Alpha movie review cast and crew. ಆಲ್ಫಾ ಚಿತ್ರ ವಿಮರ್ಶೆ – “ಕೆಟ್ಟ ಅಪ್ಪಂದಿರ ದುಷ್ಟ ಸಂತಾನದ ರಕ್ತ ಕಥೆ”
ಚಿತ್ರ – ಆಲ್ಫಾ
ನಿರ್ಮಾಪಕರು – ಆನಂದ್ ಕುಮಾರ್
ನಿರ್ದೇಶನ – ವಿಜಯ್
ಛಾಯಾಗ್ರಹಣ – ಕಾರ್ತಿಕ್ S.
ಸಂಗೀತ – ಅನೂಪ್ ಸೀಳಿನ್
ಸಂಕಲನ – ದೀಪು S. ಕುಮಾರ್
Rating -3/5
ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ಕಲಾವಿದರು : ಅವಿನಾಶ್, ಅಚ್ಯುತ್ ಕುಮಾರ್, ಗಿರಿರಾಜ್, ರಮೇಶ್ ಇಂದಿರಾ, ರಾಘು ಶಿವಮೊಗ್ಗ, ಹೇಮಂತ್ ಕುಮಾರ್, ಆಯನಾ, ಗೋಪಿಕಾ ಸುರೇಶ್, ಕಾರ್ತಿಕ್ ಮಹೇಶ್, ವಿನಯ್ ಬಿದ್ದಪ್ಪ, ಮಾನಸಿ ಸುಧೀರ್, ಬಾಲು ನಾಗೇಂದ್ರ, ಹೇಮಂತ್ ಸುಶೀಲ್, ಮುಂತಾದವರು.
ಆಲ್ಫಾ’ (Alpha) ಇದೊಂದು ಡ್ರಗ್ ಮಾಫಿಯಾದೊಳಗೆ ಪೋಲೀಸ್ ಅಧಿಕಾರಿಗಳ ಮಕ್ಕಳ ಮೋಜು, ಮಸ್ತಿ, ಲವ್, ಕೊಲೆ, ಆಕ್ಷನ್ ಸಿನಿಮಾ.
ಈ ಚಿತ್ರವನ್ನು ಎಲ್.ಎ ಪ್ರೊಡಕ್ಷನ್ಸ್ ಅಡಿಯಲ್ಲಿ ಆನಂದ್ ಕುಮಾರ್ ನಿರ್ಮಿಸಿದ್ದಾರೆ. ಹಾಗೂ ನಿರ್ದೇಶಕ ವಿಜಯ್ ನಿರ್ದೇಶನ ಮಾಡಿದ್ದಾರೆ.
ನಾಯಕ (ಹೇಮಂತ್ ಕುಮಾರ್) ಇವನು ಹುಡುಗೀರ ಹಿಂದೆ ರೌಂಡು, ಹೊಟ್ಟಗೆ ಗುಂಡು ಹಾಕ್ಕೊಂಡು ಫೈಟು, ಡ್ಯಾನ್ಸ್ ಅಂತ ಟೈಂ ಪಾಸ್ ಮಾಡೋ ರೋಡ್ ರೋಮಿಯೋ. ಪಾತ್ರನೂ ಚೈಲ್ಡಿಶ್, ಆಕ್ಟಿಂಗ್ ಕೂಡ ಚೈಲ್ಡಿಶ್ ಅನ್ಸುತ್ತೆ.
ಮೊದಲ ಬಾರಿಗೆ ನಾಯಕ ನಟನಾಗಿ ಹೇಮಂತ್ ಕುಮಾರ್ ಬಣ್ಣ ಹಚ್ಚಿ ಬೆಲಕ್ಳಿತೆರೆಯ ಮೇಲೆ ರಾರಸಜಿಸಿದ್ದಾರೆ. ಡ್ಯಾನ್ಸ್, ಫೈಟ್, ರೊಮ್ಯಾನ್ಸ್ ಎಲ್ಲದ್ರಲ್ಲೂ ಮಿಂಚುವ ಪ್ರಯತ್ನ ಮಾಡಿದ್ದಾರೆ. ಅಭಿನಯ ಹೊಸದು ಅನ್ನೋದು ತೆರೆಯ ಮೇಲೂ ಗೊತ್ತಾಗುತ್ತೆ. ಆದರೂ ಅವರ ಪ್ರಯತ್ನ ಚನ್ನಾಗಿದೆ. ಮುಂದಿನ ದಿನಗಳಲ್ಲಿ ಒಬ್ಬ ಒಳ್ಳೆಯ ನಟನಾಗುವ ಲಕ್ಷಣಗಳು ಕಾಣುತ್ತಿದೆ.
ಅಪ್ಪಾ ಡ್ಯೂಟಿ ಡ್ಯೂಟಿ ಅಂತ ಬೀಟ್ ಹಾಕಿದ್ರೆ, ಮಗ ಬ್ಯೂಟಿ ಬ್ಯೂಟಿ ಅಂತ ಹುಡುಗಿರಿಂದೆ ರೌಂಡ್ಸ್ ಹಾಕ್ತಾನೆ
ಅಪ್ಪ IPS ಆಗು ಅಂದ್ರೆ ಮಗ ಬಿಸಿನೆಸ್ ಗೆ ಲೋನ್ ತಗೊಳ್ಳೋಕೆ ಪ್ಲಾನ್ ಮಾಡ್ತಿರ್ತಾನೆ.
ಅಪ್ಪಾ ಪೋಲೀಸ್ ಇನ್ಸ್ಪೆಕ್ಟರ್ (ಅಚ್ಯುತ್ ಕುಮಾರ್) ದಕ್ಷ ಮತ್ತು ಪ್ರಾಮಾಣಿಕ. ಮಗನನ್ನು ಐ.ಪಿ.ಎಸ್. ಮಾಡಿಸಬೇಜು ಅವನೊಬ್ಬ ಪೋಲೀಸ್ ಅಧಿಕಾರಿ ಯಾಗಿ ತನ್ನ ಕಣ್ಣಮುಂದೆ ಬರಬೇಕು ಅಂತ ಹಗಲಿರುಳು ಕಷ್ಟ ಪಟ್ಟು ಪ್ರಾಮಾಣಿಕವಾಗಿ ದುಡಿಯತ್ತಾನೆ.
ಮತ್ತೊಬ್ಬ ಪೋಲೀಸ್ ಕಮೀಶನರ್ (ಅವಿನಾಶ್) ಅವನು ಕರೆಪ್ಟೆಡ್ ಅಧಿಕಾರಿ ಅವನ ಮಗ ಡ್ರಗ್ ಮಾಫಿಯಾದ ಕಿಂಗ್. ಅವನು ಸದಾ ಕುಡಿದ ನಿಶೆಯಲ್ಲಿರುತ್ತಾನೆ. ಡ್ರಗ್ ಮಾಫಿಯಾದಲ್ಲಿ ಬಾಬಿ, (ಕಾರ್ತಿಕ್ ಮಹೇಶ್) ಅನ್ನೋ ಹೆಸರು ತುಂಬಾ ಭಯಂಕರ ಮತಗತು ನಿಗೂಡ. ಅವನ ವಿರುದ್ಧ ಯಾರೇ ಮಾತಾಡಿದರು ಅವರ ತಲೆಯನ್ನು ಮಿಶಿನ್ ಗರಗಸದಲ್ಲಿ ಕ್ಷಣದಲ್ಲಿ ಕತ್ತರಿಸುವಂತ ಭಯಾನಕ ವಿಲನ್. ಕಾರ್ತಿಕ್ ಮಹೇಶ್ ಚಿತ್ರದ ಮೈನ್ ವಿಲನ್ ಆಗಿ ಪಾತ್ರ ನಿರ್ವಹಿಸಿದ್ದಾರೆ. ವಿಲನ್ ಅಂದ್ರೆ ಅದಕ್ಕೊಂದು ಗತ್ತು, ತಾಕತ್ತು, ಕಣ್ಣಲ್ಲಿ ಕಿಡಿ, ಅಭಿನಯದಲ್ಲಿ ಖಡಕ್ ಆಗಿ ಕಾಣಬೇಕು. ಆ ಕೊರತೆ ವಿಲನ್ ಆಗಿ ಕಾರ್ತಿಕ್ ನಲ್ಲಿ ಕಾಣುತ್ತದೆ. ಡ್ರಗ್ ದಂಧೆಯ ಕಿಂಗ್ ಆಗಿ ಮೊದಲ ಬಾರಿಗೆ ಕಾರ್ತಿಕ್ ವಿಲನ್ ಆಗಿ ಅಬ್ಬರಿಸಿದ್ದಾರೆ.
ಮತ್ತೊಬ್ಬ ಚಂಡಾಳ ಅಪ್ಪ. ರಮೇಶ್ ಇಂದಿರಾ. ಇವನಿಗೆ ಜನರನ್ನು ಕೊಲೆ ಮಾಡೋದು ಅಂದ್ರೆ ನೀರು ಕುಡಿದಷ್ಟು ಸುಲಭ, ಇವನೊಬ್ಬ ಸುಫಾರಿ ಕಿಲ್ಲರ್. ಮಾಂಸ ಕತ್ತರಿಸುತಿದ್ದವನು ಒಂದು ಕೊಲೆ ಮಾಡಿ ಆ ಹೆಣವನ್ನು ಮಾಂಸದ ಜೊತೆ ಮಿಕ್ಸ್ ಮಾಡಿದಂತ ದುಷ್ಟ ಮನಸ್ಸಿನ ಇವನಿಗೆ ಕರಾಳ ಬುದ್ದಿಯ ಇಬ್ಬರು ಮಕ್ಕಳು ಒಬ್ಬ ಕಾಳಿ (ಬಾಲೂ ನಾಗೇಂದ್ರ) ಮತ್ತೊಬ್ಬ ಹೇಮಂತ್ ಸುಶೀಲ್.
ಕಣ್ಣೊಳಗಿನ ಅದೇ ತಣ್ಣಗಿನ ಕ್ರೂರತೆ ಅದರ ಹಿಂದೆ ಅದೊಂದು ಸಣ್ಣನೆಯ ಮಾರ್ಮಿಕ ನಗು ಅವರ ಪಾತ್ರಕ್ಕೆ ಜೀವ ತುಂಬಿ ಬಿಡುತ್ತದೆ. ಅದು ಎಂತದ್ದೇ ಪಾತ್ರವಾದರೂ ರಮೇಶ್ ರವರು ಅದರೊಳಗೆ ಜೀವಿಸಿ ಬಿಡುತ್ತಾರೆ. ರಮೇಶ್ ಇಬ್ಬರು ಕೊಲೆಗಾರ ಮಕ್ಕಳ ನಟೋರಿಯಸ್ ಅಪ್ಪನಾಗಿ ಚಿತ್ರದ ಹೈಲೈಟ್ ಆಗಿದ್ದಾರೆ.
ಹಾಗೆ ಮಗನಾಗಿ ಕಾಳಿ (ನಾಗೇಂದ್ರ) ವಿಚಿತ್ರ ಮ್ಯಾನರಿಸಮ್ ನಲ್ಲಿ ಸಿಕ್ಕವರ ರಕ್ತ ಹೀರುವ ಕ್ರೂರಿಯಾಗಿ ನಟಿಸಿದ್ದಾರೆ.
A.ವಿಜಯ್, ವಿನೋದ್, ಅರ್ಜುನ್ ರಾಜ್, ಯೋಗಾನಂದ್ D. ಸ್ಟಂಟ್ ಮಾಸ್ಟರ್ ಗಳು ಫೈಟಿಂಗ್ ಸೀನ್ ಗಳನ್ನು ಸಖತ್ತಾಗಿ ಅಬ್ಬರಿಸಿದ್ದಾರೆ. ಹೊಸ ನಟ ಹೇಮಂತ್ ನನ್ನು ಫೈಟಿಂಗ್ ಸೀನ್ ಗಳಲ್ಲಿ ಚನ್ನಾಗಿ ತೋರಿಸಿದ್ದಾರೆ.
ನಿರ್ದೇಶಕ ವಿಜಯ್ ಚಿತ್ರದ ಕ್ಲೈಮ್ಯಾಕ್ಸ್ ಮೇಲೆ ಒಂದಷ್ಡು ಒಳ್ಳೆಯ ಹಿಡಿತ ಹಿಡಿಯಬೇಕಿತ್ತು. ಚಿತ್ರದ ಕೊನೆ ಕೊನೆಗೆ ಪ್ರೇಕ್ಷಕ ನಿರೀಕ್ಷಸದ ದೃಶ್ಯಗಳು ಚಿತ್ರದಲ್ಲಿದೆ.
ಅನೂಪ್ ಸೀಳಿನ್ ಸಂಗೀತದಲ್ಲಿ ಮತ್ತು ಹಿನ್ನೆಲೆ ಸಂಗೀತ ಚನ್ನಾಗಿ ಚಿತ್ರದ ಕಥೆಯ ಓಟಕ್ಕೆ ಸಾಥ್ ನೀಡಿದೆ.
ಕಾರ್ತಿಕ್ ರವರ ಕ್ಯಾಮೆರಾ ಕೆಲಸ ಕಣ್ಣಿಗೆ ಅದ್ದೂರಿತನವನ್ನು ನೀಡಿದೆ. ಸಿನಿಮಾ ತುಂಬಾ ರಿಚ್ಚಾಗಿ ಮೂಡಿ ಬಂದಿದೆ ನಿರ್ಮಾಪಕ ಆನಂದ್ ಕುಮಾರ್ ರವರ ಹಣ ಹರಿದಿರುವುದು ಕಾಣುತ್ತದೆ.
ಒಟ್ಟಿನಲ್ಲಿ ಯುವ ಜನತೆಗೆ ಇಷ್ಟವಾಗುವ ನಿಟ್ಟಿನಲ್ಲಿ ಸಿನಿಮಾ ನಿರ್ಮಾಣವಾಗಿದೆ.











