Kuladalli kelyavudo movie review. ಕುಲದಲ್ಲಿ ಕೀಳ್ಯಾವುದೋ ಚಿತ್ರ ವಿಮರ್ಶೆ.Rating – 3/5 ಶತ ಶತಮಾನಗಳ ಜಾತೀಯತೆಯ ದಳ್ಳುರಿಯ ಬೆಂಕಿಯಲ್ಲಿ ಬೆಂದವರ ಕಥೆ
ಚಿತ್ರ ವಿಮರ್ಶೆ – “ಕುಲದಲ್ಲಿ ಕೀಳ್ಯಾವುದೋ”
Rating – 3/5.
ಚಿತ್ರ: “ಕುಲದಲ್ಲಿ ಕೀಳ್ಯಾವುದೋ”
ನಿರ್ಮಾಣ: ಸಂತೋಷ್ ಕುಮಾರ್ ಎ.ಕೆ., ವಿದ್ಯಾ
ನಿರ್ದೇಶನ: ಕೆ. ರಾಮ್ ನಾರಾಯಣ್
ಸಂಗೀತ : ಮನೋಮೂರ್ತಿ
ಛಾಯಾಗ್ರಹಣ : ಮನು ಬಿಕೆ.
ಸಂಕಲನ : ದೀಪಕ್ ಸಿ.ಎಸ್.
ಕಲಾವಿದರು :- ಮಡೆನೂರು ಮನು, ಮೌನ ಗುಡ್ಡೆ ಮನೆ, ತಬಲನಾಣಿ, ಶರತ್ ಲೋಹಿತಾಶ್ವ, ಕರಿಸುಬ್ಬು, ಯೋಗರಾಜ್ ಭಟ್, ಸೊನೇಲ್ ಮಾಂತ್ಯಾರೋ, ಶ್ರೀನಿವಾಸ ಭೈರವ, ಭೀಮ ಮಂಜು ಮುಂತಾದವರು.
ಶತ ಶತಮಾನಗಳ ಜಾತೀಯತೆಯ ದಳ್ಳುರಿಯ ಬೆಂಕಿಯಲ್ಲಿ ಬೆಂದವರ ಕಥೆ
ಅದೊಂದು ಕಾಡು, ಆ ಕಾಡನ್ನೇ ನಂಬಿ ಬದುಕಿದ್ದ ಜನರನ್ನು ಕಾಡಿಂದ ಹೊರ ಹಾಕಿದ ಸರ್ಕಾರ ಅವರ ಮುಂದಿನ ಬದುಕನ್ನು ಕಟ್ಟಿಕೊಡುವಲ್ಲಿ ಅಸಡ್ಡೆ ತೋರುತ್ತದೆ. ಅಲೆಮಾರಿಗಳಾಗಿ ಅಲೆಯುತ್ತಾ, ತಮಟೆ ಬಾರಿಸುವ ಹಾಗೂ ಗಿಡ ಮೂಲಿಕೆಗಳಿಂದ ತಯಾರು ಮಾಡಿದೆ ಕೂದಲು ಎಣ್ಣೆ ( ಕೇಶ ತೈಲ ) ತಯಾರು ಮಾಡುವ ಈ ಜನಾಂಗಕ್ಕೆ ನಾಯಕನಾಗಿ ಮಡೆನೂರು ಮನು ಸರ್ಕಾರ, ವ್ಯವಸ್ಥೆ, ಜಾತಿ ಧರ್ಮಗಳ ವಿರುದ್ಧ ಹೋರಾಡಿ ತನ್ನವರಿಗಾಗಿ ನ್ಯಾಯ ಕೊಡಿಸುವ ಪಾತ್ರದಲ್ಲಿ ಮನು ಚನ್ನಾಗಿ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೇ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಹಾಗೇ ನಾಯಕಿಯಾಗಿ ಅಲೆಮಾರಿಯಾಗಿ ಅಭಿನಯಿಸಿದ್ದಾರೆ ಮೌನ ಗುಡ್ಡೇಮನೆ.
ಈಗಾಗಲೇ ರಾಮಾಚಾರಿ ಧಾರವಾಹಿಯ ಮುಖಾಂತರ ಜನ ಮನ ಸೆಳೆದಿದ್ದ ಮೌನ ಗುಡ್ಡೇಮನೆ ಈಗ ಬೆಳ್ಳಿತೆರೆಯ ಮೇಲೆ ಮೊದಲ ಬಾರಿಗೆ ನಾಯಕಿಯಾಗಿ ಅಭಿನಯಿಸಿದ್ದಾರೆ.

ನಿರ್ದೇಶಕ ರಾಮ್ ನಾರಾಯಣ್ ಈಗಾಗಲೇ ವಿಭಿನ್ನ ಕಥೆಗಳನ್ನು ಪ್ರೇಕ್ಷಕರ ಮುಂದೆ ಇಟ್ಟು ಯಶಸ್ವಿ ಚಿತ್ರಗಳ ನಿರ್ದೇಶಕ ಎನಿಸಿಕೊಂಡಿದ್ದ ರಾಮ್ ನಾರಾಯಣ್ ಈಗ ಕುಲದಲ್ಲಿ ಕೀಳ್ಯಾವುದೋ ಚಿತ್ರದ ಮೂಲಕ ಬಿದುರು ಬಂಡೆ ಬುಡಕಟ್ಟು ಜನಾಂಗದ ಬವಣೆ ಹಾಗೂ ಜಾತಿಯತೆಯ ಬಗ್ಗೆ ಧ್ವನಿ ಎತ್ತಿದ್ದಾರೆ.
ನಿರ್ದೇಶಕ ಯೋಗರಾಜ್ ಭಟ್ಟರ ಕಥೆಯನ್ನು ತೆರೆಯ ಮೇಲೆ ನಿರ್ದೇಶಕ ರಾಮ್ ನಾರಾಯಣ್ ನ್ಯಾಯ ಒದಗಿಸಿದ್ದಾರೆ.
ನಿರ್ದೇಶಕ ಯೋಗರಾಜ್ ಭಟ್ ಕುಲದಲ್ಲಿ ಕೀಳ್ಯಾವುದೋ ಶೀರ್ಷಿಕೆ ಗೀತೆ ಹಾಡುವುದರ ಮೂಲಕ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ತಹಶಿಲ್ದಾರ್ ಪಾತ್ರದಲ್ಲಿ ಸೋನೇಲ್ ಮಾಂತೇರೋ ಬಹಳ ಗಂಭೀರ ಪಾತ್ರದ ಮೂಲಕ ಈ ಬುಡಕಟ್ಟು ಜನಾಂಗಕ್ಕೆ ಸಹಾಯ ಮಾಡುವ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಶರತ್ ಲೋಹಿತಾಶ್ವ ಊರಿನ ಯಜಮಾನನಾಗಿ ಕೀಳು ಜಾತಿಯವರ ಆಸ್ತಿ ಕಬಳಿಸುವ ಪಾತ್ರಕ್ಕೆ ಕೊನೆಯಲ್ಲಿ ಒಳ್ಳೆಯ ಟ್ವಿಸ್ಟ್ ಕೊಡುವಂತ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ತಬಲ ನಾಣಿ ಕುಡಿದು ತಮಟೆ ಬಾರಿಸುತ್ತಾ ಮನ ಮುಟ್ಟುವಂತ ಡೈಲಾಗ್ ಗಳ ಮೂಲಕ ಪ್ರೇಕ್ಷರ ಹೃದಯ ತಟ್ಟಿದ್ದಾರೆ.
ಚಾವುಟಿ ಯಲ್ಲಿ ನಮ್ಮ ಚರ್ಮ ಸುಲಿಯೋ ಹಾಗೆ ಹೊಡೆದು ಆ ಚಾವುಟಿ ಯನ್ನ ಮನೆಯೊಳಗೆ ತಗೊಂಡು ನೇತಾಕುತ್ತಾರಲ್ಲ ಆ ಚಾವುಟಿಯಲ್ಲಿ ನಮ್ಮ ರಕ್ತ, ಬೆವರು ಅಂಟಿರೋದಿಲ್ವಾ ಆಗ ಅವರ ಮನೆ ಮೈಲಿಗೆ ಆಗೊಲ್ವಾ ಅನ್ನುವಂತ ಹಲವಾರು ಡೈಲಾಗ್ ಗಳು ಚಿತ್ರದ ಕಥೆಯನ್ನು ಎತ್ತಿ ಹಿಡಿದಿವೆ.
ಕರಿಸುಬ್ಬು ಬುಡಕಟ್ಟು ಜನಾಂಗದ ಹಿರಿಯನಾಗಿ ಬಹಳ ಮನ ಮುಟ್ಟುವಂತೆ ಅಭಿನಯಿಸಿದ್ದಾರೆ.
ಎಂಟೆಗೊದ್ದ ಅನ್ನು ಬುಡಕಟ್ಟು ಜನಾಂಗದ ಹುಡುಗ ಚಿಕ್ಜ ವಯಸ್ಸಿನಲ್ಕಿ ಊರು ಬಿಟ್ಟಿರುತ್ತಾನೆ ಅವನು ಏನಾದ, ಅವರ ಜನರಿಗೆ ನ್ಯಾಯ ಒದಗಿಸಲು ಮತ್ತೆ ಬರುತ್ತಾನೆಯೇ, ಅವನಿಂದ ಸಮಾಜದ ತಿರುವುಗಳೇನು ಅನ್ನುವ ಉತ್ತರಗಳ ಸುತ್ತಾ ಚಿತ್ರದ ಕಥೆ ತಿರುಗುತ್ತದೆ.

ಚಿತ್ರದ ಕ್ಲೈಮ್ಯಾಕ್ಸ್ ಯಾರೂ ಊಹಿಸದ ರೀತಿಯಲ್ಲಿ ನಿರ್ದೇಶಕರು ಚಿತ್ರೀಕರಿಸಿದ್ದಾರೆ.
ಚಿತ್ರದ ಹಾಡುಗಳು ಮತ್ತು ಹಿನ್ನೆಲೆ ಸಂಗೀತವನ್ನು ಮನೋ ಮೂರ್ತಿ ಚಿತ್ರಕ್ಕೆ ತಕ್ಕಂತೆ ನೀಡಿದ್ದಾರೆ.
ನಿರ್ಮಾಪಕರಾದ ಸಂತೋಷ್ ಕುಮಾರ್ ಹಾಗೂ ವಿದ್ಯಾ ರವರು ಒಂದು ಒಳ್ಳೆಯ ಸಿನಿಮಾಕ್ಕೆ ಹಣ ಹೂಡಿ ಸಾರ್ಥಕ ಮರೆದಿದ್ದಾರೆ.
ಇದೊಂದು ಜಾತೀಯತೆಯ ನಡುವೆ ಮೇಲು ಕೀಳಿನ ತಾರತಮ್ಯದಲ್ಲಿ ಮನುಷ್ಯನ ಬದುಕಿಗೆ ಬೆಳಕು ಚಲ್ಲ ಬಹುದಾದಂತಹ ಚಿತ್ರ ಎನ್ನಬಹುದು.
ಹೆಣಗಳಿಗೆ ಯಾವ ಬೆಲೆ ಇಲ್ಲ
ಆದರೆ ಹೆಣಗಳ ಹೆಬ್ಬೆಟ್ಟುಗಳಿಗೆ ಬೆಲೆ ಇದೆ. ಎನ್ನುವ ಮನಸ್ಸಿನ ದುಷ್ಟತನಕ್ಕೆ ಉತ್ತರವಾಗಿದೆ ಈ ಚಿತ್ರ.
ಊರು ಕೇರಿ, ಜಾತಿ ನೀತಿಗಳ ನಡುವೆ ಕುಲದಲ್ಲಿ ಕೀಳ್ಯಾವುದೋ ಚಿತ್ರ ಯಾವುದೇ ಅನುಮಾನವಿಲ್ಲದೇ ಪ್ರೇಕ್ಷಕರು ಕೊಟ್ಟ ಹಣಕ್ಕೆ ಮೋಸವಿಲ್ಲದಂತೆ ನೋಡಬಹುದಾದ ಚಿತ್ರ ಇದಾಗಿದೆ.