Operation London Cafe Review. ಆಪರೇಷನ್ ಲಂಡನ್ ಕೆಫೆ ಚಿತ್ರ ವಿಮರ್ಶೆ – “ಒಲವಿನ ಉರಿಯಲಿ ಭಾವ ಬೇಯುತ್ತಿದೆ”
ಚಿತ್ರ – ಆಪರೇಷನ್ ಲಂಡನ್ ಕೆಫೆ
ನಿರ್ಮಾಪಕರು – ವಿಜಯ್ ಕುಮಾರ್ ಶೆಟ್ಟಿ, ದೀಪಕ್ ರಾಣೆ, ರಮೇಶ್ ಕೊಠಾರಿ, ವಿಜಯ್ ಪ್ರಕಾಶ್ R.
ನಿರ್ದೇಶನ – ರಾಘವೇಂದ್ರ ಸಡಗರ
ಛಾಯಾಗ್ರಹಣ – R.D. ನಾಗಾರ್ಜುನ್
ಸಂಗೀತ – ಪ್ರಣಶು ಝಾ
ಸಂಕಲನ – K.M. ಪ್ರಕಾಶ್.
Rating -3/5
ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ಕಲಾವಿದರು :- ಕವೀಶ್ ಶೆಟ್ಟಿ, ಮೇಘನಾ ಶೆಟ್ಟಿ, ಶಿವಾನಿ ಸುರ್ವೆ, ವಿರಾಟ್ ಮಡ್ಕೆ, ಅಶ್ವಿನಿ ಚಾವ್ರೆ, ಅರ್ಜುನ್ ಕಾಪಿಕಾಡು, ಬಿ. ಸುರೇಶ್, ಅರುಣ್ ಸೋವಿ ಮುಂತಾದವರು.

“ಒಲವಿನ ಉರಿಯಲಿ ಭಾವ ಬೇಯುತ್ತಿದೆ”. ಇದೇ ಕಥೆಯ ಮೂಲ ತಿರುಳು.
ಇದೊಂದು ಆಕ್ಷನ್, ಕ್ರೈಮ್ ಥ್ರಿಲ್ಲರ್ ಮತ್ತು ಸೆಂಟಿಮೆಂಟ್ ಚಿತ್ರ. ಒಂದು ರೀತಿಯಲ್ಲಿ ಭಾವನೆಗಳ ಭಾವ ಲಹರಿ ಎನ್ನಬಹುದು.
ಅದೊಂದು ಗ್ಯಾಂಗ್ ನಕ್ಸಲ್ ಗ್ಯಾಂಗ್ ಸಮಾಜವನ್ನು ತಿದ್ದಲು ಹೋಗಿ ದಾರಿ ತಪ್ಪಿದವರ ಕಥೆ.
ಕೈಯಲ್ಲಿ ಬಂದೂಕು, ಮೈಮೇಲೆ ಕಪ್ಪುವಸ್ತ್ರ, ಹಣೆಯ ಮೇಲೆ ಕೆಂಪು ಪಟ್ಟಿ, ಯಾರದೋ ಮೇಲಿನ ಕೋಪದ ಕಿಡಿ ಕಣ್ಣಲ್ಲಿ, ದ್ವೇಷ ಅಸೂಯೆ ತಂಬಿರುವ ಎದೆಯೊಳಗೆಲ್ಲೋ ಮೂಲೆಯಲ್ಲಿ ಪ್ರೀತಿಯನ್ನು ಅರಳಿಸುವ ಪ್ರಯತ್ನವನ್ನು ನಿರ್ದೇಶಕ ರಾಘವೇಂದ್ರ ಮಾಡಿದ್ದಾರೆ.
ಒಂದು ರೀತಿಯಲ್ಲಿ “ಗನ್ಸ್ ಆಫ್ ರೋಸ್” ಎನ್ನಲು ಅಡ್ಡಿ ಇಲ್ಲ.

ಚಿತ್ರದ ಕಥಾನಾಯಕ ಕವೀಶ್ ಶೆಟ್ಟಿ ಒಬ್ಬ ನಕ್ಸಲ್ ಆಗಿ ಪಾತ್ರ ನಿಭಾಯಿಸಿದ್ದಾರೆ. ಮಾತು ಮರೆತಂತ ಮೌನ, ಯಾವುದೇ ಸಮಸ್ಯೆಯಾದರು ಧೈರ್ಯವಾಗಿ ಎದುರಿಸುವಂತ ಪಾತ್ರ.
ಸದಾ ಕಾಡಿನಲ್ಲಿ ಬೀಡುಬಿಟ್ಟ ಅವನಿಗೊಂದು ಊರೊಳಗೆ ಸ್ವೇಚ್ಚೆಯಿಂದ ಹಾರಡಿ ಕೊಂಡಿದ್ದ ಬಣ್ಣದ ಚಿಟ್ಟೆ ಪ್ರೀತಿಯ ಸೆಲೆಯೊಳಗೆ ಸೆಳೆಯುವ ಪ್ರಯತ್ನದಲ್ಲಿ ಬೀಳುತ್ತಾಳೆ ಆಕೆಯೇ ಚಿತ್ರದ ನಾಯಕಿ ಮೇಘ ಶೆಟ್ಟಿ.
ಹಾಗೆಯೇ ಕಾಡಿನಲ್ಲಿ ಸದಾ ಜೊತೆಯಲ್ಲಿದ್ದು ಬಂದೂಕನ್ನು ಹಿಡಿದು ಎದುರಾಳಿಯ ಎದೆಗೆ ಗುಂಡು ಹೊಡೆಯುವ ಗಂಡಿನಂತ ಮನೋಭಾವದ ಹುಡುಗಿಯ ಎದೆಯೊಳಗೊಂದು ಪ್ರೀತಿಯ ಮೊಳಕೆಯೊಡೆದು. ಮೇಘಾಶೆಟ್ಟಿ ತನ್ನದೇ ಟೀಮಿನ ಹುಡುಗನನ್ನು ಪ್ರೀತಿಸುವುದು ಅವಳಿಗೆ ಸಹಿಸಲಾಗುವುದಿಲ್ಲ. ಏಕೆಂದರೆ ಅವಳಿಗೂ ಇವನ ಮೇಲೆ ಪ್ರೀತಿ ಸದ್ದಿಲ್ಲದೇ ಅರಳಿರುತ್ತದೆ.
ಈಕೆ ಮರಾಠಿ ಭಾಷೆಯ ನಟಿ ಶಿವಾನಿ ಈ ಪಾತ್ರವನ್ನು ನಿಭಾಯಿಸಿದ್ದಾರೆ.

ಇವರಿಬ್ಬರ ಪ್ರೀತಿಯ ದೃಶ್ಯಗಳು ಚಿತ್ರದ ಹೈಲೈಟ್ ಎನ್ನಬಹುದು.
ರಂಗ ಕರ್ಮಿ, ನಟ, ಬಿ. ಸುರೇಶ್ ನಕ್ಸಲ್ ಗುಂಪಿನ ಹಿರಿಯನಾಗಿ, ನಕ್ಸಲ್ ನಾಯಕಿಯ ತಂದೆಯಾಗಿ ಅಭಿನಯಿಸಿದ್ದಾರೆ.
ಚಿತ್ರದ ಪ್ರತೀಯೊಂದು ದೃಶ್ಯದ ಮೇಕಿಂಗ್ ತುಂಬಾ ಚನ್ನಾಗಿದೆ.
ಸಾಹಿತ್ಯ ಬರವಣಿಗೆ ಚಿತ್ರ ಕಥೆಯನ್ನು ಹಿಡಿತದಲ್ಲಿ ಹಿಡಿದಿಟ್ಟಿದೆ.
ನಾಗಾರ್ಜುನ್ ರವರ ಕ್ಯಾಮೆರಾ ಕೆಲಸ ಚಿತ್ರದ ಪ್ರತೀಯೊಂದು ದೃಶ್ಯವನ್ನು ವೈಭವಿಕರಿಸಿದೆ.
ಪ್ರಾಂಶು ಝಾ ರವರ ಸಂಗೀತದಲ್ಲಿ ಅರಳಿರುವ ಎರಡು ಹಾಡುಗಳು ಕೇಳುವಂತಿದೆ.
ಅದರಲ್ಲೂ ಒಂದು ಸಾಂದರ್ಭಿಕ ಗೀತೆ “ಒಲವಿನ ಉರಿಯಲಿ ಭಾವ ಬೇಯುತ್ತಿದೆ” ಮನಸ್ಸಿಗೆ ಇಷ್ಟವಾಗುತ್ತದೆ.
ಹಿನ್ನೆಲೆ ಸಂಗೀತ ಚಿತ್ರದ ಕಥೆಯ ಓಟಕ್ಕೆ ಸಾಥ್ ನೀಡಿದೆ.
ನಿರ್ದೇಶಕ ರಾಘವೇಂದ್ರ ಸಡಗರ ಮೊದಲ ಚಿತ್ರದಲ್ಲಿ ಸೈ ಎನಿಸಿಕೊಂಡಿದ್ದಾರೆ.

ರಾಘವೇಂದ್ರ ರವರಿಗೆ ಚಿತ್ರ ಸಾಹಿತ್ಯದ ಮೇಲೆ ಹಿಡಿತವಿದೆ, ಅವರ ಕಲ್ಪನೆಯ ಕಥೆಯಲ್ಲಿ ಹುರುಳಿದೆ ಎನ್ನುವುದು ಈ ಚಿತ್ರ ಸಾಬೀತು ಪಡಿಸಿದೆ.
ಯಾರದೋ ತಪ್ಪಿಗೆ, ಯಾವುದೋ ಸಂಧರ್ಭಕ್ಕೆ ಸಿಲುಕಿ ಬದುಕನ್ನು ಮೂರಾಬಟ್ಟೆ ಮಾಡಿಕೊಂಡು, ಸದಾ ಕಾಡಿನಲ್ಲಿ ಊಟ, ಬಟ್ಟೆ, ನಿದ್ದೆ, ಇಲ್ಲದೇ ಬರೀ ಹೋರಾಟ, ರಕ್ತಪಾತ ಯಾರಿಗಾಗಿ, ಯಾತಕ್ಕಾಗಿ ಅನ್ನುವುದೇ ನಿರ್ದೇಶಕರ ಪ್ರೆಶ್ನೆ.
ಆಪರೇಷನ್ ಲಂಡನ್ ಕೆಫೆ ಚಿತ್ರದ ಎರಡನೇ ಭಾಗವನ್ನು ನಿರ್ದೇಶಕರು ಮೊದಲ ಭಾಗದಲ್ಲೇ ತೋರಿಸಿದ್ದಾರೆ.
ಮೊದಲನೇ ಭಾಗವನ್ನು ಪಾರ್ಟ್ 2 ನಲ್ಲಿ ತೋರಿಸುವುದಾಗಿ ಚಿತ್ರದ ಕೊನೆಯಲ್ಲಿ ಆಪರೇಷನ್ ಲಂಡನ್ ಕೆಫೆ ಎನ್ನುವ ಪುಸ್ತಕವನ್ನು ಮುಂದಿಟ್ಟು ಆ ಚಿತ್ರಕ್ಕೆ ಇದು ಮುನ್ನುಡಿ ಎಂಬುದನ್ನು ಪ್ರೇಕ್ಷಕರಿಗೆ ಮನದಟ್ಟು ಮಾಡಿದ್ದಾರೆ.

ನಿರ್ಮಾಪಕರಾದ ವಿಜಯ್ ಕುಮಾರ್ ಶೆಟ್ಟಿ, ರಮೇಶ್ ಕೊಠಾರಿ, ವಿವೇಕ್ ಶೆಟ್ಟಿ ಬಾರ್ಕೂರ್ ಹಾಗೂ ವಿಜಯ್ ಪ್ರಕಾಶ್ ಆಪರೇಷನ್ ಲಂಡನ್ ಕೆಫೆಯಂತ ಒಂದು ಒಳ್ಳೆಯ ಸಾಮಾಜಿಕ ಕಥೆಗೆ ಹಣ ವ್ಯಯಿಸಿ ಕನ್ನಡ, ಮರಾಠಿ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ನಿರ್ಮಾಣ ಮಾಡಿದ್ದಾರೆ.
ಒಟ್ಟಿನಲ್ಲಿ “ಆಪರೇಷನ್ ಲಂಡನ್ ಕೆಫೆ” ಚಿತ್ರ ಪ್ರೇಕ್ಷಕ ಕೊಟ್ಟ ಹಣಕ್ಕೆ ಮೊಸವಿಲ್ಲ ಎಂಬುದಂತು ಸತ್ಯ.











