Maggi pustaka movie review cast and crew ಮಗ್ಗಿ ಪುಸ್ತಕ ಇದು ಬದುಕಿನ ಲೆಕ್ಕಾಚಾರ

ಚಿತ್ರ –  ಮಗ್ಗಿ ಪುಸ್ತಕ
ನಿರ್ಮಾಪಕರು – ಚಿನ್ನಸ್ವಾಮಿ ಯತಿರಾಜ್.
ನಿರ್ದೇಶನ –  ಹರಿವರಾಸನಮ್
ಸಂಗೀತ –  ಯಶಸ್ ಏಕಲವ್ಯ
ಛಾಯಾಗ್ರಹಣ – MU. ನಂದಕುಮಾರ್
ಸಂಕಲನ –  ಎ. ಶಿವಕುಮಾರ್

Rating -3/5

ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ

ಕಲಾವಿದರು : ಗಿರಿಜಾ ಲೋಕೇಶ್, ಶೋಭರಾಜ್, ರಾಜ ಬಲವಾಡಿ, ಕೃಷ್ಣ ಮಹೇಶ್,  ರಂಜನ್ ಕಾಸರಗೋಡು, ರಣ್ವಿ ಶೇಕರ್, ರಕ್ಷಾಗೌಡ, ಮೈಸೂರು ರಮಾನಂದ್, ಮೇಘಶ್ರೀ ಕನ್ನಡತಿ, ಮುಂತಾದವರು.

ಮಗ್ಗೀ ಪುಸ್ತಕ” ಕನ್ನಡ ಚಲನಚಿತ್ರವು ಕೊರೊನಾ ಕಾಲದಲ್ಲಿ ಬಡ ಕುಟುಂಬಗಳ ಸಂಕಷ್ಟಗಳು ಮತ್ತು ಮೊಬೈಲ್ ಬಳಕೆಯ ಪರಿಣಾಮಗಳನ್ನು ಕೇಂದ್ರೀಕರಿಸಿದ್ದು, ನೈಜ ಘಟನೆಗಳಿಂದ ಪ್ರೇರಿತವಾಗಿದೆ. ಕಥೆಯ ಸಾರಾಂಶ ಚಿತ್ರವು ಭಾಗ್ಯ ಎಂಬ ಹೆಣ್ಣುಮಗುವಿನ ಕುಟುಂಬದ ಕಥೆಯನ್ನು ಹೊಂದಿದ್ದು, ಆನ್‌ಲೈನ್ ತರಗತಿಗಾಗಿ ಮೊಬೈಲ್ ಖರೀದಿಸುವ ಸವಾಲುಗಳು, ಅದರಿಂದ ಉಂಟಾಗುವ ಅಪಾಯಗಳು ಮತ್ತು ಜೀವನದ ಸಂಘರ್ಷಗಳನ್ನು ತೆರೆದಿಡುತ್ತದೆ. ಮಗ್ಗಿ ಪುಸ್ತಕವು ಜೀವನದ ಲೆಕ್ಕಾಚಾರಕ್ಕೆ ರೂಪಕವಾಗಿದೆ.

ರಕ್ಷಾ ಗೌಡಾ ಗಮನ ಸೆಳೆದಿದ್ದಾರೆ, ಗಿರಿಜಾ ಲೋಕೇಶ್ ಮತ್ತು ಮೈಸೂರು ರಾಮಾನಂದ್ ಅಭಿನಯದಲ್ಲಿ ಜನ ಸೆಳೆಯುತ್ತಾರೆ.

M.P. ಫಿಲಂಸ್ ರವರು ಈ ಚಿತ್ರವನ್ನು ರಾಜ್ಯದಾದ್ಯಂತ ಬಿಡುಗಡೆ ಮಾಡಿದ್ದಾರೆ. ಈ ಸಂಸ್ಥೆಯಿಂದ ಈ ಎರಡೇ ಚಿತ್ರ ಇದಾಗಿದೆ.


ಅದೊಂದು ಬಡ ಕುಟುಂಬ, ಅಪ್ಪನಿಗೆ‌ ಮಗಳನ್ನು ಓದಿಸಬೇಕು  ಸಮಾಜಕ್ಕೆ ಮಗಳನ್ನು ಕೊಡುಗೆಯಾಗಿ ಕೊಡಬೇಕು ಎನ್ನುವುದು ಅಪ್ಪನ ಮೂಲ ಉದ್ದೇಶ.
ಆದರೆ ಅಪ್ಪ ಮಗಳು ಓದುತಿದ್ದಂತೆ ಕಾಯಿಲೆಯಿಂದ ಸಾಯುತ್ತಾನೆ, ಆದರೆ ನಂತರ ಆ ಕುಟುಂಬದ ಗತಿ ಏನು. ಅನ್ನುವುದೇ ಕಥೆ, ಅದೇ ಸಮಯಕ್ಕೆ ಕೊರೋನ ವಕ್ಕರಿಸಿ ಕೊಳ್ಳುತ್ತದೆ. ಅಲ್ಲಿಂದ ದೇಶದ ಎಲ್ಲಾ ಮಕ್ಕಳಿಗೆ ಮೊಬೈಲ್ ಕೈಗೆ
ಬರುತ್ತದೆ. ಆದರೆ ಈ ಕುಟುಂಬಕ್ಕೆ ಮೂಬೈಲ್ ತೆಗೆದು ಕೊಳ್ಳಲು ಆಗುವುದಿಲ್ಲ. ಆ ಮೊಬೈಲ್ ಗಾಗಿ ಮೂರು ಜನ ಮಕ್ಕಳ ತಾಯಿ ಪಡುವ ಜಷ್ಟಗಕಲು ನಿಜಕ್ಕೂ ಕಣ್ಣಲ್ಲಿ ನೀರು ಬರುವ ಹಾಗೆ ನಿರ್ದೇಶಕ ಹರಿವರಾಸನಮ್  ಚಿತ್ರವನ್ನು ನೈಜವಾಗಿ ಕಟ್ಟಿಕೊಟ್ಟಿದ್ದಾರೆ.

ಒಟ್ಟಿನಲ್ಲಿ ಚಿತ್ರ ತುಂಬಾ ಮನಸ್ಸಿಗೆ ಮುಟ್ಟುವಂತ ಒಳ್ಳೆಯ ಚಿತ್ರವಾಗಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor