Avanirabekittu movie review. ಅವನಿರಬೇಕಿತ್ತು ಚಿತ್ರ ವಿಮರ್ಶೆ. ಡಿಜಿಟಲ್ ಕಳ್ಳರಿದ್ದಾರೆ ಎಚ್ಚರಿಕೆ
ನಿರ್ಮಾಣ: ಮುರಳಿ ಬಿ.ಟಿ
ನಿರ್ದೇಶನ: ಅಶೋಕ್ ಸಾಮ್ರಾಟ್
ಸಂಗೀತ : ಲೋಕಿ ತವಸ್ಯ
ಛಾಯಾಗ್ರಹಣ : ದೇವರಾಜ್ ಪೂಜಾರಿ
ಕಲಾವಿದರು : ಭರತ್, ಸೌಮ್ಯ ಜಾನ್, ಜಯಸಿಂಹ, ಕಿರಣ್ ನಾಯ್ಕ್, ಪ್ರಶಾಂತ್ ಸಿದ್ದಿ ಮುಂತಾದವರು
ಸರ್ಕಾರ, ಬ್ಯಾಂಕು ಹಾಗೂ ಹಲವಾರು ಸೋಷಿಯಲ್ ಮೀಡಿಯಾಗಳಲ್ಲಿ ಬರುತ್ತವೆ ನಿಮ್ಮ ಹಣಗಳ ಬಗ್ಗೆ ಎಚ್ಚರಿಕೆ ಯಾವುದೇ OTP ಗಳನ್ನು ಶೇರ್ ಮಾಡಬೇಡಿ ಯಾವುದೇ ಫ್ರಾಡ್ ಕರೆಗಳನ್ನು ಸ್ವೀಕರಿಸ ಬೇಡಿ ಅಂತ ಆದರೆ ಇಲ್ಲೊಂದು ಕಳ್ಳತನ ವಾಗಿರುತ್ತದೆ. ಅದು ಒಬ್ಬ ವ್ಯಕ್ತಿಗೆ ಗೊತ್ತಾಗದಂತೆ ಅವನ ಹೆಸರಲ್ಲಿ ಬ್ಯಾಂಕಿನಿಂದ ಸಾಲ ತೆಗೆದುಕೊಂಡು ವಂಚಿಸಿರುತ್ತಾರೆ. ಅದು ಒಂದೇ ಹೆಸರಿನ, ಒಂದೇ ದಿನ ಹುಟ್ಟಿರುವ, ಒಂದೇ ಹೆಸರಿನ ತಂದೆಯನ್ನು ಹೊಂದಿರುವ ಇಬ್ಬರು ವ್ಯಕ್ತಿಗಳಿಂದಾಗುವ ಗೊಂದಲ, ಆದಾಯ ತೆರಿಗೆ ಇಲಾಖೆಯವರು ಕೊಟ್ಟಿರುವ ಒಂದೇ ಹೆಸರಿನ ಇಬ್ಬರು ವ್ಯಕ್ತಿಗಳಿಗೆ ಒಂದೇ ನಂಬರಿನ ಪ್ಯಾನ್ ಕಾರ್ಡ್ ಕೊಟ್ಟಿರುತ್ತಾರೆ ಅದರ ಸುತ್ತ ನಡೆವ ಗೊಂದಲಮಯ ವಾತಾವರಣವೇ ಅವನಿರಬೇಕಿತ್ತು ಚಿತ್ರದ ಕಥಾವಸ್ತು.
ಇಷ್ಟು ವಿಷಯವನ್ನು ಸುಲಭವಾಗಿ ಪ್ರೇಕ್ಷಕರಿಗೆ ತಿಳಿಸಿದ್ದರೆ. ಇದೊಂದು ಅದ್ಭುತ ಚಿತ್ರವಾಗುತಿತ್ತು.
ಆದರೆ ಈ ಚಿತ್ರದಲ್ಲಿ
ಅವನೊಬ್ಬನಿದ್ದಾನೆ, ಅವನಿರುವುದಕ್ಕೆ ಹೀಗೆಲ್ಲಾ ಆಗುತ್ತಿದೆ. ಅವನಿಂದಲೇ ಚಿತ್ರಮಂದಿರದಲ್ಲಿ ಕುಳಿತ ಪ್ರೇಕ್ಷಕರ ತಲೆ ಸಿಡಿದು ಚಿಟ್ಟಿಡುತ್ತಿದೆ. ಹೌದು ಯಾರವನು ನಿಮಗೆ ಗೊತ್ತಾ..? ನನಗಂತು ಖಂಡಿತ ಗೊತ್ತಿಲ್ಲ.! ಅವನು ಎಲ್ಲಿದ್ದಾನೆ, ಅವನು ಯಾರಿರಬಹುದು ಅಂತ ಬಹುಶಃ ನಿರ್ದೇಶಕರಿಗೂ ಗೊತ್ತಿಲ್ಲ ಅನ್ನಿಸುತ್ತೆ.
ಆಗಾಗ ನಾಯಕಿಯಂತು ಚಿತ್ರದ ಶುರುವಿನಿಂದ ಕೊನೆಯ ವರೆಗೂ ಅವನಿರಬೇಕಿತ್ತು, ಅವನಿರಬೇಕಿತ್ತು ಅಂತ ಜಪಿಸುತ್ತಾಳೆ.
ತಂತ್ರಜ್ಞಾನ ಬೆಳೆದಂತೆಲ್ಲಾ ತಂತ್ರಜ್ಞಾನಗಳ ಮೂಲಕವೇ ಮೋಸಗಳು ಹೆಚ್ಚುತ್ತಿವೆ.
ಹ್ಯಾಕರ್ ಗಳು ಎಲ್ಲೋ ಕುಳಿತು ವಿಭಿನ್ನ ಮಾರ್ಗಗಳ ಮೂಲಕ ಜನರಿಗೆ ಮೊಸ ಮಾಡುತ್ತಿದ್ದಾರೆ. ‘ಅವನಿರಬೇಕಿತ್ತು’ ಚಿತ್ರದಲ್ಲಿ ಆದಾಯ ತೆರಿಗೆಯ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ನಿಂದಾಗುವ ಮೋಸದ ಬಗ್ಗೆ ನಿರ್ದೇಶಕರ ಅವರ ಜೀವನದಲ್ಲಿ ನಡೆದ ಒಂದು ನಿಜ ಘಟನೆಯನ್ನು ಆಧಾರವಾಗಿಟ್ಟು ಕೊಂಡು ಕಥೆ ಎಣೆದಿದ್ದಾರೆ.
ಕಥಾ ನಾಯಕಿ ಭವ್ಯ (ಸೌಮ್ಯ ಜಾನ್) ಎಂಬ ಯುವತಿಯನ್ನು ಕಥಾ ನಾಯಕ ದೇವ (ಭರತ್) ಕಿಡ್ನಾಪ್ ಮಾಡುವ ಮೂಲಕ ಚಿತ್ರದ ಕಥೆ ಶುರುವಾಗುತ್ತದೆ.
ನಾಯಕ, ನಾಯಕಿ ಇಬ್ಬರ ಹೆಸರು, ಹುಟ್ಟಿದ ದಿನಾಂಕ ಮತ್ತು ತಂದೆಯ ಹೆಸರು ಒಂದೇ ಎಂದು ಗೊತ್ತಾಗುತ್ತದೆ. ಇವರ ಹೆಸರನ್ನು ಉಪಯೋಗಿಸಿಕೊಂಡು
ಮೋಸ ಮಾಡುವ ಅವನ್ಯಾರು
ಎನ್ನುವುದೇ “ಅವನಿರಬೇಕಿತ್ತು” ಚಿತ್ರದ ಕಥೆ.
ಈ ಸುಳಿಯಿಂದ ಅವರಿಬ್ಬರೂ ಹೇಗೆ ಹೊರಬರುತ್ತಾರೆ ಎನ್ನುವುದೇ ಟ್ವಿಷ್ಟ್ ಗಳ ಮೇಲೆ ಟ್ವಿಷ್ಟ್.
ಈ ವಿಷಯವನ್ನು ತುಂಬಾ ಎಳೆದಾಡಿದ್ದಾರೆ ಎನ್ನಿಸುತ್ತದೆ ನಿರ್ದೇಶಕ ಅಶೋಕ್ ಸಾಮ್ರಾಟ್.
ಪ್ರೇಕ್ಷಕರನ್ನು ತುಂಬಾ ಗೊಂದಲಗೊಳಿಸಿದ್ದಾರೆ. ಯಾವುದು ಫ್ಲಾಶ್‍ಬ್ಯಾಕ್, ಯಾವುದು ವರ್ತಮಾನ ಎಂಬುದೇ ಅರ್ಥವಾಗುವುದಿಲ್ಲ.
ಬೇಕೆಂದೇ ಮಾಡಿದ್ದಾರೇನೋ ಗೊತ್ತಿಲ್ಲ.
ಪಾತ್ರಗಳ ನಡುವೆ ಅತಿಯಾದ ಸಂಭಾಷಣೆ ಕಿರಿ ಕಿರಿ ಎನಿಸುತ್ತದೆ.
ಇಲ್ಲಿ ನಿರ್ದೇಶಕರು ಕಥೆ, ಚಿತ್ರಕಥೆ ಬರೆದಿರುವುದಷ್ಟೇ ಅಲ್ಲ, ಸಂಕಲನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಎಡಿಟಿಂಗ್ ಸರಿಯಾಗಿ ಮಾಡಬಹುದಿತ್ತು ಹಲವಾರು ಬೇಡದ ದೃಶ್ಯಗಳು ದುತ್ತನೆ ಬಂದು ಮಾಯವಾಗುತ್ತದೆ. ಅದರಿಂದಾಗಿಯೇ ಇಷ್ಟೆಲ್ಲಾ ಗೊಂದಲವಾಗಿದೆಯೋ ಏನೋ ಅವರೇ ಹೇಳಬೇಕು.
ಇದು ನಿಜಕ್ಕೂ ಒಂದು ಒಳ್ಳೆಯ ವಿಷಯಾಧಾರಿತ ಕಥೆಯಾಗಿದೆ
ಆದರೆ ಸಿಂಪಲ್ಲಾಗಿ ಒಂದು ಪ್ರೇಮ ಕಥೆಯ ನಡುವೆ ಈ ವಿಷಯ ಹೇಳಿದ್ದರೆ ಇದೊಂದು ವಿಭಿನ್ನ ಚಿತ್ರವಾಗುವುದರಲ್ಲಿ ಎರಡು ಮಾತಿಲ್ಲ.
ನಟ ಭರತ್ ತಮ್ಮ ಮ್ಯಾನರಿಸಂ ಮತ್ತು ಮಾತಿನ ಶೈಲಿ ಪ್ರಜ್ವಲ್ ದೇವರಾಜ್ ಅವರನ್ನು ಹೋಲುತ್ತದೆ.
ಎಂ.ಎನ್. ಲಕ್ಷ್ಮೀದೇವಿ, ಕಿರಣ್ ನಾಯ್ಕ್, ಪ್ರಶಾಂತ್ ಸಿದ್ದಿ ಇನ್ನೂ ಹಲವರು ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಸಂಗೀತ ನಿರ್ದೇಶಕ ಲೋಕಿ ತವಸ್ಯ ಅವರ ಸಂಗೀತ ಚನ್ನಾಗಿ ಮೂಡಿ ಬಂದಿವೆ, ಮೂರು ಹಾಡುಗಳ ಸಂಗೀತ, ನೃತ್ಯ ಸಂಯೋಜನೆ ಚನ್ನಾಗಿದೆ. ಮತ್ತು ದೇವರಾಜ್ ಪೂಜಾರಿ ಅವರ ಛಾಯಾಗ್ರಹಣ. ಚಿತ್ರಕ್ಕೆ ಪೂರಕವಾಗಿದೆ.











