Mahavatara Narashimmha movie Review. ನರ ನಾಡಿಗಳ ಜುಮ್ಮೆನ್ನಿಸಿ, ಭಕ್ತಿ ಭಾವ ತುಂಬುವ ಚಿತ್ರ ಮಹಾವತಾರ ನರಸಿಂಹ

ಮಹಾವತಾರ ನರಸಿಂಹ ಧಾರ್ಮಿಕ ಇತಿಹಾಸದ ಒಂದು ಅದ್ಬುತ ಪ್ರಪಂಚ

ಇಂದಿನ ಸಮಾಜಕ್ಕೆ, ಇಂದಿನ ಪೀಳಿಗೆಗೆ ಇಂತಹ ಚಿತ್ರಗಳು ಅವಶ್ಯಕವಾಗಿ ಬೇಕಾಗಿದೆ.

ನಮ್ಮ ಧಾರ್ಮಿಕ ಆಚಾರ ವಿಚಾರಗಳ ಬಗ್ಗೆ, ನಮ್ಮ ಪುರಾಣದ ಇತಿಹಾಸಗಳ ಬಗ್ಗೆ ತಿಳಿಸುವ ಪ್ರಯತ್ನಗಳನ್ನು ಸಿನಿಮಾಗಳ ಮುಖಾಂತರ ಪರಿಚಯಿಸುವ ಕಾರ್ಯ ಶ್ಲಾಘನೀಯ.

ಅಂತಹ ಒಂದು ಪ್ರಯತ್ನ ಮಾಡಿರುವ ಚಿತ್ರ ಮಹಾವತಾರ ನರಸಿಂಹ ನಿಜಕ್ಕೂ ಅದ್ಬುತವಾಗಿ ಮೂಡಿ ಬಂದಿದೆ.

ಹಾಗೆಯೇ ಚಿತ್ರ ಯಶಸ್ವಿಯಾಗಿ ಎಲ್ಲಾ ಕಡೆ ಪ್ರದರ್ಶನ ನೀಡುತ್ತಿದೆ.

ಇದೊಂದು ಅನಿಮೇಷನ್‌ ಚಿತ್ರವಾಗಿದ್ದು, ಲೋಕ ಕಂಟಕರಾದ ಹಿರಣ್ಯ ಕಷಿಪು, ಹಿರಣ್ಯಾಕ್ಷ ಎಂಬ ಇಬ್ಬರು ರಾಕ್ಷಸರ ಸಂಹಾರ‌ಮಾಡಿ, ಮುಗ್ದ ಬಾಲಕ, ಹರಿಭಕ್ತ ಪ್ರಹಲ್ಲಾದರನ್ನು ರಕ್ಷಿಸುವ ಸಲುವಾಗಿ ಶ್ರೀಮನ್ನಾರಾಯಣ ನರಸಿಂಹನಾಗಿ ಜನ್ಮವೆತ್ತುವ ಕಥೆಯೇ “ಮಹಾವತಾರ ನರಸಿಂಹ” ಚಿತ್ರ.

ನಿರ್ದೇಶಕ ಅಶ್ವಿನ್ ಕುಮಾರ್ ಜೊತೆಗೆ
ಕಥೆ, ಚಿತ್ರಕಥೆಯನ್ನು ಜಯಪೂರ್ಣದಾಸ್ ಹಾಗೂ ರುದ್ರ ಪ್ರತಾಪ್ ಗೋಷ್ ಬರೆದಿದ್ದಾರೆ.

ನಿರ್ದೇಶಕರು ಇದು ಪುರಾಣ ಕಥೆಯಾಗಿದ್ದು ಅದಕ್ಕೆ ಹೆಚ್ಚು ಚ್ಯುತಿ ಬಾರದಂತೆ ನಿರೂಪಿಸಿದ್ದಾರಾದರು ಅಲ್ಲಲ್ಲಿ ಲೋಪ ದೋಷಗಳಂತು ಇಲ್ಲ ಅಂತ ಹೇಳಲಾಗುವುದಿಲ್ಲ.

ಚಿತ್ರದ ಪ್ರಾರಂಭದಲ್ಲೇ ಮುನಿ ದಂಪತಿಗಳು ಸೇರುವ ಸಮಯ ಮೂಲ ಕಥೆಯಲ್ಲಿ ಗ್ರಹಣ, ಭೂಕಂಪ, ಪ್ರಳಯದಲ್ಲಿ ಗಂಡ ಹೆಂಡತಿ ಸೇರಿದರೆ ರಾಕ್ಷಸ ಗುಣದ, ಲೋಕ ಕಂಟಕರು ಜನಿಸುತ್ತಾರೆ ಎಂಬ ಪ್ರತೀತಿಯ ಮಾತುಗಳಿವೆ ಆದರೆ ಇಲ್ಲಿ ಸಂಧ್ಯಾವಂದನೆಯ ಪೂಜೆಯ ಸಮಯದಲ್ಲಿ ಋಷಿ ಮುನಿ ದಂಪತಿಗಳು ಒಟ್ಟಿಗೆ ಸೇರಿದ್ದರಿಂದ ರಾಕ್ಷಸ ಮಕ್ಕಳು ಹುಟ್ಟುದ್ದಾರೆ ಎಂಬುದಾಗಿ ಬಿಂಬಿಸಿದ್ದಾರೆ. ಹಾಗೂ ಕನ್ನಡದಲ್ಲಿ ಡಬ್ ಮಾಡಿದ್ದಾರೆ, ಅಲ್ಲಲ್ಲಿ ಸಂಭಾಷಣೆಯಲ್ಲಿ ಲೋಪಗಳು ಎದ್ದು ಕಾಣುತ್ತದೆ. ಅದು ಬಿಟ್ಟರೆ ಒಂದು ಒಳ್ಳೆಯ ದೃಷ್ಯ ಕಾವ್ಯವನ್ನು ಮನಸ್ಸು ಮತ್ತು ಕಣ್ತುಂಭಿಕೊಳ್ಳಬಹುದು.

ಅಶ್ವಿನ್ ಕುಮಾರ್ ಹಾಗೂ ಅಜಯ್ ವರ್ಮಾ ಚಿತ್ರಕ್ಕೆ ಎಲ್ಲೆಲ್ಲಿ ಕತ್ತರಿ ಆಡಿಸಬೇಕೂ ಅಲ್ಲಿ ಆಡಿಸಿ ಸಂಕಲನದ ಕೆಲಸವನ್ನು ಜವಾಬ್ದಾರಿಯಾಗಿ ನಿಭಾಯಿಸಿದ್ದಾರೆ.


ದುರ್ಗಾ ಬಲುಜಾ, ರಿಚಾ ಅರೋರ, ಚರಿಸ್ಟೈನ್ ಕ್ಯಾರಿಲೋ, ಚೈತನ್ಯ ದೇಸಾಯಿ ಇನ್ನೂ ಮುಂತಾದವರು
ನಿರ್ಮಾಣವನ್ನು ಮಾಡಿದ್ದಾರೆ.
ಹಾಗೂ ಡಿಷ್ಟ್ರಿಬ್ಯೂಷನ್ ಜವಾಬ್ಧಾರಿ ಹೊತ್ತಿದ್ದು ಕನ್ನಡದ ಹೆಮ್ಮೆಯ  ಹೊಂಬಾಳೆ ಸಂಸ್ಥೆ.

ಸ್ಯಾಮ್ C.S. ಸಂಗೀತ ಮಧುರವಾಗಿರುವುದರ ಜೊತೆಗೆ ನರಸಿಂಹ ಹಾಗೂ ವರಹಾವತಾರದ ಸಮಯದಲ್ಲಿ ಎದೆ ಝೆಲ್ಲೆನಿಸುವಂತ ಹಿನ್ನೆಲೆ ಸಂಗೀತ ನೀಡಿದ್ದಾರೆ.

ಚಿತ್ರ ಯಶಸ್ವಿಯಾಗಿ ಎಲ್ಲಾ ಸ್ಕ್ರೀನ್ ಗಳಲ್ಲಿ ಪ್ರದರ್ಶನ ವಾಗುತ್ತಿದೆ. ಇನ್ನೊಂದು ವಿಶೇಷವೆಂದರೆ ಇದು ಥ್ರೀಡಿ ಸಿನಿಮಾವಾಗಿದ್ದು ಪ್ರೇಕ್ಷಕರಿಗೆ ಸಿನಿಮಾ ಮತ್ತಷ್ಟು ಹತ್ತಿರವಾಗಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor