Mark movie Reviw. ಮಾರ್ಕ್ ಚಿತ್ರ ವಿಮರ್ಶೆ
ಚಿತ್ರ – ಮಾರ್ಕ್ Mark
ನಿರ್ಮಾಪಕರು -ಅರ್ಜುನ್ ತ್ಯಾಗರಾಜನ್, ಸಂದಿಲ್ ತ್ಯಾಗರಾಜನ್, ಟಿ.ಜಿ. ತ್ಯಾಗರಾಜನ್,
ಸಹ ನಿರ್ಮಾಪಕರು – ಸಾಯಿ ಸಿದ್ಧಾರ್ಥ, ಶರವಣನ್ ಜಿ.
ನಿರ್ದೇಶನ – ವಿಜಯ್ ಕಾರ್ತಿಕೇಯನ್
ಛಾಯಾಗ್ರಹಣ – ಶೇಖರ್ ಚಂದ್ರ
ಸಂಗೀತ – ಬಿ. ಅಜನೀಶ್ ಲೋಕನಾಥ್
ಸಂಕಲನ – ಎಸ್. ಆರ್. ಗಣೇಶ್ ಬಾಬು
Rating -3.5/5
ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ಕಲಾವಿದರು – ಸುದೀಪ್, ನವೀನ್ ಚಂದ್ರ, ಗೋಪಾಲ್ ಕೃಷ್ಣ ದೇಶಪಾಂಡೆ, ದೀಪ್ಶಿಕಾ, ರೋಷಿಣಿ ಪ್ರಕಾಶ್, ಗುರು ಸೋಮಸುಂದರಮ್, ಡ್ರ್ಯಾಗನ್ ಮಂಜು, ಅರ್ಚನ ಕೊಟ್ಟಿಗೆ, ನಿಶ್ವಿಕಾ ನಾಯ್ಡು, ಮಹಂತೇಶ್ ಹೀರೆಮಠ್ ಮುಂತಾದವರು.

ಕಳೆದ ವರ್ಷ “ಮ್ಯಾಕ್ಸ್” ಚಿತ್ರ ನೋಡಿ ಪ್ರೇಕ್ಷಕರು ಮೆಚ್ಚಿಕೊಂಡಿದ್ದರು.
ಈಗ ಮತ್ತದೇ ಶೈಲಿಯ ಮತ್ತೊಂದು “ಮಾರ್ಕ್” ಚಿತ್ರ ತೆರೆ ಕಂಡಿದೆ.
ಮ್ಯಾಕ್ಸ್ ಚಿತ್ರದ ಕಥೆಯಂತೆ, ಅದರ ಪಾತ್ರಗಳ ಗೆಟಪ್ಪು, ಅದೇ ಕತ್ತಲೆಯೊಳಗಿನ ಭೂಗತ ಲೋಕದ ಆತಂಕದ ಪ್ರಪಂಚವನ್ನು ನಿರ್ದೇಶಕ ವಿಜಯ್ ಕಾರ್ತಿಕೇಯನ್ ಮತ್ತೆ ತೆರೆಯ ಮೇಲೆ ಕಟ್ಟಿ ಕೊಟ್ಟಿದ್ದಾರೆ.
ಸುದೀಪ್ ಯೂನಿಫಾರಂ ಇಲ್ಲದ, ಯಾರಿಗೂ, ಯಾವುದೇ ಸನ್ನಿವೇಷಕ್ಕೂ ಹೆದರದ, ಎಲ್ಲೆಡೆ ನುಗ್ಗಿ ದುಷ್ಟ ಸಾಮ್ರಾಜ್ಜವನ್ನು ಧ್ವಂಸ ಮಾಡುವ, ಸಸ್ಪೆಂಡ್ ಆಗಿರುವ ACP ಮಾರ್ಕ್ ಪಾತ್ರದಲ್ಲಿ ಬಹಳ ದಣಿದಿದ್ದಾರೆ. ಹಾಗೂ ಪಾತ್ರದೊಳಗೆ ಲೀನವಾಗಿ ಎಲ್ಲವನ್ನು ಹೆಗಲಮೇಲೆ ಹೊತ್ತು ನಿಭಾಯಿಸಿದ್ದಾರೆ.

ಪೋಲೀಸ್ ಠಾಣೆಯೊಳಗೆ ಶುರುವಾಗುವ ಗಲಾಟೆ, ಹಾಗೂ ಭಾರಿ ಮಳೆಯಿಂದಾಗಿ ಡ್ಯಾಮ್ ಗಳ ಗೇಟನ್ನು ತೆಗೆಯಲಾಗುವುದು ಎಚ್ಚರಿಕೆ ಎಂಬ ನ್ಯೂಸ್ ಧ್ವನಿಯೊಂದಿಗೆ ಶುರುವಾಗುವ ಚಿತ್ರ ಮಾರ್ಕ್ ಕೊನೆಯವರಿಗೂ ಅಲ್ಲಲ್ಲಿ ನಿಂತು ವೇಗವಾಗಿ ಹೊರಡುತ್ತದೆ.
ಒಂತರಾ ಟ್ರಾಫಿಕ್ ಸಿಗ್ನಲ್ ಹಾಗೆ.
ಒಬ್ಬ ಮಹಿಳಾ ಮುಖ್ಯಮಂತ್ರಿ ಆಸ್ಪತ್ರೆಯಲ್ಲಿ ICU ನಲ್ಲಿ ಮಲಗಿದ್ದಾಗ ಒಂದು ಸಹಿಗಾಗಿ ಕೊಲೆ ಮಾಡಿ ಇನ್ನು ಬದುಕಿದ್ದಾರೆ ಎಂದು ಹೊರಗಿನ ಪ್ರಪಂಚಕ್ಕೆ ಸುದ್ದಿ ರವಾನಿಸುತ್ತಾರೆ ಮುಂದುನ CM ಆಗುವ ಕನಸು, ಬಯಕೆ ಹೊಂದಿದ ಆದಿಕೇಷವ.

ಇಲ್ಕಿ ಒಂದುಕಡೆ ಮಕ್ಕಳ ಅಪಹರಣ ಹಾಗೂ ರಾಜಕೀಯ ಕುತಂತ್ರಗಳ ನಡುವೆ ಮನೆಯವರಿಗೆ ಹೆದರಿ ಹೋಡಿಹೋದ ಜೋಡಿಯ ಪ್ರೇಮಕಥೆಯನ್ನು ಹೆಣೆಯಲಾಗಿದೆ. CM ಕೊಲೆಯ ವೀಡಿಯೋವನ್ನು ಒಬ್ಬ ಡಾಕ್ಟರ್ ಮಾಡಿರುತ್ತಾನೆ, ಅದನ್ನು ಮತ್ತೊಬ್ಬ ಮಾಜಿ CMಗೆ ರವಾನಿಸುವಷ್ಟರಲ್ಲಿ ಬ್ಯಾಟರಿ ಖಾಲಿಯಾಗಿ ಮೊಬೈಲ್ ಸ್ವಿಚ್ಡ್ ಆಫ್ ಆಗುತ್ತದೆ. ಆ ಮೊಬೈಲ್ ಸಮೇತ ಡಾಕ್ಟರ್ ಮಗು ಕಾಣೆಯಾಗುತ್ತದೆ. ಮೊಬೈಲ್ ಹಿಂದೆ ಕಥೆಯ ಓಟ ಸಾಗುತ್ತದೆ.
ಒಂದುಕಡೆ ಅಪಹರಣವಾಗಿ ಪ್ರಾಣಾಪಾಯದಲ್ಲಿ ಸಿಲುಕಿರುವ ಒಂದಷ್ಟು ಮಕ್ಕಳು, ಓಡಿ ಹೋಗಿ ಭೂಗತ ಲೋಕದೊಳಗೆ ಸಮಸ್ಯೆಯಲ್ಲಿ ಸಿಕ್ಕಿಕೊಂಡ ಪ್ರೇಮಿಗಳು,
ಓಡಿಹೋದ ತಮ್ಮನಿಗಾಗಿ ಹುಡುಕುತ್ತಾ, ತನ್ನ ತಮ್ಮನಿಗೆ ಯಾರು ಸಹಾಯ ಮಾಡಿದ್ರು ಅವರ ಚರ್ಮ ಸುಲಿಸಿ ನೇಣು ಬಿಗಿದು ಅಬ್ಬರಿಸುವ ಭಯಂಕರ ನಟೋರಿಯಸ್ ಅಪ್ಪ ಮಕ್ಕಳು,
ಮೋಸದಿಂದ ಕೊಲೆ ಮಾಡಿ ಮುಖ್ಯಮಾಂತ್ರಿ ಆಗಲು ಹೊರಟ ರಾಜಕೀಯ ಕುತಂತ್ರಿಗಳ ತಂಡ,
ಜೊತೆಯಲ್ಲೇ ಇದ್ದು ಭೂಗತ ಲೋಕದ ನಂಟಿನಿಂದ ಮೋಸ ಮಾಡುವ ಇಲಾಖೆಯವರು. ಇದನ್ನೆಲ್ಲಾ ನಾಲ್ಕಾರು ಜೂನಿಯರ್ಸ್ ಗಳ ತಂಡವನ್ನು ಕಟ್ಟಿಕೊಂಡು ಹೋರಾಡುವ ಕಥಾ ನಾಯಕ “ಮಾರ್ಕ್”
ಚಿತ್ರ ಕತ್ತಲಲ್ಲೇ ಬಹುತೇಕ ನಡೆಯುವುದಾದರಿಂದ
ಛಾಯಾಗ್ರಾಹಕ ಶೇಖರ್ ಚಂದ್ರ ತಮ್ಮ ಕೆಲಸಕ್ಕೆ ನ್ಯಾಯ ಒದಗಿಸಿದ್ದಾರೆ. ಎಲ್ಲಾ ದೃಶ್ಯಗಳಗೂ ನೈಜತೆಯ ಟಚ್ ಕೊಟ್ಟಿದ್ದಾರೆ.
ಇನ್ನೂ ಅಜನೀಶ್ ಲೋಕನಾಥ್ ಕ್ರೈಂ ಥ್ರಿಲ್ಲರ್ ಕಥೆಯಾದ್ದರಿಂದ ಸಂಗೀತವನ್ನು ಬಹಳ ಚನ್ನಾಗಿ ಕಥೆಯೊಂದಿಗೆ ಬೆರೆಸಿದ್ದಾರೆ.
ಸುದೀಪ್ ಫುಲ್ ಎನರ್ಜಿಯೊಂದಿಗೆ ತೆರೆಯ ಮೇಲೆಮಿಂಚಿದ್ದಾರೆ ಜೊತೆಗೆ ಕಥೆಗೆ ಅನುಗುಣವಾಗಿ ಬೆವರು, ರಕ್ತ ಹರಿಸಿದ್ದಾರೆ.
ಚಿತ್ರದುದ್ದಕ್ಕೂ ಕುತೂಹಲದಿಂದ ಕೂಡಿದೆ.
CM ಕೊಲೆ ಕೇಸು ಏನಾಗುತ್ತದೆ, ಮುಂದಿನ CM ಯಾರಾಗುತ್ತಾರೆ, ಮೊಬೈಲ್ ನಲ್ಲಿದ್ದ ಕೊಲೆಯ ಸಾಕ್ಷಿ ಏನಾಗುತ್ತದೆ, ಅಪಹರಣವಾಗಿ ಪ್ರಾಣಾಪಾಯಕ್ಕೆ ಸಿಲುಕಿದ ಮಕ್ಕಳು ಏನಾಗುತ್ತಾರೆ, ಓಡಿ ಹೋದ ಜೋಡಿಗಳು ಏನಾಗುತ್ತಾರೆ, ಕಟುಕ, ರೌಡಿ ಸಾಮ್ರಾಜ್ಯದ ಅಧಿಪತಿಗಳಾದ ಅಪ್ಪ ಮಕ್ಕಳು ಏನಾಗುತ್ತಾರೆ ಎಂದು ತಿಳಿಯಬೇಕಾದರೆ ಮಾರ್ಕ್ ಚಿತ್ರ ನೋಡಬೇಕು.











