Daiva Kannada movie review. ದೈವ ಚಿತ್ರ ವಿಮರ್ಶೆ- ಅಕ್ಷರ ಮತ್ತು ಭೂಮಿಗಾಗಿ ದೈವ ರುದ್ರಾವತಾರ.
ಚಿತ್ರ – ದೈವ
ನಿರ್ಮಾಪಕರು – ಜಯಮ್ಮ
ನಿರ್ದೇಶನ – MJ. ಜಯರಾಜ್
ಸಂಗೀತ – ವಿಜೇತ್ ಮಂಜಯ್ಯ
ಛಾಯಾಗ್ರಹಣ – ಸಿದ್ದಾರ್ಥ್
Rating -3.5/5
ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ಕಲಾವಿದರು : ಎಂ.ಜೆ. ಜಯರಾಜ್, ನೀತು ರಾಯ್, ಸುರಭಿ ರೆಡ್ಡಿ, ನಿಶ್ಚಿತ ರೆಡ್ಡಿ, ಬಲರಾಜ ವಾಡಿ, ಮಂಜುರಾಜ್ ಸೂರ್ಯ, ಅರುಣ್ ಬಚ್ಚನ್ ಮುಂತಾದವರು.
“ದೈವ” ಕನ್ನಡ ಚಿತ್ರ ಇದೊಂದು ಅಕ್ಷರ ಮತ್ತು ಭೂಮಿಗಾಗಿ ದುಷ್ಟರ ವಿರುದ್ಧ ಹೋರಾಡುವಂತ ಚಿತ್ರ.
ಊರಿನ ಜನರಿಗೆ, ಅವರ ಮಕ್ಕಳಿಗೆ ಅಕ್ಷರ ಜ್ಞಾನವನ್ನು ನೀಡದೆ, ದಬ್ಬಾಳಿಕೆಯಿಂದ ಅವರ ಭೂಮಿಯನ್ನು ಕಿತ್ತುಕೊಂಡು ಹಾಗೂ ಅವರು ಬೆಳೆದ ಬೆಳೆಯನ್ನು ಕಸಿಯುತ್ತಾ ಎದುರಾಡಿದವರ ಉಸಿರು ನಿಲ್ಲಿಸುವ ದುರುಳರ ವಿರುದ್ಧ ಹೋರಾಡುವಂತ ಕಥೆಯನ್ನು ನಿರ್ದೇಶಕ ಮತ್ತು ನಟ ಎಮ.ಜೆ. ಜಯರಾಜ್ ಚನ್ನಾಗಿ ಕಟ್ಟಿಕೊಟ್ಟಿದ್ದಾರೆ.

ಚಿತ್ರದಲ್ಲಿ ಊರ ಗೌಡ ಕಾಳೇಗೌಡ (ಬಾಲ್ ರಾಜ್ವಾಡಿ) ರೈತರನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಂಡು ಮೋಸದಿಂದ ಆಸ್ತಿ ಮತ್ತು ಭೂಮಿಯನ್ನು ಕಸಿಯುತ್ತಾನೆ, ಅವನ ಮಗ ರುದ್ರ (ಅರುಣ್ ಬಚ್ಚನ್) ಊರಿನ ಹೆಣ್ಣುಮಕ್ಕಳ ಮಾನ, ಪ್ರಾಣವನ್ನು ಕಸಿಯುತ್ತಾನೆ.
ಈ ಅಪ್ಪಾ, ಮಕ್ಕಳ ದೌರ್ಜನ್ಯದ ವಿರುದ್ಧ ಅವರ ಜೊತೆಯಲ್ಲಿ ಇದ್ದುಕೊಂಡೆ ಅವರನ್ನೇ ಸಧೆಬಡಿಯುವ ಪಾತ್ರದಲ್ಲಿ ದೇವ (ಎಂ.ಜೆ. ಜಯರಾಜ್) ದೈವಭಕ್ತನಾಗಿ ದುಷ್ಟರ ವಿರುದ್ಧ ಹೋರಾಡುತ್ತಾನೆ. ಜೊತೆಗೆ ಕಾಲಭೈರವನ ಆರಾಧಕನಾಗಿ ದೈವದ ಕಳೆಯನ್ನು ಮತ್ತು ಅನ್ಯಾಯದ ವಿರುದ್ಧ ಹೋರಾಡುವಂತ ಎರಡು ಶೇಡ್ ಗಳಲ್ಲಿ ಜಯರಾಜ್ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸಿದ್ದಾರೆ.

ಹಳ್ಳಿ ಬದುಕು, ರೈತರ ಪರದಾಟ, ದೈವ ನಂಬಿಕೆಗಳು ಕಥೆಯ ಮುಖ್ಯ ಅಂಶಗಳಾಗಿದೆ.
ಅಭಿನಯ ಮತ್ತು ನಿರ್ದೇಶನ ನಿರ್ದೇಶಕ ಹಾಗೂ ನಾಯಕ ಎಂಜೆ ಜಯರಾಜ್ ಗ್ರಾಮೀಣ ಸೊಗಡಿನ ಭಾವನೆಯನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ, ಆಕ್ಷನ್ ದೃಶ್ಯಗಳಲ್ಲಿ ಮಿಂಚಿದ್ದಾರೆ. ಸುರಭಿ ರೆಡ್ಡಿ, ನೀತು ರಾಯ್, ನಿಶ್ಚಿತಾ ಶೆಟ್ಟಿ ನಾಯಕಿಯರಾಗಿ ಚೆನ್ನಾಗಿ ಅಭಿನಯಿಸಿದ್ದಾರೆ. ಬಾಲ್ ರಾಜ್ವಾಡಿ ಗೌಡ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಪತ್ರಕರ್ತ, ಗೀತ ಸಾಹಿತಿ, ಮತ್ತು ನಟ ಮಂಜುರಾಜ್ ಸೂರ್ಯ (vcn ಮಂಜು) ಈ ಚಿತ್ರದಲ್ಲಿ NGO ಮುಖಾಂತರ ಊರಿನ ಮಕ್ಕಳಿಗೆ ಅಕ್ಷರವನ್ನು ಕಲಿಸಲು ಈ ಹಳ್ಳಿಗೆ ಬಂದು ಜನರಲ್ಲಿ ಮತ್ತು ಮಕ್ಕಳಲ್ಲಿ ಕಲಿಕೆಯ ಚೈತನ್ಯವನ್ನು ತುಂಬುವ ಪಾತ್ರವನ್ನು ನಿಭಾಯಿಸಿದ್ದಾರೆ. ಹಾಗೂ ಸಹ ನಿರ್ದೇಶಕನಾಗಿ ಗುರುತಿಸಿ ಕೊಂಡಿದ್ದಾರೆ.

ಸಂಗೀತಕಾರ ವಿಜೇತ್ ಮಂಜಯ್ಯ ಚಿತ್ರದಲ್ಲಿ ಎರಡು ಒಳ್ಳೆಯ ಹಾಡುಗಳನ್ನು ನೀಡಿದ್ದಾರೆ, ಒಂದು ಮಾಸ್ ಗೀತೆಯಾಗಿ ರಾವಣಾಸುರ ಗೀತೆಯಾದರೆ ಮತ್ತೊಂದು ಮುದ್ದು ನನ್ನ ಹುಡುಗ ಎಂಬ ಪ್ರೇಮ ಗೀತೆಯನ್ನು ಕಟ್ಟಿಕೊಟ್ಟಿದ್ದಾರೆ. ಹಾಗೂ ಛಾಯಾಗ್ರಾಹಕ ಸಿದ್ದಾರ್ಥ್ ತಾಂತ್ರಿಕವಾಗಿ ಚಿತ್ರಕ್ಕೆ ಬಲ ನೀಡಿದ್ದಾರೆ. ಹಳ್ಳಿಯ ಸಿಗಡನ್ನು ತಮ್ಮ ಕ್ಯಾಮೆರಾ ಮೂಲಕ ಕಟ್ಟಿಕೊಟ್ಟಿದ್ದಾರೆ.
ಕೆ.ಎಂ. ಪ್ರಕಾಶ್ ಸಂಕಲನದ ಜವಾಬ್ದಾರಿಯನ್ನು ಹೊತ್ತಿದ್ದಾರೆ.

ಚಿತ್ರದ ಕೊನೆಯ ಭಾಗದಲ್ಲಿ ದೈವದ ನರ್ತನ ಮತ್ತು ದುಷ್ಟ ಶಕ್ತಿಗಳ ಸಂಹಾರದ ದೃಶ್ಯಗಳು
ರೋಮಾಂಚಕವಾಗಿದೆ.
ಒಟ್ಟಿನಲ್ಲಿ ದೈವ ಚಿತ್ರ ವಿವಿಧ ಆಯಾಮಗಳಲ್ಲಿ ಪ್ರೇಕ್ಷಕರಿಗೆ ಹಿಡಿಸುತ್ತದೆ ಎನ್ನಬಹುದು.











