Jumbo Circus review ಜಂಬೂ ಸರ್ಕಸ್ – ಚಿತ್ರ ವಿಮರ್ಶೆ. ಅದಲು ಬದಲಿನ ಕುಟುಂಬದ ಸರ್ಕಸ್
ಅದಲು ಬದಲಿನ ಕುಟುಂಬದ ಸರ್ಕಸ್
ಚಿತ್ರ ವಿಮರ್ಶೆ – ಮಂಜುರಾಜ್ ಸೂರ್ಯ
ಚಿತ್ರ – ಜಂಬೂ ಸವಾರಿ
ನಿರ್ಮಾಪಕರು – ಹೆಚ್. ಸುರೇಶ್
ನಿರ್ದೇಶನ – ಎಂ.ಡಿ. ಶ್ರೀಧರ್
ಛಾಯಾಗ್ರಹಣ – ಕೃಷ್ಣಕುಮಾರ್
ಸಂಗೀತ – ವಾಸುಕಿ ವೈಭವ
Rating – 3/5
ಕಲಾವಿದರು – ಅವಿನಾಶ್, ಅಚ್ಯುತ್ ಕುಮಾರ್, ಸ್ವಾತಿ, ರವಿಶಂಕರ್ ಗೌಡ, ಪ್ರವೀಣ್ ತೇಜ್, ಅಂಜಲಿ ಎಸ್. ಅನೀಶ್, ಲಕ್ಷ್ಮಿ ಸಿದ್ದಯ್ಯ. ಮುಂತಾದವರು.
ಇದು ಎರಡು ಕುಟುಂಬಗಳ ನಡುವೆ ನಡೆಯುವ ದ್ವೇಷ, ಪ್ರೀತಿ, ಪ್ರೇಮ, ಮದುವೆ ಮತ್ತು ಸಂಭಂದಗಳ ನಡುವೆ ನಡೆಯುವ ಕಥೆ. ಒಂದೇ ರಸ್ತೆಯಲ್ಲಿ ಎದುರು ಬದರು ಎರಡು ಕುಟುಂಬಗಳಿರುತ್ತವೆ ಆ ಕುಟುಂಬದ ಗಂಡಸರು ಅಚ್ಯುತ್ ಕುಮಾರ್ ಮತ್ತು ರವಿಶಂಕರ್ ಗೌಡ ಇಬ್ಬರು ಒಬ್ಬರಿಗೊಬ್ಬರು ಪ್ರಾಣ ಕೊಡುವಷ್ಟು ಪ್ರಾಣ ಸ್ನೇಹಿತರು.
ಈ ಗೆಳೆಯರಿಬ್ಬರು ಒಂದೇ ಶಾಲೆ, ಕಾಲೇಜ್‌ನಲ್ಲಿ ಓದಿ, ಒಂದೇ ಮಂಟಪದಲ್ಲಿ, ಒಂದೇ ದಿನ ಮದುವೆಯಾಗಿ, ಒಂದೇ ಏರಿಯಾದಲ್ಲಿ ಮನೆ ಮಾಡುತ್ತಾರೆ. ಇವರ ಗೆಳೆತನ ಇಷ್ಟವಿರದ ಹೆಂಡತಿಯರು ಮಕ್ಕಳನ್ನು ವೈರಿಗಳಂತೆ ಬೆಳೆಸುತ್ತಾರೆ. ಸದಾ ಕಚ್ಚಾಡುತ್ಲೇ ಬೆಳೆದ ನಾಯಕ-ನಾಯಕಿ ಇಬ್ಬರ ನಡುವೆ ಪ್ರೀತಿ ಹೇಗೆ ಹುಟ್ಟುತ್ತದೆ ಎಂಬುದನ್ನು ಚಿತ್ರದಲ್ಲಿ ಕಾಮಿಡಿಯಾಗಿ ತೋರಿಸಲಾಗಿದೆ.

ಆದರೆ ಅವರಿಬ್ಬರ ಹೆಂಡತಿಯರು ಹಾವು ಮುಂಗುಸಿ ಸ್ವಭಾವದವರು. ಒಬ್ಬರ ಕಂಡರೆ ಒಬ್ಬರಿಗಾಗುವುದಿಲ್ಲ, ಒಬ್ಬರೊಬ್ಬರ ನೆರಳನ್ನು ದ್ವೇಷಿಸುವಂತ ಪರಮ ವೈರಿಗಳು.
ಇನ್ನು ಇವರ ಮಕ್ಕಳು ಅಚ್ಯುತ್ ಕುಮಾರ್ ಮಗ ಮತ್ತು ರವಿಶಂಕರ್ ಗೌಡ ಮಗಳು ಅವರೂ ಕೂಡ ಒಬ್ಬರನೊಬ್ಬರು ಕಂಡರೆ ಬರೀ ಜಗಳ, ಒಂದೇ ಕಾಲೇಜಿನಲ್ಲಿ ಓದುವ ಒಂದೇ ಡೇಟ್ ನಲ್ಲಿ ಹುಟ್ಟಿರುವ ಇವರಿಬ್ಬರಿಗೂ ಜಗಳವಾಡುತ್ತಲೇ ಪ್ರೀತಿ ಹುಟ್ಟಿಬಿಡುತ್ತೆ. ಸಿನಿಮಾ ನೋಡಲು ಥಿಯೇಟರ್ ಗೆ ಹೋದವರು ಒಟ್ಟಿಗೆ ಅಪ್ಪಂದಿರ ಕೈಗೆ ಸಿಕ್ಕಿ ಬೀಳುತ್ತಾರೆ.
ಅಪ್ಪಂದಿರಿಗೆ ನಾವಿಬ್ಬರೂ ಸಂಭಂದಿಗಳಾಗುತ್ತೇವೆ ಅಂತ ಖುಷಿಯೋ ಖುಷಿ. ಮಕ್ಕಳು ತೊಟ್ಟಿನಲ್ಲಿದ್ದಾಗಲೆ ಇಬ್ಬರು ಮಾತಾಡಿಕೊಂಡಿರುತ್ತಾರೆ. ಇವರಿಬ್ಬರಿಗೂ ಮದುವೆ ಮಾಡಿ ನಾವಿಬ್ಬರೂ ಬೀಗರಾಗ ಬೇಕು ಅಂತ. ಆದರೆ ಎರಡು ಮನೆಯ ಹೆಂಗಸರು ಒಪ್ಪಬೇಕಲ್ಲಾ..? ಅವರನ್ನು ಒಪ್ಪಿಸಿ ಮದುವೆ ಮಾಡಲು ಏನೆಲ್ಲಾ ಸರ್ಕಸ್ ಮಾಡುತ್ತಾರೆ ಎನ್ನುವುದೇ ಜಂಬೂ ಸರ್ಕಸ್ ಚಿತ್ರದ ಕಥೆ.

ಅಚ್ಯುತ್ ಕುಮಾರ್ ಹೆಂಡತಿಯಾಗಿ ನಟಿ ಸ್ವಾತಿ ಅಭಿನಯಿಸಿದರೆ, ರವಿಶಂಕರ್ ಗೌಡ ನ ಹೆಂತಿಯಾಗಿ ಲಕ್ಷ್ಮಿ ಸಿದ್ದಯ್ಯ ನಟಿಸಿದ್ದಾರೆ. ಇಬ್ಬರ ಪಾತ್ರ ನಿರ್ವಹಣೆ ಚನ್ನಾಗಿದೆ, ಹಾಗೂ ಇಬ್ಬರು ಪಾತ್ರಕ್ಕೆ ನ್ಯಾಯ ಒದಗಿಸುವ ಮೂಲಕ ಕನ್ನಡ ಸಿನಿಮಾಗಳಿಗೆ ಇಬ್ಬರು ಹೊಸ ಅಮ್ಮಂದಿರು ಸಿಕ್ಕಂತಾಗಿದೆ.
ಹಿರಿಯ ನಟ ಅವಿನಾಶ್ ನಾಯಕಿಯ ತಾತನಾಗಿ ಚಿತ್ರದ ಕಥೆಗೆ ಹಿರಿತನವನ್ನು ತುಂಬಿದ್ದಾರೆ.
ಕಳೆದ ಮೂರು ದಶಕಗಳಿಂದ ಕನ್ನಡ ಚಿತ್ರೋದ್ಯಮದಲ್ಲಿ ತೊಡಗಿಕೊಂಡಿರುವ ಹೆಚ್.ಸಿ. ಸುರೇಶ್ ಅವರು ಮಹತಿ ಕಂಬೈನ್ಸ್ ಮೂಲಕ “ಜಂಬೂ ಸರ್ಕಸ್” ಎಂಬ ಚಲನ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಪ್ರಮೋದ್ ಶೆಟ್ಟಿ ಅವರ ಪತ್ನಿ ಸುಪ್ರೀತಾ ಶೆಟ್ಟಿ ಅವರು ಸಹ ನಿರ್ಮಾಪಕಿಯಾಗಿ ಕೈಜೋಡಿಸಿದ್ದಾರೆ. ಹಿಟ್ ಚಿತ್ರಗಳ ನಿರ್ದೇಶಕ ಎಂ.ಡಿ. ಶ್ರೀಧರ್ ಅವರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುವ ಮೂಲಕ ಒಂದು ಫ್ಯಾಮಿಲಿ ಡ್ರಾಮವನ್ನು ಚನ್ನಾಗಿ ಪೇಕ್ಷಕರಿಗೆ ಕಟ್ಟಿಕೊಟ್ಟಿದ್ದಾರೆ.
ದೊಡ್ಡ ದೊಡ್ಡ ಕಲಾವಿದರ ದೊಡ್ಡ ದೊಡ್ಡ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದ ಎಂ. ಡಿ. ಶ್ರೀಧರ್ ಒಂದು ವಿಭಿನ್ನ ಟ್ವಿಷ್ಟ್ ಗಳನ್ನು ನೀಡುವ ಮೂಲಕ ಚಿತ್ರವನ್ನು ನೋಡಿಸಿಕೊಂಡು ಹೋಗಿದ್ದಾರೆ.

ಕಥಾ ನಾಯಕ ಮತ್ತು ನಾಯಕಿಯರ ಪಾತ್ರ ವಯಸ್ಸಿಗೆ ತಕ್ಕಂತ ಹುಡುಗಾಟದೊಂದಿಗೆ ಕೂಡಿದೆ. ನಾಯಕನಾಗಿ ಪ್ರವೀಣ್ ತೇಜ್, ನಾಯಕಿಯಾಗಿ ಅಂಜಲಿ ಎಸ್. ಅನೀಶ್ ಪಾತ್ರವನ್ನು ನಿಭಾಯಿಸಿದ್ದಾರೆ. ದ್ವೇಷಕ್ಕೂ ಸೈ, ಪ್ರೀತಿಗೂ ಸೈ ಎನ್ನುವಂತೆ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಚಿತ್ರದಲ್ಲಿ ಹಾಡುಗಳು ಮತ್ತು ಹಿನ್ನೆಲೆ ಸಂಗೀತದ ಜವಾಬ್ಧಾರಿಯನ್ನು ಸಂಗೀತ ನಿರ್ದೇಶಕ ವಾಸುಕಿ ವೈಭವ್ ಚನ್ನಾಗಿ ನಿಭಾಯಿಸಿದ್ದಾರೆ, ಇನ್ನು ಹಿರಿಯ ಛಾಯಾಗ್ರಾಹಕ ಕೃಷ್ಣಕುಮಾರ್ ಚಿತ್ರದ ಕಥೆಯು ಕಣ್ಣಿಗೆ ಕಟ್ಟುವಂತೆ ಸೊಗಸಾಗಿ ಚಿತ್ರೀಕರಿಸಿದ್ದಾರೆ.
ಇದು ಯಾವುದೇ ಗೊಂದಲಗಳಿಲ್ಲದ, ಅನಾವಶ್ಯಕ ಧ್ವಂದ್ವ ಮಾತುಗಳಿಲ್ಲದೇ, ಸಾಧಾ ಸೀದಾ ಒಂದು ಕೌಟುಂಬಿಕ ಚಿತ್ರ ಇದಾಗಿದೆ.
ಇದು ಯಾವುದೇ ಗೊಂದಲಗಳಿಲ್ಲದ, ಅನಾವಶ್ಯಕ ಧ್ವಂದ್ವ ಮಾತುಗಳಿಲ್ಲದೇ, ಸಾಧಾ ಸೀದಾ ಒಂದು ಕೌಟುಂಬಿಕ ಚಿತ್ರ ಇದಾಗಿದೆ.
ಎಲ್ಲಾ ಪಾತ್ರಗಳು ಚನ್ನಾಗಿ ಮೂಡಿ ಬಂದಿದೆ.











