Pancharatnagalu movie release on 6th. March 2026. ಮಕ್ಕಳು ಮನಸ್ಸು ಮಾಡಿದರೆ ಏನನ್ನಾದರೂ ಮಾಡಬಲ್ಲರು

  ಮಕ್ಕಳ ಚಿತ್ರ *’ಪಂಚ ರತ್ನಗಳು’* ಚಿತ್ರದ ಟ್ರೇಲರ್ ಮತ್ತು ಹಾಡುಗಳ ಬಿಡುಗಡೆ ಕಾರ್ಯಕ್ರಮ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ಪ್ರದರ್ಶಕ ಮತ್ತು ವಿತರಕರಾಗಿರುವ *ಜಿ.ಆರ್.ನಾರಾಯಣ ಗೌಡ ಹೊಸ ಅನುಭವ ಎನ್ನುವಂತೆ ಶ್ರೀ ಕ್ಯಾಲಮ್ಮ ದೇವಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ* ಮಾಡಿದ್ದಾರೆ. ಒಂದಷ್ಟು ಚಿತ್ರಗಳಲ್ಲಿ ನಟನೆ ಮಾಡಿರುವ ಮೈಸೂರು ಮೂಲದ ಗಾಯಕ *ಗೌತಮ್.ಆರ್ ಚಿತ್ರಕ್ಕೆ ಕಥೆ,ಚಿತ್ರಕಥೆ, ಸಂಭಾಷಣೆ, ಮೂರು ಹಾಡುಗಳಿಗೆ ಸಾಹಿತ್ಯ ಬರೆದು ಎರಡನೇ ಬಾರಿ ನಿರ್ದೇಶನದ* ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

 ತಾರಾಗಣದಲ್ಲಿ ಚಿಣ್ಣರುಗಳಾದ ಪ್ರಥಮ್, ಯಶಸ್, ವಿಹಾನ್, ತನ್ವಿ, ಆಧ್ಯ ಪ್ರಥಮ್, ತಾಯಿಯಾಗಿ ಬಿಂದೂ ಆಚಾರ್ಯ, ಶಿಕ್ಷಣ ಸಚಿವರಾಗಿ ಆನಂದ್ ನಗರ್ಕರ್ ಮುಂತಾದವರು ಅಭಿನಯಿಸಿದ್ದಾರೆ.

 ಸಂಗೀತ ಪ್ರಣವ್, ಛಾಯಾಗ್ರಹಣ ಅನಿಲ್ ಕಶ್ಯಪ್, ಸಂಕಲನ ಅಭಿಷೇಕ್, ಸಿಂಕ್ ಸೌಂಡ್ ಅಜಿತ್, ಪೋಸ್ಟ್ ಪ್ರೊಡಕ್ಷನ್ ಕ್ರಿಷ್ ಸ್ಟುಡಿಯೋಸ್ ಅವರದಾಗಿದೆ. ವೆಂಕಟ್‌ಗೌಡ ಸಾರಥ್ಯದಲ್ಲಿ ಸುಮಾರು 60 ಕೇಂದ್ರಗಳಲ್ಲಿ ಸಿನಿಮಾವು ಸದ್ಯದಲ್ಲೇ ತೆರೆಗೆ ಬರಲಿದೆ.

  ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು, ಇಂದಿನ ಸಮಾಜದ ದೈನಂದಿಕ ಸಮಸ್ಯೆಗಳನ್ನು ದೊಡ್ಡವರು ಗಮನಕ್ಕೆ ತೆಗೆದುಕೊಳ್ಳದೆ ಇರುವುದರಿಂದ ವಿಷಯವು ಸರ್ಕಾರಕ್ಕೆ ತಲುಪದೆ ಇರುವುದರಿಂದ ಯಾರನ್ನು ದೂರುವುದರಿಂದ ಪ್ರಯೋಜನವಿಲ್ಲ. ಇದನ್ನು ಅರಿತ ಐದು ಮಕ್ಕಳು ನಾವೇ ಮುಂದಾಗಿ ಏಕೆ ಸರಿಪಡಿಸಬಾರದು ಅಂತ ತೀರ್ಮಾನಕ್ಕೆ ಬರುತ್ತಾರೆ. ಪ್ರಾರಂಭದಲ್ಲಿ ’ಪಂಚ ಭೂತಗಳು’ ಹೆಸರು ಇಡಲಾಗಿತ್ತು. ವಿತರಕ ವೆಂಕಟ್‌ಗೌಡ ಶೀರ್ಷಿಕೆ ನಕರಾತ್ಮಕ ಸಂದೇಶ ಸಾರುವುದರಿಂದ ’ಪಂಚ ರತ್ನಗಳು’ ಸೂಕ್ತವಾಗಿದೆ ಎಂದು ಸಲಹೆ ನೀಡಿದ್ದರಿಂದ ಅದನ್ನೆ ಇಡಲಾಯಿತು. ಪ್ರಕೃತಿಯ ಅಂಶಗಳಾದ ಭೂಮಿ, ನೀರು, ಬೆಂಕಿ, ಗಾಳಿ, ಆಕಾಶ ಇವುಗಳನ್ನು ಭುವನ್, ಜೀವಿತ, ಜ್ಯೋತಿ, ಅನಿಲ್ ಹಾಗೂ ಆಕಾಶ್ ಪಾತ್ರದ ಹೆಸರಿನಲ್ಲಿ ಬಿಂಬಿಸಲಾಗಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ ಎಂಬುದರ ಮಾಹಿತಿಯನ್ನು ಗೌತಮ್.ಆರ್ ತೆರೆದಿಟ್ಟರು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor