Gatavaibhava movie review. ಪುರಾತನ ಶಾಪಕ್ಕೆ ಆಧುನಿಕ ಲವ್ ಸ್ಟೋರಿಗಳ ಗತವೈಭವ
ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ಚಿತ್ರ – ಗತವೈಭವ
ನಿರ್ಮಾಪಕರು – ದೀಪಕ್ ತಿಮ್ಮಪ್ಪ, ಸುನಿ ಸಿನಿಮಾಸ್
ನಿರ್ದೇಶನ – ಸಿಂಪಲ್ ಸುನಿ
ಛಾಯಾಗ್ರಹಣ – ವಿಲಿಯಮ್ ಡೇವಿಡ್
ಸಂಗೀತ – ಜೂಡಾ ಸ್ಯಾಂಡಿ
ಸಂಕಲನ – ಆಶಿಕ್ ಕುಸುಗೊಳ್ಳಿ
ಕಲಾವಿದರು :- ದುಶ್ಯಂತ್, ಆಶಿಕಾ ರಂಗನಾಥ್, ಸುಧಾ ಬೆಳವಾಡಿ, ಕಿಷನ್ ಬಿಲಗಲಿ, ಹೆಬ್ಬಾಳೆ ಕೃಷ್ಣ, ಕಾರ್ತಿಕ್ ರಾವ್, ಕೃಷ್ಣ ಜೋರಾಪುರ ಮುಂತಾದವರು.
ಅವಳು ಆಧುನಿಕ ಹೆಸರು ಆಧುನಿಕವಾದರೂ ಮನೆ, ಮನೆಯೊಳಗಿನ ಪರಿಕರಗಳು, ಅವಳ ಮನಸ್ಸು ಪುರಾತನ. ಪುರಾತನ ಬಣ್ಣಗಳಿಗೆ ಕುಂಚ ಹಿಡಿದು ಜೀವ ತುಂಬುವ ಹುಡುಗಿ.
ಅವನು ಪುರಾತನ ಇವನ ಹೆಸರು ಪುರಾತನವಾದರು ಅವನ ಮನೆ, ಮನಸ್ಸು, ಅಪ್ಪ ಅಮ್ಮ, ವೇಷ ಭೂಷಣ ಎಲ್ಲವೂ ಆಧುನಿಕ.
ಆಧುನಿಕ ತಂತ್ರಜ್ಞಾನದ ಮೂಲಕ ಫೇಸ್ ಬುಕ್ ಇವರಿಬ್ಬರ ಮಿಲನಕ್ಕೆ ಕನೆಕ್ಷನ್.
ಗತಕಾಲದ ನೆನಪಿನ ಸುಳಿಯ ವ್ಯಕ್ತಿಯೊಬ್ಬನ ಚಿತ್ತಾರವನ್ನರಳಿಸಿ
ಫೇಸ್ ಬುಕ್ ಮೂಲಕ ಹರಿ ಬಿಡುತ್ತಾಳೆ.
ಇದನ್ನು ನೋಡಿದ ಒಬ್ಬಾತ ಇದು ನನ್ನ ಗೆಳೆಯನನ್ನು ಹೋಲುತ್ತದೆ ಎಂಬುವಲ್ಲಿಗೆ ಮೊದಲ ಕಾರಣ ಪ್ರೇಮಪುರಾಣಕ್ಕೆ ಸಾಕ್ಷಿಯಾಗುತ್ತದೆ.

ಅಲ್ಲಿಂದ ಶುರುವಾದ ಕೌತುಕದ ಬೇಟಿಗೆ ಅಳಿಯನ ಜೊತೆ ಗೆಳೆಯ ಎಂಬಂತೆ ಕಥಾ ನಾಯಕ ಗೆಳೆಯನ ಸಹಾಯದಿಂದ ಬೆಳದಿಂಗಳ ಬಾಲೆ ಯನ್ನರಸಿ ಕಾಫಿನಾಡು ಕೊಡಗಿಗೆ ಪ್ರೇಮ ಕಸಿ ಮಾಡಲು ಬಂದಿಳಿಯುತ್ತಾನೆ ಭೂಪ.
ವಿಳಾಸ ಹುಡುಕಿ ಬಂದ ಇವನಿಗೆ ಬೆಳದಿಂಗಳೇ ಕಣ್ಣೆದುರು ಬಂದಂತಾದರೆ ಆಕೆಗೆ ತನ್ನ ಗತವೈಭವದ ಕಥೆಯ ಚಂದಿರನು ತನ್ನ ಮನೆಯಂಗಳಕ್ಕೆ ಬ್ಯಾಗ್ ಸಮೇತ ಬಂದಿಳಿದಂತಾಗುತ್ತದೆ.
ಅಲ್ಲಿಂದ ಶುರುವಾಗುವುದೇ ಜನ್ಮ ಜನ್ಮಾಂತರದ ಪ್ರೆಮ್ ಕಹಾನಿಗಳ ಗತವೈಭವ.
ಇಲ್ಲಿ ಸಿನಿಮಾ ಹೇಗಿದೆ ಎನ್ನುವುದಕ್ಕಿಂತ ನಿರ್ದೇಶಕನ ತಲೆ ಮತ್ತು ಆತನ ಆಲೋಚನೆಗಳು ಹೇಗಿವೆ ಅಂತ ನೋಡಬೇಕು.

ಸಿನಿಮಾದ ನಿರ್ವಹಣೆ, ಪಾತ್ರಗಳ ಪೋಷಣೆ, ಕಥೆಯ ನಿರೂಪಣೆ ಮತ್ತು ಸಂಭಾಷಣೆ ಎಲ್ಲವನ್ನೂ ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಗತಕಾಲದ ಕಲ್ಪನೆಯೇ ಮೆಚ್ಚುವಂತದ್ದು.
ಮೊದಲ ಬೇಟಿಯಲ್ಲೇ ತಾನು ಈ ಮೊದಲು ನಿನ್ನ ಬೇಟಿಯಾಗಿದ್ದೇನೆ ಅದು ಹಿಂದಿನ ಜನ್ಮದ ಗತಕಾಲದಲ್ಲಿ ಅದೂ ಸ್ವರ್ಗದಲ್ಲಿ ಎಂದು ಅವಳು ಹೇಳುತ್ತಿದ್ದಂತೆ ಕಥಾನಾಯಕ (ಅಂದಿಗೂ ಇಂದಿಗೂ) ಗಹಗಹಿಸಿ ನಗುತ್ತಾನೆ ಪ್ರೇಕ್ಷಕರು ಕೂಡ ನಗುವಿಗೆ ಜೊತೆಯಾಗುತ್ತಾರೆ.
ದೇವ ದಾನವರು ಸಮುದ್ರ ಮಂತನ ಮಾಡುವ ಕಾಲವದು ಸಮುದ್ರು ಮಂತನದಲ್ಲಿ ಕಲ್ಪವೃಕ್ಷ, ಕಾಮದೇನು, ಉಜ್ರೈಕಿ, ಪಾರಿಜಾತ, ಲಕ್ಷ್ಮಿ ಎಲ್ಲರ ಉಗಮದೊಂದಿಗೆ ಹಾಲಹಲವು ಅವಿರ್ಭವಿಸಿದಾಗ ತಡ ಮಾಡದೇ ಪರಶಿವನು ಎಲ್ಲಾ ಲೋಕವನ್ನು ದಹಿಸಿಬಿಡುವ ಕಾರ್ಕೋಟಕವನ್ನು ಕುಡಿದು ಕಂಟದಲ್ಲಿ ಕೂಡಿಟ್ಟುಕೊಳ್ಳುತ್ತಾರೆ.
ಅದರಲ್ಲೊಬ್ಬ ದೇವತೆಗಳ ಜೊತೆಯಲ್ಲಿ ನಾಮದೇವ ಅವನ ಸಹೋಧರಿ ದೇವಕನ್ಯೆ
ಅವಳು ದೇವಲೋಕದ ಯಾವ ಯುವಕರನ್ನು ಇಷ್ಟಪಡದೆ ಒಬ್ಬ ಅಸುರನನ್ನು ಇಷ್ಟ ಪಡುತ್ತಾಳೆ.
ಆ ರಾಕ್ಷಸ ಕುಲದ ಪ್ರಚಂಡ ಪ್ರೇಮಿಯೇ ಅವಳ ಮೊದಲ ಕ್ರಷ್. ಕೊನೆಯ ಕ್ರಷ್ ಕೂಡ ಹೌದು.
ಆಕೆಯ ಸಹೋಧರ ನಾದ ದೇವತೆಗಳೊಂದಿಗಿರುವ ನಾಮದೇವ ಆ ರಾಕ್ಷಸನನ್ನು ಸಂಹರಿಸಿ ತಂಗಿಯನ್ನು ಕಾಪಾಡುತ್ತಾನೆ. ಆಗ ಆಕೆ ಅವನ ಅಗಲಿಕೆಯಿಂದ ಅತ್ತು ಗೋಳಾಡಿ ವಿಷವನ್ನು ಸೇವಿಸಿ ಪ್ರಾಣ ಬಿಡುತ್ತಾಳೆ. ಕಾರಣ ಅವಳು ಇನ್ನೂ ಅಮೃತವನ್ನು ಕುಡಿದಿರಲಿಲ್ಲ.
ಅದರಿಂದ ಕುಪಿತಗೊಂಡ ಅವಳ ಅಣ್ಣ ಶಾಪವನ್ನು ನೀಡುತ್ತಾನೆ. ನೀವು ಯಾವ ಜನ್ಮದಲ್ಲೂ ನಿಮ್ಮಿಬ್ಬರ ಕೂಡಿಕೆಯಾಗದಿರಲಿ ಎಂದು.
ಅಲ್ಲಿಗೆ ಗತವೈಭವದ ಮೊದಲ ಜನ್ಮದ ಕಥೆ ಹೇಳಿದ ಮತ್ತು ಕೇಳಿದ ನಂತರ ನಾಯಕ ತಾನೊಂದು ಜನ್ಮದ ಅವರಿಬ್ಬರ ಟ್ರಾಜಿಡಿ ಪ್ರೇಮ್ ಕಹಾನಿ ಹೇಳುತ್ತಾನೆ. ಅದು ಪೋರ್ಚುಗೀಸರ ಕಾಲ, ಹಡಗಿನಲ್ಲಿ ತಿನ್ನಲು ಏನು ಸಿಗದಿದ್ದಾಗ ಭಾರತಕ್ಕೆ ದಾರಿ ಕಂಡು ಹಿಡಿಯಲು ವಾಸ್ಕೋಡಿಗಾಮ ನೊಂದಿಗೆ ಹಡಗಿನಲ್ಲಿ ಬರುತ್ತಾನೆ. ಬಿಕ್ಷೆ ಬೇಡುವ ಬಿಕ್ಷುಕಿಯಾಗಿ ಹಡಗು ಸೇರುವ ನಾಯಕಿ ಅಲ್ಲೂ ಟ್ರಾಜಿಡಿ ಎಂಡ್.
ಇಷ್ಟು ನೋಡುವಷ್ಟರಲ್ಲಿ
ಯಾಕೋ ಸ್ವಲ್ಪ ಬೋರ್ ಅನ್ನಿಸುತ್ತಿದೆ ಅಂದುಕೊಳ್ಳುತ್ತಿದ್ದಂತೆ
ಇಂಟರ್ ವೆಲ್ ಆಗುತ್ತದೆ.
ಸೆಕೆಂಡ್ ಆಫ್ ನಲ್ಲಿ ಪ್ರತೀ ಸೀನ್ ಬೋರ್ ಹೊಡೆಸದೇ ನೋಡಿಸಿಕೊಂಡು ಹೋಗುತ್ತದೆ
ಇದು ಎರಡನೇ ಜನ್ಮ
ಇದರಲ್ಲಿ ನಾಯಕ ಕಂಬಳ ಹೊಡೆಯುವುದರಲ್ಲಿ ನಿಸ್ಸೀಮಾ, ಹಾಗೆಯೇ ಯಾರಿಗೂ ಓದಲು ಬಾರದ ಆ ಊರಿನಲ್ಲಿ ಅಕ್ಷರವನ್ನು ಓದುವ ಹುಡುಗಿ ಇವಳೊಬ್ಬಳೆ.
ಈ ಎರಡನೇ ಜನ್ಮದ ಸೆಕೆಂಡ್ ಆಫ್ ಕಥೆ ಮೊದಲಿಂದ ಇದ್ದಿದ್ದರೆ ತುಂಬಾ ಚನ್ನಾಗಿರುತಿತ್ತು. ಅನ್ನಿಸುವುದಂತು ನಿಜ.
ಸೆಕೆಂಡ್ ಆಫ್ ತುಂಬಾ ಚನ್ನಾಗಿದೆ. ಎಮೋಷನ್, ಲವ್ ಪ್ರೊಮೋಷನ್, ಕಥೆಯ ಲಾಜಿಕ್, ನಿರೂಪಣೆಯ ಮ್ಯಾಜಿಕ್ ಎಲ್ಲವೂ ಮನಸ್ಸಿಗೆ ಇಷ್ಟವಾಗುತ್ತದೆ, ಹೃದಯಕ್ಕೆ ಹತ್ತಿರವಾಗುತ್ತದೆ.
ದುಷ್ಯಂತ್ ಮೊದಲ ಚಿತ್ರದಲ್ಲಿ ನಾಲ್ಕು ರೀತಿಯ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸಿದ್ದಾರೆ. ನಿರ್ದೇಶಕ ಸುನಿ ಹೊಸ ಕಲಾವಿದನಿಂದ ಅಭಿನಯವನ್ನು ಹೊರ ತೆಗೆದಿದ್ದಾರೆ. ಫಸ್ಟ್ ಆಫ್ ನಲ್ಲಿ ಪೋರ್ಚುಗೀಸ್ ಮತ್ತು ರಾಕ್ಷಸನ ಪಾತ್ರದಲ್ಲಿ ಅವಶ್ಯಕತೆ ಗಿಂತ ಹೆಚ್ಚೆ ಅಭಿನಯಿಸಿದ್ದಾರೆ. ಕೆಲವು ಕಡೆ ಡಾ,, ರಾಜಕುಮಾರ್ ರವರನ್ನು ಅನುಸರಿಸಲು ಪ್ರಯತ್ನಿಸಿದ್ದಾರೆ ಅನ್ನಿಸುತ್ತದೆ. ಆದರೆ ರಾಜಕುಮಾರ್ ರವರನ್ನು , ಅವರ ಅಭಿನಯವನ್ನು ಕಾಪಿ ಮಾಡಲು ಯಾರಿಗೂ ಸಾಧ್ಯವಿಲ್ಲ .
ಸೆಕೆಂಡ್ ಆಫ್ ನಲ್ಲಿ ಚನ್ನಯ್ ರಾಜನ ಪಾತ್ರದಲ್ಲಿ ಸಹಜ ಅಭಿನಯದಿಂದ ಇಷ್ಟವಾಗುತ್ತಾರೆ.
ಇನ್ನು ನಾಯಕಿಯಾಗಿ ಆಶಿಕಾ ರಂಗನಾಥ್ ನಾಲ್ಕೂ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಚಿತ್ರದ ತುಂಬಾ ಲವಲವಿಕೆಯಿಂದ ಫುಲ್ ಎನರ್ಜಿಯಿಂದ ಮಿಂಚಿದ್ದಾರೆ.
ಇನ್ನು ಚಿತ್ರದ ಸಂಗೀತ ನಿರ್ದೇಶಕ ಜ್ಯೂಡಾ ಸ್ಯಾಂಡಿ ಅದ್ಬತವಾಗಿ ಎಲ್ಲಾ ಕಾಲಘಟ್ಟದ ಕಥೆಗೆ ಸರಿ ಹೊಂದುವಂತೆ ಕಾರ್ಯ ನಿರ್ವಹಿಸಿದ್ದಾರೆ.
ಇನ್ನು ಛಾಯಾಗ್ರಾಹಕ ವಿಲಿಯಮ್ ಡೇವಿಡ್ ನಿರ್ದೇಶಕರ ಕಲ್ಪನೆಯ ಕನಸ್ಸನ್ನು ಬಹಳ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.
ಕ್ಯಾಮರಾ ಮತ್ತು ಸಂಗೀತ ಚಿತ್ರದಲ್ಲಿ ಅದ್ಬುತವಾದ ಕಾರ್ಯ ನಿರ್ವಹಿಸಿವೆ ಎನ್ನಬಹುದು.
ಚಿತ್ರದ ಎಲ್ಲಾ ಕಲಾವಿದರು ಕಿರಿ ಕಿರಿ ಅನ್ನಿಸದೇ ಬಹಳ ಅಚ್ಚುಕಟ್ಟಾಗಿ ಅವರವರ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಒಟ್ಟಿನಲ್ಲಿ ಸಿಂಪಲ್ ಸುನಿ ಚಿತ್ರಗಳು ಬೇರೆ ರೀತಿಯದ್ದೇ ಸದ್ದು ಮಾಡುತ್ತವೆ ಇದು ಕೂಡ ಅಂತದ್ದೇ ವಿಸ್ಮಯದ ಅನುಭವ ವನ್ನು ನೀಡುತ್ತದೆ.











