Patha shala movie review. ಚಿತ್ರ ವಿಮರ್ಶೆ – ಪಾಠಶಾಲ
ಚಿತ್ರ – ಪಾಠಶಾಲ
ನಿರ್ಮಾಪಕರು – ಎಂ.ಎಸ್. ಸ್ಕ್ವೇರ್ ಮೂವೀಸ್
ನಿರ್ದೇಶನ – ಹೆದ್ದೂರು ಮಂಜುನಾಥ ಶೆಟ್ಟಿ
ಛಾಯಾಗ್ರಹಣ – ಜೀವನ್ ಗೌಡ
ಸಂಗೀತ – ವಿಕಾಸ್ ವಸಿಸ್ಟ, ಮ್ಯಾಥ್ಯೂಸ್ ಮನು
Rating -3/5
ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ಕಲಾವಿದರು :- ದಿಗಂತ್, ಗೌತಮಿ, ಮಾನ್ಯ, ಚಿರಂತ್, ಆಯುಷ್. ಬಾಲಾಜಿ ಮನೋಹರ್, ಕಿರಣ್ ನಾಯ್ಕ್, ಪ್ರಶಾಂತ್ ನಟನ ಮುಂತಾದವರು.
ಪಾಠಶಾಲ ಹಾಗಂತ ಇದು ಮಕ್ಕಳ ಸಿನಿಮಾ ಅಲ್ಲ. ಹಾಗಂತ ಚಿತ್ರತಂಡ ಪ್ರೆಸ್‌ಮೀಟ್ ಗಳಲ್ಲಿ ಹೇಳಿಕೊಂಡಿದ್ದು ಚಿತ್ರ ನೋಡಿದ ಮೇಲೆ ನಿಜ ಎನಿಸುತ್ತದೆ. ಹಾಗಾದರೆ ಈ ಪಾಠಶಾಲ ಟೈಟಲ್ ಚಿತ್ರಕ್ಕೆ ಯಾತಕ್ಕಾಗಿ ಇಟ್ಟಿದ್ದಾರೆ ಗೊತ್ತಿಲ್ಲ.
ಚಿತ್ರದ ಮೊದಲಾರ್ಧದಲ್ಲಿ ಮಲೆನಾಡಿನ ಚೌಡ್ಕಿ ದೀಪ ಹಬ್ಬದ ಸುತ್ತ ಕಥೆ ನಡೆಯುತ್ತದೆ.
ಇಲ್ಲಿ ಸ್ಕೂಲಿಗೆ ಸೇರಿಸಲು ಹೆಡ್ ಮಾಸ್ಟರ್ ಗೆ ಒಂದಷ್ಟು ಕಾಳು, ಹಣ್ಣು, ತರಕಾರಿ, ರೇಷನ್ ಈ ತರದ ಲಂಚಗಳನ್ನು ಕೊಟ್ಟರೆ ಸಾಕು ಸ್ಕೂಲಿಗೆ ಅಡ್ಮಿಷನ್ ಸಿಗುತ್ತದೆ. ಎನ್ನುವುದನ್ನು ತುಂಬಾ ಸುಧೀರ್ಘವಾಗಿ ತೋರಿಸಿದ್ದಾರೆ.
ಇದು ಕಾಡಿಗೆ ಅಂಟಿಕೊಂಡ ಹಳ್ಳಿ. ತಲತಲೆಮಾರಿನಿಂದ ಅಲ್ಲಿ ಜೀವನ ನಡೆಸಿಕೊಂಡು ಬಂದಿರುತ್ತಾರೆ, ಕಾಡಿನಲ್ಲಿ ಅಷ್ಟೊಂದು ಮರಗಳಿವೆ, ಪ್ರಾಣಿಗಳಿವೆ ಒಂದೆರಡನ್ನು ಹೊಡೆದರೆ ಏನಾಗುತ್ತದೆ ಎನ್ನುವುದು ಈ ಜನರ ವಾದ.
ಈ ಜನರ ಮೇಲೆ ಸುಖಾಸುಮ್ಮನೆ ಸುಳ್ಳು ಕೇಸು ಹಾಗಿ ಊರಿನ ಬನರಿಗೆ ತೊಂದರೆ ಕೊಡುವ ಅಧಿಕಾರಿಯಿಂದ ಹೆದರಿ ಕಾಡಿನಲ್ಲಿ ಅವಿತುಕೊಂಡ ಜನರ ಮಕ್ಕಳು ಪೋಲೀಸ್ ಅಧಿಕಾರಿಗಳಿಗೆ ಪತ್ರ ಬರೆದು ತಮ್ಮ ಹಿರಿಯರಿಗೆ ಬಂದಿದ್ದ ತೊಂದರೆಯನ್ನು ನಿವಾರಿಸುವಲ್ಲಿ ಯಶಸ್ವಿಯಾಗುತ್ತಾರೆ.
ಕಾಡು ಮತ್ತು ಕಾಡಿನ ಸಂಪತ್ತು ಹಾಗೂ ವನ್ಯ ಜೀವಿಗಳನ್ನು ರಕ್ಷಿಸುವ ಪ್ರಯತ್ನವನ್ನು ನಿರ್ದೇಶಕ ಹೆದ್ದೂರು ಮಂಜುನಾಥ ಕಥೆಯನ್ನು ಚನ್ನಾಗಿ ಬರೆದು ಕೊಂಡಿದ್ದಾರೆ ಆದರೆ ಅದನ್ನು ಪ್ರೇಕ್ಷಕರ ಮುಂದಿಡುವಲ್ಲಿ ಎಡವಿದ್ದಾರೆ.
ಗಂಭೀರವಾದ ವಿಷಯದಲ್ಲಿ ಒಂದಷ್ಟು ಕಾಲಿ ಪೋಲಿ ಸನ್ನಿವೇಷಗಳನ್ನು ತುರುಕಿದ್ದಾರೆ ಅನ್ನಿಸುತ್ತದೆ.
ಮಕ್ಕಳ ಚಿತ್ರದಲ್ಲಿ ಅಪ್ಪಂದಿರ ಕಾಮದಾಟದ ಸನ್ನಿವೇಶಗಳ ಅವಶ್ಯಕಥೆ ಇರಲಿಲ್ಲ ಆದರೂ ಯಾಕೆ ಈ ರೀತಿಯ ದೃಶ್ಯಗಳು ಬಂದವೋ ಗೊತ್ತಿಲ್ಲ.
ಚಿತ್ರದ ಸಂಗೀತ, ಹಿನ್ನೆಲೆ ಸಂಗೀತ, ಮತ್ತು ಛಾಯಾಗ್ರಹಣದ ಕುಸೂರಿ ಉತ್ತಮವಾಗಿದೆ.
ಒಟ್ಟಿನಲ್ಲಿ ಒಂದು ಸಾಮಾಜಿಕ ಕಳಕಳಿಯ ಚಿತ್ರ ಎನ್ನಬಹುದು.











