GST movie review. GST ಚಿತ್ರ ವಿಮರ್ಶೆ – ಮಜಾ ಟಾಕೀಸ್ ನಲ್ಲಿ ದೆವ್ವಗಳ ಆಟ
ಚಿತ್ರ – GST.
ನಿರ್ಮಾಪಕರು -ಸಂದೇಶ್ N.
ನಿರ್ದೇಶನ – ಸೃಜನ್ ಲೋಕೆಶ್
ಛಾಯಾಗ್ರಹಣ – ಗುಂಡ್ಲುಪೇಟೆ ಸುರೇಶ್
ಸಂಗೀತ – ಚಂದನ್ ಶೆಟ್ಟಿ
ಸಂಕಲನ – ಗಣೇಶ್ ಮಲ್ಲಯ್ಯ
Rating -3/5
ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ಅಶೋಕ್, ವಿನಯ್ ಪ್ರಕಾಶ್
ಸೃಜನ್ ಲೋಕೆಶ್, ತಬಲ ನಾಣಿ, ಗಿರಿಜಾ ಲೋಕೇಶ್, ಗಿರಿಶೀ ಶಿವಣ್ಣ, ವಿನೋದ್ ಗೊಬ್ಬರಗಾಲ, ಶೋಭರಾಜ್, ರವಿಶಂಕರ್ ಗೌಡ, ರಜನಿ ಭಾರಧ್ವಜ್, ಶರತ್ ಲೋಹಿತಾಶ್ವ, ಸಂದೇಶ್, ವೀಣಾ ಸುಂದರ್, ಸುಂದರ್ ಮುಂತಾದವರು

ಅವನು ಕಾಲಿಟ್ಟ ದಿನ ಸ್ಕೂಲ್ ಬಿಲ್ಡಿಂಗ್ ಬಿದ್ದೋಗುತ್ ಮನೆಯಲ್ಲಿ ಟಿವಿ ಆನ್ ಮಾಡಿದ್ರೆ ಟಿವಿ ಸುಟ್ಟೋಗುತ್ತೆ, ಅಪ್ಪ ಹೊಸ ಬಿಸಿನೆಸ್ ಶುರು ಮಾಡಿದ ದಿನ ಇವನು ಕಾಲಿಟ್ಟ ಕೂಡಲೇ ಲಾಕ್ ಡೌನ್ ಆಗುತ್ತೆ.
ಏನ್ ಮಾಡಿದ್ರು ಲತ್ತೆ ಕನೆಗೆ ಅಮ್ಮ ಕೂಡ ಇವನನ್ನು ಕಾಪಾಡಿ ಆಕ್ಸಿಡೆಂಟ್ ಆಗಿ ಸತ್ತೋಗುತ್ತಾಳೆ. ಅಪ್ಪ ಇವನನ್ನು ಕೋಪದಿಂದ ನೀನು ಸಾಯಿ ನಿನ್ನ ಸತ್ತ ಮುಖ ನೋಡಿದ ದಿನ ನಾನು ನೆಮ್ಮದಿಯಾಗಿರ್ತೀನಿ ಅಂತ ಮನೆಯಿಂದ ಹೊರಗೆ ಹಾಕುತ್ತಾರೆ. ಆಗ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟವನಿಗೆ ಅವಧೂತರ ದರ್ಶನವಾಗುತ್ತೆ.
ಅವರು ಇವನಿಗೆ ದೀರ್ಘಾಯುಶ್ಮಾನ್ ಅಂತ ಆಶೀರ್ವದಿಸುತ್ತಾರೆ.
ಆದರೂ ಸಾಯಲು ಹೋದವನಿಗೆ ಸಿಗುವುದು ಈಗಾಗಲೇ ಸತ್ತು ಮಣ್ಣಲ್ಲಿ ಮಣ್ಣಾದ ಪ್ರೇತಾತ್ಮಗಳು.
ಅವು ಇವನಿಗೆ ಸಾಯಲು ಬಿಡುವುದಿಲ್ಲ. ಅವುಗಳ ಜೊತೆ ಸ್ನೇಹ ಬೆಳಸಿ, ಅವುಗಳಿಂದ ತಾನು ಪ್ರೀತಿಯನ್ನು ಪಡೆಯುತ್ತಾನೆ, ಹಣದ ಅವಶ್ಯಕಥೆಯಿಂದಲೇ ಸತ್ತ ಆ ಆತ್ಮಗಳಿಗೆ ಹಣ ಕೊಡಿಸಲು ಅವುಗಳ ಸಹಾಯದಿಂದ ಬ್ಯಾಂಕ್ ದರೋಡೆ ಮಾಡಲು ಸ್ಕೆಚ್ ಹಾಕುತ್ತಾನೆ.
ಅಷ್ಟಕ್ಕೂ ಆ ಹಣದಿಂದ ಈಗಾಗಲೇ ಸತ್ತು ಹೋಗಿರುವ ಈ ಆತ್ಮಗಳಿಗೆ ಈಗ ಹಣತೆಗೆದು ಕೊಂಡು ಏನು ಮಾಡುತ್ತವೆ, ಅವನು ಹೇಗೆ ದೆವ್ವಗಳ ಸಹಾಯದಿಂದ ಬ್ಯಾಂಕ್ ಲೂಟಿ ಮಾಡುತ್ತಾರೆ, ಕೊನೆಗೆ ನಾಯಕ ನಿಜಕ್ಕೂ ಹೇಗೆ ಲಕ್ಕಿಯಾಗುತ್ತಾನೆ., ಅನ್ನುವುದನ್ನು ತಿಳಿಯಲು ಚಿತ್ರ ನೋಡಬೇಕಾಗುತ್ತದೆ.
ಸೃಜನ್ ಲೋಕೆಶ್ ಮೊದಲಬಾರಿಗೆ ನಿರ್ದೇಶನ ಮಾಡಿರುವ ಚಿತ್ರ ಇದಾಗಿದೆ. ಮೊದಲ ನಿರ್ದೇಶನವಾದರೂ ಚನ್ನಾಗಿಯೇ ಚಿತ್ರವನ್ನು ಮಾಡಿದ್ದಾರೆ.
ಚಂದನ್ ಶೆಟ್ಟಿ ಮ್ಯೂಸಿಕ್ ನಲ್ಲಿ ತಾಯಿ ದೇವರೇ ದೂರ ಹೋದರೆ ಕಣ್ಣನೀರಿಗೆ ಕೊನೆ ಎಲ್ಲಿದೆ”
ಸಾಧು ಧ್ವನಿಯಲ್ಲಿ ಮನ ಮುಟ್ಟುವಂತೆ ಈ ಗೀತೆ ಮೂಡಿ ಬಂದಿದೆ.
ಇಲ್ಲಿ ದೆವ್ವಗಳು ಅಂದ್ರೆ ಇವು ಒಳ್ಳೆಯ ದೆವ್ವಗಳು. ನಾಯಕನಿಗೆ ಇಷ್ಟಪಟ್ಟ ಹುಡುಗಿಯೊಂದುಗೆ ಲವ್ ಮಾಡಿಸುತ್ತವೆ, ಬ್ಯಾಂಕ್ ಲೂಟಿಗೂ ಸಹಾಯ ಮಾಡುತ್ತವೆ.
ಕಥಾನಾಯಕಿಯಾಕಿ ರಜನಿ ಭಾರಧ್ವಜ್ ಚನ್ನಾಗಿ ಅಭಿನಯಿಸಿದ್ದಾರೆ.
ಹಾಗೆ ಚಿತ್ರದಲ್ಲಿ ಅಭಿನಯಿಸಿರುವ ಎಲ್ಲಾ ಕಲಾವಿದರು ಚನ್ನಾಗಿ ಪಾತ್ರಗಳನ್ನು ನಿಭಾಯಿಸಿದ್ದಾರೆ.
ಈ ಕಥೆಯಲ್ಲಿ ಮುಖ್ಯವಾಗಿ ಎಲ್ಲರಿಗೂ ಹಣ ಬೇಕು. ಜೀವಾತ್ಮಗಳಿಗೂ ಹಾಗೂ ಪ್ರೇತಾತ್ಮಗಳಿಗೂ ಹಣದ ಅವಶ್ಯಕಥೆ ಇರುತ್ತದೆ. ಸತ್ತವರ ಕುಟುಂಬಗಳು ಕಷ್ಟದಲ್ಲಿರುತ್ತವೆ ಆ ನೋವಿನಿಂದ ಇರುವ ದೆವ್ವಗಳಿಗೆ ಮುಕ್ತಿ ಸಿಕ್ಕಿರುವುದಿಲ್ಲ. ಅವರುಗೆ ಮುಕ್ತಿ ಸಿಗಬೇಕಾದರೆ ಅವರ ಕುಟುಂಬ ನೆಮ್ಮದಿಯಾಗಿರಬೇಕು ಅದಕ್ಕಾಗಿ ಹಣ ಬೇಕು. ಈ ಕಾರಣಕ್ಕಾಗಿ ಎಲ್ಲಾ ಸೇರಿ ಬ್ಯಾಂಕ್ ದೋಚುತ್ತಾರೆ.
ಇದೊಂದು ಮಜಾ ಟಾಕಿಸ್ ನಲ್ಲಿ ದೆವ್ವಗಳ ಆಟ ಎನ್ನಬಹುದು, ಪಂಚಿಂಗ್ ಡೈಲಾಗ್, ಕಲಾವಿದರ ಟೈಮಿಂಗ್ ಎಲ್ಲವೂ ಚನ್ನಾಗಿದೆ.
ಒಟ್ಟಿನಲ್ಲಿ GST ಒಂದು ಕಾಮಿಡಿ, ಹಾರರ್, ಕ್ರೈಂ ಸ್ಟೋರಿಯಾಗಿದೆ. ಒಂದೇ ಮಾತುನಲ್ಲಿ ಹೇಳಬೇಕೆಂದರೆ ಪಕ್ಜಾ ಪೈಸಾ ವಸೂಲ್ ಚಿತ್ರ ಎನ್ನಬಹುದು.











