Kottalavadi movie Review. ಮರಳು ದಂಧೆಯಲ್ಲಿ ಮರುಳಾದವರ ಕಥೆಯೊಳಗಿನ ವ್ಯಥೆ.
ಚಿತ್ರ ವಿಮರ್ಶೆ
ಚಿತ್ರ – ಕೊತ್ತಲವಾಡಿ
ನಿರ್ಮಾಪಕರು – ಪುಷ್ಪ ಅರುಣ್ ಕುಮಾರ್.
ನಿರ್ದೇಶನ – ಶ್ರೀ ರಾಜ್
ಛಾಯಾಗ್ರಹಣ – ಕಾರ್ತಿಕ್ ಎಸ್.
ಸಂಗೀತ – ಅಭಿನಂದನ್ ಕಶ್ಯಪ್,
Rating – 3/5
ಕಲಾವಿದರು – ಪೃಥ್ವಿ ಅಂಬರ್, ಅವಿನಾಶ್, ಗೋಪಾಲ್ ಕೃಷ್ಣ ದೇಶಪಾಂಡೆ, ಕಾವ್ಯ ಶೈವ, ರಾಜೇಶ್ ನಟರಂಗ, ರಘು ರಮನಕೊಪ್ಪ, ಮಾನಸಿ ಸುಧೀರ್, ಚೇತನ್ ಗಂಧರ್ವ, ಮುಂತಾದವರು.
ಮರಳು ದಂಧೆಯಲ್ಲಿ ಮರುಳಾದವರ ಕಥೆಯೊಳಗಿನ ವ್ಯಥೆ.
ಅದು ಮೈಸೂರು ಜಿಲ್ಲೆಯ ಕೊತ್ತಲವಾಡಿ ಗ್ರಾಮ, ಗ್ರಾಮವೆಂದರೆ ಅದೇನು ಕುಗ್ರಾಮವಲ್ಲಾ.. ಅದು ಇಡೀ ಒಂದು ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸುವಂತ ಒಂದೇ ಗ್ರಾಮ.
ಆ ಗ್ರಾಮದಲ್ಲಿ ಇನ್ಸ್ಪೆಕ್ಟರ್ ಇಲ್ಲದೇ ಸೂಪರಿಂಟೆಂಡೆಂಟ್ ಆಫ್ ಪೋಲಿಸ್ (S.P.) ಕಾರ್ಯ ನಿರ್ವಹಿಸುವಂತ ಗ್ರಾಮ.

ಈ ಗ್ರಾಮದಲ್ಲಿ ತೆರೆಯ ಮೇಲೆ ಜನ ಕಡಿಮೆ ಕಾಣ ಬಹುದು ಆದರೆ ಚುನಾವಣೆಯಲ್ಲಿ ಮತ ಎಣಿಕೆಯಲ್ಲಿ ಗೊತ್ತಾಗುತ್ತದೆ ಹತ್ತಾರು ಸಾವಿರ ಲೀಡಿಂಗ್ ನಲ್ಲಿ ಗೆಲ್ಲಿಸುವಷ್ಟು ಜನ ಆ ಊರಿನಲ್ಲಿದ್ದಾರೆ ಅಂತ.
ಈ ಊರಲ್ಲಿ ಮೋಹನ (ಪೃಥ್ವಿ ಅಂಬರ್) ಎಂಬ ಪಾತ್ರ ಊರಿಗೆ ಸ್ನೇಹಮಯಿ ದಲ್ಲಾಳಿ ಊರಿನ ಜನಕ್ಕೆ ಕೆಲಸ ಕೊಡಿಸುವ ಕಾಯಕ ಇವನದ್ದು.
ಅದರಿಂದಾಗಿ ಊರಿನ ಜನಕ್ಕೆ ಮತ್ತು ಅವರ ಕಥೆಗೆ ಈತನೇ ನಾಯಕ.
ಈತ ಕೋಪ ಬಂದಾಗ ಎಸ್. ಪಿ. ಕಪ್ಪಾಳಗ್ಗೆ ಹೊಡೆಯುತ್ತಾನೆ ಆದರೆ ಪೋಲೀಸಿನವರು ಅವನಿಗೆ ಏನು ಮಾಡುವುದಿಲ್ಲ.
ಚಿತ್ರದ ಪ್ರಾರಂಭದಿಂದ ಕೊನೆಯ ವರೆಗೂ ಒಬ್ಬ ಎಸ್.ಪಿ. ಮತ್ತು ಪೋಲೀಸ್ ಕಮಿಷನರ್ ಈ ಇಬ್ಬರೂ ಆ ಊರಿನ ಮರಳು ದಂಧೆಯ ಬಗ್ಗಯೇ ಮಾತನಾಡುತ್ತಾ ಪ್ರೇಕ್ಷಕರಿಗೆ ತಮ್ಮ ಸಂಭಾಷಣೆಯ ಮೂಲಕ ಕಥೆ ಹೇಳುತ್ತಾರೆ.
ಕೊತ್ತಲವಾಡಿ ಗ್ರಾಮದ ಜನಕ್ಕೆ ದುಡಿಮೆ ಇಲ್ಲ, ಬದುಕೋಕೆ ಹಣ ಇಲ್ಲ. ಆ ಊರಿಗೊಬ್ಬ ಬಾಬು ಅಲಿಯಾಸ್ ಗುಜುರಿ ಬಾಬು ( ಗೋಪಾಲ್ ಕೃಷ್ಣ ದೇಶಪಾಂಡೆ)
ಸಾಲ ಮಾಡಿ ತೀರಿಸಲಾರದೇ ಆಸ್ತಿ ಜಮೀನು ಕಳೆದುಕೊಳ್ಳುವ ಸಂದರ್ಭದಲ್ಲಿ ಸಿಕ್ಕಿಕೊಂಡ ಊರಿನ ಜನಕ್ಕೆ ಆಪದ್ಭಾಂಧವನಾಗಿ ಗುಜುರಿ ಬಾಬು.
ಊರಿನಲ್ಲಿ ಹರಿಯುವ ಕಾವೇರಿ ನದಿಯ ಮರಳನ್ನು ಕದ್ದು ಮಾರುವ ದಂಧೆಯನ್ನು ಊರ ಜನರಿಂದ ಮಾಡಿಸಿ ಅವರನ್ನು ಉದ್ಧರಿಸುತ್ತಾನೆ, ಅದಕ್ಕಾಗಿಯೇ ಇವನು ಊರ ಜನರ ಪಾಲಿಗೆ ಗಾಡ್ ಫಾದರ್.
ತಾಯಿಯನ್ನು ಅನಾರೋಗದಿಂದ ಕಳೆದುಕೊಂಡು ಅನಾಥೆಯಾದ ನಾಯಕಿ ನಟಿ (ಕಾವ್ಯಶಾವ್ಯ) ನಾಯಕನ ಸಹವಾಸದಿಂದ ಬದುಕಿನಲ್ಲಿ ನೆಮ್ಮದಿ ಕಾಣುತ್ತಾಳೆ, ಆದರೆ ಊರಿನ ಕೆಲವು ದುರುಳರು ಅವಳನ್ನು ಕೆಟ್ಟ ದೃಷ್ಟಿಯಿಂದ ಅನುಭವಿಸಲು ಪ್ರಯತ್ನಿಸುತ್ತಿರುತ್ತಾರೆ.
ಆಗ ಅವಳಿಗೆ ನಾಯಕನೇ ನೆರಳಾಗಿ ಕಾಯುತ್ತಾನೆ.
ನಟ ರಮನಕೊಪ್ಪ ಗುಜುರಿ ಬಾಬುವಿನ ಛೇಲನಾಗಿ ಅಭಿನಯಿಸಿದ್ದಾರೆ,
ಚೇತನ್ ಗಂಧರ್ವ ಪುಡಿ ರೌಡಿಯಾಗಿ ಖಳನಟನ ಪಾತ್ರವನ್ನು ನಿಭಾಯಿಸಿದ್ದಾರೆ.
ಚಿತ್ರದ ಪ್ರಮುಖ ಹೈಲೈಟ್ ಅಂದ್ರೆ ಮಾನಸಿ ಸುಧೀರ್
ಒಬ್ಬ ರಾಜಕರಣಿಯಾಗಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಹಿರಿಯ ನಟ ಅವಿನಾಶ್ ಕಮೀಷನರ್ ಪಾತ್ರವನ್ನು ನಿಭಾಯಿಸಿದ್ದರೆ, ಹಾಗೆಯೇ ರಾಜೇಶ್ ನಟರಂಗ ಎಸ್.ಪಿ.ಯಾಗಿ ಚಿತ್ರದ ಅಂಗವಾಗಿದ್ದರೆ.
ಗೋಪಾಲ್ ಕೃಷ್ಣ ದೇಶಪಾಂಡೆ, ಮಾಲತಿ ಸುಧೀರ್, ಪೃಥ್ವಿ ಅಂಬರ್ ಚಿತ್ರದ ಹೈಲೈಟ್ ಎನ್ನಬಹುದು ಈ ಮೂವರು ಪಾತ್ರವನ್ನು ಅಷ್ಟು ಚನ್ನಾಗಿ ನಿಭಾಯಿಸಿದ್ದಾರೆ ಹಾಗೂ ಸಹಜ ಅಭಿನಯದಿಂದಪ್ರೇಕ್ಷಕರಿಗೆ ಇಷ್ವಾಗುತ್ತಾರೆ. ಚಿತ್ರದಲ್ಲಿ ಕ್ಯಾಮರಾ ಕೆಲಸ ಹಾಗೂ ಮ್ಯೂಸಿಕ್ ಚನ್ನಾಗಿ ಮೂಡಿ ಬಂದಿದೆ. ನಟ ಯಶ್ ರವರ ತಾಯಿ ಪುಷ್ಪ ಮೊದಲಬಾರಿಗೆ ನಿರ್ಮಾಪಕಿಯಾಗಿ ಕೊತ್ತಲವಾಡಿ ಚಿತ್ರ ನಿರ್ಮಾಣಕ್ಕೆ ಹಣ ಹೂಡಿದ್ದಾರೆ ಶ್ರೀ ಪಾಂಡುರಂಗ ರಾಜ್ ನಿರ್ದೇಶನದಲ್ಲಿ ಚಿತ್ರ ಮೂಡಿ ಬಂದಿದೆ ನಿರ್ದೇಶಕ ಶ್ರೀರಾಜ್ ಚಿತ್ರದ ಕಥೆಯ ಬಗ್ಗೆ ಒಂದಷ್ಟು ಹೋಂವರ್ಕ್ ಮಾಡಬೇಕಿತ್ತು ಮತ್ತು ಕಥೆ ಮತ್ತು ಚಿತ್ರಕಥೆಯಲ್ಲಿ ಲೋಪದೋಷಗಳು ಎದ್ದು ಕಾಣುತ್ತದೆ. ಒಟ್ಟಿನಲ್ಲಿ ಕೊತ್ತಲವಾಡಿ ಒಂದಷ್ಟು ನೈಜ ವಿಷಯಗಳಿಂದ ಬಂಬಿತವಾಗಿದೆ ಎನ್ನಬಹುದು.
ಅಕಸ್ಮಾತ್ತಾಗಿ ಕೊತ್ತಲವಾಡಿ ಗ್ರಾಮದ ಶಾಸಕ ಸಾಯುತ್ತಾನೆ ಅದರಿಂದ ತೆರವುಗೊಂಡ ಎಂ.ಎಲ್.ಎ. ಸ್ಥಾನಕ್ಕೆ ಸತ್ತವರ ಹೆಂಡತಿಯ ( ಮಾನಸಿ ಸುಧೀರ್) ಕಾಲಿಡಿದು, ಗುಜುರಿ ಬಾಬು ಚುನಾವಣೆಯಲ್ಲಿ ಗೆದ್ದು ಎಂ.ಎಲ್.ಎ. ಆಗುತ್ತಾನೆ.
ಅಲ್ಲಿಂದ ಶುರು ಎಗ್ಗು ಸಿಗ್ಗಿಲ್ಲದೇ, ಯಾರ ಅಡ್ಡಿಯಿಲ್ಲದೇ ಮರಳು ದಂಧೆಗೆ ಊರ ಜನರನ್ನು ಮತ್ತು ಚಿತ್ರದ ನಾಯಕನನ್ನು ಬಳಸಿಕೊಂಡು ಕೊಳ್ಳೆ ಹೊಡೆಯುತ್ತಾನೆ.
ಹಾಗೆಯೇ ಈ ದಂಧೆಯಲ್ಲಿ ನಾಲ್ಕು ಚಿಕ್ಕ ಮಕ್ಕಳು ನಿಗೂಡವಾಗಿ ಸಾಯುತ್ತಾರೆ.
ಇದರಿಂದಾಗಿ ಜನ ಆತಂಕ ದಿಂದ ಭಯ ಭೀತರಾಗುತ್ತಾರೆ.
ಜನ ಮರಳು ದಂಧೆಯಿಂದ ಹೊರಗೆ ಬರುತ್ತಾರಾ, ನಾಲ್ಕು ಮಕ್ಕಳ ಸಾವು ಹೇಗಾಗುತ್ತದೆ, ಪೋಲೀಸ್ ವ್ಯವಸ್ಥೆ ಹೇಗೆ ಈ ಸಮಸ್ಯೆಯನ್ನು ಬಗೆ ಹರಿಸುತ್ತದೆ, ಗುಜುರಿ ಬಾಬು ಮರಳು ದಂಧೆಯನ್ನು ನಿಲ್ಲಿಸುತ್ತಾನಾ..? ನಾಯಕ ಮತ್ತು ನಾಯಕಿ ಒಂದಾಗುತ್ತಾರಾ..? ಹೀಗೆ ಹತ್ತು ಹಲವು ಕುತೂಹಲಗಳನ್ನು ತಿಳಿಯಲು ಸಿನಿಮಾ ನೋಡಲೇಬೇಕು











