Ekka movie review ಎಕ್ಕ ಎಕ್ಕ ಚಿತ್ರ ವಿಮರ್ಶೆ – ಮಗು, ಮೃಗದ ದರ್ಶನ

ತಾಯಿ ರತ್ನ (ಶೃತಿ) ಹೇಳುತ್ತಾಳೆ ಕೆಟ್ಟದನ್ನ ಕೇಳಿಸ್ಕೊಳ್ಳಬೇಡ, ಕೆಟ್ಟದನ್ನ ನೋಡಬೇಡ, ಕೆಟ್ಟಮಾತು ಆಡಬೇಡ ಅಂತ ಮಗನಿಗೆ ಚಿಕ್ಕಂದಿನಿಂದ ಹೇಳಿಕೊಂಡೆ ಅವನನ್ನು ಬೆಳಸುತ್ತಾಳೆ.

ಆದರೆ ಸಮಾಜ, ಸಮಾಜದಲ್ಲಿನ ದುಷ್ಟಶಕ್ತಿಗಳು ಅವನನ್ನು ಭೂಗತಲೋಕಕ್ಕೆ ಬೇಡ ಬೇಡ ವೆಂದರೂ ರಣವೀಳ್ಯ ಕೊಟ್ಟು ಕರೆಸಿಕೊಳ್ಳುತ್ತದೆ. ಅವನು ಮುತ್ತು (ಯುವ) ಅಲಿಯಾಸ್ ಎಕ್ಕ. ಅವನು ಅಮ್ಮನ ಕಣ್ತಪ್ಪಿಸಿ ಊರಿನ ಕುಡುಕರ ಜಗಲಿಗಳ ಮೇಲೆ ಇಸ್ಪೀಟ್ ಆಡೋದು ಅವನ ಚಟ. ಅವನು ಇಸ್ಪೀಟ್ ಎಲೆ ಎಕ್ಕ ಹಿಡಿದ ಅಂದರ ದುಡ್ಡು ಬಾಚೋದು ಪಕ್ಕ. ಅದಕ್ಕೆ ಮುತ್ತು ಅನ್ನೋ ಹೆಸರಿನ ಪಕ್ಕ ಬಂದು ಕೂತಿದ್ದು ಎಕ್ಕ.

ಊರು ಬಿಟ್ಟು ಸಿಟಿಗೆ ಹೋಗಬೇಡ ಅಂತ ಗೆಳೆಯನ ಸಾಲಕ್ಕೆ ಫೈನಾನ್ಸ್ ನವನಿಗೆ ಕಾಲಿ ಪೇಪರ್ ಮೇಲೆ ಸಹಿ ಹಾಕಿ ಕಷ್ಟಕ್ಕೆ ಸಿಲುಕುತ್ತಾನೆ. ಸಾಲ ತೆಗೆದು ಕೊಂಡ ದೋಸ್ತು ಊರು ಬಿಟ್ಟು ಓಡಿ ಹೋಗುತ್ತಾನೆ ಅದೇ ಮುತ್ತುವಿಗೆ ತರುತ್ತದೆ ಕುತ್ತು. ಸಾಲ ಕೊಟ್ಟವನು ಮನೆ ಅಡ ಇಟ್ಟು ಕೊಳ್ಳುತ್ತಾನೆ. ಆ ಮನೆ ಆತನ ತಾತ, ಅಪ್ಪ ಬಹಳ ಕಷ್ಟಪಟ್ಟು ಉಳಿಸಿಕೊಂಡು ಬಂದಿರುತ್ತಾರೆ, ಆಮನೆ ತಾಯಿ ರತ್ನಗೆ ಪೂರ್ವಜರ ಸೆಂಟಿಮೆಂಟ್, 20ಲಕ್ಷ ಸಾಲ ತೀರಿಸಲು ಬೆಂಗಳೂರಿಗೆ ಮುತ್ತು ಕ್ಯಾಬ್ ಡ್ರೈವರ್ ಆಗಿ ಎಂಟ್ರಿ ಕೊಡ್ತಾನೆ.

ಮುತ್ತು ಮೃಗನಾಗಲು ಒಂದು ಮಗುವಿನ ಸಾವು ಕಾರಣವಾಗುತ್ತದೆ. ಬೆಂಗಳೂರಿನಲ್ಲಿ ತನಗೆ ಆಶ್ರಯ ಕೊಟ್ಟ ಗೆಳೆಯನ ಅಮಾಯಕ ಮುಗ್ದ ಮಗುವಿನ ಆಕಸ್ಮಿಕ ಧಾರುಣ ಸಾವಿನಿಂದ ಎಕ್ಕ ಭೂಗತಲೋಕದ ಸುಳಿಗೆ ತನಗೆ ತಿಳಿಯದೇ ಸಿಕ್ಕಿ ಕೊಳ್ತಾನೆ ಇದೇ ಎಕ್ಕ ಚಿತ್ರದ ಮೂಲ ಕಥೆ.

ಎಕ್ಕ ಪೈಸಾ ವಸೂಲಿ ಪಕ್ಕಾ
ಆಕ್ಷನ್, ಮದರ್ ಸೆಂಟಿಮೆಂಟ್, ಲವ್ ಎಮೋಷನಲ್, ಕ್ರೈಂ ಎಲ್ಲಾ‌ ಮಿಕ್ಜರ್ ಇರೋ ಕಮರ್ಷಿಯಲ್ ಚಿತ್ರ ಎಕ್ಕ

ಎಕ್ಕ ಪೈಸಾ ವಸೂಲಿ ಪಕ್ಕಾ”

ಆಕ್ಷನ್, ಮದರ್ ಸೆಂಟಿಮೆಂಟ್, ಲವ್ ಎಮೋಷನಲ್, ಕ್ರೈಂ ಎಲ್ಲಾ‌ ಮಿಕ್ಜರ್ ಇರೋ ಕಮರ್ಷಿಯಲ್ ಚಿತ್ರ ಎಕ್ಕ.

ಚಿತ್ರದ ಹಾಡುಗಳು ಮತ್ತು ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಚಿತ್ರದ ಮೂಲ ಜೀವ, ಡೈಲಾಗ್ ಕಲಾವಿದರ ಅಭಿನಯಕ್ಕೆ ಜೀವ ತುಂಬಿದೆ, ಕಥೆಯ ನಿರೂಪಣೆ ನಿರ್ದೇಶಕನ ಜಾಣ್ಮೆಯನ್ನು ತೋರುತ್ತದೆ.
ಕಥಾನಾಯಕ  ಯುವ ಹಿಂದಿನ ಚಿತ್ರದ ಅಭಿನಯಕ್ಕಿಂತ ಇದರಲ್ಲಿ ಸುಧಾರಿಸಿದ್ದಾರೆ, ನಿರ್ದೇಶಕರು ಅಭಿನಯ ತೆಗೆಸಿದ್ದಾರೆ.
ಎಲ್ಲಾ ಕಲಾವಿದರು ತಮ್ಮ ಅಭಿನಯದಲ್ಲಿ ಒಳ್ಳೆ ಸ್ಕೋರ್ ಮಾಡಿದ್ದಾರೆ. ಚಿತ್ರ ಬದುಕಿನಲ್ಲಿ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ತಾಯಿಯಾಗಿ ಶೃತಿಯವರು  ತಮ್ಮ ಅಭಿನಯದಲ್ಲಿ ಈ ಚಿತ್ರದಲ್ಲೂ ಮತ್ತೆ ಸಿಕ್ಸರ್ ಬಾರಿಸಿದ್ದಾರೆ.
ಸತ್ಯ ಹೆಗಡೆ ಕ್ಯಾಮರಾ ಕೆಲಸ ಸತ್ಯವಾಗಲೂ ಎಲ್ಲರಿಗೂ ಇಷ್ಟವಾಗುತ್ತೆ.

ಇದೊಂದು ಪಕ್ಕಾ ಮಾಸ್ ಸಿನಿಮಾ ಆದ್ರೂ ಅದರೊಳಗೆ ತಾಯಿ ಪ್ರೀತಿಯ ನಿಯತ್ತು, ಆಕ್ಷನ್ ತಾಕತ್ತು, ಪ್ರೀತಿಯ ಗಮ್ಮತ್ತು, ಒಟ್ಟಿನಲ್ಲಿ ಸಿನಿಮಾ ಸಕ್ಕತ್ತು.
ಕ್ಲೈಮ್ಯಾಕ್ಸ್ ಇನ್ನು ಸರಿಯಾಗಿ ಬೇರೆ ಏನೋ ಬೇಕಿತ್ತು.
ಆದರೂ ಪ್ರೇಕ್ಷಕ ಕೊಟ್ಟ ಕಾಸಿಗೆ ಮೋಸವಿಲ್ಲ.
ಪಕ್ಕಾ ಪೈಸಾ ವಸೂಲ್ ಚಿತ್ರ.
ಇಷ್ಟೆಲ್ಲಾ ಹೊಗಳಿಕೆ ಕಾರಣ ನಿರ್ಮಾಪಕರ ಹಣ ಮತ್ತು ಚಿತ್ರದ ಮೇಲಿನ ನಂಬಿಕೆ. ಜಯಣ್ಣ ಫಿಲಂಸ್, ಪಿ. ಆರ್. ಕೆ. ಸಂಸ್ಥೆ ಹಾಗೂ ಕೆ.ಆರ್.ಜಿ. ಸಂಸ್ಥೆ ಚಿತ್ರಕ್ಕೆ ಹಣ ಸುರಿದಿದ್ದಾರೆ.
ಇಂತಹ ಒಂದು ಮಾಸ್ ಎಂಟರ್ಟೈನ್ಮೆಂಟ್ ಸಿನಿಮಾ ಬಂದು ತುಂಬಾ ದಿನಗಳಾಗಿತ್ತು. ಈಗ ಪ್ರೇಕ್ಷಕರು ಕೈ ಹಿಡಿಯಬೇಕಷ್ಟೆ

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor