Marnami movie Review ಮಾರ್ನಾಮಿ ಚಿತ್ರ ವಿಮರ್ಶೆ ಮಾರ್ನಾಮಿಯಲ್ಲಿ ಪ್ರೀತಿಯ ಕೊಲೆ.
ಚಿತ್ರ – ಮಾರ್ನಾಮಿ
ನಿರ್ಮಾಪಕರು – ಶಿಲ್ಪ ನಿಶಾಂತ್, ನಿಶಾಂತ್ ಮುನಿಸ್ವಾಮಯ್ಯ
ನಿರ್ದೇಶನ – ರಿಶಿತ್ ಶೆಟ್ಟಿ
ಛಾಯಾಗ್ರಹಣ – ಶಿವ ಸೇನ
ಸಂಗೀತ – ಚರಣ್ ರಾಜ್
ಸಂಕಲನ – ಪ್ರತೀಕ್ ಶೆಟ್ಟಿ
Rating -3/5
ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ಕಲಾವಿದರು : ಸೋನು ಗೌಡ, ಋತ್ವಿಕ್ ಮಾತಾಡ್, ಚೈತ್ರ ಆಚಾರ್, ಪ್ರಕಾಶ್ ತುಮ್ಮಿನಾಡ್, ಜ್ಯೋತಿಶ್ ಶೆಟ್ಟಿ, ಸುಮನ್, ರಾಧಾ ರಾಮಚಂದ್ರ, ಸ್ವರಾಜ್ ಶೆಟ್ಟಿ, ಮುಂತಾದವರು.
ಅವನೊಬ್ಬ ತಂದೆ ತಾಯಿ ಇಲ್ಲದ ಅನಾಥ ಅವನ ಹೆಸರು ಚೇತು ( ಋತ್ವಿಕ್ ಮಾತಾಡ್) ತಾಯಿ (ಸೋನು ಗೌಡ) ಅವನು ಚಿಕ್ಕವನಿದ್ದಾಗಲೇ ಖಾಯಿಲೆಯಿಂದ ಸತ್ತು ಹೋಗಿರುತ್ತಾಳೆ. ಮಾವ ಮತ್ತು ಅತ್ತೆಯೇ ಅವನಿಗೆ ಅಪ್ಪ, ಅಮ್ಮ.
ಇದು ಕಡಲ ಕಿನಾರೆಯ ಪರಿಸರದಲ್ಲಿ ನಡೆವ ಕಥೆ.
ಅದೊಂದು ಮಾರ್ನಾಮಿ ಹಬ್ಬದ ದಿನ ಹುಲಿ ವೇಷದ ಡ್ಯಾನ್ಸ್ ನಲ್ಲಿ ನಡೆದ ಒಂದು ಸಣ್ಣ ಗಲಾಟೆ ಅಲ್ಲಿಂದ ಶುರುವಾದ ಹೊಡೆದಾಟದ ವೈರತ್ವ ಅದು ಮುಂದಿನ ಮಾರ್ನಾಮಿ ಹಬ್ಬದ ಹುಲಿ ಡ್ಯಾನ್ಸ್ ವರೆಗೆ ಮುಂದುವರೆಯುತ್ತದೆ.
ಕಥಾನಾಯಕ ಚೇತು ಈ ಹೊಡೆದಾಟದಿಂದ ಊರಿನ ಕೆಲವು ದುಷ್ಟರನ್ನು ಎದುರಾಕಿಕೊಳ್ಳುತ್ತಾನೆ. ಜೊತೆ ಜೊತೆಗೆ ಹುಡುಗಿಯೊಬ್ಬಳು (ಚೈತ್ರ ಆಚಾರ್) ಪ್ರೀತಿ ಮಾಡು ಎಂದು ಹಿಂದೆ ಬೀಳುತ್ತಾಳೆ. ಮೊದ ಮೊದಲಿಗೆ ಚೇತು ತಿರಸ್ಕರಿಸಿದರು, ಅವಳ ಪ್ರೀತಿಯ ಮಾತುಗಳಿಗೆ ಶರಣಾಗುತ್ತಾನೆ. ಆ ಹುಡುಗಿಯ ಅಪ್ಪ ಇವನೊಬ್ಬ ರೌಡಿ ಎಂಬ ಕಾರಣಕ್ಕೆ ಒಪ್ಪುವುದಿಲ್ಲ.
ಕೊನೆಗೆ ಕಥಾ ನಾಯಕಿ ಮನೆಯವರನ್ನು ಧಿಕ್ಕರಿಸಿ ಮನೆ ಬಿಟ್ಟು ಬಂದು ಚೇತುವನ್ನು ಮದುವೆಯಾಗುತ್ತಾಳೆ. ನಂತರ ಅವರಿಬ್ಬರ ಜೀವನ ಸುಖಮಯವಾಗಿ ಅನ್ಯೋನ್ಯತೆ ಇಂದಿರುತ್ತದೆ.
ಅವಳಿಗೆ ಚೇತು ಮಾತುಕೊಡುತ್ತಾನೆ ಅವಳ ಪ್ರಸವದ ಸಮಯದಲ್ಲಿ ಜೊತೆಗಿರುತ್ತೇನೆ ಎಂದು. ಆದರೆ ಆ ಊರಿನ ದುಷ್ಟರಿಂದ ಒಂದು ಕೊಲೆಯಾಗುತ್ತದೆ. ಆ ಕೊಲೆ ಚೇತುಗೆ ಸಂಬಂಧವಿಲ್ಲದಿದ್ದರು ಶಡ್ಯಂತರದಿಂದ ಜೈಲಿಗೆ ಹೋಗಬೇಕಾಗುತ್ತದೆ.
ಹೆಂಡತಿ ಮಗು ಹಡೆಯುವ ಸಮಯದಲ್ಲಿ ಚೇತು ಇರಲು ಆಗುವುದಿಲ್ಲ.
ಅಲ್ಲಿಂದ ಚೇತು ದಾಂಪತ್ಯ ಜೀವನದಲ್ಲಿ ಅಲ್ಲೋಲ ಕಲ್ಲೋಲ ವಾಗುತ್ತದೆ.
ಇದೊಂದು ಭಾವನಾತ್ಮಕವಾದ ಕೌಟುಂಬಿಕ ಕಥೆ.
ಚಿತ್ರದ ಕೊನೆಯಲ್ಲಿ ಮಾರ್ನಾಮಿ ಯಂದು ಏನಾಗುತ್ತದೆ. ಎನ್ನುವುದೇ ಚಿತ್ರದ ಮುಖ್ಯ ಘಟ್ಟ.











