Flirt Movie review. ಫ್ಲರ್ಟ್ ಚಿತ್ರ ವಿಮರ್ಶೆ – ಕಲರ್ ಫುಲ್ ದುನಿಯಾದಲ್ಲಿ ಫ್ಲರ್ಟ್ ಗಳ ಕಲರವ
ಚಿತ್ರ – ಫ್ಲರ್ಟ್
ನಿರ್ಮಾಪಕರು – ಚಂದನ್ ಕುಮಾರ್, ಕವಿತಾ ಗೌಡ
ನಿರ್ದೇಶನ – ಚಂದನ್ ಕುಮಾರ್
ಛಾಯಾಗ್ರಹಣ – HC. ವೇಣುಗೋಪಾಲ್
ಸಂಗೀತ – ಜೆಸ್ಸಿ ಗಿಪ್ಟ್, ನಕುಲ್ ಅಭಯಂಕರ್
ಸಂಕಲನ – ವಿನಯ್ ಯದುನಂದನ್
Rating -3.5/5
ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ಕಲಾವಿದರು :- ಚಂದನ್ ಕುಮಾರ್, ನಿಮಿಕಾ ರತ್ನಾಕರ್, ಸುದೀಪ್, ಸಾಧುಕೋಕಿಲ, ಶೃತಿ, ಅವಿನಾಶ್, ರಂಗಾಯಣ ರಘು, ಗಿರೀಶ್ ಶಿವಣ್ಣ, ಮುಂತಾದವರು.
ಇವನು ಫ್ಲರ್ಟ್ ಗಳಿಗೆ ಫ್ಲರ್ಟ್
99 ಹುಡುಗಿಯರಿಗೆ ಫ್ಲರ್ಟ್ ಮಾಡಿ, 100ನೇ ಹುಡುಗಿಯ ಕೇಸಿಗೆ ಕೋರ್ಟ್ ಮೆಟ್ಟಿಲು ಹತ್ತುತ್ತಾನೆ. ಅವನು ಹೇಳೋದು ಹೌದು ನಾನು 99 ಜನರಿಗೆ ಮೋಸ ಮಾಡಿದ್ದೇನೆ ಅಂತ ಆದರೆ ಅವನ ಲಾಯರ್ ಮಾತ್ರ ಇಲ್ಲ ಇವನು ಮಾಡಿಲ್ಲ ಒಳ್ಳೆಯವನು ಎಂದು ಕೋರ್ಟಿನಲ್ಲಿ ವಾದಿಸುತ್ತಾನೆ ಅದೇ ಕಾಮಿಡಿ. ಈ ಕಾಮಿಡಿಗೆ ಕಾಮಿಡು ಪೀಸು ಸಾಧುಕೋಕಿಲ ಪಾತ್ರ ನಿರ್ವಹಿಸಿದ್ದಾರೆ. ಅವನ ಎದುರಾಳಿ ಲಾಯರ್ ಶೃತಿ ಯವರು ಕೋರ್ಟಿನಲ್ಲಿ ವಾದಿಸುತ್ತಾರೆ.

ಸಿನಿಮಾ ಶುರುವಾಗೋದೆ ಕೋರ್ಟ್ ಹಾಲಿನ ಮುಖಾಂತರ.
ಜಡ್ಜ್ ಆಗಿ ಈ ಎಲ್ಲಾ ತಮಾಷೆಗೆ ಸಾಕ್ಷಿಯಾಗಿ, ಮುಖ್ಯ ನ್ಯಾಯಾಧೀಶರಾದ ಅವಿನಾಶ್ ರವರು.
ಜೀವನದಲ್ಲಿ ಒಂದೂ ಕೇಸು ಗೆಲ್ಲದ ಹಾಗೂ ಅವನ ವೃತ್ತಿ ಬದುಕಿನ ಕೊನೆಯ ಕೇಸ್ ಆಗಿ ಈ ಫ್ಲರ್ಟ್ ಕೇಸಿಗೆ ವಾದ ಮಾಡಲು ಸಾಧು ನೇಮಕವಾಗಿರುತ್ತಾರೆ, ತನ್ನ ಕಕ್ಷಿದಾರನನ್ನು ಉಳಿಸಲು ಏನೇನೋ ಸರ್ಕಸ್ ಮಾಡಿದರೂ ಕಥಾ ನಾಯಕ ಫ್ಲರ್ಟ್ ಹೇಳೋದು ಯುವರ್ ಆನರ್ ಈ ಲಾಯರ್ ನನಗೆ ಬೇಡ ನನ್ನ ಕಾಪಾಡಲು ಏನೇನೋ ಸುಳ್ಳು ಹೇಳುತ್ತಿದ್ದಾನೆ. ಎನ್ನುತ್ತಿದ್ದಂತೆ ಕೋರ್ಟ್ ಹಾಲ್ ನಲ್ಲಿರುವವರು ಜಡ್ಜ್ ಸಮೇತ ಹಾಗೂ ಸಿನಿಮಾ ನೋಡುವ ಪ್ರೇಕ್ಷಕರೆಲ್ಲಾ ನಗಲಾರಂಭಿಸುತ್ತಾರೆ.
ಈಗ ನಿಮಗೆ ಗೊತ್ತಾಗಿರಬೇಕು ಇದೊಂದು ಪಕ್ಕಾ ಕಾಮಿಡಿ ಫ್ಲರ್ಟ್ ಗಳ ಕಥೆ ಅಂತ.

ಈ ಕಥಾ ನಾಯಕ ಏತಕ್ಕಾಗಿ 100 ಹುಡುಗಿಯರಿಗೆ ಚಂದಮಾಮ ತೋರಿಸಿ ಯಾವ ನಕ್ಷತ್ರದಲ್ಲಿ ತನ್ನ ಕಾಮನಬಿಲ್ಲು ಹರಿಸುತ್ತಾನೆ,
ಹೌದು ನಾನು ಹಾಗೆ ಮಾಡಿದ್ದೇನೆ ಎಂದು ಆರೋಪಿ ತಪ್ಪು ಒಪ್ಪಿಕೊಂಡ ಮೇಲೆ ಬಿಡುಗಡೆಯಾಗುತ್ತಾನಾ, ಜೈಲುಪಾಲಾಗುತ್ತಾನಾ, ಜೀವನದಲ್ಲಿ ಒಂದು ಕೇಸೂ ಗೆಲ್ಲದ ಲಾಯರ್ ಕೊನೆಯದಾದ ಈ ಕೇಸನ್ನು ಏನು ಮಾಡುತ್ತಾನೆ, ಆರೋಪಿ ಲಾಯರ್ ನನ್ನು ಬದಲಿಸುತ್ತಾನಾ,
ಬರೀ ಹುಡುಗಿಯರಿಗಲ್ಲದೇ ಇನ್ಯಾರಿಗೆ ಫ್ಲರ್ಟ್ ಮಾಡಿದ್ದಾನೆ ಅನ್ನೋದಕ್ಕೆ “ಫ್ಲರ್ಟ್” ಚಿತ್ರ ನೋಡಲೇ ಬೇಕಾಗುತ್ತದೆ.

ಅವನು ಹುಟ್ಟಿದ್ದು ಸಕಲೇಶಪುರ, ಓದಿದ್ದು, ಬೆಳೆದಿದ್ದು ಮೈಸೂರು
ಆದರೆ ಬೆಂಗಳೂರು ಅವನ ಫ್ಲರ್ಟ್ ಮಾಡುವ ಅಡ್ಡ.
ಚಂದನ್ ನಿರ್ದೇಶನದ ಜೊತೆಗೆ ಎರಡು ಶೇಡ್ ಗಳಲ್ಲಿ ಅಭಿನಯಿಸಿದ್ದಾರೆ, ಪ್ಲೇಬಾಯ್ ಆಗಿ, ಸಖತ್ ಸ್ಟೈಲಿಶ್ ಆಗಿ ಜಿಮ್ ಟ್ರೈನರ್ ಆಗಿ ದಿನಕ್ಕೊಂದು ಹುಡುಗಿಯರನ್ನು ಫ್ಲರ್ಟ್ ಮಾಡುತ್ತಾ ತನ್ನ ಫ್ಲಾಟ್ ನಲ್ಲಿ ಅವರೊಂದಿಗೆ ಸುಖಪಟ್ಟ ನಂತರ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಆ ಹುಡುಗಿಯರನ್ನು ಮದುವೆ ಆಗಲು ಎಂಗೇಜ್ಡ್ ಮೆಂಟ್ ಆಗಿದ್ದ ಹುಡುಗನಿಗೆ ಕಳಿಸಿ ಅವನಿಂದ ತನ್ನ ಅಕೌಂಟ್ ಗೆ ಲಕ್ಷ ಲಕ್ಷ ಹಣ ಪಡೆಯುವ ಕಾಯಕ ಇವನದ್ದು. ಯಾರಾದರು ಆಸ್ಥಿವಂತ ಹುಡುಗರು ತಾನು ಮದುವೆಯಾಗುವ ಹುಡುಗಿ ವರ್ಜಿನ್ ಆಗಿದ್ದಾಳ ಅಂತ ತಿಳಿಯಲು ಈತನಿಗೆ ಸುಪಾರಿ ಕೊಟ್ಟರೆ ಸಾಕು ಆ ಹುಡುಗಿಯರನ್ನು ಪಟಾಯಿಸಿ ಅವಳು ಸಾಚಾನಾ ಅಲ್ವಾ ಅಂತ ಧೃಡೀಕರುಸುವುದೇ ಇವನ ಕಾಯಕ.

ಮತ್ತೊಂದು ಗೆಟಪ್ಪು ಇಂಜಿನಿಯರಗ ಆಗಿ ಕಂಪನಿಯೊಂದರಲ್ಲಿ ಛೀಫ್ ಆಗಿ ತಿಂಗಳಿಗೆ ಎರಡು ಲಕ್ಷ ಸಂಬಳ ತೆಗೆದು ಕೊಂಡು ತನ್ನ ಅಣ್ಣ ಮತ್ತು ತನಗಾಗಿ ಒಂದು ಫ್ಲಾಟ್ ಖರೀದಿ ಮಾಡಲು ಹಣ ಸೇರಿಸುವ ಯಾವುದೇ ಚಟವಿಲ್ಲದ ಸಾದಾ ಸೀದಾ ಒಬ್ಬ ನಿಷ್ಟಾವಂತ ಹುಡುಗ.
ಈ ಎರಡು ಪಾತ್ರದಲ್ಲಿ ಚಂದನ್ ತುಂಬಾ ಚನ್ನಾಗಿ ಪಾತ್ರದೊಳಗೆ ಜೀವಿಸಿದ್ದಾರೆ.
ಈತ ಕೆಲಸ ಮಾಡುವ ಕಂಪನಿಯಲ್ಲಿ ತನ್ನ ಕೆಳಗೆ ಜೂನಿಯರ್ ಆಗಿ ಕೆಲಸ ಮಾಡಲು ಬಂದ ನಾಯಕಿ ನಟಿ ( ನಿಮಿಕಾ ರತ್ನಾಕರ್) ಇವಳು ಈತನ ಬಾಲ್ಯದ ಗೆಳತಿ ಇಬ್ಬರಿಗೂ ನೆನಪಿಲ್ಲದ ವಯಸ್ಸಿನ ಪುಟ್ಟ ವಯಸ್ಸಿನ ಗೆಳೆಯರು.
ಇವಳು ಹೊರ ದೇಶದಲ್ಲಿ ಓದಿ ದೊಡ್ಡ ಸಂಬಳ ತೆಗೆಯುವಂತಿದ್ದರು ತನ್ನ ತಂದೆಗಾಗಿ ಭಾರತಕ್ಕೆ ಬಂದು ಬೆಂಗಳೂರಿನಲ್ಲಿ ಕಡಿಮೆ ಸಂಬಳಕ್ಕಾಗಿ ದುಡಿಯುವ ಮಾಡ್ರನ್ ಹುಡುಗಿ. ಇವರಿಬ್ಬರ ಮಧ್ಯೆ ಪ್ರೀತಿ ಅರಳುವುದನ್ನು ಮತ್ತು ಮುದುಡುವುದನ್ನು ನಿರ್ದೇಶಕನಾಗಿ ಚಂದನ್ ಬಹಳ ಚನ್ನಾಗಿ ನಿರೂಪಿಸಿದ್ದಾರೆ.
ನಿಮಿಕಾ ರತ್ನಾಕರ್ ಕೂಡ ಕಲರ್ ಫುಲ್ ಆಗಿ ಕಾಣಿಸಿಕೊಂಡಿದ್ದಾರೆ.

ಇಂದಿನ ಯುವ ಜನತೆಯ ಮೋಜು ಮಸ್ತಿ, ಬೆಂಗಳೂರಿನ ಕಲರ್ ಫುಲ್ ದುನಿಯಾ, ನೈಟ್ ಪಾರ್ಟಿಗಳು, ಕ್ಲಬ್ ಸಂಸ್ಕೃತಿಯನ್ನು ಕಣ್ಣಿಗೆ ಕಟ್ಟುವಂತೆ ಕಲರ್ ಫುಲ್ ಆಗಿ ತೋರಿಸಿದ್ದಾರೆ.
ಚಿತ್ರದ ಮೇಕಿಂಗ್, ಕ್ಯಾಮರಾ ವರ್ಕ್, ಮ್ಯೂಜಿಕ್ ಎಲ್ಲವೂ ಸಿನಿಮಾದ ಓಟಕ್ಕೆ ಕಣ್ಣಾಟಕ್ಕೆ ಸರಿ ಹೊಂದುವಂತಿದೆ.
ಕಿಚ್ಚ ಸುದೀಪ್ ಚಂದನ್ ಗೆಳತನಕ್ಕಾಗಿ ಗೆಳೆತನದ ಮೇಲೆ ಒಂದು ಗೀತೆಯನ್ನು ಹಾಡುವುದರ ಜೊತೆಗೆ ಆ ಗೀತೆಯಲ್ಲಿ ಅಭಿನಯಿಸಿದ್ದಾರೆ.

ಈ ಚಿತ್ರದಲ್ಲಿ ತುಂಬಾ ಗಮನ ಸೆಳೆಯುವ ಹಾಗೂ ಎಲ್ಲರಿಗೂ ಇಷ್ಟವಾಗುವ ಪಾತ್ರ ಕಥಾನಾಯಕನ ಗೆಳೆಯನಾಗಿ, ಮನೋವೈದ್ಯನಾಗಿ ಬಾಲ (ಗಿರೀಶ್ ಶಿವಣ್ಣ) ತುಂಬಾ ಚನ್ನಾಗಿ ಅಭಿನಯಿಸಿದ್ದಾರೆ. ಅವರಿಗೆ ಒಳ್ಳೆ ಸ್ಕೋರ್ ಮಾಡುವ ಅವಕಾಶ ಈ ಚಿತ್ರದಲ್ಲಿ ಸಿಕ್ಕಿದೆ.

ರಂಗಾಯಣ ರಘು ಒಬ್ಬ ಆಟೋ ಡ್ರೈವರ್ ಆಗಿ ಸೆಂಟಿಮೆಂಟ್ ಹಾಗೂ ಜವಾಬ್ಧಾರಿಯುತ ಪಾತ್ರದಲ್ಲಿ ಮತ್ತು ಕೊನೆಗೆ ಬ್ಯಾಂಕಾಕ್ ನಲ್ಲಿ ಹೋಟೆಲ್ ನಡೆಸುವ ಕಲರ್ ಫುಲ್ ಪಾತ್ರದಲ್ಲೂ ಸೈ ಎನಿಸಿಕೊಂಡಿದ್ದಾರೆ.
ಚಂದನ್ ಮೊದಲ ಬಾರಿಗೆ ನಿರ್ದೇಶನದಲ್ಲಿ ಗೆದ್ದಿದ್ದಾರೆ ಜೊತೆಗೆ ಎರಡು ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿ ಯಶಸ್ವಿಯಾಗಿದ್ದಾರೆ.
ಒಟ್ಟಿನಲ್ಲಿ ಒಂದು ಕಲರ್ ಫುಲ್ ಫ್ಲರ್ಟ್ ಕಥೆಯನ್ನು ಪ್ರೇಕ್ಷಕರು ಕಣ್ತುಂಬಿಕೊಳ್ಳಬಹುದು.











