Hayagreeva movie review ಹಯಗ್ರೀವ ಚಿತ್ರ ವಿಮರ್ಶೆ- ಪ್ರಾಣಿ ತಲೆಗಳೊಂದಿಗೆ ಮನುಷ್ಯನ ಕಾದಾಟ

ಚಿತ್ರ –    ಹಯಗ್ರೀವ
ನಿರ್ಮಾಪಕರು – ಸಮೃದ್ಧಿ ಮಂಜುನಾಥ್
ನಿರ್ದೇಶನ – ರಘು ಕುಮಾರ್
ಛಾಯಾಗ್ರಹಣ – ಗಿರೀಶ್ ಗೌಡ
ಸಂಗೀತ – ಜ್ಯೂಡ ಸ್ಯಾಂಡಿ
ಸಂಕಲನ – ಕೆ.ಎಂ. ಪ್ರಕಾಶ್.

Rating -3/5

ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ

ಕಲಾವಿದರು :  ಧನವೀರ್, ಸುನೀಲ್ ರಾವ್, ಸಂಜನಾ ಆನಂದ್, ಸಾದುಕೋಕಿಲ, ಶರತ್ ಲೊಹಿತಾಶ್ವ, ರಮೇಶ್ ಭಟ್, ಶೋಭರಾಜು, ಸಂಗೀತ, ಅಶ್ವಿನಿ ಗೌಡ, ಅಶ್ವಿನ್ ಹಾಸನ್ ಮುಂತಾದವರು.

ಧನ್ವೀರ್ ನಟನೆಯ ಮತ್ತೊಂದು ಸಿನಿಮಾ ‘ಹಯಗ್ರೀವ’ ರಿಲೀಸ್ ಆಗಿದೆ.
ಹಯಗ್ರೀವ ವಿಷ್ಣುವಿನ ಅವತಾರಗಳಲ್ಲಿ ಇದು ಕೂಡ ಒಂದು ಮನುಷ್ಯನ ದೇಹ ಕುದುರೆಯ ಮುಖವಿರುತ್ತದೆ.

ಈ ಚಿತ್ರಕ್ಕೆ ಹಯಗ್ರೀವ ಎಂಬ ಹೆಸರಿಡಲು ಚಿತ್ರದ ಪ್ರಾರಂಭದಲ್ಲೇ ಅದರ ವಿಶ್ಲೀಷಣೆಯನ್ನು ನೀಡಿದ್ದಾರೆ.


ಚಿತ್ರದಲ್ಲಿ ಕಥಾನಾಯಕನ ಹೆಸರು ಕೂಡ ಹಯಗ್ರೀವ( ಧನ್ ವೀರ್) ಈತ ವೃತ್ತಿಯಲ್ಲಿ ಪೋಲೀಸ್ ಇನ್ಸಪೆಕ್ಟರ್ ಯೂನಿಫಾಂ ಹಾಕೋದಕ್ಕಿಂತ  ಮಫ್ತಿಯ ಕಾರ್ಯಾಚರಣೆ ಹೆಚ್ಚು.

ಧನ್ವೀರ್ ಪಾತ್ರ ತುಂಬಾ ರಫ್ ಅಂಡ್ ಟಫ್ ಆಗಿದೆ ಧನ್ವೀರ್ ಎರಡು ಶೇಡ್ ಗಳಲ್ಲಿ ಈಡೀ ಚಿತ್ರದಲ್ಲಿ ಆವರಿಸಿದ್ದಾರೆ, ಈ ಪಾತ್ರ ಪ್ರೇಕ್ಷಕರಿಗೆ ಅದರಲ್ಲೂ ಆಕ್ಷನ್ ಪ್ರಿಯರಿಗೆ ಇಷ್ಟವಾಗುತ್ತದೆ. ಧನವೀರ್ ಮೊದಲ ಬಾರಿಗೆ ಪೋಲೀಸ್ ಇನ್ಸ್ಪೆಕ್ಟರ್ ಆಗಿ ಅಭಿನಯಿಸಿದ್ದಾರೆ.  ಆಗಾಗ ಖಾಕಿ ಧರಿಸಿದರು ಖಾಕಿಯ ಗತ್ತು, ತೆರೆಯ ಮೇಲೆ ಕಾಣಿಸುತ್ತದೆ. ಇದೊಂದು ಮರ್ಡರ್, ಕ್ರೈಂ, ಥ್ರಿಲ್ಲರ್ ಚಿತ್ರವಾಗಿದ್ದು. ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡುತ್ತದೆ.


ಹೀರೋ ಇದ್ದಮೇಲೆ ಒಬ್ಬ ವಿಲನ್ ಇರಲೇ ಬೇಕಲ್ಲ. ವಿಲನ್ ಇದ್ದಾನೆ, ಆದ್ರೆ ಅವನು ವಿಚಿತ್ರವಾಗಿ ಕೊಲೆ ಮಾಡುತ್ತಿರುತ್ತಾನೆ.
ಮನುಷ್ಯರನ್ನು ಕಿಡ್ನಾಪ್ ಮಾಡಿ ಅವರ ತಲೆ ಕಡಿದು ಅವರಿಗೆ ಪ್ರಾಣಿಗಳ ತಲೆ ಜೋಡಿಸುತ್ತಾನೆ ಇದೇ ಇವನ ಜೀವನ. ಆಧುನಿಕ ವೈಜ್ಞಾನಿಕತೆಯ ಜೊತೆಗೆ ಪುರಾಣದ ವಿಷಯಗಳನ್ನು ಕಥೆಯಲ್ಲಿ ಮಿಶ್ರಿತಗೊಳಿಸಲಾಗಿದೆ.


ಎಕ್ಸ್ ಕ್ಯೂಸ್ ಮಿ ಚಿತ್ರದ ಮೂಲಕ ಜನಪ್ರಿಯ ವಾಗಿದ್ದ ಸುನೀಲ್ ರಾವ್ ತುಂಬಾ ವರ್ಷಗಳ ನಂತರ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ.
ಹಾಗೆಯೇ ಅವರ ಅಭಿನಯ ತುಂಬಾ ಚನ್ನಾಗಿ ಮೂಡಿ ಬಂದಿದೆ.

ಇಲ್ಲಿ ಪ್ರೀತಿ, ಪ್ರೇಮ, ಸೆಂಟಿಮೆಂಟ್ ಆಕ್ಷನ್, ಪ್ರಣಯ, ಸಸ್ಪೆನ್ಸ್, ಎಲ್ಲವೂ ಇದೆ.

ಚಿತ್ರದಲ್ಲಿ ಗಿರೀಶ್ ಗೌಡರವರ ಛಾಯಾಗ್ರಹಣ ತುಂಬಾ ಚನ್ನಾಗಿದೆ‌. ಮತ್ತು ಜ್ಯೂಡಾ ಸ್ಯಾಂಡಿ ಸಂಗೀತ ಕೂಡ ಚನ್ನಾಗಿ ಮೂಡಿಬಂದಿದೆ.
ಸಂಜನ ಆನಂದ್ ಕಥಾನಾಯಕಿಯಾಗಿ ಪೋಲೀಸ್ ಇನ್ಸ್ಪೆಕ್ಟರ್ ಹೆಂಡತಿಯಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಆದರೆ ಸ್ರೀನ್ ಮೇಲೆ ಹೆಚ್ಚಾಗಿ ಅವರಿಗೆ ಅವಕಾಶವಿಲ್ಲ.
ನಿರ್ದೇಶಕರಾದ ರಘು ಕುಮಾರ್ ಒಂದು ವಿಭಿನ್ನವಾದ ಕಥೆಯನ್ನು ಪುರಾಣದ ಹಿನ್ನೆಲೆಗೆ ವೈಜ್ಞಾನಿಕ ತಂತ್ರಜ್ಞಾನವನ್ನು ಚನ್ನಾಗಿ ಜೋಡಿಸಿ ತೆರೆಯ ಮೇಲೆ ತಂದಿದ್ದಾರೆ. ಅವರ ಚಿತ್ರಕಥೆ ಮತ್ತು ನಿರ್ದೇಶನ ಚನ್ನಾಗಿದೆ.

ಚಿತ್ರದ ನಿರ್ಮಾಪಕರು ಸಮೃದ್ಧಿ ಮಂಜುನಾಥ್ ರವರು ರಾಜಕರಣಿಯಾಗಿದ್ದು ಒಂದು ಆಕ್ಷನ್, ಥ್ರಿಲ್ಲರ್ ಕ್ರೈಂ ಚಿತ್ರವನ್ನು ನಿರ್ಮಿಸಿ ಪ್ರೇಕ್ಷಕರಿಗೆ ನೀಡಿದ್ದಾರೆ.
ಚಿತ್ರದಲ್ಲಿ ಎಲ್ಲಾ ಪಾತ್ರಗಳು ಚನ್ನಾಗಿ ಮೂಡಿಬಂದಿದೆ.

ಫಸ್ಟ್ ಹಾಫ್ ಇಂಟ್ರೆಸ್ಟಿಂಗ್ ಆಗಿದ್ರೂ, ಸಿನಿಮಾವನ್ನು ತುಂಬಾನೇ ಎಳೆದಿದ್ದಾರೆ. ಕೆಲವು ಕಡೆ ಒಂದಷ್ಟು ಟ್ರಿಮ್ ಮಾಡಿದ್ರೆ ಹಯಗ್ರೀವ ಇನ್ನೂ ಚೆನ್ನಾಗಿ ಇರುತ್ತಿತ್ತು.

ಕೆಲವು ಪಾತ್ರಗಳು ಹೀಗೆ ಬಂದು ಹಾಗೆ ಹೋಗುತ್ತವೆ. ಇನ್ನು ಗಿಲ್ಲಿಗೆ ಈ ಸಿನಿಮಾದಲ್ಲಿ ಅಂತ ದೊಡ್ಡ ಪಾತ್ರವೇನು ಇಲ್ಲ. ಕ್ರೈಂ ಸಸ್ಪೆನ್ಸ್ ಇಷ್ಟ ಪಡೋರಿಗೆ ಈ ಸಿನಿಮಾ ಇಷ್ಟ ಆಗುತ್ತೆ. .

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor