Devil movie Review. ಡೆವಿಲ್ ಚಿತ್ರ ವಿಮರ್ಶೆ- ಅವನು ಕೃಷ್ಣ, ಇವನು ದುಶ್ಯಾಸನ ಇಬ್ಬರ ನಡುವೆ ರಾಜಕೀಯ ಚದುರಂಗ

ಚಿತ್ರ –  ಡೆವಿಲ್
ನಿರ್ಮಾಪಕರು – ಶ್ರೀ ಜೈಮಾತಾ ಕಂಬೈನ್ಸ್
ನಿರ್ದೇಶನ –  ಪ್ರಕಾಶ್
ಛಾಯಾಗ್ರಹಣ –  ಸುಧಾಕರ್ S.ರಾಜ್
ಸಂಗೀತ – B. ಅಜನೀಶ್ ಲೋಕನಾಥ್
ಸಂಕಲನ – ಹರೀಶ್ ಕೊಮ್ಮೆ

Rating -3.5/5

ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ

ಕಲಾವಿದರು :- ದರ್ಶನ್, ಶರ್ಮಿಳಾ ಮಾಂಡ್ರೆ, ಶೋಭರಾಜ್, ಅಚ್ಯುತ್ ಕುಮಾರ್, ಮಹೇಶ್ ಮಾಂಜ್ರೇಕರ್, ರಚನಾ ರಾಯ್, ವಿನಯ್ ಗೌಡ, ಮುಂತಾದವರು.

ಡೆವಿಲ್ ಇಂದು ಬಿಡುಗಡೆಯಾದ ಬಹು ನಿರೀಕ್ಷಿತ ಚಿತ್ರ.

ಅಭಿಮಾನಿಗಳಿಗೆ ತಮ್ಮ ನೆಚ್ಚಿನ, ಪ್ರೀತಿಯ ಸ್ಟಾರ್ ನಟ ಜೊತೆಗಿಲ್ಲದೇ ತಾವುಗಳೇ ಆ ಸಿನಿಮಾದ ಗೆಲುವಿನ ಜವಾಬ್ದಾರಿಯನ್ನು ಹೆಗಲಿಗೆ ಹೊತ್ತಂತ ಚಿತ್ರಗಳು ಸೂಪರ್ ಸ್ಟಾರ್ ಗಳ ಅಭಿನಯದ ಎರಡು ಚಿತ್ರಗಳು.
ಒಂದು ಪವರ್ ಸ್ಟಾರ್ ಪುನಿತ್ ರಾಜಕುಮಾರ್ ಅಭಿನಯದ ಜೇಮ್ಸ್ ಚಿತ್ರ.
ಎರಡನೇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಇಂದು ಬಿಡುಗಡೆಯಾದ ಡೆವಿಲ್ ಚಿತ್ರ.
ಇಲ್ಲಿ ಅಭಿಮಾನಿಗಳೇ ಸ್ಟಾರ್ ಗಳಾಗಿ ಒಂದು ಚಿತ್ರದ ಗೆಲುವಿಗೆ ತಮ್ಮನ್ನು ತಾವು ಅರ್ಪಿಸಿಕೊಂಡು ಪವರ್ ಫುಲ್ ಚಾಲೆಂಜನ್ನು ಸ್ವೀಕರಿಸಿದ ಉದಾಹರಣೆಗೆ ಈ ಎರಡು ಚಿತ್ರಗಳು ಎನ್ನುವುದು ಸಿನಿಮಾದ ಇತಿಹಾಸಕ್ಕೆ ಸೇರುತ್ತದೆ.
ಇಂದು ಚಿತ್ರ ಬಿಡುಗಡೆಯಾಗುತ್ತಿದ್ದಂತೆ ದರ್ಶನ್ ಅಭಿಮಾನಿಗಳ ಹರ್ಷಕ್ಕೆ ಪಾರವೇ ಇಲ್ಲ ಎನ್ನಬಹುದು.
ತಮ್ಮ ಹೀರೋಗಾಗಿ ಕಾದಿದ್ದ ಫ್ಯಾನ್ಸ್ ಗಳಿಗೆ ಡಬ್ಬಲ್ ಧಮಾಕ ಎನ್ನಬಹುದು.
ಒಂದೇ ಚಿತ್ರದಲ್ಲಿ ಮಾನವ, ದಾನವ ರನ್ನು ಕಾಣಬಹುದು.
ಅಂದರೆ ಕೃಷ್ಣ ಮತ್ತು ರಾಕ್ಷಸ (ಡೆವಿಲ್) ಇಬ್ಬರ ಝಲಕ್ಕನ್ನು ಚಿತ್ರದಲ್ಲಿ ಕಾಣಬಹುದು.

ಅವನು ಕೃಷ್ಣ, ಹೆಸರಿಗೆ ತಕ್ಕಂತೆ ಸಭ್ಯವಂತ, ಬಣ್ಣದ ಲೋಕದಲ್ಲಿ ಒಬ್ಬ ದೊಡ್ಡ ನಟನಾಗಬೇಕೆಂಬ ಆಸೆ ಹೊತ್ತ ಸಾಮಾನ್ಯ ಮೆಸ್ ನಡೆಸುವ ಕೃಷ್ಣನಾಗಿ ದರ್ಶನ್ ಕಾಣಿಸಿಕೊಂಡಿದ್ದಾರೆ.
ಮೆಸ್ ನಡೆಸುತ್ತಲೇ ದಿನಕ್ಕೊಂದು ವೇಷ ಹಾಕಿ, ವೇಷಕ್ಕೆ ತಕ್ಕಂತೆ ಬಣ್ಣ ಹಾಕಿ, ಹೋಟೆಲ್ ಗೆ ಬಂದ ಜನರಿಗೆ ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್ ರಂತೆ ನಟಿಸಿ ತಾನು ಒಬ್ಬ ದೊಡ್ಡ ನಟನಾಗಿ ಥಿಯೇಟರ್ ಮುಂದೆ ಕಟೌಟ್ ನಿಲ್ಲಿಸಬೇಕು ಎಂಬ ಆಸೆಯಿಂದ ಕಾರ ಉಪ್ಪೆಸ್ರು, ಮುದ್ದೆ ಬಸ್ಸಾರು ಎಂಬ ಡೈಲಾಗ್ ನೊಂದಿಗೆ ಕನವರಿಸುವ ಪಾತ್ರದಲ್ಲಿ ದರ್ಶನ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.

ಮತ್ತೊಬ್ಬ ಧನುಶ್ ಮುಖ್ಯಮಂತ್ರಿ ಮಗ, ಚಿಕ್ಕ ವಯಸ್ಸಿನಿಂದಲೇ ಯಾರಾದ್ರು ಹುಡುಗಿ ಇಷ್ಟವಾದ್ರೆ ಅವಳನ್ನ ಎತ್ತಾಕೊಂಡೋಗಿ ರೇಪ್ ಮಾಡುವ ದುಷ್ಯಾಸನ, ಇವನ ಕಾಟ ತಾಳಲಾರದೇ ಅವನಪ್ಪ ಬೇರೆ ದೇಶದಲ್ಲಿಟ್ಟು ಸಾಕುತ್ತಾನೆ.

ಆದರೆ ಕೃಷ್ಣ, ದುಷ್ಯಾಸನ ಇವರಿಬ್ಬರು ಒಟ್ಟಿಗೆ ಎದುರಾದಾಗಲೆ ಅಸಲಿ ಕಥೆ ಶುರುವಾಗುತ್ತದೆ. ಸೂರ್ಯ, ಚಂದ್ರ ಎದುರಾದರೆ ಗ್ರಹಣ.


ಸಾದಾ ಸೀದಾ ಮಾಮೂಲಿ ಮನುಷ್ಯನಾಗಿ ಬಣ್ಣ ಹಚ್ಚಿ ದೊಡ್ಡ ಸ್ಟಾರ್ ಆಗಿ ಮೆರೆಯಬೇಕು, ನನ್ನ ನಂಬಿದ ಜನಕ್ಕೆ ಒಳ್ಳೆಯದನ್ನು ಮಾಡಬೇಕು ಎನ್ನುವ ಸಜ್ಜನ ಕೃಷ್ಣ ಈ ಎರಡು ಪಾತ್ರಗಳನ್ನು ನಿರ್ದೇಶಕರು ಎಣೆದು ಪ್ರೇಕ್ಷಕರ ಮುಂದಿಟ್ಟಿದ್ದಾರೆ.
ಆದರೆ ಆ ಎರಡು ಪಾತ್ರಗಳಿಗೆ ಬಣ್ಣ ಹಚ್ಚಿ ದರ್ಶನ್ ನ್ಯಾಯ ಒದಗಿಸಿದ್ದಾರೆ.

ಕೃಷ್ಣನ ಬಣ್ಣ ಹಚ್ಚುವ  ಬದುಕು ಹಲವು ತಿರುವುಗಳೊಂದಿಗೆ ಸಿಲುಕಿ ರಾಜಕೀಯದ ಚದುರಂಗದಾಟದಲ್ಲಿ ಸಿಲುಕುವ ಪಾತ್ರದಾರಿಯಾಗಿ ಒಂದು ಪಾತ್ರವಾದರೆ ಮತ್ತೊಂದು ಪಾತ್ರ ವಿಲನ್… ಅನ್ನೋ ಡೈಲಾಗ್ ಅನ್ನು ಹಣೆಮೇಲೆ ಹೊತ್ತು
ದರ್ಶನ್ ಮೊದಲ ಬಾರಿಗೆ ಎರಡು ಶೇಡ್ ಗಳ ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರೆ.

ನಿರ್ದೇಶಕ ಪ್ರಕಾಶ್ ಹಲವು ಯಶಸ್ವಿ ಚಿತ್ರಗಳ ನಿರ್ದೇಶಕ.
ದರ್ಶನ್ ಜೊತೆಗಿನ ಎರಡನೇ ಚಿತ್ರ ಇದಾಗಿದೆ. ಈಗಾಗಲೇ “ತಾರಕ್” ಚಿತ್ರಕ್ಕೆ ದರ್ಶನ್ ಗೆ ಆಕ್ಷನ್ ಕಟ್ ಹೇಳಿದ್ದರು.
ಈಗ ಎರಡನೇ ಬಾರಿಗೆ ಇವರಿಬ್ಬರ ಕಾಂಬಿನೇಷನ್ ಮತ್ತೆ ವರ್ಕೌಟ್ ಆಗಿಸುವ ಪ್ರಯತ್ನ ಮಾಡಿದ್ದಾರೆ.
ಪ್ರಕಾಶ್ ಒಬ್ಬ ಕ್ಲಾಸ್ ನಿರ್ದೇಶಕ ಅಷ್ಟೇ ಅಲ್ಲದೇ ಸೃಜನಶೀಲ ನಿರ್ದೇಶಕ ಅನ್ನುವ ಹಣೆಪಟ್ಟಿ ಹೊತ್ತವರು.
ಆದರೆ ಈ ಚಿತ್ರದಲ್ಲಿ ಕ್ಲಾಸ್ ಜೊತೆಗೆ ಮಾಸ್ ಚಿತ್ರವನ್ನು ನೀಡಬಲ್ಲೇ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಕಥೆ ಮತ್ತು ನಿರೂಪಣೆ ಹಾಗೂ ಸಂಭಾಷಣೆಯಲ್ಲಿ ಇನ್ನು ಸ್ವಲ್ಪ ಹಿಡಿತ ಇದ್ದಿದ್ದರೆ ಇನ್ನೂ ಚನ್ನಾಗಿರುತಿತ್ತು.

ಒಂದೇ ಚಿತ್ರದಲ್ಲಿ ಎರಡು ಶೇಡ್ ಗಳ ಕಥೆಯನ್ನು ಹೆಣೆದು
ಒಟ್ಟಿನಲ್ಲಿ ಬೇಸರದಲ್ಲಿದ್ದ ದರ್ಶನ್ ಅಭಿಮಾನಿಗಳ ಮುಖದಲ್ಲಿ ಸಂತಸ ತಂದಿದ್ದಾರೆ.
ಇದು ಪಕ್ಕಾ ದರ್ಶನ್ ಅಭಿಮಾನಿಗಳಿಗೆ ಖುಷಿಕೊಡುವ ಪೊಲಿಟಿಕಲ್ ಡ್ರಾಮ ಎನ್ನಬಹುದು.

ಮರಾಠಿ ರಂಗಭೂಮಿಯ ಹಾಗೂ ಮರಾಠಿ, ಹಿಂದಿ ಚಿತ್ರರಂಗದ ಪ್ರತಿಭೆ ಮಹೇಶ್ ಮಾಂಜ್ರೇಕರ್.
ಮರಾಠಿಯ “ಬಿಗ್ ಬಾಸ್”  ರಿಯಾಲಿಟಿ ಶೋವನ್ನು ನಿರೂಪಿಸಿದ್ದಾರೆ. ಈಗ ಕನ್ನಡ ಚಿತ್ರರಂಗಕ್ಕೆ ಎನ್ ಕೌಂಟರ್ ದಯಾನಾಯಕ್ ನಂತರ ಎರಡನೇ ಬಾರಿ ಪಾದಾರ್ಪಣೆ ಮಾಡಿದ್ದಾರೆ.


ಮುಖ್ಯಮಂತ್ರಿ ರಾಜಶೇಖರ್ ಆಗಿ, ಡೆವಿಲ್ ಅಪ್ಪನಾಗಿ ಕಾಣಿಸಿಕೊಂಡಿದ್ದಾರೆ.
ಆದರೆ ಈ ಪಾತ್ರಕ್ಕೆ ಅವರು ರಾಂಗ್ ಪ್ಲೇಸ್ ಮೆಂಟ್.
ಈ ಪಾತ್ರಕ್ಕೆ ನಮ್ಮವರನ್ನೇ ಹಾಕಬಹುದಿತ್ತು ಅನ್ನಿಸುತ್ತದೆ.
ಅವರು ಹಲವಾರು ದೃಶ್ಯಗಳಲ್ಲಿ ಅಭಿನಯಿಸಲು ತಡಬಡಾಯಿಸಿರುವುದು ಎದ್ದು ಕಾಣುತ್ತದೆ. ಭಾಷೆಯ ಕಾರಣ ಇರಬಹುದೇನೋ ಗೊತ್ತಿಲ್ಲ.

ರಚನಾ ರಾಯ್ ಅಭಿನಯದ ಎರಡನೇ ಚಿತ್ರ ಡೆವಿಲ್. ಈಗಾಗಲೇ “ಶ್ರೀರಂಗ” ಚಿತ್ರದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಎರಡನೇ ಚಿತ್ರವಾಗಿ ದರ್ಶನ್ ಜೊತೆಗೆ ಮೊದಲ ಬಾರಿಗೆ ಅಭಿನಯದ ಚೌಕಟ್ಟಿನಲ್ಲಿ ಸರಿಯಾಗಿ ನಿಭಾಯಿಸಿದ್ದಾರೆ. ಕೃಷ್ಣನಿಗೆ ರುಕ್ಕು ಆಗಿ ಬಡ್ಡಿ ವ್ಯವಹಾರ ಮಾಡುತ್ತಾ, ಕೃಷ್ಣನಿಗೆ ಬಡ್ಡಿಗೆ ಸಾಲ ನೀಡಿ  ಮೆಸ್ ಕೆಲಸಕ್ಕೆ ಹಾಗೂ ಬಣ್ಣ ಹಚ್ಚುವ ಆಸೆಗೆ ಸಾಥ್ ನೀಡುವ ಪಾತ್ರ.
ಇಲ್ಲಿ ಕೃಷ್ಣ ಮತ್ತು ದುಷ್ಯಾಸನ ಇಬ್ಬರಿಗೂ ರುಕ್ಕು ದಾಳವಾಗಿ  ಪಾತ್ರ ನಿಭಾಯಿಸಿದ್ದಾರೆ. ಆದರೆ ಡಬ್ಬಿಂಗ್ ನಲ್ಲಿ ಅವರ ಧ್ವನಿ ಮ್ಯಾಚ್ ಆಗಿಲ್ಲ.

ಹಾಗೆ ಸಿನಿ ಪ್ರಿಯರಿಗೆ ರಚನಾ ಇಷ್ಟವಾಗುತ್ತಾರೆ.
ಅಂಬಾನಿನೂ ಬೇಡ, ಅಂದಾನಿನೂ ಬೇಡ ಅಣ್ಣಾ ನಾನು‌ ನಿನ್ನ ಅಭಿಮಾನಿ ಅಣ್ಣಾ ಅಂತ ಕರೆಸಿಕೊಳ್ಳವ ಹುಡುಗ ಸಾಕು ಅಂತಾಳೆ ರುಕ್ಕು.

ಅಚ್ಯುತ್ ಕುಮಾರ್ ಅನಂತ್ ನಂಬಿಯಾರ್ ಆಗಿ
ಮುಖ್ಯಮಂತ್ರಿಯ ಅಡ್ವೈಸರ್ ಪಾತ್ರದಲ್ಲಿ ರಾಜಕೀಯದ ದಾಳ ಉರುಳಿಸುವ ಕುತಂತ್ರಿ, ಶಕುನಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಚಿತ್ರದ ಕಥೆಗೆ ಮೂಲ ಆಧಾರಸ್ಥಂಭ ಎನ್ನಬಹುದು.

ಶರ್ಮಿಳಾ ಮಾಂಡ್ರೆ ಒಂದು ವಿಶೇಷ ಪಾತ್ರದಲ್ಲಿ ಟೆಡಿಷನಲ್ ಗ್ಲಾಮರ್ ರಾಜಕಾರಿಣಿ ಆಗಿ ಕಾಣಿಸಿಕೊಂಡಿದ್ದಾರೆ.

ದರ್ಶನ್ ಎರಡು ಪಾತ್ರಗಳನ್ನು ಹೇಗೆ ನಿಭಾಯಿಸಿದ್ದಾರೆ, ಸಿನಿಮಾ ಸೇರಲು ಬಂದ ಕೃಷ್ಣ ಏನಾಗುತ್ತಾನೆ, ಡೆವಿಲ್ ಧನುಷ್ ಯಾಕಾಗಿ, ಯಾರಿಗಾಗಿ ಡೆವಿಲ್ ಆದ ಕಥೆ ತಿಳಿಯಲು ಪ್ರೇಕ್ಷಕರು ಚಿತ್ರಮಂದಿರದಲ್ಲಿ ಸಿನಿಮಾ ನೋಡಬೇಕು.

ದರ್ಶನ್ ಜೊತೆಗೆ ಶರ್ಮಿಳಾ ಮಾಂಡ್ರೆ, ಶೋಭರಾಜ್, ಅಚ್ಯುತ್ ಕುಮಾರ್, ಮಹೇಶ್ ಮಂಜ್ರೇಕರ್, ರಚನಾ ರಾಯ್, ಶೋಭರಾಜ್, ಗಿಲ್ಲಿ , ವಿನಯ್ ಗೌಡ  ಎಲ್ಲರು ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಅಜನೀಶ್ ಲೋಕನಾಥ್ ರವರ ಸಂಗೀತ ಚಿತ್ರಕ್ಕೆ ಮೆರಗು ತಂದಿದೆ. ಹಿನ್ನೆಲೆ ಸಂಗೀತವಂತು ಚಿತ್ರದ ಜೀವಾಳ ಮತ್ತು ಮೂಲ ಪಿಲ್ಲರ್ ಎನ್ನಬಹುದು. ಹಾಗೂ ಹಾಡುಗಳು ಚಿತ್ರಕಥೆಗೆ ಸಾಥ್ ನೀಡಿದೆ.
ಸುಧಾಕರ್ S. ರಾಜ್ ರವರ ಛಾಯಾಗ್ರಹಣ ಈ ಕಥೆಗೆ ಸುಂದರವಾದ ಚೌಕಟ್ಟನ್ನು ಕಟ್ಟಿಕೊಟ್ಟಿದೆ.
ಒಟ್ಟಿನಲ್ಲಿ ವರ್ಷದ ಕೊನೆಯ ತಿಂಗಳಲ್ಲಿ ಬಿಡುಗಡೆಯಾಗುತ್ತಿರುವ ಸೂಪರ್ ಸ್ಟಾರ್ ಚಿತ್ರಗಳಲ್ಲಿ ಮೊದಲು ತೆರೆಕಂಡ ಚಿತ್ರ ಡೆವಿಲ್. ಇದು ಪಕ್ಕಾ ಪೈಸಾ ವಸೂಲ್ ಚಿತ್ರ ಎನ್ನಬಹುದು.
ಇನ್ನು ವರ್ಷದ ಕೊನೆಗೆ ಬರುವ ಮತ್ತೆರಡು ಚಿತ್ರಗಳು ಬಾರಿ ನಿರೀಕ್ಷೆಯನ್ನು ಸೃಷ್ಠಿಸಿವೆ. ಡಿಸೆಂಬರ್ 2025ರ ಕೊನೆಯ ದಿನಗಳು ಕನ್ನಡ ಚಿತ್ರರಂಗದ ಯಶಸ್ಸಿನೊಂದಿಗೆ ಮುಂಬರುವ ಹೊಸ ವರ್ಷಕ್ಕೆ ನಾಂದಿಯಾಗಲಿ ಎಂಬುದು ನಮ್ಮ ಆಶಯ
.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor