Junior movie review ಜೂನಿಯರ್ ಚಿತ್ರ ವಿಮರ್ಶೆ ಜೂನಿಯರ್ ನೊಳಗೊಬ್ಬ ಪರಿಪೂರ್ಣ ನಟ

ಚಿತ್ರ ವಿಮರ್ಶೆ

ಚಿತ್ರ – ಜೂನಿಯರ್
ನಿರ್ಮಾಪಕರು – ರಜನಿ ಕೋರಪಾಟಿ, (ವಾರಾಹಿ ಮೂವಿಸ್)
ನಿರ್ದೇಶಕರು – ರಾಧಾಕೃಷ್ಣ
ಛಾಯಾಗ್ರಹಣ – ಕೆ.ಕೆ. ಸೆಂಥಿಲ್ ಕುಮಾರ್
ಸಂಗೀತ – ದೇವಿಶ್ರೀ ಪ್ರಸಾದ್
ಸಂಕಲನ – 
Rating – 3.5/5

ಕಲಾವಿದರು – ಕಿರೀಟಿ ರೆಡ್ಡಿ, ಶ್ರೀಲೀಲ, ರವಿಚಂದ್ರನ್, ಸುಧಾರಾಣಿ, ಅಚ್ಯತ್ ಕುಮಾರ್, ರಾವ್ ರಮೇಶ್, ಕಿರಣ್ ಶ್ರೀನಿವಾಸ್, ವೀವ ಹರ್ಷ, ಮುಂತಾದವರು.

ಜೂನಿಯರ್ ಸಿನಿಮಾ ಶುರುವಾದಾಗ ಜನ ಅಂದುಕೊಂಡಿದ್ದು ಅಪ್ಪನ ಹತ್ತಿರ ಬೇಕಾದಷ್ಟು ಐಶ್ವರ್ಯ ಇದೆ ಏನೋ ಶೋಕಿಗೆ ಹೀರೋ ಮಾಡ್ತಿದ್ದಾರೆ ಅಂತ.
ಆದರೆ ಸಿನಿಮಾ ನೋಡಿದಾಗ ಗೊತ್ತಾಗುತ್ತೆ ಈ ಹೊಸ ನಟ ತನ್ನ‌ಮೊದಲ ಚಿತ್ರಕ್ಕೆ ಎಷ್ಟು ಶ್ರದ್ಧೆಯಿಂದ ತಯಾರಿ ನಡೆಸಿದ್ದಾನೆ ಅಂತ.
ತನ್ನ ಪಾತ್ರಕ್ಕೆ ಎಷ್ಟು ನ್ಯಾಯ ಒದಗಿಸಿದ್ದಾನೆ ಅಂದರೆ. ಈಡಿ ಸಿನಿಮಾ ಪಾದರಸದಂತೆ ಆವರಿಸಿಕೊಂಡಿರುವ ನಟ ಕಿರಿಟಿ ತನ್ನ ಮೊದಲ ಸಿನಿಮಾದಲ್ಲೇ  ತಾನೊಬ್ಬ ಒಳ್ಳೆಯ ನಟನಾಗಬಲ್ಲೆ ಎಂಬುದನ್ನು ನಿರೂಪಿಸಿದ್ದಾರೆ.
ಡ್ಯಾನ್ಸ್ ನಲ್ಲಂತೂ ಪುನೀತ್ ರಾಜಕುಮಾರ್ ಸ್ಪೀಡು,  ಎನರ್ಜಿ ಕಾಣುತ್ತದೆ. ನಟನೆಯಲ್ಲೂ ಪಾತ್ರಕ್ಕೆ ಜೀವ ತುಂಬಿದ್ದಾರೆ ಎನ್ನಬಹುದು.


ಕನ್ನಡ ಚಿತ್ರರಂಗಕ್ಕೆ ಹೊಸ ಹೀರೋಗಳ ಅವಶ್ಯಕತೆ ಬಹಳಷ್ಟು ಇದೆ.
ಕಿರೀಟಿಯ ಈ ಎಂಟ್ರಿಗೆ ಶುಭವಾಗಲಿ ಎಂದು ಹಾರೈಸೋಣ.
ಇನ್ನು ನಟಿ ಶ್ರೀಲೀಲಾ ತುಂಬಾ ಮುದ್ದಾಗಿ ಕಾಣಿಸುವುದರ ಜೊತೆಗೆ ಚನ್ನಾಗಿ ಅಭಿನಯಿಸಿದ್ದಾರೆ.

ಸಿನಿಮಾದ ಮೊದಲರ್ಧ ಕಾಲೇಜು, ಜೋಷ್, ತಂಟೆ, ತರಲೆ, ಮೋಜು ಮಸ್ತಿ, ಯೊಂದಿಗೆ ಕಥೆ ಸಾಗಿದರೆ ದ್ವಿತಿಯಾರ್ಧ ಕಥೆಯ ಆಯಾಮಗಳು ಒಂದೊಂದೆ ತೆರೆದು ಕೊಳ್ಳುತ್ತದೆ.
ರವಿಚಂದ್ರನ್ ಅಭಿನಯಕ್ಕೆ ಪ್ರೇಕ್ಷಕನ ಕಣ್ಣಂಚಲ್ಲಿ ನೀರು ತರಿಸುತ್ತಾರೆ.
ರವಿಚಂದ್ರನ್ ರವರು ಇನ್ನು ಮುಂದಾದರು ಇಂತಹ ಪಾತ್ರಗಳ ಕಡೆ ಹೆಚ್ಚು ಗಮನ ಕೊಟ್ಟರೆ ಚನ್ನಾಗಿರುತ್ತದೆ.
ನಿರ್ದೇಶಕರು ಇಲ್ಲಿ ಎಲ್ಲಾ ಪಾತ್ರಗಳನ್ನು ಚನ್ನಾಗಿ ಸೃಷ್ಠಿ ಮಾಡಿದ್ದಾರೆ.
ಸಿನಿಮಾವನ್ನು ಒಳ್ಳೆಯ ಲೊಕೇಶನ್ ನಲ್ಲಿ ಅದ್ದೂರಿಯಾಗಿ, ಬಹಳ ವಿಜ್ರಂಭಣೆಯಿಂದ ವಾರಾಹಿ ಸಂಸ್ಥೆ ನಿರ್ಮಿಸಿದೆ.
ಸಿನಿಮಾದ ಕ್ಲೈಮ್ಯಾಕ್ಸ್ ಯಾರೂ ಊಹಿಸದ ರೀತಿಯಲ್ಲಿ ನಿರ್ದೇಶಕರು ಸೃಷ್ಟಸಿದ್ದಾರೆ.

ಈ ಸಿನಿಮಾವನ್ನು ಮೊದಲು ರಾಜಕರಣಿಗಳು ನೋಡಬೇಕು. ಹಳ್ಳಿಗಳನ್ನು ಹೇಗೆ ಉದ್ದರಿಸಬೇಕು, ಹಳ್ಳಿಯಲ್ಲಿರುವ ಯುವಕರಿಗೆ ಉದ್ಯೋಗ ಹೇಗೆ ಸೃಷ್ಟಿ ಮಾಡಬೇಕು, ಹಳ್ಳಿಯಲ್ಲಿ ತಂತ್ರಜ್ಞಾನ ವನ್ನು ಬಳಸಿ ಹೇಗೆಲ್ಲಾ ಅವರನ್ನು ಮುಖ್ಯವಾಹಿನಿಗೆ ತರಬೇಕು ಎನ್ನುವುದನ್ನು ತಿಳಿಸಿದ್ದಾರೆ.

ಒಟ್ಟಿನಲ್ಲಿ ಇಂತಹ ಒಂದೊಳ್ಳೆಯ ಚಿತ್ರವನ್ನು ಪ್ರೇಕ್ಷಕರು ಗೆಲ್ಲಿಸಬೇಕಾಗಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor