದು.

ಅದೊಂದು ತುಂಬಿದ ನ್ಯಾಯಾಲಯದ ಕಟಕಟೆಯಲ್ಲಿ ನಿಂತು ಒಬ್ಬ ವಿಚಾರಣಾಧಿ ಖೈದಿ ಹೇಳುತ್ತಾನೆ,
ನನ್ನನ್ನು ಬದುಕಲು ಬಿಡಬೇಡಿ. ನನಗೆ ಗಲ್ಲುಶಿಕ್ಷೆ ಕೊಡಿ. ನನ್ನನ್ನು ಬಿಟ್ಟರೆ ನಾಳೆ ಇನ್ನೂ ಕೊಲೆಗಳಾಗುತ್ತವೆ,
ಎಂದು ಒಬ್ಬ ಸೈಕೋ ಕಿಲ್ಲರ್ ನ್ಯಾಯಾಲಯದಲ್ಲಿ ನಿಂತು ಸೀರಿಯಲ್ಲ್ ಕೊಲೆ ಹಂತಕ ನಾನೇ ಎಂದು ನಿಜ ಒಪ್ಪಿಕೊಳ್ಳುತ್ತಾನೆ.
ತನ್ನ ತಾಯಿಂದ ಹಿಡಿದು ಗರ್ಭಿಣಿ ಹೆಂಡತಿಯವರೆಗೂ 42 ಕೊಲೆಗಳನ್ನು ಮಾಡಿದ್ದು ತಾನೇ ಎಂದು ನ್ಯಾಯಲಯದಲ್ಲಿ ಅವಲತ್ತುಕೊಳ್ಳುತ್ತಾನೆ.

ನ್ಯಾಯಾಲಯ ಸತ್ಯಾಸತ್ಯತೆಗಳನ್ನು ಅವಲೋಕಿಸಿ, ಅವನಿಗೆ ಗಲ್ಲುಶಿಕ್ಷೆ ವಿಧಿಸುತ್ತದೆ.

ಆದರೆ ಆತನಿಗೆ ನಾನು  ಸಾಯುವ ಮುನ್ನ ತನ್ನ ಕಥೆ ಜಗತ್ತಿಗೆ ಗೊತ್ತಾಗಬೇಕು
ಹಾಗೂ ಅದನ್ನು ಬರೆಯಲು ಅನುಪಮ ರಂಜನ್ ಎಂಬ ಬರಹಗಾರರು ಬೇಕು ಎಂದು ನ್ಯಾಯಲಯದಲ್ಲಿ ಬೇಡಿಕೆ ಸಲ್ಲಿಸುತ್ತಾನೆ.

ಈ ಖೈದಿಯ ಬಯೋಗ್ರಫಿ ಬರೆಯಲು ಅನುಪಮಾ ರಂಜನ್‍ ಎಂಬ ಲೇಖಕಿಯೂ ಬರುತ್ತಾರೆ. ಅಲ್ಲಿಂದ ಅವನು ಅವನ ಕಥೆ  ಶುರುವಾಗುತ್ತದೆ.
ಅವನು ಆ ಕೊಲೆಗಳನ್ನು ಮಾಡಿದ್ದಾನಾ, ಮಾಡಲು ಕಾರಣವೇನು..?
ಸೈಕೋ ಕಿಲ್ಲರ್ ಗೆ ಮರಣ ದಂಡನೆ ಆಗುತ್ತಾ ಎನ್ನುವ ಸಸ್ಪೆನ್ಸ್, ಥ್ರಿಲ್ಲರ್, ಸೆಂಟಿಮೆಂಟ್ ಚಿತ್ರವನ್ನು ಥಿಯೇಟರ್ ನಲ್ಲಿ ನೋಡ ಬೇಕಾಗುತ್ತದೆ.

‘ರಾಧೇಯ’ ಚಿತ್ರ, ಸಾಹಸ ಮತ್ತು ಸಂವೇದನೆಯ ಸಂಗಮವಾದ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದೆ. ಪ್ರಮುಖವಾಗಿ ನಾಯಕ ನಟನಾಗಿ ಅಜಯ್ ರಾವ್ ಇದೇ ಮೊದಲ ಸಲ ಬಾರಿ ಸೈಕೋಪಾತ್ ಶೈಲಿಯ ಪಾತ್ರಕ್ಕೆ ಬಣ್ಣ ಹಚ್ಚಿ ಅಭಿನಯ ಮಾಡಿದ್ದಾರೆ, ಅಜಯ್ ಗೆಟಪ್ ವಿಭಿನ್ನವಾಗಿದೆ.

ಜೊತೆಗೆ ಸೋನಲ್ ಮೆಂತೇರೋ ಮತ್ತು ಧನ್ಯಾ ಬಾಲಕೃಷ್ಣ ಚಿತ್ರದ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ.

ಅಜಯ್ ರಾವ್  ಒಬ್ಬ ಫಾರೆನ್ಸಿಕ್ ಅಧಿಕಾರಿಯಾಗಿ ಮೊದಲ ಬಾರಿಗೆ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ದುರ್ಬಲರ ಪರವಾಗಿ ಸಿಡಿದೇಳುವ ಕಥಾನಾಯಕನಾಗಿ, ತನ್ನ ಬಾಲ್ಯದ ನೋವಿನ ಕಥೆ, ಹೆಚ್ಚಿನ ಕ್ಲೈಮಾಕ್ಸ್ ಟ್ವಿಸ್ಟ್ ಹಾಗೂ ಪ್ಲಾಶ್ ಬ್ಯಾಕ್ ಮೂಲಕ ಚಿತ್ರ ಕುತೂಹಲವನ್ನು ಹೆಚ್ಚಿಸುತ್ತದೆ
ಅಜಯ್ ರಾವ್ ‘ಲವರ್ ಬಾಯ್’ ಇಮೇಜ್ ಬಿಟ್ಟು, ತೀವ್ರ ಧೈರ್ಯಭರಿತ ಪಾತ್ರದಲ್ಲಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

ಸೋನಲ್ ಮೆಂತೇರೋ ಪತ್ರಕರ್ತೆಯಾಗಿ  ಅಭಿನಯಿಸಿದ್ದಾರೆ.

ನಿರ್ದೇಶಕ ವೇದ ಗುರು ತಮ್ಮ ಮೊದಲ ಪ್ರಯತ್ನದಲ್ಲೇ ವಿವಿಧತೆ ಮತ್ತು ಕುತೂಹಲಭರಿತ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕಥೆಗೆ ಎಷ್ಟು ಬೇಕೋ ಅಷ್ಟನ್ನು ತೆರೆಯ ಮೇಲೆ ನಿರೂಪಿಸಿದ್ದಾರೆ.
ಸಸ್ಪೆನ್ಸ್-ಸಾಹಸ ಹಾಗೂ ಸ್ಪ್ಲಿಟ್ ಪರ್ಸನಾಲಿಟಿ ವ್ಯಕ್ತಿತ್ವವು ಹೊಸ ಅನುಭವ ನೀಡುತ್ತದೆ.
ಚಿತ್ರದಲ್ಲಿ ರಾಮಿಯವರ ಛಾಯಾಗ್ರಹಣ, ಮಿಯಾನ್ ರವರ ಸಂಗೀತ ಚನ್ನಾಗಿದೆ.
ಸಂಕಲನ ತಾಂತ್ರಿಕವಾಗಿ ಉತ್ತಮವಾಗಿದೆ, 
ಆದರೆ ಹಿನ್ನೆಲೆ ಸಂಗೀತ ಇನ್ನೂ ಚನ್ನಾಗಿ ಮಾಡಬಹುದಾಗಿತ್ತು ಎನಿಸುತ್ತದೆ.

ಧನ್ಯ ಬಾಲಕೃಷ್ಣ, ಅರವಿಂದ್‍ ರಾವ್‍, ಗಿರೀಶ್‍ ಶಿವಣ್ಣ ಮುಂತಾದವರು ತಮ್ಮ ಪಾತ್ರಗಳನ್ನು‌ಎಷ್ಟು ಬೇಕೋ ಅಷ್ಟು ಕಥೆಗೆ ತಕ್ಕಂತೆ ನಿಭಾಯಿಸಿದ್ದಾರೆ.

‘ರಾಧೇಯ’  ಒಬ್ಬ ಸೈಕೋ ಕಿಲ್ಲರ್ ಆತ್ಮಕಥೆಯಾಗಿದ್ದು,  ಒಳ್ಳೆಯ ಸಂದೇಶ ಹಾಗೂ ಸಾಮಾಜಿಕ ಕಳಕಳಿ ಚಿತ್ರವಾಗಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor