Eltu muta movie review. “ಎಲ್ಟು ಮುತ್ತ’ ಚಿತ್ರ ವಿಮರ್ಶೆ ಕಪ್ಪು ರಕ್ತದ ಕೋಡಿಯಲ್ಲಿ ಎಲ್ಟು ಮುತ್ತನ ಶಂಖನಾದ
ಚಿತ್ರ ವಿಮರ್ಶೆ
ಚಿತ್ರ – ಎಲ್ಟು ಮುತ್ತ
ನಿರ್ಮಾಪಕರು – ಸತ್ಯ ಎಸ್. ಶ್ರೀನಿವಾಸನ್, ರವೀಂದ್ರ ಪೊನ್ನಪ್ಪ
ನಿರ್ದೇಶನ – ರಾ ಸೂರ್ಯ
ಛಾಯಾಗ್ರಹಣ- ಮೇಯಿಯಪ್ಪ ಬಾಸ್ಕರ್
ಸಂಗೀತ – ಪ್ರಸನ್ನ ಕೇಶವ
Rating – 3./5

ಕಲಾವಿದರು – ನವೀನ್ ಡಿ. ಪಡೀಲು, ಶೌರ್ಯ ಪ್ರತಾಪ, ರಾ ಸೂರ್ಯ, ಕಾಕ್ರೋಚ್ ಸುದಿ, ಪ್ರಿಯಾಂಕ ಮಳಲಿ, ರಾಮ್ ದೇವನಗರಿ, ರುಹಾನ್ ಆರ್ಯ, ಸೂರ್ಯ ಪಿ.ಜೆ., ಸತ್ಯ ಎಸ್ ಶ್ರೀನಿವಾಸನ್, ಪ್ರಸನ್ನ ಕೇಶವ, ತಾರಕ್. ಮುಂತಾದವರು
ಯಾರಾದ್ರು ಸತ್ರೆ, ಊರಲ್ಲಿ ಯಾವುದಾದ್ರು ಹೆಣ ಬಿದ್ರೆ
ಇವರಿಗೆ ಊಟ.
ಇದೊಂತರಾ ಕಲ್ಟ್ ಸಿನಿಮಾ, ಇಲ್ಲಿ ಯಾವುದೇ ಗ್ಲಾಮರ್, ರೋಮ್ಯಾಂಟಿಕ್ ಸಾಂಗ್, ಬಿಲ್ಡಪ್ ಇಲ್ಲದ ಸಾಧಾ ಸೀದ ರಗಡ್ ಸಿನಿಮಾ.
ಇಲ್ಲೊಂದು ಭಾವನಾತ್ಮಕ ನೆಲೆಯಲ್ಲಿ ಕಥೆ ಸಾಗುತ್ತಾದರು ಯಾವುದಕ್ಕೂ ಸರಿಯಾದ ನಿಖರತೆ ಇಲ್ಲ, ಸ್ಪಷ್ಟತೆ ಇಲ್ಲ.

ಅದೊಂದು ಅವಿದ್ಯಾವಂತ, ಅನಾಗರೀಕ ಜನ, ಯಾರಾದ್ರು ಸತ್ತರೆ ಹೆಣದ ಮುಂದೆ ತಮಟೆ ಬಡಿದು ಬರುವ ಹಣದಲ್ಲಿ ಊಟ ಮಾಡುವ ಜನ, ಊಟಕ್ಕಾಗಿ ಏನಾದರು ಹೆದರುವುದಿಲ್ಲ.
ಅದರಲ್ಲೂ ಊಟ ಮಾಡುವಾಗ ಪ್ರಳಯವಾದ್ರು ಅಲಗಾಡದೇ ಊಟ ಮುಗಿಸುವ ಜನ.
ಇದು ಕೊಡಗಿನ ಆಸುಪಾಸಿನಲ್ಲಿ ನಡೆಯುವ ಕಥೆ.
ಎಲ್ಟು ಮುತ್ತ ಇವರು ಇಬ್ಬರು ವ್ಯಕ್ತಿಗಳು ಎಲ್ಟು ಮತ್ತು ಮುತ್ತ ಬಾಲ್ಯದ ಸ್ನೇಹಿತರು ಬಾಲ್ಯದಿಂದ ದೊಡ್ಡವರಾದ ಮೇಲು ಸ್ನೇಹಿತರು.

ಎಲ್ಟು (ರಾ ಸೂರ್ಯ) ಹೆಣಗಳ ಮೇಲೆ ಹಾಕಿದ ಹೂಗಳನ್ನು ಮಾರಿ ಹಣ ಸಂಪಾದನೆ ಮಾಡುತ್ತಾನೆ, ಹಾಗೇ ಹೂ ಕೊಳ್ಳಲು ಬರುವ ಆಂಟಿಗಳನ್ನು ಸೆಳೆದು ಅವರಿಂದ ತನ್ನ ದೇಹದ ಆಸೆಗಳನ್ನು ಪೂರೈಸಿಕೊಳ್ಳುತ್ತಾನೆ.
ಇನ್ನು ಮುತ್ತ (ಶೌರ್ಯ ಪ್ರತಾಪ) ಇವನು ಹೆಣಗಳ ಮುಂದೆ ಡೋಲು ಬಾರಿಸುತ್ತಾನೆ, ಹೆಣ್ಣಮಕ್ಕಳನ್ನು ತಲೆ ಎತ್ತಿ ನೋಡಲ್ಲ, ಮಾತು ಕಡಿಮೆ ಆದರೆ ಕೋಪ ಬಂದರೆ ನೆತ್ತರ ಹರಿಸಿ ಹೆಣಗಳ ಬೀಳಿಸುತ್ತಾನೆ.
ಇವರೊಂದಿಷ್ಟು ಜನ ಬಾಲ್ಯದ ಗೆಳೆಯರು, ಒಂದೇ ಊರಿನಲ್ಲಿರುತ್ತಾರೆ.

ಕಾಕ್ರೋಚ್ ಸುದಿ ಅಲೆಕ್ಸ್ ಚಟ್ವಾ ಹೆಸರಿನಲ್ಲಿ ಸೈಕೋ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿಕ್ಕಂದಿನಲ್ಲಿ ಆದ ತಾಯಿ ತಂದೆಯ ನಡುವಿನ ಘಟನೆಯಿಂದ ಪ್ರಚೋದಿತನಾಗಿ ಸೈಕೋ ಕಿಲ್ಲರ್ ಆಗಿ ಕುತ್ತಿಗೆ ಕುಯ್ದು ವಿಕೃತ ಮೆರೆದಿದ್ದಾರೆ.
ರಾಮ್ಬೋಳಿ ಪಾತ್ರಕ್ಕೆ ರಾಮ್ ದೇವನಗರಿ ಬಣ್ಣ ಹಚ್ಚಿದ್ದಾರೆ, ಕುಡುಕ, ಕಟುಕ, ಹೆಣ್ಣುಬಾಕನ ಪಾತ್ರದಲ್ಲಿ ಅಬ್ಬರಿಸಿದ್ದಾರೆ.
ಇನ್ನು ನವೀನ್ ಡಿ. ಪಡೀಲು ಚಿತ್ರದುದ್ದಕ್ಕೂ ಚಿತ್ರದ ಕಥೆಗೆ ಕನ್ನಡಿಯಾಗಿದ್ದಾರೆ, ಮುತ್ತನಿಗೆ ಹೆಣದ ಮುಂದೆ ಡೋಲು ಬಡಿಯುವಲ್ಲಿ ಸಹಕಾರ ನೀಡುತ್ತಾ, ಅವನ ಎಲ್ಲಾ ಚಟುವಟಿಕೆಗೆ ಸಾಕ್ಷಿಯಾಗಿದ್ದಾರೆ.

ನಿರ್ಮಾಪಕ ಸತ್ಯ ಎಸ್. ಶ್ರೀನಿವಾಸನ್ ಪೋಲಿಸ್ ಇನ್ಸ್ಪೆಕ್ಟರ್ ಆಗಿ ನಟಿಸಿದ್ದಾರೆ.
ಹಣ, ಹೆಣ, ಊಟದ ಹಿಂದೆ ಬಿದ್ದಿದ್ದ
ಮುತ್ತನಿಗೆ ಒಂದು ವಸ್ತು ಸಿಗುತ್ತದೆ, ಅದರಿಂದಾಗಿ ಎಲ್ಟು ಮತ್ತು ಮುತ್ತ ವೈರಿಗಳಾಗುತ್ತಾರೆ. ಆ ಒಂದು ವಸ್ತುವಿನಿಂದ ಊರಿನೊಳಗೆ ಲೆಕ್ಕವಿಲ್ಲದಷ್ಟು ಹೆಣಗಳು ಬೀಳುತ್ತವೆ.
ಆ ವಸ್ತು ಏನು, ಯಾಕಾಗಿ ಅವರೆಲ್ಲಾ ಸಾಯುತ್ತಾರೆ, ಕೊಲೆಗಳನ್ನು ಮಾಡಿಸುವವರು ಯಾರು, ಎಲ್ಟು ಮುತ್ತ ಇಬ್ಬರ ಸ್ನೇಹ ಎಲ್ಲಿಗೆ ಕೊನೆ ಮುಟ್ಟುತ್ತೆ ಈ ಎಲ್ಲಾ ಗೊಂದಲಕ್ಕೂ ಪ್ರೇಕ್ಷಕರು ಚಿತ್ರ ಮಂದಿರದಲ್ಲಿ ಚಿತ್ರ ನೋಡಬೇಕಾಗುತ್ತದೆ.

ಛಾಯಾಗ್ರಾಹಕರ ಕತ್ತಲೆ ಬೆಳಕಿನ ಆಟದಲ್ಲಿ ಚಿತ್ರ ಸಾಗುತ್ತದೆ. ಕ್ಯಾಮರಾ ಕೆಲಸ ಚನ್ನಾಗಿ ಮೂಡಿ ಬಂದಿದೆ. ಲೈಟಿಂಗ್ ಚನ್ನಾಗಿ ಮಾಡಿದ್ದಾರೆ. ಹಾಗೆಯೇ ಚಿತ್ರದ ಪ್ರಮುಖ ಹೈಲೈಟ್ ಎಂದರೆ ಮ್ಯೂಸಿಕ್.
ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಅದ್ಭುತವಾಗಿ ಮೂಡಿ ಬಂದಿದೆ. ಪ್ರಸನ್ನ ಕೇಶವ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಸಂಗೀತ ನಿರ್ದೇಶಕನಾಗಿ ತಮ್ಮ ಕೆಲಸಕ್ಕೆ ನೂರರಷ್ಟು ನ್ಯಾಯ ಒದಗಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಒಬ್ಬ ಒಳ್ಳೆಯ ಸಂಗೀತ ಸಂಯೋಜಕ ದೊರೆಕಿದ್ದಾರೆ ಎಂದರೆ ತಪ್ಪಾಗಲಾರದು.
ನಿರ್ದೇಶಕ ರಾ ಸೂರ್ಯ ಕಥೆಯ ಮೇಲೆ ಒಂದಿಷ್ಟು ಸರಿಯಾದ ಹಿಡಿತ ಇಟ್ಟಿದ್ದರೆ ಚಿತ್ರ ಮತ್ತಷ್ಟು ಚನ್ನಾಗಿರುತಿತ್ತು ಎನ್ನಬಹುದು.
ನಟಿ ಪ್ರಿಯಾಂಕ ಮಳಲಿ ಪೊನ್ನಿ ಪಾತ್ರದಲ್ಲಿ ಡಿ ಗ್ಲಾಮರ್ ನಲ್ಲಿ ಅಸಾಹಯಕ ಹಾಗೂ ನಿರ್ಗತಿಕ ಗೃಹಿಣಿಯಾಗಿ ಚನ್ನಾಗಿ ಅಭಿನಯಿಸಿದ್ದಾರೆ.

ರಾ ಸೂರ್ಯ, ಹಾಗೂ ಸೂರ್ಯ ಪ್ರತಾಪ್ ಇಬ್ಬರು ಬೇರೆಯದೇ ರೀತಿಯ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ.
ನಿರ್ಮಾಣದ ವಿಷಯಕ್ಕೆ ಬಂದರೆ ಬಹುತೇಕ ಕತ್ತಲೆ ಬೆಳಕಿನ ನಡುವೆ ಸಾಗುವ ಚಿತ್ರಕ್ಕೆ ಹಣವನ್ನು ಚನ್ನಾಗಿ ಹರಿಸಿದ್ದಾರೆ. ಇದೊಂದು ಉತ್ಸಾಹಿ ತಂಡ ವಾಗಿದ್ದು ಬಹುತೇಕ ಅಪ್ಟ್ ವೇರ್ ಇಂಜಿನಿಯರ್ ಗಳು ಸೇರಿ ಈ ಚಿತ್ರವನ್ನು ಕೊಡುಗೆಯಾಗಿ ಕನ್ನಡ ಪ್ರೇಕ್ಷಕರ ಮುಂದೆ ಬಂದಿದ್ದಾರೆ.
ಚಿತ್ರ ತಂಡ ಬಹಳ ಶ್ರಮ ವಹಿಸಿ ಚಿತ್ರವನ್ನು ನಿರ್ಮಿಸಿದ್ದಾರೆ.
ಚಿತ್ರದಲ್ಲಿ ಹಲವಾರು ಕುತೂಹಲಗಳವೆ. ಹಲವಾರು ಗೊಂದಲಗಳಿವೆ, ಇಲ್ಲಿ ಹಣದಿಂದ ಹೆಣ, ಹೆಣದಿಂದ ಹಣಕ್ಕಾಗಿ ಸದ್ದು ಮಾಡುತ್ತದೆ.
“ಎಲ್ಟು ಮುತ್ತ” ಒಂದು ಪ್ರಯೋಗಾತ್ಮಕ ಚಿತ್ರ. ಇಂತಹ ಚಿತ್ರಗಳನ್ನು ಪ್ರೇಕ್ಷಕ ಪ್ರಭುಗಳು ಕೈ ಹಿಡಿದು ಇನ್ನೂ ಒಳ್ಳೊಳ್ಳೆಯ ಕಂಟೆಂಟ್ ಚಿತ್ರಗಳ ಸೃಷ್ಠಿಗೆ ಕಾರಣರಾಗ ಬೇಕಿದೆ.











