Guri movie reviwe review ಚಿತ್ರ ವಿಮರ್ಶೆ -“ಗುರಿ” ಮತ್ತೊಂದು ಸರ್ಕಾರಿ ಪ್ರಾಥಮಿಕ ಶಾಲೆಯ ಕಥೆ.

ಚಿತ್ರ ವಿಮರ್ಶೆ – ಮಂಜುರಾಜ್ ಸೂರ್ಯ

ಚಿತ್ರ – ಗುರಿ
ನಿರ್ಮಾಪಕರು – ವಿಷ್ಣು ದುರ್ಗಾ ಪ್ರೊಡಕ್ಷನ್
ನಿರ್ದೇಶನ –  ಸೆಲ್ವಂ ಮುತ್ತಪ್ಪನ್
ಛಾಯಾಗ್ರಹಣ – ಸೆಲ್ವಂ
ಸಂಗೀತ – ಪಳನಿ ಡಿ. ಸೇನಾಪತಿ
Rating – 3/5

ಕಲಾವಿದರು -ಟಿ.ಎಸ್. ನಾಗಾಭರಣ, ಅವಿನಾಶ್, ಜಯಶ್ರೀ, ಅಚ್ಯುತ್ ಕುಮಾರ್, ಉಗ್ರಂ ಮಂಜು, ಚಂದ್ರಪ್ರಭ, ಮಿಮಿಕ್ರಿ ಗೋಪಿ, ಪವನ್, ಮಲ್ಲು, ಸಂದೀಪ್ ಮಲಾನಿ, ಜಾಕ್,  ಮಾ|| ಮಹಾನಿಧಿ, ಮಾ||ಜೀವಿತ್ ಭೂಷಣ್. ಮುಂತಾದವರು.

ಇದು ಮತ್ತೊಂದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಥೆ.
ಅಪರೂಪಕ್ಕೆ ಪರಿಪೂರ್ಣ ಮಕ್ಕಳ ಚಿತ್ರ “ಗುರಿ” ಈ ವಾರ ಬಿಡುಗಡೆಯಾಗಿದೆ.
ಇಲ್ಲಿ ಪ್ರಾರಂಭದಿಂದ ಕೊನೆಯವರೆಗೂ ಮಕ್ಕಳು ರಂಜಿಸಿದ್ದಾರೆ, ಆಟ, ಪಾಟಗಳ, ತರಲೆ ತುಂಟಾಟಗಳ ನಡುವೆ ಸಮಾಜದ ಕಣ್ಣು ತೆರೆಸುತ್ತಾರೆ.

ಅದು ಕುಪ್ಪಳಿ ಗ್ರಾಮದ, ತೇರಳ್ಳಿ ಬೆಟ್ಟದ ಮೇಲೆ ಅಳಿದು ಉಳಿದ ಸರಕಾರಿ ಶಾಲೆಯ ಕಥೆ.
ಆದೊಂದು ಪುಟ್ಟ ಗ್ರಾಮ, ಆ ಗ್ರಾಮದ ಮಕ್ಕಳಿಗೆ ಓದಲು ಬೆಟ್ಟದ ಮೇಲೊಂದು ಸರ್ಕಾರಿ ಶಾಲೆ. ಖಾಸಗಿ ಶಾಲೆಯ ಹುನ್ನಾರದಿಂದ ಸರ್ಕಾರಿ ಶಾಲೆಯನ್ನು ಮುಚ್ಚಿ ಬಿಡುತ್ತಾರೆ. ಆ ಶಾಲೆಯನ್ನು ಶತಾಯ ಗತಾಯ ಕಷ್ಟ ಪಟ್ಟು ಮತ್ತೆ ಪ್ರಾರಂಭಿಸುವ ಮಕ್ಕಳ ಸಾಹಸವೇ ಈ ಚಿತ್ರದ ಒನ್ ಲೈನ್ ಕಥೆ.

ನಿರ್ದೇಶಕ ಸೆಲ್ವಂ ಮುತ್ತಪ್ಪನ್ ಕಥೆಯ ನಿರೂಪಣೆಯನ್ನು ಚನ್ನಾಗಿ ನಿರ್ವಹಿಸಿದ್ದಾರೆ. ಸರ್ಕಾರಿ ಶಾಲೆಗಳನ್ನು ಮುಚ್ಚುವ, ಮುಚ್ಚಿಸುವ ಅಧಿಕಾರಿಗಳ, ಮತ್ತು ಬಂಡವಾಳ ಶಾಹಿಗಳ ಹುನ್ನಾರವನ್ನು ಚನ್ನಾಗಿ ತೋರಿಸಿದ್ದಾರೆ. ಹಾಗೂ ಇಬ್ಬರು ಮಕ್ಕಳು ಶಾಲೆಗಾಗಿ ಬೆಂಗಳೂರೆಂಬ ಮಹಾನಗರಕ್ಕೆ ಬಂದು ಅಲ್ಲಿ ಅವರು ಮುಖ್ಯಮಂತ್ರಿಯನ್ನು ಬೇಟಿ ಮಾಡುವ ನಡುವೆ ಮಕ್ಕಳ ಕಳ್ಳತನ, ಬಾಲ್ಯ ಕಾರ್ಮಿಕರ, ಮತ್ತು ಮಕ್ಕಳ ದೇಹದ ಅಂಗಾಂಗ ಕಳ್ಳತನ ಗಳಂತಹ ಹಲವಾರು ವಿಷಯಗಳನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ.


ಬಹಳ ವರ್ಷಗಳ ನಂತರ ಪರಿಪೂರ್ಣ ಮಕ್ಕಳ ಚಿತ್ರ ಬಿಡುಗಡೆ ಯಾಗಿರುವುದು ವಿಶೇಷ ಎನ್ನಬಹುದು.
ಚಿತ್ರದಲ್ಲಿ ಮಾಸ್ಟರ್, ಮಹಾನಿಧಿ, ಮಾಸ್ಟರ್ ಜೀವಿತ್ ಭೂಷಣ್ ಕಥಾನಾಯಕರಾಗಿ ಅಭಿನಯಿಸಲು ಬಹಳ ಪ್ರಯತ್ನ ಪಟ್ಟಿದ್ದಾರೆ.
ಈ ಮಕ್ಕಳ ಕುಡುಕ ಅಪ್ಪನಾಗಿ ಉಗ್ರಂ ಮಂಜು ತಮ್ಮ ಉಗ್ರವಾತಾರ ತೋರುವುದರ ಮೂಲಕ ಹಾಗೂ ಕುಡಿತವನ್ನು ತ್ಯಜಿಸಿ ಸಹಜ ಬದುಕಿಗೆ ಮರಳುವ ಪಾತ್ರವನ್ನು ಸಹಜ ಅಭಿನಯದೊಂದಿಗೆ ಕಟ್ಟಿಕೊಟ್ಟಿದ್ದಾರೆ.
ಹಾಗೆಯೇ ಜಯಶ್ರೀ ಮಕ್ಕಳ ತಾಯಿಯಾಗಿ ಚನ್ನಾಗಿ ಪಾತ್ರ ನಿಭಾಯಿಸಿದ್ದಾರೆ. ಹಾಗೂ ಉಮಾಶ್ರೀಯವರನ್ನು ನೆನಪಿಸುತ್ತಾರೆ.
ಅಚ್ಚ್ಯುತ್ ಕುಮಾರ್ ಸ್ಕೂಲ್ ಮಾಸ್ಟರ್ ಆಗಿ ಮಕ್ಕಳಿಗೆ ಪಾಠ ಹೇಳುವ ಮೂಲಕ ಖಾಸಗಿ ಶಾಲೆಯ ಹಿಂದೆ ಬಿದ್ದ ಅಪ್ಪ ಅಮ್ಮನಿಗೂ ಪಾಠ ಹೇಳಿದ್ದಾರೆ. ಹಾಗೆಯೇ ಶಾಲೆಯನ್ನು ಉಳಿಸಿಕೊಳ್ಳಲು ಬಹಳ ಒದ್ದಾಡುವ ಸನ್ನಿವೇಷಕ್ಕೆ ಜೀವ ತುಂಬಿದ್ದಾರೆ.
ಮುಖ್ಯಮಂತ್ರಿಯಾಗಿ ನಾಗಾಭರಣ ಕೂಡ ಚಿತ್ರ ತಂಡದಲ್ಲಿ ಒಬ್ಬರಾಗಿದ್ದಾರೆ.
ಈ ಚಿತ್ರ ಸಮಾಜಕ್ಕೆ ಮಾದರಿಯಾಗುವಂತ, ಸಮಾಜದ ತಂದೆ ತಾಯಿಯರನ್ನು ಎಚ್ಚರಿಸುವಂತ ಚಿತ್ರ ಎನ್ನಬಹುದು.
ಚಿತ್ರದಲ್ಲಿ ಎರಡು ಸನ್ನಿವೇಶಕ್ಕೆ ತಕ್ಕಂತೆ ಹಾಡುಗಳನ್ನು ಬಳಸಿಕೊಳ್ಳಲಾಗಿದೆ. ಪಳನಿ ಸೇನಾಪತಿ ಸಂಗೀತದ ಜವಾಬ್ಧಾರಿಯನ್ನು ಚನ್ನಾಗಿ ನಿಭಾಯಿಸಿದ್ದಾರೆ. ಹಾಗೂ ಸೆಲ್ವಂ ತಮ್ಮ ಕ್ಯಾಮರಾದ ಮೂಲಕ ಹಳ್ಳಿಯ ಪರಿಸರವನ್ನು ಚನ್ನಾಗಿ ತೋರಿಸಿದ್ದಾರೆ.
ಇದು ಕಮರ್ಷಿಯಲ್ ಚಿತ್ರ ಅಲ್ಲದಿದ್ದರು ಕಮರ್ಷಿಯಲ್ ಮನಸ್ಸುಗಳ ಮನ ತಟ್ಟುವಂತಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor