Full Meals movie review. ಫುಲ್ ಮಿಲ್ಸ್ ಚಿತ್ರ ವಿಮರ್ಶೆ. “ಅವಳ್ ಬಿಟ್, ಇವಳ್ ಬಿಟ್, ಅವನ್ಯಾರು”
ಚಿತ್ರ – ಫುಲ್ ಮಿಲ್ಸ್
ನಿರ್ಮಾಪಕರು – ಲಿಕಿತ್ ಶೆಟ್ಟಿ
ನಿರ್ದೇಶನ – N. ವಿನಾಯಕ್
ಛಾಯಾಗ್ರಹಣ – ಮನೋಹರ್ ಜೋಷಿ
ಸಂಗೀತ – ಗುರುಕಿರಣ್
Rating -3.5/5
ವಿಮರ್ಶೆ- ಮಂಜುರಾಜ್ ಸೂರ್ಯ
ಕಲಾವಿದರು – ಲಿಕಿತ್ ಶೆಟ್ಟಿ, ಖಷಿ ರವಿ, ತೇಜಸ್ವಿನಿ ಶರ್ಮಾ, ವಿಜಯ್ ಚಂಡೂರು, ರಾಜೇಶ್ ನಟರಂಗ, ಸಾಧುಕೋಕಿಲ, ಚಂದ್ರಕಲಾ ಮೋಹನ್, ರವಿಶಂಕರ್ ಗೌಡ, ಸುಜಯ್ ಶೆಟ್ಟಿ, ಹೊನ್ನಾವಳ್ಳಿ ಕೃಷ್ಣ, ನಾಗೇಂದ್ರ ಅರಸ್ ಮುಂತಾದವರು.
ಅವನೊಬ್ಬ ಫೋಟೋಗ್ರಾಫರ್ ಆಫರ್ ಗಳಿಲ್ಲದೇ ಆಲ್ ಬಮ್ rapper ಗಳನ್ನು ತಿರುವಾಕುತ್ತಾ ಕುಳಿತ ಪರಿಸ್ಥಿತಿ.
ಮದುವೆಗಳಲ್ಲಿ ಬರೀ ಸಬ್ ಆರ್ಡರ್ ಗಳ ಮೂಲಕ ಚಿತ್ರ ತೆಗೆಯುವ ಚಿತ್ರಾನ್ನ ಬದುಕು.

ಆಗಾಗ ಅವನ ಗೆಳತಿಯಿಂದ ಅಲ್ಲೊಂದು ಇಲ್ಲೊಂದು ಕಾರ್ಯಕ್ರಮಗಳಲ್ಲಿ ಫೋಟೋ ತೆಗೆಯುವ ಅವಕಾಶ. ಅದು ಬಾಡಿಗೆ ಕಟ್ಟಲು ಸಾಧ್ಯವಿಲ್ಲದಂತ ವಿಷಮ ಪರಿಸ್ಥಿತಿ.
ಅಂತವನಿಗೆ ಒಂದು ದೊಡ್ಡ ಮದುವೆಯ ದೊಡ್ಡ ಆರ್ಡರ್ ಸಿಕ್ಕಿದರೆ ಹೇಗಿರುತ್ತೆ ಅದೇ “ಫುಲ್ ಮಿಲ್ಸ್” ಇಲ್ಲಿ ಮದುವೆಯ ಫೋಟೋ ತೆಗೆಯುವುದಲ್ಲಾ ಮದುವೆಯ ಹುಡುಗಿಯನ್ನೇ ಕ್ಯಾಚ್ ಹಾಕಿಕೊಂಡರೆ..? ಅದುವೆ ಮದುವೆಯ ಕಥೆಯ, ವ್ಯಥೆಯ ಗೊಂದಲಗಳ ಫುಲ್ ಮಿಲ್ಸ್ ಚಿತ್ರ.












