Pancha Ratnagalu movie review. ಚಿತ್ರ ವಿಮರ್ಶೆ – ಪಂಚರತ್ನಗಳು. “ಮಕ್ಕಳಿಂದ ದೊಡ್ಡವರಿಗೆ ಪಾಠ”

ಚಿತ್ರ –   ಪಂಚ ರತ್ನಗಳು
ನಿರ್ಮಾಪಕರು – ಜಿ. ಆರ್. ನಾರಾಯಣ ಗೌಡ
ನಿರ್ದೇಶನ –  ಗೌತಮ್  ಆರ್.
ಛಾಯಾಗ್ರಹಣ –  ಅನಿಲ್ ಕಶ್ಯಪ್
ಸಂಗೀತ –  ಪ್ರಣವ್,
ಸಂಕಲನ – ಅಭಿಷೇಕ್

Rating -3/5

ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ

ಕಲಾವಿದರು : ಪ್ರಥಮ್, ಯಶಸ್, ವಿಹಾನ್, ತನ್ವಿ, ಆಧ್ಯಾ, ಬಿಂದು ಆಚಾರ್ಯ, ಆನಂದ್ ನಗರ್ಕರ್ ಮುಂತಾದವರು.

ಪಂಚ ರತ್ನಗಳು ಚಿತ್ರ ಇದೊಂದು ಮಕ್ಕಳ ಚಿತ್ರ.
ಮಕ್ಕಳಿಂದ ಸಮಾಜಕ್ಕೆ ಹಾಗೂ ಸರ್ಕಾರದ ಹಾಗೂ ಸಮಾಜದ ಹೊಣೆಗೇಡಿತನಕ್ಕೆ ಕಿವಿ ಮಾತು ಹೇಳಿದ್ದಾರೆ. ನಿರ್ದೇಶಕ ಗೌತಮ್. ಈಗಾಗಲೇ ಗಾಯಕ ನಾಗಿ ಗುರುತಿಸಿಕೊಂಡಿದ್ದು ಚಿತ್ರಕ್ಕೆ ಕಥೆ,ಚಿತ್ರಕಥೆ, ಸಂಭಾಷಣೆಯ ಜೊತೆಗೆ ಮೂರು ಹಾಡುಗಳಿಗೆ ಸಾಹಿತ್ಯ ಬರೆದು, ಮಕ್ಕಳ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇದು ಇವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಎರಡನೇ ಚಿತ್ರ.

ಇದು ಪಂಚಭೂತಗಳ ಥೀಮ್‌ನಲ್ಲಿ  ಚಿಕ್ಕ ಮಕ್ಕಳ ಮುಖಾಂತರ ಕಥೆಯನ್ನು ಹೆಣೆಯಲಾಗಿದೆ.
ಮಕ್ಕಳು ಮನಸ್ಸು ಮಾಡಿದರೆ ಏನನ್ನಾದರೂ ಮಾಡಬಲ್ಲರು ಎನ್ನುವುದಕ್ಕೆ ಈ ಚಿತ್ರ ಸಾಕ್ಷಿಯಾಗಿದೆ.
ಸಮಾಜದಲ್ಲಿ ಏನೇ ಆದರೂ ಯಾರೋ ಬಂದು ಸರಿ ಮಾಡುತ್ತಾರೆ, ಯಾರಿಂದಲೋ ಇದು ಆಗಬೇಕು, ನಮಗೆ ಇದು ಸಂಭಂದಿಸಿದ್ದಲ್ಲ ಎಂದು ಜಾರಿ ಕೊಳ್ಳುವ ಹಾಗೂ ಬೇರೆಯವರ ಮೇಲೆ ಬೊಟ್ಟು ಮಾಡಿ ತೋರಿಸುವ ಜನರಿಗೆ ಈ ಚಿತ್ರ ಮಾದರಿಯಾಗಿದೆ.


ನಮ್ಮ ಸುತ್ತಮುತ್ತಲಿನ ಪರಿಸರದ ಅಂಕು ಡೊಂಕುಗಳನ್ನು ನಾವುಗಳೇ ಸರಿಪಡಿಸಿ ಕೊಳ್ಳಬೇಕು, ಮತ್ಯಾರಿಗೋ ಕಾಯದೆ ನಮ್ಮ ಸಮಸ್ಯೆಗಳನ್ನು ನಾವುಗಳೇ ಸರಿಪಡಿಸಿಕೊಂಡರೆ ಉತ್ತಮ. ಎನ್ನುವುದನ್ನು ಮಕ್ಕಳ ಮುಖಾಂತರ ತೋರಿಸಲಾಗಿದೆ.
ಚಿತ್ರದಲ್ಲಿ ಮಕ್ಕಳು ದೊಡ್ಡವರಿಗೆ ಬುದ್ಧಿ ಹೇಳುವಂತ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ಪ್ರಥಮ್, ಯಶಸ್, ವಿಹಾನ್, ತನ್ವಿ, ಆಧ್ಯಾ ಈ ಐದು ಮಕ್ಕಳ ಪಾತ್ರದ ಹೆಸರು ಮತ್ತು ಅವರ ನಡೆ, ನುಡಿ ಪಂಚಭೂತ ಗಳನ್ನು ಹೋಲುತ್ತವೆ. ಬೆಂಕಿ, ಗಾಳಿ, ನೀರು, ಆಕಾಶ, ಭೂಮಿಯನ್ನು ಹೋಲುವ ಪಾತ್ರಗಳಿಗೆ ಈ ಮಕ್ಕಳು ಮನ ಮುಟ್ಟುವಂತೆ ಅಭಿನಯಿಸಿದ್ದಾರೆ.

ಬಿಂದೂ ಆಚಾರ್ಯ ತಾಯಿಯ ಪಾತ್ರದಲ್ಲಿ ಬಹಳ ಚನ್ನಾಗಿ‌ ಮನ ಮುಟ್ಟುವಂತೆ  ತಮ್ಮನ್ನು ತಾವು ತೊಡಗಿಸಿಕೊಂಡು ಪ್ರೇಕ್ಷಕರ ಮನ ಸೆಳೆದಿದ್ದಾರೆ.
ಶಿಕ್ಷಣ ಸಚಿವರಾಗಿ ಆನಂದ್ ನಗರ್ಕರ್ ಅಭಿನಯಿಸಿದ್ದಾರೆ.

ಗೌತಮ್.ಆರ್ ನಿರ್ದೇಶನದಲ್ಲಿ ತಯಾರಾದ ಈ ಚಿತ್ರಕ್ಕೆ ಜಿ.ಆರ್.ನಾರಾಯಣ ಗೌಡ ಬಂಡವಾಳ ಹೂಡಿದ್ದಾರೆ. ಈಗಾಗಲೇ ಸುಮಾರು ನಲವತ್ತು ವರ್ಷಗಳಿಂದ ಸಿನಿಮಾ ವಿತರಣೆ, ಪ್ರದರ್ಶಕನಾಗಿ ಗುರುತಿಸಿಕೊಂಡಿರುವ ನಾರಾಯಣ ಗೌಡ ಮೊದಲ ಬಾರಿಗೆ ಚಿತ್ರ ನಿರ್ಮಾಣಕ್ಕೆ ಕೈ ಹಾಕಿ,  “ಶ್ರೀ ಕ್ಯಾಲಮ್ಮ ದೇವಿ ಫಿಲಂಸ್” ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.

ಪ್ರಣವ್ ರವರ ಸಂಗೀತ ಚಿತ್ರಕ್ಕೆ ಪೂರಕವಾಗಿದ್ದು, ಮಕ್ಕಳಿಗಾಗಿ ಮಾಡಿದ ಹಾಡುಗಳು ಗಮನ ಸೆಳೆಯುತ್ತವೆ.
ಇನ್ನು ಛಾಯಾಗ್ರಹಣ ಅನಿಲ್ ಕಶ್ಯಪ್ ಚಿತ್ರದ ಕಥೆಗೆ ಒಂದು ಒಳ್ಳೆಯ ಚೌಕಟ್ಟಿನ ಆಯಾಮವನ್ನು ಸೃಷ್ಠಿಸಿದ್ದಾರೆ.
ಅಭಿಷೇಕ್ ಸಂಕಲನದ ಜವಾಬ್ಧಾರಿಯನ್ನು ಚನ್ನಾಗಿ ನಿಭಾಯಿಸಿದ್ದಾರೆ.

ಒಟ್ಟಿನಲ್ಲಿ ಮಕ್ಕಳ ಚಿತ್ರ ನೋಡಿ ತುಂಬಾ ದಿನವಾಗಿತ್ತು. ಮಕ್ಕಳಿಂದ ದೊಡ್ಡವರಿಗೆ ಪಾಠ ಹೇಳುವ ಸಾಮಾಜಿಕ ಕಳಕಳಿಯ ಚಿತ್ರ ಇದಾಗಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor