Kona movie review ಮಾಟ, ಮಂತ್ರ, ತಂತ್ರಗಳ ನಡುವೆ ಕೋಣ ಮತ್ತು ಕೋಮಲ್
ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ಚಿತ್ರ – ಕೋಣ
ನಿರ್ಮಾಪಕರು – ತನಿಷಾ ಕುಪ್ಪಂಡ
ನಿರ್ದೇಶನ – ಹರಿಕೃಷ್ಣ
ಛಾಯಾಗ್ರಹಣ – ವೀನಸ್ ನಾಗರಾಜ ಮೂರ್ತಿ
ಸಂಗೀತ – ಶಶಾಂಕ್ ಶೇಷಗಿರಿ
ಕಲಾವಿದರು :- ಕೋಮಲ್, ಕೀರ್ತಿರಾಜ್, ತನಿಷಾ ಕುಪ್ಪಂಡ, ರಾಘು ರಮಣಕೊಪ್ಪ, ವಿಜಯ್ ಚಂಡೂರು, ಮಂಜು ಪಾವಗಣ, ತುಕಾಲಿ ಸಂತು, ನಮ್ರತಾಗೌಡ. ಮುಂತಾದವರು.
Rating – 3/5
ಮಾಟ, ಮಂತ್ರ, ತಂತ್ರಗಳ ನಡುವೆ ಕೋಣ ಮತ್ತು ಕೋಮಲ್

ಇದು ಬಿಗ್ ಬಾಸ್ ಸ್ಪರ್ಧಿಗಳ ನಡುವೆ ನಡೆಯುವ ಕೋಮಲ್ ಎಂಬ ರೊಬೋಟ್ ಜ್ಯೋತಿಷಿಯ ಕಥೆ ವ್ಯಥೆ.
ಕೋಮಲ್ ಒಬ್ಬ ರೊಬೋಟ್ ನಿಂದ ಜನರಿಗೆ ಜ್ಯೋತಿಷ್ಯ ಹೇಳಿಸುವ ಕಾಯಕದ ಪಾತ್ರದಲ್ಲಿ ಕೋಣ ಚಿತ್ರದ ಭಾಗವಾಗಿದ್ದಾರೆ.
ಊರೂರು ಅಲೆಯುವ ಅಲೆಮಾರಿಯಾಗಿ ಬದುಕನ್ನು ಸಾಗಿಸುವಂತಹ ಪಾತ್ರಕ್ಕೆ ಮೊದಲ ಬಾರಿಗೆ ಬಣ್ಣ ಹಚ್ಚಿದ್ದಾರೆ.
ಪ್ರತೀ ಚಿತ್ರದಲ್ಲಿಯೂ ತಮ್ಮದೇ ಆದ ಮ್ಯಾನರಿಸಮ್ ನಲ್ಲಿ ಪ್ರೇಕ್ಷಕರನ್ನು ರಂಜಿಸುವ ಕೋಮಲ್ ಇದರಲ್ಲಿ ಬೇರೆಯದೇ ರೀತಿಯಲ್ಲಿ ಎರಡು ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಇದು ಸಾವಿರಾರು ವರ್ಷಗಳ ಹಿಂದಿನ ರಾಜನ ಕಾಲದ ಕಥೆ. ರಾಜನೊಬ್ಬ ಐಶಾರಾಮಿ ಜೀವನ ಮಾಡುತ್ತಾ ಇರುವಾಗ ಅಕ್ಕಪಕ್ಕದ ರಾಜರುಗಳು ಕುತಂತ್ರದಿಂದ ಯುದ್ಧ ಮಾಡಲು ಬರುತ್ತಾರೆ, ಆಗ ಪ್ರಮಾದವನ್ನರಿತ ರಾಜ ಒಬ್ಬ ದೊಡ್ಡ ಮಂತ್ರವಾದಿಯಿಂದ ಒಂದು ವಾಮಾಚಾರದ ಗೊಂಬೆಯನ್ನು ಮಾಡಿಸುತ್ತಾನೆ. ಆ ಗೊಂಬೆಯ ಸುತ್ತಮುತ್ತ ಯಾರೇ ಓಡಾಡಿದರು ಅವರೆಲ್ಲಾ ನಾಶ ವಾಗುತ್ತಾರೆ. ಇದರಿಂದಾಗಿ ಯುದ್ಧವನ್ನೇ ಮಾಡದೇ ಪಕ್ಕದ ರಾಜರುಗಳನ್ನು ನಾಶ ಮಾಡುತ್ತಾನೆ. ನಂತರ ಒಂದು ದಿನ ರಾಜನು ಕೂಡ ಆ ಗೊಂಬೆಯ ಅಜುಬಾಜಿನಲ್ಲಿ ವಾಯು ವಿಹಾರಕ್ಕೆ ಹೊರಟಾಗ ಅದರ ಪ್ರಭಾವಕ್ಕೆ ಸಿಲುಕಿ ಆತನು ಸಾಯುತ್ತಾನೆ. ನಂತರ ಆ ಗೊಂಬೆಯಿಂದ ಏನೆಲ್ಲಾ ಅವಗಡಗಳಾಗುತ್ತವೆ, ಯಾರೆಲ್ಲಾ ಸಾಯುತ್ತಾರೆ, ಅದರಿಂದ ಯಾವ ಊರುಗಳು ನಾಶವಾಗುತ್ತದೆ, ಎನ್ನುವುದನ್ನು ನಿರ್ದೇಶಕರು ಶತಮಾನದ ಹಿಂದಿನ ವಿಷಯವನ್ನು ಇಂದುನ ಕಾಲಘಟ್ಟದ ವರೆಗೆ ಅಚ್ಚುಕಟ್ಟಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.

ತನಿಷಾ ಕುಪ್ಪಂಡ ಕೋಮಲ್ ಪತ್ನಿಯಾಗಿ, ಆತ್ಮಬಂಧುವಾಗಿ ಕಾಡುತ್ತಾರೆ.
ಬಹುತೇಕ ಬಿಗ್ ಬಾಸ್ ತಂಡವೇ ಇರುವುದರಿಂದ ಬಿಗ್ ಬಾಸ್ ಮನೆಯಂತೆ ಭಾಸವಾಗುತ್ತದೆ. ಈ ತಂಡದ ನಡುವೆ ಒಮ್ಮೊಮ್ಮೆ ಕೋಮಲ್ ಕಳೆದು ಹೋದಂತೆ ಅನ್ನಿಸುವುದಂತು ನಿಜ.
ಮಾಟ, ಮಂತ್ರ, ತಂತ್ರದಿಂದ ಆ ಊರಿನ ಪರಿಸ್ಥಿತಿ ಏನಾಗುತ್ತದೆ, ಶತಮಾನದ ಹಿಂದಿನ ನಿಗೂಡ, ಭಯಾನಕ ಬ್ರಹ್ಮ ಗೊಂಬೆಯಿಂದ ಆ ಊರು, ಆ ಊರಿನ ಜನ ಹೇಗೆ ಬದುಕಿ ಉಳಿಯುತ್ತಾರೆ. ಅದನ್ನು ಸರಿ ಪಡಿಸುವುದು ಯಾರೆಂದು ತಿಳಿಯಬೇಕಾದರೆ ಸಿನಿಮಾ ನೋಡಬೇಕಾಗುತ್ತದೆ.











