Jai movie review. “ಜೈ ಚಿತ್ರ ವಿಮರ್ಶೆ” “ಸೇತುವೆ, ಕಬ್ಬಡ್ಡಿಗಳ ನಡುವೆ ಜೈಕಾರ”

ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ಚಿತ್ರ –  ಜೈ
ನಿರ್ಮಾಪಕರು – ಅನಿಲ್ ಶೆಟ್ಟಿ, ಸುಧಾಕರ್ ಶೆಟ್ಟಿ ಮುಗ್ರೋಡಿ, ಮಂಜುನಾಥ ಅತ್ತಾವರ
ನಿರ್ದೇಶನ –  ರೂಪೇಶ್ ಶೆಟ್ಟಿ
ಛಾಯಾಗ್ರಹಣ – ವಿನುತ್
ಸಂಗೀತ – ಲೋಯ್ ವೆಲೆಂಟಿನ್ ಸಲ್ದಾನ

Rating -3/5

ಕಲಾವಿದರು :- ಸುನೀಲ್ ಶೆಟ್ಟಿ, ರೂಪೇಶ್ ಶೆಟ್ಟಿ, ಅದ್ವಿತಿ ಶೆಟ್ಟಿ, ರಾಜ್ ದೀಪಕ್ ಶೆಟ್ಟಿ, ಅರವಿಂದ್ ಬೋಳಾರ್, ನವೀನ್ ಡಿ. ಪಡೀಲು, ಬೋಜ ರಾಜ ಸಂದೀಪ್, ಪ್ರಸನ್ನ ಶೆಟ್ಟಿ ಬೈಲೂರು, ಉಮೇಶ್ ಮಿಜಾರ್ ಮುಂತಾದವರು.

ರಾಜಕೀಯ ಮತ್ತು ರಾಜಕರಣಿಗಳು ಯಾವ ದೇಶವಾಗಲಿ, ಯಾವ ರಾಜ್ಯವಾಗಲಿ ಅದರದ್ದೇ ಆದ ಖದರು, ಮೋಸ, ವಂಚನೆ, ಒಳ ಸಂಚು, ನಯವಂಚನೆಗೆ ಕೊನೆ ಇರುವುದಿಲ್ಲ. ಅಂಥಹದ್ದೇ  ಕಥಾಂದರವನ್ನು ಹೊಂದಿರುವ ಈ ವಾರ ಬಿಡುಗಡೆ ಆಗಿರುವ ಚಿತ್ರ  “ಜೈ”
ಈ ಚಿತ್ರ ಕನ್ನಡ ಹಾಗೂ ತುಳು ಭಾಷೆಗಳಲ್ಲಿ
ಬಿಡುಗಡೆಗೊಂಡಿದೆ. ಚಿತ್ರದ ನಾಯಕ ನಟ ಆಗಿ
ನಟಿಸಿರುವ ರೂಪೇಶ್ ಶೆಟ್ಟಿ ಮಂಗಳೂರಿನ ಖಾಸಗಿ ಕೇಬಲ್ ನೆಟ್ ವರ್ಕ್ ನಲ್ಲಿ ನಿರೂಪಕನಾಗಿ ಗುರುತಿಸಿಕೊಂಡು
ಈಗಾಗಲೇ ಹಲವಾರು ಚಿತ್ರಗಳ ಹಾಗೂ ಬಿಗ್ ಬಾಸ್ ಮೂಲಕ ಜನಪ್ರಿಯವಾಗಿದ್ದಾರೆ.
ಈ ವಾರ ತೆರೆಕಂಡ ಜೈ ಚಿತ್ರದಲ್ಲಿ
ಪೂರ್ಣ ಮಟ್ಟದ ನಾಯಕ ನಟನಾಗಿ ನಟಿಸಿದ್ದಾರೆ.

ಅದು ಸಿಂಹಬೆಟ್ಟು ಎಂಬ ಸಣ್ಣ ಗ್ರಾಮ ಅಲ್ಲಿ ಒಂದೂರಿಂದ ಒಂದೂರಿಗೆ ಹೋಗಲು ನದಿ ಅಡ್ಡ ದಾಟಲು ಸೇತುವೆ ಇಲ್ಲ. ಯಾರಿಗಾದರೂ ಆಸ್ಪತ್ರೆಗೆ ಹೋಗಬೇಕಾದರೆ ನದಿ ದಾಟಬೇಕು. ಈ ಸಮಸ್ಯೆ ಗೊತ್ತಿದ್ದರು ಆ ಕ್ಷೇತ್ರದ ಶಾಸಕ ಜನರಿಗೆ ಸಹಾಯ ಮಾಡುವ ಬದಲು ಅಲ್ಲಿನ ಜನರನ್ನು ಗುಳೇ ಎಬ್ಬಿಸಿ ಖಾಸಗಿ ಬಂಡವಾಳ ಶಾಹಿಗಳಿಗೆ ಮಾರುವ ಹುನ್ನಾರ.

ಅವನ ಮಸಲತ್ತು ತಿಳಿಯದ ನಾಯಕ ಅವನಿಗೆ ಸದಾ ಜೈ ಅನ್ನುತ್ತಾ, ಅವನು ಹೇಳಿದಂತೆ ಪ್ರತಿಭಟನೆ ಗಳನ್ನು ಮಾಡುತ್ತಾ ಒಂದಷ್ಟು ಹಣ ಗಳಿಸುತ್ತಾ ಅವನ ಹಿಂದೆ ತಿರುಗಿಕೊಂಡು, ತನ್ನದೇ ಕಬ್ಬಡ್ಡಿ ತಂಡ ಕಟ್ಟಿಕೊಂಡು MLA ಸಾಥ್ ನೊಂದಿಗೆ ಕಾಲ ಕಳೆಯುತ್ತಿರುತ್ತಾನೆ.
ಊರಿಗೆ ಬೇಕಾದ ಸೇತುವೆ, ಆಸ್ಪತ್ರೆಯ ಬಗ್ಗೆ ಅಷ್ಟೇನು ತಲೆ ಕೆಡಿಸಿಕೊಳ್ಳದೇ ಇರುವ ಇವನಿಗೆ ತನ್ನ ತಾಯಿಯ ಸಾವಿನಿಂದ ಅವನಿಗೆ ಜ್ಞಾನೋದಯ ವಾಗುತ್ತದೆ. ಅಲ್ಲಿಂದ
ಶಾಸಕನ ನಿಜವಾದ ಬಣ್ಣ ಗೊತ್ತಾದ ಬಳಿಕ ಅವನ ವಿರುದ್ಧ ಶಡ್ಯಂತರ ಮಾಡಿ ಅವನನ್ನೇ ಸೋಲಿಸಿ ಊರಿಗೆ ಒಳ್ಳೆಯದನ್ನು ಮಾಡುತ್ತಾನೆ.
ಅದರಿಂದಾಗಿ ಎರಡು ಊರಿನ ನಡುವೆಸೇತುವೆಯನ್ನು‌ ಕಟ್ಟಿಸಿ ಗ್ರಾಮದಲ್ಲಿ ಬದಲಾವಣೆ ತರುತ್ತಾರೆ.
ಇದು ಕಥೆಯ ಮೂಲ ಹಂದರ.

ವಿಶೇಷ ಪಾತ್ರದಲ್ಲಿ ಸುನಿಲ್ ಶೆಟ್ಟಿ
ಕಾಣಿಸಿಕೊಂಡಿದ್ದಾರೆ. ಸಿನಿಮಾದ ಕೊನೆಯಲ್ಲಿ ಚುನಾವಣೆಯ ಪ್ರಚಾರಕ್ಕೆ  ಆಗಮಿಸುವ
ಸುನಿಲ್ ಶೆಟ್ಟಿ ಪಾತ್ರದಿಂದ ಚಿತ್ರದ ತೂಕ ಹೆಚ್ಚಾಗಿದೆ.

ಕಡಲ ತೀರದ ರಾಜಕೀಯ, ಅಲ್ಕಿನ ಸಮಸ್ಯೆ ಹೇಗಿರುತ್ತೆ ಅಲ್ಲಿನ ಜನರ ಸಮಸ್ಯೆಗಳು ಹಾಗೂ ಬೇಡಿಕೆಗಳು ಏನು ಅನ್ನುವುದನ್ನು ಚಿತ್ರದಲ್ಲಿ ಚನ್ನಾಗಿ ಬಿಂಬಿಸಲಾಗಿದೆ. ಕಥೆಯ ನಿರೂಪಣೆಯನ್ನು ನಿರ್ದೇಶಕರು ಚನ್ನಾಗಿ ಕಟ್ಟಿಕೊಂಡಿದ್ದಾರೆ.
ಚಿತ್ರದ ಮೇಕಿಂಗ್  ಅದ್ದೂರಿಯಾಗಿದೆ.
ಚಿತ್ರದಲ್ಲಿ ಸಂಗೀತ ಮತ್ತು ಹಾಡುಗಳು ಹಾಗೂ ಫೈಟ್ ಗಳು ಚಿತ್ರಕ್ಕೆ ಪೂರಕವಾಗಿದೆ.
ಛಾಯಾಗ್ರಹಣ ತುಂಬಾ ಚನ್ನಾಗಿದೆ ಮೂಡಿಬಂದಿದೆ.

ರೂಪೇಶ್ ಶೆಟ್ಟಿ ನಟನೆಯಲ್ಲಿ ಎಲ್ಲರ ಗಮನ ಸೆಳೆಯುತ್ತಾರೆ.

ಅದ್ವಿತಿ ಶೆಟ್ಟಿ ನಿರೂಪಕಿಯಾಗಿ ಚಿತ್ರದಲ್ಲಿ ಕಥಾ ನಾಯಕಿಯಾಗಿ ಪಾತ್ರ ನಿರ್ವಹಿಸಿದ್ದಾರೆ.ಹಾಗೇ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಸುನಿಲ್‌ ಶೆಟ್ಟಿ ಖಡಕ್ಕಾಗಿ
ಮಾಸ್ ಎಂಟ್ರಿ ಕೊಟ್ಟಿದ್ದಾರೆ. ಸುನೀಲ್ ಶೆಟ್ಟಿ ಚಿತ್ರದ ಪ್ಲಸ್ ಪಾಯಿಂಟ್ ಎನ್ನಬಹುದು.
ಗೆಳೆಯ MLAಯ ಚುನಾವಣಾ ಪ್ರಚಾರಕ್ಕೆ ಬರುವ ಇವರು ಲಂಚ ತೆಗೆದುಕೊಂಡು ಓಟು ಮಾರಿಕೊಳ್ಳಬೇಡಿ. ಹೆಂಡ, ಹಣಕ್ಕೆ ಸೋತು ಅನರ್ಹರಿಗೆ ಮತ ನೀಡಿದರೆ ಕಷ್ಟ ಅನುಭವಿಸಬೇಕಾಗುತ್ತದೆ. ನಮ್ಮ ಊರು, ನಮ್ಮ ಪರಿಸರ ನಾವೇ ಸರಿಪಡಿಸಿಕೊಳ್ಳಬೇಕು ಎಂಬ ಸಂದೇಶವನ್ನು ಸುನೀಲ್ ಶೆಟ್ಟಿ ಈ ಚಿತ್ರದ ಮೂಲಕ ನೀಡಿದ್ದಾರೆ.

MLA ಪಾತ್ರದಲ್ಲಿ ರಾಜ್ ದೀಪಕ್ ಶೆಟ್ಟಿ  ಅಭಿನಯಿಸಿದ್ದಾರೆ.

ರಾಜ್ ದೀಪಕ್ ಶೆಟ್ಟಿ, ಅರವಿಂದ್ ಬೋಳಾರ್, ನವೀನ್ ಡಿ. ಪಡೀಲು, ಬೋಜ ರಾಜ ಸಂದೀಪ್, ಪ್ರಸನ್ನ ಶೆಟ್ಟಿ
ಉಳಿದಂತೆ ಚಿತ್ರದ ಎಲ್ಲಾ ಕಲಾವಿದರು ತಮ್ಮ ಪಾತ್ರಕ್ಕೆ
ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದಾರೆ.

ನಿರ್ಮಾಪಕರುಗಳು ಒಂದೊಳ್ಳೆಯ ಚಿತ್ರಕ್ಕೆ ಹಣ ಹಾಕಿ ಜೈ ಎಂದಿದ್ದಾರೆ.

ಒಟ್ಟಿನಲ್ಲಿ ಒಂದು ಕ್ಲಾಸ್ ಮತ್ತು ಮಾಸ್ ನಿಂದ ಕೂಡಿರುವ ಹಾಸ್ಯದ ಕಚಗುಳಿ ಇಡುವ, ಕರಾವಳಿ ತಂಡದ ಕರಾವಳಿ ಭಾಗದ ಕಥೆಯ ಚಿತ್ರವನ್ನು ಕೊಟ್ಟ ಹಣಕ್ಕೆ ಮೋಸವಿಲ್ಲದಂತೆ ನೋಡಬಹುದಾಗಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor