“Kantara part 1 trailer review” ಕಾಂತಾರ ಅಧ್ಯಾಯ 1ರ ಟ್ರೇಲರ್ ವಿಮರ್ಶೆ.
ಕಾಂತಾರ ಅಧ್ಯಾಯ 1ರ ಟ್ರೇಲರ್ ವಿಮರ್ಶೆ – ಮಂಜುರಾಜ್ ಸೂರ್ಯ
ಚಿತ್ರ – ಕಾಂತಾರ ಅಧ್ಯಾಯ 1
ನಿರ್ಮಾಪಕರು – ವಿಜಯ್ ಕಿರಗಂದೂರ್
ನಿರ್ದೇಶನ – ರಿಷಬ್ ಶೆಟ್ಟಿ
ಛಾಯಾಗ್ರಹಣ – ಅರವಿಂದ್ ಕಶ್ಯಪ್
ಸಂಗೀತ – ಅಜನೀಶ್ ಲೋಕನಾಥ್, ಸಿ.ಆರ್. ಬಾಬಿ
ಕಲಾವಿದರು :- ರಿಷಿಬ್ ಶೆಟ್ಟಿ, ರುಕ್ಮುಣಿ ವಸಂತ್,
ಕನ್ನಡ ಚಿತ್ರರಂಗದ ಕೀರ್ತಿಯ ಇತಿಹಾಸಕ್ಕೆ ಮತ್ತೊಂದು ಗರಿ ಮೂಡುವ ಸಂಭ್ರಮದ ಸಮಯ ಶುರುವಾಗಲಿದೆ.
ಎದೆ ಝಲ್ಲೆನ್ನಿಸುವ ದೃಶ್ಯಕಾವ್ಯ ಕಣ್ಣಿಗೆ ಹಬ್ಬ, ಮನಸ್ಸಿಗೆ ಕೌತುಕ, ಹಲವು ಭಾವನೆಗಳನ್ನು ಏಕ ಕಾಲಕ್ಕೆ ಎದೆಯಾಳದಲ್ಲಿ ತುಂಬುವಂತ ಶಕ್ತಿ ಒಂದು ಟ್ರೇಲರ್ ನೊಳಗೆ ಹುದುಗಿದೆ ಎಂದರೆ ಒಂದು ಚಿತ್ರದ ಯಶಸ್ಸಿಗೆ ಅದಕ್ಕಿಂತ ಇನ್ನೇನು ಬೇಕಲ್ಲವೇ.
ಒಂದು ಸಿನಿಮಾ ಕೇವಲ ಮನರಂಜನೆ ಅಷ್ಟೇ ಅಲ್ಲ ನಮ್ಮ ಬದುಕಿನ ಸುತ್ತಾ ಇರುವಂತ ಹಲವು ಬಗೆಯ ಆಚಾರ, ವಿಚಾರಗಳನ್ನು, ಕೆಲವಾರು ಸಂಸ್ಕೃತಿಯ ನೆಲೆಗಟ್ಟನ್ನು ವಿಶ್ವಕ್ಕೆ ಪಸರಿಸುವ ಕೆಲಸ ಒಂದು ಸಿನಿಮಾ ಮಾಡುತ್ತದೆ ಎಂದರೆ ದೃಶ್ಯ ಮಾಧ್ಯಮಕ್ಕೆ ಅದೆಷ್ಟು ಶಕ್ತಿ ಇದೆ ಎನ್ನುವುದನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಒಂದು ಸಿನಿಮಾ.
ನಾನು ಇಷ್ಟೆಲ್ಲಾ ಯಾವುದರ ಬಗ್ಗೆ ಹೇಳುತಿದ್ದೇನೆ ಅಂತ ಎಲ್ಲರಿಗೂ ಮನವರಿಕೆಯಾಗಿದೆ.

ಅದುವೇ ಕಾಂತಾರ ಚಿತ್ರದ ಒಂದನೇ ಅಧ್ಯಾಯ ದ ಟ್ರೇಲರ್ ಬಗ್ಗೆ. ಭಾರತೀಯ ಚಿತ್ರರಂಗದಲ್ಲಿ ಈ ಟ್ರೇಲರ್ ಒಂದು ಸಂಚಲನವನ್ನು ಸೃಷ್ಠಿಸಿದೆ.
ಚಿತ್ರದ ಅದ್ದೂರಿ ಮೇಕಿಂಗ್, ಕಲಾವಿದರ, ತಂತ್ರಗಾರರ ಶ್ರಮ ಈ ಟ್ರೇಲರ್ ನಲ್ಲಿ ಎದ್ದು ಕಾಣುತ್ತದೆ.
7ಭಾಷೆಗಳಲ್ಲಿ ಚಿತ್ರ ತೆರೆಕಾಣಲಿದೆ.
ಅಷ್ಟೇ ಅಲ್ಲದೇ ಹೊರ ದೇಶಗಳ ಟೆಕ್ನಿಷಿಯನ್ ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ.
ಇದು ಐತಿಹಾಸಿಕ ವಿಷಯಗಳನ್ನು ಒಳಗೊಂಡಿರುವುದನ್ನು ನೋಡಬಹುದು.
ಈ ಒಂದು ಟ್ರೇಲರ್ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆಯ ಕನಸ್ಸಿಗೆ ಶೃಂಗಾರದ ಸವಿಯನ್ನು ಲೇಪಿಸಿದೆ.
ಒಂದು ಅದ್ಬುತವಾದ ಟ್ರೇಲರ್ ಸಿನಿಮಾ ನೋಡುವ ಕಾತುರತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಸಿನಿಮಾ ಚಿತ್ರೀಕರಿಸಿರುವ ಪರಿಸರ, ಮತ್ತು ಸೆಟ್ ಗಳು ನಿಜಕ್ಕೂ ಅದ್ಬುತವಾಗಿದೆ.
ಕಾಂತಾರ ಬಿಡುಗಡೆಯ ನಂತರ ರಿಷಬ್ ಯಾವ ಸಿನಿಮಾಗಳ ಕಡೆ ಗಮನ ಕೊಡದೆ ತಮ್ಮನ್ನ ತಾವು ಈ ಚಿತ್ರಕ್ಕಾಗಿ ಅರ್ಪಿಸಿಕೊಂಡಿರುವ ಶ್ರಮ ಎದ್ದು ಕಾಣುತ್ತದೆ.
ಚಿತ್ರದ ಕಲಾವಿದರ ವೇಷ ಭೂಷಣಗಳ ವಿನ್ಯಾಸವನ್ನು ಪ್ರಗತಿ ಶೆಟ್ಟಿ ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಹಾಗೂ ಅಜನೀಶ್ ಲೋಕನಾಥ್ ಸಂಗೀತವನ್ನು ಟ್ರೇಲರ್ ಮೂಲಕ ಚಿತ್ರದ ಝಲಕ್ಕಿನ ಸವಿಯ ಸಿಹಿಯನ್ನು ನೀಡಿದ್ದಾರೆ.
ಮತ್ತೊಂದು ಸಿನಿಮಾ ಈ ವರ್ಷ ಕನ್ನಡದ ಸಿನಿಮಾ ಜಗತ್ತಿನ ಶಕ್ತಿಯನ್ನು ಹೊರಗೆಡಗಲಿದೆ.











