JC kannada movie review. ಜೆಸಿ ಚಿತ್ರ ವಿಮರ್ಶೆ – ಕನ್ನಡಕ್ಕೊಬ್ಬ ಮಾಸ್ ಹೀರೋ ಎಂಟ್ರಿ

ಚಿತ್ರ –  JC
ನಿರ್ಮಾಪಕರು – ಧನಂಜಯ್, ಡಾಲಿ ಪಿಕ್ಚರ್
ನಿರ್ದೇಶನ – ಚೇತನ್ ಜಯರಾಮ್
ಛಾಯಾಗ್ರಹಣ – ಕಾರ್ತಿಕ್ ಎಸ್.
ಸಂಗೀತ – ರೋಹಿತ್ ಸೋವರ್

Rating -3.5/5

ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ

ಕಲಾವಿದರು :- ಸೂರ್ಯ ಪ್ರಖ್ಯಾತ್, ಭಾವನಾ ರೆಡ್ಡಿ, ಥ್ರಿಲ್ಲರ್ ಮಂಜು, ವಿಕ್ಟರಿ ವಾಸು, ರಂಗಾಯಣ ರಘು ಮುಂತಾದವರು.

ಈ ವಾರ ತೆರೆಕಂಡ ಜಿಸಿ: ದ ಯೂನಿವರ್ಸಿಟಿ’ (JC: The University) ಆಕ್ಷನ್ ಕ್ರೈಮ್ ಡ್ರಾಮಾ ಚಲನಚಿತ್ರವಾಗಿದೆ. 


ಇದು ಸೂರ್ಯ ಪ್ರಖ್ಯಾತ್ ನಾಯಕ ನಟನಾಗಿ ಅಭಿನಯಿಸಿರುವ ಮೊಟ್ಟ ಮೊದಲ ಚಿತ್ರ. ಇದೊಂದು ಫುಲ್ ಆಕ್ಷನ್, ಕ್ರೈಂ ಚಿತ್ರವಾಗಿದ್ದು ಅಂಡರ್ ಕರೆಂಟ್ ನಲ್ಲಿ ಅಪ್ಪ ಮಗನ ಯಮೋಷನ್ ಜೊತೆ ಜೊತೆಯಲ್ಲಿ ಸಾಗುವಂತ ಸೆಂಟಿಮೆಂಟ್ ಚಿತ್ರ.
ಸೂರ್ಯ ಪ್ರಖ್ಯಾತ್ ಮೊದಲ ಚಿತ್ರವಾದರೂ ತುಂಬಾ ಚನ್ನಾಗಿ ಅಭಿನಯಿಸಿದ್ದಾರೆ. ಚಿತ್ರರಂಗದಲ್ಲಿ ಒಬ್ಬ ಆಕ್ಷನ್ ಹೀರೋ ಆಗಿ ನಿಲ್ಲುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ.

ಮಧುಸೂದನ್ ಅಲಿಯಾಸ್ ಮ್ಯಾಡಿ  (ಸೂರ್ಯ ಪ್ರಖ್ಯಾತ್ )
ಆತ ಕಾಲೇಜಿನಲ್ಲಿ ಓದುತ್ತಿರುವ ಫೈನಲ್ ಇಯರ್ ಡಿಗ್ರಿ ಸ್ಟೂಡೆಂಟ್. ಆತನಿಗೊಬ್ಬ ಎಲ್ಲಾ ಚಿತ್ರದಂತೆ ಒಬ್ಬ ಲವ್ವರ್ ಆಕೆ ಮೇಘನ ( ಭಾವನ ರೆಡ್ಡಿ )  ಕಾಲೇಜು ಅಂದಮೇಲೆ ಎಲ್ಲಾ ಚಿತ್ರದಂತೆ ಮೋಜು, ಮಸ್ತಿ, ಪ್ರೀತಿ, ಪ್ರೇಮ ಇದ್ದಿದ್ದೇ..  ಆದರೆ ಇಲ್ಲಿ ಸ್ನೇಹಿತನಿಗೆ ಯಾರೋ ಹೊಡೆದು ಮೊಬೈಲ್ ಕಿತ್ತುಕೊಂಡು ಹೋದ್ರು ಅಂತ ಶುರುವಾಗೋ ಸಣ್ಣ ಜಗಳ ಅಂಡರ್ ವರ್ಲ್ಡ್ ವರೆಗೂ ಟಚ್ ಆಗುತ್ತೆ.
ಅವರಿಬ್ಬರು ಅಂಡರ್ಲ್ಡ್ ವರ್ಡ್ ನ ಚಿಲ್ಲರೆ ರೌಡಿಗಳು, ಅವರು ಟ್ವಿನ್ಸ್ , ಸಿನಿಮಾದಲ್ಲಿ ಕೂಡ ಅವರ ಹೆಸರು ಟಿನ್ಸ್. ಕಾಲೇಜ್ ಹುಡುಗನಿಗೆ ಹೊಡೆದು ಮೊಬೈಲ್ ಕಿತ್ತುಕೊಂಡು ಅದರಲ್ಲಿ ಕಥಾ ನಾಯಕಿ ಮೇಘನಾಗೆ ರಾತ್ರಿ ಎಲ್ಲಾ  ಕಾಲ್ ಮಾಡಿ ತೊಂದ್ರೆ ಕೊಡುತ್ತಾನೆ ಇನ್ನು ಹೀರೋಗೆ ಗೊತ್ತಾದ ಮೇಲೆ ಏನಾಗುತ್ತೆ ಅಂತ ಹೇಳಬೇಕಿಲ್ಲ.


ಹೀರೋಗೆ ಜೆಸಿ ಗೆ ಹೋಗೋಕೆ ಇವರಿಬ್ಬರೆ ಕಾರಣ, ಟ್ವಿನ್ಸ್ ಗೆ ಹೊಡೆಯಲು ಹೋಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದು JC ( judicial custody) ಸೇರುತ್ತಾನೆ. ಅಲ್ಲಿಂದ ಶುರುವಾಗುವುದೇ ಜೈಲಿನೊಳಗಿನ ನಿಜವಾದ ಕಥೆ. ಅದು ಕೆಲವರಿಗೆ ನರಕದ ಬದುಕಾದರೆ, ಕೆಲವರಿಗೆ ಮೋಜು ಮಸ್ತಿಯ ತಾಣ ಎಂಬಂತೆ ಜೈಲಿನ ಚಿತ್ರಣವನ್ನು ನಿರ್ದೇಶಕರು ಚನ್ನಾಗಿ ತೋರಿಸಿದ್ದಾರೆ.
ಸೂರ್ಯ ಪ್ರಖ್ಯಾತ್ ತುಂಬಾ ನೈಜವಾಗಿ ಎಲ್ಲರಿಗೂ ಇಷ್ಟವಾಗುವಂತೆ ನಟಿಸಿದ್ದಾರೆ. ಅಷ್ಟೇ ಅಲ್ಲದೇ ಪಾತ್ರದೊಳಗೆ ಜೀವಿಸಿದ್ದಾರೆ. ಕನ್ನಡಕ್ಕೊಬ್ಬ ಒಳ್ಳೆಯ ಮಾಸ್ ಮತ್ತು ಕ್ಲಾಸ್ ಹೀರೋ ಆಗಿ ನಿಲುವ ಎಲ್ಲಾ ಲಕ್ಷಣಗಳನ್ನು ಮೈಗೂಡಿಸಿಕೊಂಡಿದ್ದಾರೆ. ಹಾಗೂ ಫೈಟ್ ಗಳಲ್ಲಂತು  ತಮ್ಮ 100% ಎಫರ್ಟ್ ಹಾಕಿದ್ದಾರೆ.
ಇನ್ನು ಕಥಾ ನಾಯಕಿ ಮೇಘನಾ ( ಭಾವನಾ ರೆಡ್ಡಿ ) ನಾಯಕಿಯಾಗಿ ಅಭಿನಯಿಸಿದ್ದಾರೆ. ಚಿತ್ರದ ಕಥೆಯಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿದ್ದಾರೆ. ಹಾಗೂ ನಾಯಕನನ್ನು ಸರಿ ದಾರಿಗೆ ತರಲು ಸಾಕಷ್ಟು ಶ್ರಮಿಸಿ ಆತನ ಒಳ್ಳೆಯ ದಿನಗಳವರೆಗೂ ಕಾಯುವಂತ ಪಾತ್ರ ಚನ್ನಾಗಿ ಮೂಡಿ ಬಂದಿದೆ.

ರಂಗಾಯಣ ರಘು ತಂದೆಯಾಗಿ ಭಾವನಾತ್ಮಕ ಸೀನ್‌ಗಳಲ್ಲಿ ಗಮನ ಸೆಳೆದಿದ್ದಾರೆ
ಅಪ್ಪಾ ಮಗನ ಕಾಂಬಿನೇಷನ್ ನಲ್ಲಿನ ಕೆಲವು ಸೀನ್ ಗಳು ಮನ ತುಂಬಿ ಬರುತ್ತದೆ.
ರಂಗಾಯಣ ರಘುರವರ ಪಾತ್ರ ಪೋಷಣೆಯನ್ನು ನಿರ್ದೇಶಕರು ಚನ್ನಾಗಿ ಬಿಂಬಿಸಿದ್ದಾರೆ.

ರೋಹಿತ್ ಸೋವರ್ ರವರಮ್ಯೂಸಿಕ್ ನಲ್ಲಿ ಹಾಡುಗಳು, BGM, ಚನ್ನಾಗಿ ಮೂಡಿದೆ ಹಾಗೂ ಕಾರ್ತಿಕ್ ರವರ ಛಾಯಾಗ್ರಹಣ, ಸಾಹಸ ಎಲ್ಲವೂ ಉತ್ತಮವಾಗಿದೆ. ಚಿತ್ರಕಥೆ ಸ್ವಲ್ಪ ವೇಗ ಹೆಚ್ಚಾಗಿದ್ದರೆ ಇನ್ನಷ್ಟು ಚೆನ್ನಾಗಿರುತ್ತಿತ್ತು. ಯುವ ಪೀಳಿಗೆಗೆ ಅರ್ಥಪೂರ್ಣ ಸಂದೇಶದ ಚಿತ್ರ, ನೈಜ ಜೀವನದ ಘಟನೆಗಳನ್ನು ಚೆನ್ನಾಗಿ ತೋರಿಸಿದ್ದಾರೆ ನಿರ್ದೇಶಕರು.

ಜೆಸಿ: ದಿ ಯೂನಿವರ್ಸಿಟಿ ಸಿನಿಮಾ ಸಂಪೂರ್ಣ ಪಾಪಿಗಳ, ರೌಡಿಗಳ ನಡುವೆ ನಡೆಯುತ್ತದೆ. ಜೈಲಿನ ಒಳಗಿನ ಒಂದಷ್ಟು ರಾದ್ದಾಂತಗಳನ್ನು, ಒಳ ಜಗಳಗಳನ್ನು, ಅಲ್ಲಿನ ಜೀವನವನ್ನು ನಿರ್ದೇಶಕ ಚೇತನ್ ಜಯರಾಮ್ ತೋರಿಸುವುದರ ಜೊತೆಗೆ

ಅಮಾಯಕರ ಬದುಕನ್ನು ರೌಡಿಗಳು ಹೇಗೆ ನಾಶಪಡಿಸುತ್ತಾರೆ, ಎನ್ನುವುದನ್ನು ಜೈಲು ಒಂದು ‘ಯೂನಿವರ್ಸಿಟಿ’ಯಂತೆ ಹೊಸ ಖೈದಿಗಳಿಗೆ ಹೊಸ ಹೊಸ ಅನುಭವಗಳನ್ನು ನೀಡಿದ್ದಾರೆ.

ಥ್ರಿಲ್ಲರ್ ಮಂಜು ಚಿತ್ರದಲ್ಲಿ ರೌಡಿಗಳ ಮೇಕರ್ ಆಗಿ ಅವರ ಲುಕ್, ಅವರ ಬಾಡಿ ಲಾಂಗ್ವೇಜ್ ಚನ್ನಾಗಿದೆ ಬಹಳ ವರ್ಷಗಳ ನಂತರ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಡಾಲಿ ಧನಂಜಯ್ ಈ ಚಿತ್ರದ ಬೆನ್ನಿಗೆ ನಿಂತಿರೋದು ಚಿತ್ರಕ್ಕೆ + ಪಾಯಿಂಟ್ ಎನ್ನಬಹುದು.
ಒಟ್ಟಿನಲ್ಲಿ ಚಿತ್ರ ಚನ್ನಾಗಿದ್ದು ಯಾವುದೇ ಗೊಂದಲಗಳಿಲ್ಲದೇ ನೋಡಬಹುದು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor