Congratulation Brother movie review. ಒಂದು ಕೊಂಡರೆ ಮತ್ತೊಂದು ಉಚಿತ T&C apply

ಚಿತ್ರ – ಕಂಗ್ರಾಜುಲೇಷನ್ ಬ್ರದರ್

ನಿರ್ಮಾಪಕರು – ಪ್ರಶಂತ್ ಕಲ್ಲೂರು
ನಿರ್ದೇಶನ –  ಪ್ರತಾಪ್ ಗಂಧರ್ವ
ಛಾಯಾಗ್ರಹಣ –  ಗುರು ಪ್ರಸಾದ್
ಸಂಗೀತ – ಸೂರಜ್ ಜೋಯಿಸ್, MB. ಧೃವ
Rating -3.5/5

ವಿಮರ್ಶೆ- ಮಂಜುರಾಜ್ ಸೂರ್ಯ

ಕಲಾವಿದರು – ಶಶಿಕುಮಾರ್ , ರಕ್ಷಿತ್ ನಾಗ್, ಸಂಜನ ದಾಸ್, ಅನುಷಾ, ರಘು ರಮಣಕೊಪ್ಪ, ಚೇತನ್ ದುರ್ಗಾ, ಸ್ವಾತಿ, ರವಿಭಟ್,

ಈ ವಾರ ತೆರೆ ಕಂಡ ಚಿತ್ರಗಳಲ್ಲಿ ಕಂಗ್ರಾಜುಲೇಷನ್ ಬ್ರದರ್ ಒಂದು ಉತ್ತಮ ಮನರಂಜನಾತ್ಮಕ ಚಿತ್ರ ಎನ್ನಬಹುದು.

ಕಂಗ್ರಾಜುಲೇಷನ್‌ ಬ್ರದರ್‌ ಚಿತ್ರವು ಪ್ರೀತಿ, ಸ್ನೇಹ ಮತ್ತು ಯುವಕ-ಯುವತಿಯರ ಸಂಬಂಧಗಳನ್ನು ವಿಭಿನ್ನ ಆಂಗಣದಲ್ಲಿ ಅತ್ಯಂತ ಮನರಂಜನಾತ್ಮಕವಾಗಿ ಹೆಣೆಯಲಾಗಿದೆ.
ಈ ಚಿತ್ರದಲ್ಲಿ ಆಧುನಿಕ ಯುವ ಪೀಳಿಗೆಯ ಮನೋಭಾವ, ಅವರ ಕನಸು, ದ್ವಂದ್ವಗಳನ್ನು, ಭಾವನೆಗಳನ್ನು ಬಿಂಬಿಸಲಾಗಿದೆ.

ಕಂಗ್ರಾಜುಲೇಷನ್ಸ್ ಬ್ರದರ್ ಇಂದಿನ ಪೀಳಿಗೆಗಳ, ಹೊಸ ತಲೆಮಾರಿನವರ ವಿಚಿತ್ರ ಮನಸ್ಥಿತಿಗಳ ಕಥೆ.
ಅವರ ಯೋಚನೆ, ಅವರ ಇಷ್ಟ, ಅವರ ಸ್ವಾರ್ಥಭರಿತ ನಡೆ, ನುಡಿ, ಆದ್ಯತೆ, ಆಯ್ಕೆ, ಸಂವೇದನೆ, ವೇದನೆ, ನಿಕರತೆ ಇಲ್ಲದಿರುವ ಅಭಿಪ್ರಾಯ, ನಿರ್ಧಾರಗಳ ಕಥೆ.
ಈಗೇನಿದ್ದರು buy one take one free ಕಾಲ. ಅದು ಬದುಕಿನಲ್ಲೂ ಬಂದರೆ ಹೇಗಿರುತ್ತದೆ. ಹಾಗೆ ಈ ಚಿತ್ರದಲ್ಲಿ ಒಬ್ಬ ಹುಡುಗ ಒಬ್ಬಳನ್ನು ಪ್ರೀತಿಸಿದರೆ ಮತ್ತೊಬ್ಬಳು ಉಚಿತ.
ಒಬ್ಬನ ಜೀವನದಲ್ಲಿ ಇಬ್ಬರು ಹುಡುಗಿಯರು ಬಂದಾಗ ಏನೆಲ್ಲಾ ಆಗಲಿದೆ. ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು, ಎನ್ನುವ ಗೊಂದಲಮಯವನ್ನು ಎಂದು ತಮಾಷೆಯಾಗಿ ಹೇಳುವ ಪ್ರಯತ್ನ ಮಾಡಲಾಗಿದೆ.


ಇಲ್ಲಿ ರಕ್ಷಿಗೆ (ರಕ್ಷಿತ್‍ ನಾಗ್‍) ಎಂಬ ಕಥಾನಾಯಕನಿಗೆ  ಸಿರಿ (ಅನೂಷಾ) ಎಂಬ ಕಥಾನಾಯಕಿಯ ಮೇಲೆ ಪ್ರೀತಿಯಾಗುತ್ತದೆ. ಆದರೆ, ಸಿರಿಗೆ ತನು (ಸಂಜನಾ ದಾಸ್‍) ಎಂಬ ಗೆಳತಿ ಮತ್ತೊಬ್ಬ ಕಥಾನಾಯಕಿ ಇರುತ್ತಾಳೆ.
ಇವರಿಬ್ಬರು ಗೆಳತಿಯರು.
“ಒಬ್ಬಳು ಸುಮವಾದರೆ ಮತ್ತೊಬ್ಬಳು ಘಮ”
“ಒಬ್ಬಳು ರಾಗವಾದರೆ ಮತ್ತೊಬ್ಬಳು ಭಾವ”
ಈ ರೀತಿಯಾಗಿ ಒಬ್ಬರಿಗೊಬ್ಬರು ಅಂಟಿಕೊಂಡಿರುತ್ತಾರೆ.
ಇವರಿಬ್ಬರು ಮದುವೆಯಾದರೆ ಇಬ್ಬನನ್ನೇ ಮದುವೆಯಾಗಬೇಕು ಎನ್ನುವ ಹುಚ್ಚುತನದ ಪರಮಾವಧಿ.

ನಾಯಕ ರಕ್ಷಿತ್ ಗೆ ತನ್ನನ್ನು ಮದುವೆಯಾಗಬೇಕೆಂದರೆ ತನುನ ಸಹ ಮದುವೆಯಾಗಬೇಕು ಎಂದು ಸಿರಿ, ಷರತ್ತು ಹಾಕುತ್ತಾಳೆ.

ಸರಿ ಮದುವೆಗೂ ಮೊದಲು ಸ್ವಲ್ಪ ದಿನ ಮೂವರು ಇಟ್ಟಿಗೆ ಇದ್ದು ಪ್ರಾಕ್ಟಿಕಲ್ ಆಗಿ ಟ್ರಯಲ್‍ ನೋಡೋಣ, ಒಬ್ಬರನ್ನು ಅರ್ಥ ಮಾಡಿಕೊಳ್ಳೋಕೆ ಪ್ರಯತ್ನ ಮಾಡೋಣ ಎಂದು ಮೂವರೂ ಒಂದೇ ಮನೆಯಲ್ಲಿ ಒಟ್ಟಿಗೆ ಇರಲು ನಿರ್ಧರಿಸುತ್ತಾರೆ.

ಪಾಯಸದಲ್ಲಿ ಸಕ್ಕರೆ, ಕಲ್ಲು ಸಕ್ಕರೆ ಒಟ್ಟಿಗೆ ಸಮ ಪ್ರಮಾಣದಲ್ಲಿ ಬೆರೆಸಿದರೆ ಏನಾಗಬಹುದು, ಅತೀ ಸಿಹಿ ಏನೆಲ್ಲಾ ಎಡವಟ್ಟು ಮಾಡಬಹುದು, ಅರಗಿಸಿಕೊಳ್ಳಲು ಹೇಗೆ ಸಾಧ್ಯ..?  ಎನ್ನುವುದೇ ‘ಕಂಗ್ರಾಜುಲೇಷನ್ಸ್ ಬ್ರದರ್’ ಚಿತ್ರದ ಒನ್ ಲೈನ್ ಕಥೆ.
ಮಧ್ಯೆ ಮಧ್ಯೆ ದ್ರಾಕ್ಷಿ, ಗೋಡಂಬಿ, ಬಾದಮಿಯಂತೆ ಕಾಮಿಡಿಯ ಜೊತೆಗೆ ಪೋಲಿ ಡೈಲಾಗ್ ಗಳು ನೇರವಾಗಿ ಯಾವುದೇ ಇಂಜರಿಕೆ ಇಲ್ಲದೆ, ಡಬ್ಬಲ್ ಮೀನಿಂಗ್ ನ ಸಹಾಯವಿಲ್ಲದೆ ಮತ್ತೇರಿಸಿದ್ದಾರೆ.

ಈ ಚಿತ್ರ ಇಂದಿನ ಬದುಕಿನ ಕ್ಲಾರಿಟಿ ಇಲ್ಲದ ಪಡ್ಡೆಗಳಿಗೆ ಹೊಟ್ಟೆ ತುಂಬಿಸುವಷ್ಟು ನಗಿಸಿದ್ದಾರೆ.
ಇದು ಕೆಲವರಿಗೆ ಮುಜುಗರ ತರಲುಬಹುದು.

ಇದೊಂದು ನೈಜ ಘಟನೆಯಾಧಾರಿತ ಕಥೆಯಂತೆ, ನಿರ್ದೇಶಕ ಅಲೆಮಾರಿ ಸಂತು ಈ ಕಥೆಯನ್ನು ನಮ್ಮವರ ಮನಸ್ಥಿತಿಗೆ, ನಮ್ಮ ಪರಿಸರಕ್ಕೆ ಬಗ್ಗಿಸಿ, ಒಗ್ಗಿಸಿ ಬರೆದಿದ್ದಾರೆ.

ಕಥೆಯಲ್ಲಿ ಹೊಸತನವಿದೆ, ಕುಡಿತವಿದೆ, ದುಡಿತವಿದೆ, ಮೋಜು, ಮಸ್ತಿ, ಕುಸ್ತಿ ಮೊದಲರ್ಧದಲ್ಲಿದೆ.
ಜಾಲಿ ಜಾಲಿ ಅಂತ ಎಲ್ಲಾ ಖಾಲಿ ಖಾಲಿ ಅನ್ನುವುದನ್ನು ದ್ವಿತಿಯಾರ್ಧದಲ್ಲಿ ತುಂಬಾ ಗಂಭೀರವಾಗಿ ಹೇಳುತ್ತಾ ಎಲ್ಲಾ ಗೊಂದಲಗಳಿಗೆ ಪುಲ್ ಸ್ಟಾಪ್ ಇಟ್ಟಿದ್ದಾರೆ. ಅದು ಪ್ರೇಕ್ಷಕರ ಮನಸ್ಸಿಗೆ ಬಿಟ್ಟದ್ದು ಯಾರಿಗೆ ಹೇಗೆ ಬೇಕೋ ಹಾಗೆ ಕಥೆಯನ್ನು ಕೊನೆಗೊಳ್ಳಿಸಿ ಕೊಳ್ಳಬಹುದು.

ಚಿತ್ರದಲ್ಲಿ ಮೊದಲಬಾರಿಗೆ ನಾಯಕ ನಟನ ಪಾತ್ರವನ್ನು ರಕ್ಷಿತ್ ಚನ್ನಾಗಿ ನಿಭಾಯಿಸಿದ್ದಾರೆ.
ಇನ್ನು ಕಥೆಗೆ ಜೋಡಿ ನಾಯಕಿಯರಾದ ಸಂಜನಾ ದಾಸ್, ಅನೂಷಾ ಇಬ್ಬರು ಈ ಕಥೆಗೆ ಒಗ್ಗಿಕೊಂಡು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಹಿರಿಯ ನಟ ಸುಪ್ರೀಂ ಹೀರೋ ಶಶಿಕುಮಾರ್ ತಂದೆಯ ಪಾತ್ರವನ್ನು ನಿಭಾಯಿಸಿದ್ದಾರೆ.
ಬದುಕು ಅಂದು ಕೊಂಡಂತೆ  ಸರಾಗವಲ್ಲ ಎನ್ನುವುದನ್ನು ಅಪ್ಪ ಮಗನ ಭಾಗ ಬಿಂಬಿಸಿದೆ.
ಅಪ್ಪ ಮಗನ ಭಾಂಧವ್ಯವನ್ನು ಕಟ್ಟಿ ಕೊಡುವಲ್ಲಿ ಚಿತ್ರದ ಅಂತಿಮದಲ್ಲಿ ಆತುರದಲ್ಲಿ ಮರೆತಂತೆ ಕಾಣುತ್ತದೆ.

ರಘು ರಾಮನ ಕೊಪ್ಪ, ಸ್ವಾತಿ, ರಘು ಭಟ್, ರಕ್ಷಿತ್ ಕಾಪು, ಚೇತನ್ ದುರ್ಗ,‌ ಸುದರ್ಶನ್ ಪಾತ್ರಗಳು ಗಮನ ಸೆಳೆಯುತ್ತವೆ.

ಸೂರಜ್ ಜೋಯಿಸ್ ಹಾಗೂ MB.ಧ್ರುವ ಸಂಗೀತದಲ್ಲಿ ಹಾಡುಗಳು ಹಾಗೂ ಹಿನ್ನೆಲೆ ಸಂಗೀತ ಕೇಳುವಂತಿದೆ.
ಹಾಗೂ‌ ಗುರು ಪ್ರಸಾದ್ ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿದೆ.

ನಿರ್ಮಾಪಕರಾಗಿ ಪ್ರಶಾಂತ್ ಕಲ್ಲೂರು ಇಂದಿನ ಕಾಲಘಟ್ಟದ ಮನಸ್ಥಿತಿಗಳಿಗೆ ಒಂದು ಮನರಂಜನಾತ್ಮಕ ಚಿತ್ರವನ್ನು ನಿರ್ಮಿಸಿದ್ದಾರೆ.

ಒಟ್ಟಿನಲ್ಲಿ ಒಂದು ಮನರಂಜನಾತ್ಮಕವಾದ, ಜಾಲಿ, ಪೋಲಿಗಳ ಮಧ್ಯೆ ಬದುಕಿನ ನೈಜತೆಯನ್ನು ಬಿಂಬಿಸುವ ಚಿತ್ರ ಕಂಗ್ರಾಜುಲೇಷನ್ ಬ್ರದರ್ ಚಿತ್ರ ಎನ್ನಬಹುದು

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor